Subscribe to Gizbot

ಆನ್‌ಸ್ಕ್ರೀನ್ ಫಿಂಗರ್‌ಪ್ರಿಂಟ್‌ ಸೆನ್ಸರ್ ಸಿದ್ಧಪಡಿಸಿದೆ ಸ್ಯಾಮ್‌ಸಂಗ್!!

Written By:

ಸ್ಮಾಟ್‌ಫೋನ್‌ನಲ್ಲಿ ಬದಲಾಗುವ ಚಿಕ್ಕ ಚಿಕ್ಕ ತಂತ್ರಜ್ಞಾನಗಳು ಆ ಸ್ಮಾರ್ಟ್‌ಪೋನಿನ ಹಣೆಬರಹವನ್ನೇ ಬದಲಾಯಿಸುತ್ತವೆ ಎನ್ನುವುದಕ್ಕೆ ಫಿಂಗರ್‌ಪ್ರಿಂಟ್ ಸೆನ್ಸರ್ ಸಾಕ್ಷಿ. ಕೆಲವೇ ವರ್ಷಗಳ ಹಿಂದೆ ಫಿಂಗರ್ ಪ್ರಿಂಟ್ ಕಲ್ಪನೆಯೇ ಇಲ್ಲದೆ ಮೊಬೈಲ್ ಪ್ರಿಯರು ಇಂದು ಫಿಂಗರ್‌ಪ್ರಿಂಟ್ ಆಯ್ಕೆ ಇಲ್ಲವೆಂದರೆ ಸ್ಮಾರ್ಟ್‌ಪೊನ್ ಅನ್ನೇ ಖರೀದಿಸುವುದಿಲ್ಲ ಎಂದರೆ ನಂಬಲೇಬೇಕು.!

ಹಾಗಾಗಿಯೇ, ವಿಶ್ವದ ಹಲವು ಮೊಬೈಲ್ ಕಂಪೆನಿಗಳು ಸ್ಮಾರ್ಟ್‌ಫೋನ್ ಸೆಕ್ಯುರಿಟಿಗಾಗಿ ಫಿಂಗರ್‌ಪ್ರಿಂಟ್ ಸೆನ್ಸರ್ಗಿಂತಲೂ ಅತ್ಯುತ್ತಮ ತಂತ್ರಜ್ಞಾನವನ್ನು ತರಲು ಪ್ರಯತ್ನಿಸುತ್ತಿವೆ. ಚೀನಾದ ಜೆಡ್‌ಟಿಇ ಕಂಪನಿಯಂತೂ ತನ್ನ ಮುಂಬರುವ ಆಕ್ಸಾನ್ ಎಂ ಫೋನಿನಲ್ಲಿ ಆನ್‌ಸ್ಕ್ರೀನ್ ಫಿಂಗರ್‌ಪ್ರಿಂಟ್‌ ಸೆನ್ಸರ್ ಒದಗಿಸುತ್ತಿರುವ ಬಗ್ಗೆ ಈಗಾಗಲೇ ಮಾಹಿತಿ ನೀಡಿದೆ.!

ಆನ್‌ಸ್ಕ್ರೀನ್ ಫಿಂಗರ್‌ಪ್ರಿಂಟ್‌ ಸೆನ್ಸರ್ ಸಿದ್ಧಪಡಿಸಿದೆ ಸ್ಯಾಮ್‌ಸಂಗ್!!

ಇನ್ನು ಇತ್ತೀಚಿಗಷ್ಟೆ ಗ್ಯಾಲಾಕ್ಸಿ ನೋಟ್ 9 ಸ್ಮಾರ್ಟ್‌ಪೋನ್ ಬಿಡುಗಡೆ ಮಾಡಿರುವ ಸ್ಯಾಮ್‌ಸಂಗ್ ಕೂಡ ಇನ್‌ಬಿಲ್ಟ್‌ ಫಿಂಗರ್‌ಪ್ರಿಂಟ್‌ ಸೆನ್ಸರ್ ಇರುವ ಡಿಸ್‌ಪ್ಲೇಗಳ ಮೂರು ಮಾದರಿಗಳನ್ನು ಸಿದ್ಧಪಡಿಸಿದೆ ಎಂದು ಕೊರಿಯನ್‌ ಹೆರಾಲ್ಡ್‌ ವರದಿ ಮಾಡಿದೆ. ಹಾಗಾಗಿ, ಸ್ಯಾಮ್‌ಸಂಗ್ ಫೋನ್‌ಗಳಲ್ಲಿ ಇನ್ಮುಂದೆ ಆನ್‌ಸ್ಕ್ರೀನ್ ಫಿಂಗರ್‌ಪ್ರಿಂಟ್‌ ಸೆನ್ಸರ್ ಬರುವ ಸೂಚನೆಗಳು ಸಿಕ್ಕಿವೆ.

ಇತ್ತೀಚಿನ ಮಾಹಿತಿಗಳ ಪ್ರಕಾರ, ಇದೇ ವರ್ಷದ ಕೊನೆಯಲ್ಲಿ ಸ್ಯಾಮ್ಸಂಗ್‌ನ ಹೊಸ ಹೈ ಎಂಡ್ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬರಲಿದೆ ಎನ್ನಲಾಗಿದ್ದು, ಗ್ಯಾಲಾಕ್ಸಿ ನೋಟ್ 9 ಸ್ಮಾರ್ಟ್‌ಫೋನ್ ಎಂದು ಮೊಬೈಲ್ ಜಗತ್ತು ಊಹೆ ಮಾಡಿದೆ. ಹಾಗಾಗಿ, ಆನ್‌ಸ್ಕ್ರೀನ್ ಫಿಂಗರ್‌ಪ್ರಿಂಟ್‌ ಸೆನ್ಸರ್ ಹೊಂದುವ ಮೊದಲ ಸ್ಯಾಮ್‌ಸಂಗ್ ಫೋನ್ ಇದಾಗಬಹುದು ಎನ್ನಲಾಗಿದೆ.

ಆನ್‌ಸ್ಕ್ರೀನ್ ಫಿಂಗರ್‌ಪ್ರಿಂಟ್‌ ಸೆನ್ಸರ್ ಸಿದ್ಧಪಡಿಸಿದೆ ಸ್ಯಾಮ್‌ಸಂಗ್!!

ಒಂದು ವೇಳೆ ಸ್ಯಾಮ್ಸಂಗ್‌ನ ಆನ್‌ಸ್ಕ್ರೀನ್ ಫಿಂಗರ್‌ಪ್ರಿಂಟ್‌ ಸೆನ್ಸರ್ ತಂತ್ರಜ್ಞಾನ ಗ್ಯಾಲಾಕ್ಸಿ ನೋಟ್ 9ನಲ್ಲಿ ಫಲಕೊಟ್ಟರೆ ಮಾರುಕಟ್ಟೆಯಲ್ಲಿ ಈ ವಿಷಯದಲ್ಲಿ ಆಪಲ್‌ ಮತ್ತು ಒನ್‌ಪ್ಲಸ್‌ಗೆ ಸ್ಯಾಮ್‌ಸಂಗ್ ಕಂಪೆನಿ ಸಮರ್ಥ ಸ್ಪರ್ಧೆ ನೀಡಬಹುದು ಮತ್ತು ಕಳೆದುಕೊಂಡಿರುವ ಗ್ರಾಹಕರನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.

ಓದಿರಿ: ಜಿಯೋವಿನಿಂದ ಮತ್ತೆ ಭರ್ಜರಿ ಆಫರ್!..ಕೇವಲ 700 ರೂ.ಗಳಿಗೆ ಪಡೆಯಿರಿ ಜಿಯೋ ಫೈ!!

English summary
Samsung patents under-screen fingerprint reader; expected to arrive on the upcoming Galaxy S9. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot