ಲೂಡೋ ಆಟದಲ್ಲಿ ಪತ್ನಿ ಸತತ ಸೋಲಿಸಿದ್ದಕ್ಕೆ ಪತಿರಾಯ ಹೀಗಾ ಮಾಡೋದು!

|

ಕೊರೊನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಜಾರಿಯಲ್ಲಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಮನೆಯಲ್ಲಿಯೇ ಇರುವುದಾಗಿದೆ. ಲಾಕ್‌ಡೌನ್‌ ಬೇಸರ ಕಳೆಯಲು ಮನೆಯಲ್ಲಿ ಬಹುತೇಕರು ಆನ್‌ಲೈನ್‌ಗಳನ್ನು ಆಡುತ್ತಿದ್ದಾರೆ. ಆ ಪೈಕಿ ಸದ್ಯ ಲೂಡೋ ಕಿಂಗ್ ಗೇಮ್‌ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೀಗೆ ಸ್ಮಾರ್ಟ್‌ಫೋನಿನಲ್ಲಿ ಲೂಡೋ ಕಿಂಗ್ ಆಟ ಆಡುವಾಗ ಪತ್ನಿ ಸತತವಾಗಿ ಸೋಲಿಸಿದಳು ಎಂದು ಆಕೆಯ ಪತಿರಾಯ ಬೆನ್ನು ಮೂಳೆಯನ್ನೇ ಮುರಿದಿದ್ದಾನೆ.

ಹೌದು

ಹೌದು, ಆನ್‌ಲೈನ್‌ನಲ್ಲಿ ಲೂಡೋ ಆಟ ಆಡುವಾಗ ಪತ್ನಿ ಸತತವಾಗಿ ಗೆದ್ದಿದ್ದು, ಇದರಿಂದ ಕೋಪಗೊಂಡ ಆಕೆಯ ಪತಿರಾಯ ಪತ್ನಿಯ ಬೆನ್ನು ಮೂಳೆ ಮುರಿದಿರುವ ಘಟನೆ ಗುಜರಾತ್‌ನ ವಡೋದರದ ವೆಮಾಲಿಯಲ್ಲಿ ವರದಿಯಾಗಿದೆ. ಲಾಕ್‌ಡೌನ್‌ ಇರುವುದರಿಂದ ಪತಿ ಮನೆಯಿಂದ ಹೊರಹೋಗದಿರಲು ಆತನ ಪತ್ನಿ ಸ್ಮಾರ್ಟ್‌ಫೋನಿನಲ್ಲಿ ಲೂಡೋ ಗೇಮ್‌ ಆಡುವುದನ್ನು ಕಲಿಸಿದ್ದಳು. ಲಾಕ್‌ಡೌನ್ ಸಮಯ ಕಳೆಯಲು ಇಬ್ಬರೂ ಲೂಡೋ ಆಟದಲ್ಲಿ ಆಡುತ್ತಿದ್ದರು.

ಸ್ಮಾರ್ಟ್‌ಫೋನಿನಲ್ಲಿ

ಹೀಗೆ ಸ್ಮಾರ್ಟ್‌ಫೋನಿನಲ್ಲಿ ಲೂಡೋ ಆಡುವಾಗ ಆಟದಲ್ಲಿ ಯಾವಾಗಲೂ ಹೆಂಡತಿಯೇ ಮೊದಲು ಗೆಲ್ಲುತ್ತಿದ್ದಳು. ಅಲ್ಲದೆ, ಆಟದಲ್ಲಿ ಗಂಡನನ್ನು ಸೋಲಿಸಿ ಮುಂದೆ ಹೋಗುತ್ತಿದ್ದಳು. ಇದರಿಂದ ಕೋಪಗೊಂಡಿದ್ದ ಗಂಡ ಆಕೆಯೊಂದಿಗೆ ಜಗಳವಾಡುತ್ತಿದ್ದ. ಕೆಲವೊಮ್ಮೆ ಇದೇ ವಿಷಯಕ್ಕೆ ಅವರ ಜಗಳ ಅತಿರೇಕಕ್ಕೆ ಹೋಗುತ್ತಿತ್ತು. ಪದೇ ಪದೇ ಹೆಂಡತಿಯಿಂದ ಲೂಡೋದಲ್ಲಿ ಸೋಲನ್ನು ಅನುಭವಿಸುತ್ತಿದ್ದುದರಿಂದ ಕೋಪಗೊಂಡ ಗಂಡ ಆಕೆಗೆ ಜೋರಾಗಿ ಥಳಿಸಿದ್ದಾನೆ.

ಜೋರಾಗಿ

ಜೋರಾಗಿ ಥಳಿಸಿದ್ದರ ಪರಿಣಾಮವಾಗಿ ಹೆಂಡತಿಯ ಬೆನ್ನಿನ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದು, ಮಹಿಳೆ ನೋವಿನಿಂದ ನರಳುತ್ತಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಬೆನ್ನು ಮೂಳೆ ಮುರಿದಿದೆ ಎಂದು ವೈದ್ಯರು ಹೇಳಿದ್ದಾರೆ. ನಂತರ ಮಹಿಳೆ ಗುಜರಾತ್ ಸರ್ಕಾರದ ಅಭಯಮ್ ಮಹಿಳಾ ಸಹಾಯವಾಣಿಗೆ ಕರೆ ಮಾಡಿದ್ದು, ಅಭ್ಯಮ್ ಅಧಿಕಾರಿ ಚಂದ್ರಕಾಂತ್ ಮಕ್ವಾನಾ ಅವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆದರೆ ಪ್ರಸ್ತುತ ಮಹಿಳೆ ಗಂಡನ ವಿರುದ್ಧ ದೂರು ದಾಖಲಿಸಲು ಹಿಂದೇಟು ಹಾಕಿದ್ದಾರೆ.

ಅಧಿಕಾರಿಗಳು

ನಂತರ ಅಧಿಕಾರಿಗಳು ದಂಪತಿಗಳ ಸಮಾಲೋಚನೆ ಮಾಡಿ ಒಟ್ಟಿಗೆ ವಾಸಿಸಲು ಸಲಹೆ ನೀಡಲಾಯಿತು. ಕೆಲವು ದಿನಗಳು ಮಹಿಳೆ ಹೆತ್ತವರೊಂದಿಗೆ ಇದ್ದು, ನಂತರ ಗಂಡನ ಮನೆಗೆ ಮರಳಲು ಹೇಳಿದ್ದಾರೆ. ಹಾಗೆಯೇ ಆಕೆಯ ಪತಿಗೆ ದೈಹಿಕ ಹಿಂಸೆ ಮಾಡುವುದು ಅಪರಾಧ ಎಂದು ಎಚ್ಚರಿಕೆ ನೀಡಲಾಗಿದೆ.

Most Read Articles
Best Mobiles in India

English summary
An online game of ludo took a drastic turn after a man in Gujarat’s Vadodara severely thrashed his wife after she consecutively defeated him in the game.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X