Home
ಸುದ್ದಿಜಾಲ

ರೈತರಿಗೆ ಸ್ಮಾರ್ಟ್‌ಫೋನ್‌ ಖರೀದಿಸಲು ಸರ್ಕಾರದಿಂದ ನೆರವು!..ಏನಿದು ಯೋಜನೆ?

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಡಿಜಿಟಲ್ ಇಂಡಿಯಾ ಕಲ್ಪನೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ಹಲವು ಸೇವೆಗಳು ಈಗಾಗಲೇ ಡಿಜಿಟಲ್ ರೂಪ ಪಡೆದಿವೆ. ಇದೀಗ ಗುಜರಾತ್ ಸರ್ಕಾರವು ಸ್ಮಾರ್ಟ್‌ಫೋನ್ ಖರೀದಿಸಲು ರಾಜ್ಯದ ರೈತರಿಗೆ 1,500 ರೂ.ವರೆಗೆ ಹಣಕಾಸಿನ ನೆರವು ನೀಡುವುದಾಗಿ ಘೋಷಿಸಿದೆ. ಆರ್ಥಿಕ ನೆರವು ಕಾರ್ಯಕ್ರಮ ವನ್ನು ರಾಜ್ಯ ಕೃಷಿ ಇಲಾಖೆ ಅಧಿಸೂಚನೆಯ ಮೂಲಕ ಬಹಿರಂಗಪಡಿಸಲಾಗಿದೆ.

ರೈತರಿಗೆ

ಹೌದು, ಗುಜರಾತ್ ಸರ್ಕಾರವು ರೈತರಿಗೆ ಹೊಸ ಮೊಬೈಲ್ ಖರೀದಿಗೆ ಆರ್ಥಿಕ ನೆರವು ನೀಡುವುದಾಗಿ ತಿಳಿಸಿದೆ. ಈ ಯೋಜನೆ ಯೊಂದಿಗೆ ಸರ್ಕಾರವು ಕೃಷಿ ತಂತ್ರಜ್ಞಾನದ ವ್ಯಾಪ್ತಿ ಪ್ರತಿದಿನ ಬೆಳೆಯುತ್ತಿದ್ದರೂ ರೈತರು ಅನುಭವಿಸುತ್ತಿರುವ ಡಿಜಿಟಲ್ ವಿಭಜನೆ ಯನ್ನು ಸೇತುವೆ ಮಾಡಲು ನೋಡುತ್ತಿದೆ ಎಂದು ಉಲ್ಲೇಖಿಸಲಾಗಿದೆ. ಗಮನಿಸಬೇಕಾದ ಅಂಶ ವೆಂದರೇ, ಈ ಯೋಜನೆಯು ಸ್ಮಾರ್ಟ್‌ಫೋನ್‌ನ ಬೆಲೆಗೆ ಮಾತ್ರ ಮಾನ್ಯವಾಗಿರುತ್ತದೆ. ಪವರ್ ಬ್ಯಾಂಕ್‌ಗಳು, ಇಯರ್‌ ಫೋನ್‌ಗಳು, ಚಾರ್ಜರ್‌ಗಳು ನಂತಹ ಯಾವುದೇ ಇತರ ಪರಿಕರಗಳನ್ನು ಒಳಗೊಂಡಿರುವುದಿಲ್ಲ.

ಯೋಜನೆಗೆ ಯಾರು ಅರ್ಹರು?

ಯೋಜನೆಗೆ ಯಾರು ಅರ್ಹರು?

ಗುಜರಾತ್‌ನ ಕೃಷಿ, ರೈತರ ಕಲ್ಯಾಣ ಮತ್ತು ಸಹಕಾರ ಇಲಾಖೆಯ ಸುತ್ತೋಲೆ ಪ್ರಕಾರ, ಈ ಯೋಜನೆಯು ಗುಜರಾತ್‌ನ ರೈತರಿಗೆ ಮಾತ್ರ. ಗುಜರಾತ್ ನಲ್ಲಿ ಸ್ವಂತ ಜಮೀನು ಹೊಂದಿರುವ ರೈತರು ಈ ಯೋಜನೆಯ ಪ್ರಯೋಜನ ಪಡೆಯ ಬಹುದಾಗಿದೆ. ಆದರೆ ಜಂಟಿ ಹಿಡುವಳಿ ಜಮೀನಿನಲ್ಲಿ ಒಬ್ಬ ಫಲಾನುಭವಿ ಮಾತ್ರ ಯೋಜನೆಯ ಪ್ರಯೋಜನಕ್ಕೆ ಅರ್ಹರಾಗಿರುತ್ತಾರೆ. ರೈತರು ಯಾವುದೇ ಸ್ಮಾರ್ಟ್‌ಫೋನ್ ಖರೀದಿಸಬಹುದಾಗಿದೆ. ಸರ್ಕಾರವು ರೈತರಿಗೆ 1500 ರೂ.ವರೆಗೆ ಹಣ ನೀಡಲಿದೆ. ಉಳಿದ ಹಣವನ್ನು ರೈತರೇ ಭರಿಸಬೇಕಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸುವುದು ಹೇಗೆ?

ಗುಜರಾತ್‌ನಲ್ಲಿ ಭೂ ಹಿಡುವಳಿದಾರ ರೈತರು ಐ-ಖೆದುತ್ ಪೋರ್ಟಲ್ (i-khedut portal) ಮೂಲಕ ಸಹಾಯಕ್ಕಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಅನುಮೋದಿಸಿದ ನಂತರ, ರೈತರು ಸ್ಮಾರ್ಟ್‌ಫೋನ್‌ನ ಖರೀದಿ ಬಿಲ್‌ನ ಪ್ರತಿ, ಮೊಬೈಲ್ IMEI ಸಂಖ್ಯೆ, ರದ್ದುಪಡಿಸಿದ ಚೆಕ್ ಮತ್ತು ಇತರ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಇದಾದ ನಂತರ ಅವರ ಖಾತೆಗೆ 1500 ರೂ. ಸಿಗಲಿದೆ.

ಪಡೆಯಲು

ರೈತರು ಸ್ಮಾರ್ಟ್‌ಫೋನ್‌ ಅನ್ನು ಹೊಂದಿದ್ದರೆ, ತಮ್ಮ ಜಮೀನಿನ ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳ ಬಳಕೆ, ಹವಾಮಾನ ಮುನ್ಸೂಚನೆ ತಿಳಿಯಲು ನೆರವಾಗಲಿದೆ. ಅಲ್ಲದೇ ಬೀಜ, ಬೆಳೆಗಳ ಬಗ್ಗೆ ಸೂಕ್ತ ಮಾಹಿತಿಯನ್ನು ಪಡೆಯಲು ಸಹ ನೆರವಾಗಲಿದೆ ಎಂದು ಸರ್ಕಾರ ತಿಳಿಸಿದೆ.

ರೈತರಿಗೆ ಉಪಯುಕ್ತ ಆಪ್‌ಗಳು

ರೈತರಿಗೆ ಉಪಯುಕ್ತ ಆಪ್‌ಗಳು

ಪ್ರಸ್ತುತ ದಿನಮಾನಗಳಲ್ಲಿ ಭಾರತದ ಗ್ರಾಮೀಣ ವಲಯವು ಡಿಜಿಟಲೀಕರಣ ಮತ್ತು ತಂತ್ರಜ್ಞಾನದತ್ತ ವೇಗವಾಗಿ ಸಾಗುತ್ತಿದೆ. ದೇಶದ ಪ್ರಮುಖ ಆರ್ಥಿಕ ಮೂಲವಾಗಿರುವ ವ್ಯವಸಾಯ ಕ್ಷೇತ್ರದಲ್ಲಿಯೂ ಹೊಸ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ. ಇತ್ತೀಚಿಗೆ ದೇಶದ ಯುವಜನತೆ ಸಹ ಕೃಷಿ ಚಟುವಟಿಕೆಗಳತ್ತ ಹೆಚ್ಚು ಒಲವು ತೋರಿಸುತ್ತಿದ್ದು, ಹೊಸ ಮಾದರಿಯ ತಂತ್ರಜ್ಞಾನಗಳ ಅಳವಡಿಕೆ ಮಾಡುತ್ತಿದ್ದಾರೆ. ಅದಕ್ಕೆ ಪೂರಕ ವಾಗಿ ಹಲವು ಅಪ್ಲಿಕೇಶನ್‌ ಗಳು ಕೆಲಸ ಮಾಡುತ್ತಿವೆ.

ಯಾವುದೇ

ಕೃಷಿ ಚಟುವಟಿಕೆಗಳಿಗೆ ಅನುಕೂಲಕರವಾಗುವ ಅಪ್ಲಿಕೇಶನ್‌ಗಳು ಕಾರ್ಯನಿರ್ವಹಿಸುತ್ತಿವೆ. ಯಾವುದೇ ಬೆಳೆ ಅಥವಾ ತರಕಾರಿಗಳ ಕೃಷಿ, ಬಿತ್ತನೆ ಅಥವಾ ಕೊಯ್ಲು ಸರಿಯಾದ ವೈಜ್ಞಾನಿಕ ವಿಧಾನವನ್ನು ಸೂಚಿಸುವ ಆಪ್‌ಗಳು ಇವೆ. ಹಾಗೆಯೇ ಕೀಟಗಳು ಅಥವಾ ಕೀಟಗಳ ದಾಳಿಗೆ ಸಂಬಂಧಿಸಿದ ಯಾವುದೇ ಕೃಷಿ ಸಮಸ್ಯೆಗಳನ್ನು ಪರಿಹರಿಸಲು ಆಪ್‌ಗಳು ಇವೆ. ಹೀಗಾಗಿ ಕೃಷಿ ಆಪ್‌ಗಳು ರೈತರ ಆಪ್ತನಂತೆ ನೆರವಾಗಲಿವೆ. ರೈತರಿಗೆ ಉಪಯುಕ್ತವಾದ 5 ಆಪ್‌ಗಳ ಬಗ್ಗೆ ತಿಳಿಸಲಾಗಿದೆ ಮುಂದೆ ಓದಿರಿ.

ಕೃಷಿ ಕಿಸಾನ್ Krishi Kisan

ಕೃಷಿ ಕಿಸಾನ್ Krishi Kisan

ಕೃಷಿ ಕಿಸಾನ್ ಆಪ್ ರೈತರಿಗಾಗಿ ರೂಪಿಸಲಾಗಿದೆ. ಈ ಆಪ್‌ನಲ್ಲಿ ಕೃಷಿಗೆ ಸಂಬಂಧಿಸಿದ ಹೊಸ ತಂತ್ರಜ್ಞಾನ ಗಳ ಬಗ್ಗೆ, ಕೃಷಿ ಪದ್ಧತಿಗಳ ಬಗ್ಗೆ ಮಾಹಿತಿ ಲಭ್ಯ ವಾಗಲಿದೆ. ಹಾಗೆಯೇ ರೈತರಿಗೆ ಬೆಳೆಗಳ ಬಗ್ಗೆ, ಬೀಜ ಬಿತ್ತುವಿಕೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಜಿಯೋ-ಫೆನ್ಸಿಂಗ್ ಹಾಗೂ ಜಿಯೋ ಟ್ಯಾಗಿಂಗ್ ಕುರಿತಾಗಿಯು ಅಗತ್ಯ ನೆರವು ನೀಡಲಿದೆ.

ಕಿಸಾನ್ ಸುವಿಧಾ Kisan Suvidha

ಕಿಸಾನ್ ಸುವಿಧಾ Kisan Suvidha

ಕಿಸಾನ್‌ ಸುವಿಧಾ ಅಪ್ಲಿಕೇಶನ್ ಅನ್ನು ಭಾರತ ಸರ್ಕಾರದಿಂದ ಅಭಿವೃದ್ಧಿಪಡಿಸಿ ಅನಾವರಣ ಮಾಡಲಾಗಿದೆ. ಈ ಆಪ್‌ನಲ್ಲಿ ರೈತರಿಗೆ ಪ್ರಸ್ತುತ ಮತ್ತು ಮುಂದಿನ 5 ದಿನಗಳ ಹವಾಮಾನದ ಮಾಹಿತಿಯನ್ನು ನೀಡಲಾಗುತ್ತದೆ. ಸ್ಥಳೀಯ ಡೀಲರ್‌ಗಳು, ಮಾರುಕಟ್ಟೆ, ಕೃಷಿ ಸಲಹೆಗಾರರ ಬಗ್ಗೆ, ಕೃಷಿ ರಕ್ಷಣೆ, ಐಪಿಎಮ್‌ ಪ್ರಯೋಗಗಳನ್ನು ರೈತರಿಗೆ ನೇರವಾಗಿ ನೀಡುತ್ತದೆ.

ಕೃಷಿ ಮಿತ್ರ Krishi Mitra

ಕೃಷಿ ಮಿತ್ರ Krishi Mitra

ಕನ್ನಡದಲ್ಲಿಯೇ ಲಭ್ಯವಿರುವ ಆಪ್ ಇದಾಗಿದೆ. ವಿವಿಧ ಪತ್ರಿಕೆಗಳಲ್ಲಿ ಬರುವ ಕೃಷಿ ಸಂಬಂಧಿತ ವರದಿಗಳನ್ನು ನೀಡುತ್ತದೆ. ನಿಮ್ಮ ಪಹಣಿ ಯನ್ನು ಹುಡುಕುವ ಆಯ್ಕೆ ನಿಡಲಾಗಿದೆ. ಹವಾಮಾನ ವರದಿ ಯನ್ನು ಸಹ ಈ ಆಪ್ ನೀಡುತ್ತಿದ್ದು, ಪ್ರಸ್ತುತ ಮಾರುಕಟ್ಟೆ ದರ ವನ್ನು ರೈತರಿಗೆ ನೀಡುತ್ತದೆ. ಅದಲ್ಲದೇ ಕೃಷಿ ಇಲಾಖೆಯ ಪ್ರಮುಖ ಕಚೇರಿಗಳ ಹಾಗೂ ಎಪಿಎಂಸಿ ಗಳ ಮೊಬೈಲ್ ಸಂಖ್ಯೆ ಗಳನ್ನು ಒಳಗೊಂಡಿದ್ದು, ರೈತರಿಗೆ ನೆರವಾಗುತ್ತದೆ.

Mಕಿಸಾನ್ ಆಪ್‌ MKisan Application

Mಕಿಸಾನ್ ಆಪ್‌ MKisan Application

Mಕಿಸಾನ್ ಆಪ್‌ನಲ್ಲಿ ಬಳಕೆದಾರರು ಪೋರ್ಟಾಲ್‌ಗೆ ನೋಂದಣಿಯಾಗದೆ ಕೃಷಿ ತಜ್ಞರು, ವಿವಿಧ ಸರ್ಕಾರಿ ಅಧಿಕಾರಿಗಳಿಂದ ಕೃಷಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ. ಭಾರತದಲ್ಲಿ Mಕಿಸಾನ್ ಪೋರ್ಟಾಲ್ ಕೃಷಿ ಬಗೆಗಿನ ಅನೇಕ ಮಾಹಿತಿಯನ್ನು ನೀಡುತ್ತದೆ. ಈ ಆಪ್‌ನ್ನು ಕೃಷಿ ಮಂತ್ರಾಲಯದ ರಾಷ್ಟ್ರೀಯ ವಿದ್ಯುನ್ಮಾನ ಆಡಳಿತ ಯೋಜನೆ (NeGP-A) ಅಭಿವದ್ಧಿಪಡಿಸಿದೆ.

ಅಗ್ರಿ ಆಪ್ Agri App

ಅಗ್ರಿ ಆಪ್ Agri App

ನಿಮಗೆ ಬೆಳೆ ಉತ್ಪನ್ನ, ಬೆಳೆ ರಕ್ಷಣೆ ಮತ್ತು ಕೃಷಿಗೆ ಸಂಬಂಧಿಸಿದ ಹಲವು ಮಾಹಿತಿ ಗಳನ್ನು ರೈತರಿಗೆ ನೀಡುತ್ತದೆ. ಇದರಲ್ಲಿ ರೈತರು ತಮ್ಮ ಪ್ರಶ್ನೆಗಳಿಗೆ ತಜ್ಞರಿಂದ ಉತ್ತರ ಪಡೆಯ ಬಹುದಾಗಿದೆ. ಹವಾಮಾನ ವರದಿ, ಮಾರುಕಟ್ಟೆ ದರಗಳನ್ನು ಈ ಆಪ್ ನೀಡಲಿದ್ದು, ಒಂದೇ ಡಿಜಿಟಲ್ ಪ್ಲಾಟ್‌ಫಾರ್ಮ್‌ ನಲ್ಲಿ ಅನೇಕ ಕೃಷಿ ಸಂಬಂಧಿತ ಮಾಹಿತಿ ನೀಡುತ್ತದೆ.

Best Mobiles in India

English summary
Gujarat Govt Phone Scheme: Farmers Can Get Up To Rs 1,500 to Buy A Smartphone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+