ಸೈಬರ್ ಜಗತ್ತಿನ ಕರ್ಮಕಾಂಡ ತಿಳಿಯಲು ಈ ಕನ್ನಡದ ಅದ್ಬುತ ಸಿನಿಮಾ ನೋಡಿ!!
‘ಡೇಟಾ’, ‘ಡೇಟಾ ಮೈನಿಂಗ್’ ಇವೆಲ್ಲವೂ ಒಂದು ಬೌದ್ಧಿಕ ವರ್ಗದಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿರುವ ವಿಷಯಗಳಾಗಿವೆ. ಆದರೆ, ಡೇಟಾ ಅನ್ನುವುದರ ಮಹತ್ವ ಏನು ಎಂಬುದು ಸಾಮಾನ್ಯ ಎಲ್ಲರಿಗೂ ಅರ್ಥವಾಗಿರುವಂತಿಲ್ಲ.
ಆಧುನಿಕ ಜಗತ್ತನ್ನು ಹೆಚ್ಚು ಆತಂಕಕ್ಕೀಡು ಮಾಡುತ್ತಿರುವುದು ಸೈಬರ್ ಕ್ರೈಮ್ ಎಂದು ಕರೆಸಿಕೊಳ್ಳುವ ಆನ್‌ಲೈನ್ ದೋಖಾಗಳು ಎಲ್ಲರನ್ನೂ ತಲ್ಲಣಗೊಳಿಸುತ್ತಿರುವುದು ನಿಮಗೆಲ್ಲಾ ತಿಳಿದಿದೆ. ಕಣ್ಮುಚ್ಚಿ ಕಣ್ಣು ತೆರೆಯುವುದರೊಳಗೆ ಆನ್‌ಲೈನ್ ಬಳಕೆದಾರರ ಹಣವನ್ನು ದೋಚುವ ಅನೇಕ ಘಟನೆಗಳು ಡಿಜಿಟಲ್ ಯುಗದಲ್ಲಿ ನಡೆದಿವೆ ಅಲ್ಲವೇ?.
ಇನ್ನು ಇತ್ತೀಚಿಗಷ್ಟೆ ಫೇಸ್‌ಬುಕ್ ಮೂಲಕ ನಡೆದ ಬಹುದೊಡ್ಡ ಡೇಟಾ ದುರುಪಯೋಗ ಕೂಡ ಜನರನ್ನು ಭಯ ಹುಟ್ಟಿಸಿದೆ. ಈ 'ಡೇಟಾ', 'ಡೇಟಾ ಮೈನಿಂಗ್' ಇವೆಲ್ಲವೂ ಒಂದು ಬೌದ್ಧಿಕ ವರ್ಗದಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿರುವ ವಿಷಯಗಳಾಗಿವೆ. ಆದರೆ, ಡೇಟಾ ಅನ್ನುವುದರ ಮಹತ್ವ ಏನು ಎಂಬುದು ಸಾಮಾನ್ಯ ಎಲ್ಲರಿಗೂ ಅರ್ಥವಾಗಿರುವಂತಿಲ್ಲ.

ಹಾಗಾಗಿ, ಇಂದಿನ ಲೇಖನದಲ್ಲಿ ಸಾರ್ವಜನಿಕ ಖಾಸಗಿ ಮಾಹಿತಿ ಕದಿಯುವುದು, ಆ ಮಾಹಿತಿಯನ್ನು ಬಳಸಿ ವ್ಯಕ್ತಿಯ ಬಗ್ಗೆ ಸಮಗ್ರ ವಿವರ ನೀಡುವ ಡಿಜಿಟಲ್ ಕಡತ ಸಿದ್ಧಪಡಿಸುವುದು, ಅವು ಸೋರಿಕೆ ಆಗುವುದು ಮತ್ತು ಹಾಗೆ ಆದಾಗ ಉಂಟಾಗಬಹುದಾದ ಅನಾಹುತಗಳ ಬಗ್ಗೆ ತೋರಿಸುವ ಒಂದು ಕನ್ನಡ ಸಿನಿಮಾದ ಬಗ್ಗೆ ನಾವು ನಿಮಗೆ ಮಾಹಿತಿ ನೀಡುತ್ತಿದ್ದೇವೆ.!

ಡಿಜಿಟಲ್ ಉಪಕರಣಗಳನ್ನು ಬಳಸುವವರು ಅದರ ಮೂಲಕ ರವಾನೆಯಾಗುವ, ಅದರಲ್ಲಿ ಸಂಗ್ರಹವಾಗುವ ಡೇಟಾ ಬಗ್ಗೆ ಎಷ್ಟು ಜಾಗರೂಕರಾಗಿರಬೇಕು ಎಂಬುದನ್ನು ಹೇಳುವ ಸಂಕೀರ್ಣವಾದ ವಿಷಯವನ್ನು ಸಾಮಾನ್ಯನಿಗೂ ಅರ್ಥವಾಗುವಂತೆ ಹೇಳಿರುವ ಕನ್ನೆಡ ಸಿನಿಮಾ 'ಗುಳ್ಟು ಆನ್‌ಲೈನ್' ಬಿಡುಗಡೆಯಾಗಿ ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ.

ಡಿಜಿಟಲ್ವಿಚಾರಗಳನ್ನೆಲ್ಲ ಕೇವಲ ಒಂದು ಬುದ್ಧಿಜೀವಿ ವರ್ಗ ಮಾತ್ರ ಚರ್ಚಿಸುತ್ತ ಇದ್ದರೆ ಸಾಕಾಗದು, ಜನಸಾಮಾನ್ಯರೂ ಚರ್ಚಿಸಬೇಕು ಎಂಬ ಉದ್ದೇಶದಿಂದ ಬಂದಿರುವ ಆಸಕ್ತಿಕರ ಗುಳ್ಟು ಆನ್‌ಲೈನ್' ಸಿನಿಮಾ ಖಂಡಿತವಾಗಿಯೂ ಡಿಜಿಟಲ್ ಉಪಕರಣಗಳನ್ನು ಬಳಸುವವರಿಗೆ ಗಾಬರಿ ಮೂಡಿಸುವುದು ಸುಳ್ಳಲ್ಲ. ಹಾಗಾಗಿ, ಈ ಸಿನಿಮಾವನ್ನು ಒಮ್ಮೆ ನೀವು ನೋಡಲೇಬೇಕು.!!
ಓದಿರಿ: ಆನ್‌ಸ್ಕ್ರೀನ್ ಫಿಂಗರ್‌ಪ್ರಿಂಟ್ ಸೆನ್ಸರ್ ಸಿದ್ಧಪಡಿಸಿದೆ ಸ್ಯಾಮ್‌ಸಂಗ್!!


Click it and Unblock the Notifications








