Home
ಸುದ್ದಿಜಾಲ

ಒತ್ತಡಕ್ಕೆ ಮಣಿದ ಟ್ರಂಪ್!!..ದೊಡ್ಡ ಗಂಡಾಂತರದಿಂದ ಪಾರಾದರು 'ಐಟಿ' ನೌಕರರು!!

ಅಮೆರಿಕ ಗೃಹ ಸಚಿವಾಲಯ ಇಲಾಖೆ (ಹೋಮ್ ಲ್ಯಾಂಡ್ ಸೆಕ್ಯೂರಿಟಿ) ಇತ್ತೀಚಿಗೆ ಹೊರಡಿಸಿದ್ದ ವಲಸಿಗರ ನಿಯಂತ್ರಣಕ್ಕೆ ವೀಸಾ ನಿರ್ಬಂಧಿಸಲಿದ್ದಾರೆ ಎಂಬ ಜ್ಞಾಪನಪತ್ರವೊಂದು ಭಾರತೀಯ ಐಟಿ ಲೋಕ ನಡುಗಿಸಿತ್ತು.!

By Bhaskar N J

ಭಾರತೀಯ ಐಟಿ ಉದ್ಯೋಗಿಗಳಿಗೆ ಅಮೆರಿಕದಲ್ಲಿ ನೆಲೆಸಲು ಆಸರೆಯಾಗಿರುವ ಎಚ್-1ಬಿ ವೀಸಾ ನೀತಿಯನ್ನು ಕಠಿಣಗೊಳಿಸುವ ನಿರ್ಧಾರವನ್ನು ಡೊನಾಲ್ಡ್ ಟ್ರಂಪ್ ಆಡಳಿತ ಕೈಬಿಟ್ಟಿದೆ.! ಹಾಗಾಗಿ, ಅಮೆರಿಕದಲ್ಲಿ ಐಟಿ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ತಂತ್ರಜ್ಞರ ಆತಂಕ ದೂರವಾಗಿದೆ.!!

ಅಮೆರಿಕ ಗೃಹ ಸಚಿವಾಲಯ ಇಲಾಖೆ (ಹೋಮ್ ಲ್ಯಾಂಡ್ ಸೆಕ್ಯೂರಿಟಿ) ಇತ್ತೀಚಿಗೆ ಹೊರಡಿಸಿದ್ದ ವಲಸಿಗರ ನಿಯಂತ್ರಣಕ್ಕೆ ವೀಸಾ ನಿರ್ಬಂಧಿಸಲಿದ್ದಾರೆ ಎಂಬ ಜ್ಞಾಪನಪತ್ರವೊಂದು ಭಾರತೀಯ ಐಟಿ ಲೋಕ ನಡುಗಿಸಿತ್ತು.! ಆದರೆ, ಟ್ರಂಪ್ ಮೇಲೆ ಇದ್ದ ಒತ್ತಡಕ್ಕೆ ಇದೀಗ ಎಚ್-1ಬಿ ವೀಸಾ ನೀತಿಯಲ್ಲಿ ಸಡಿಲವಾಗಿದ್ದು, ಐಟಿ ಉದ್ಯೋಗಿಗಳು ಖುಶಿಯಲ್ಲಿದ್ದಾರೆ.!! ಹಾಗಾದರೆ, ಏನಿದು ವರದಿ ಎಂಬುದನ್ನು ಮುಂದೆ ತಿಳಿಯಿರಿ.!!

ಆತಂಕ ಸೃಷ್ಟಿಯಾಗಿದ್ದು ಹೇಗೆ ?

ಆತಂಕ ಸೃಷ್ಟಿಯಾಗಿದ್ದು ಹೇಗೆ ?

ಭಯೋತ್ಪಾದಕ ದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಲಸಿಗರ ನಿಯಂತ್ರಣಕ್ಕೆ ಟ್ರಂಪ್ ಮುಂದಾಗಿದ್ದು, ಎಚ್-1ಬಿ ವೀಸಾ ವೀಸಾ ನಿರ್ಬಂಧಿಸಲಾಗುವುದು ಎಂದು ಹೇಳಲಾಗಿತ್ತು. ಇದರಿಂದ ಗ್ರೀನ್ ಕಾರ್ಡ್​ಗಾಗಿ ಸ್ವೀಕೃತವಾದ ಅರ್ಜಿಗಳಿಗೆ ಎಚ್-1ಬಿ ವೀಸಾ ಅವಧಿ ವಿಸ್ತರಣೆಗೆ ಅವಕಾಶ ಇಲ್ಲವೆಂಬ ನೀತಿಗೆ ಆತಂಕ ಸೃಷ್ಟಿಯಾಗಿತ್ತು.!!

ಒತ್ತಡಕ್ಕೆ ಮಣಿದ ಟ್ರಂಪ್?

ಒತ್ತಡಕ್ಕೆ ಮಣಿದ ಟ್ರಂಪ್?

ಎಚ್-1ಬಿ ವೀಸಾಗೆ ನೀತಿ ಬಿಗಿಗೊಳಿಸಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ಭಾರತೀಯ ಐಟಿ ಕಂಪನಿಗಳು ಅಮೆರಿಕದಲ್ಲಿರುವ ಚೇಂಬರ್ ಆಫ್ ಕಾಮರ್ಸ್ ಮೇಲೆ ಒತ್ತಡ ಹೇರಿದ್ದವು. ಭಾರತದ ಕಂಪೆನಿಗಳಷ್ಟೆ ಅಲ್ಲದೇ ಮೈಕ್ರೋಸಾಫ್ಟ್, ಗೂಗಲ್, ಫೇಸ್​ಬುಕ್ ಕೂಡ ಹೊಸ ನೀತಿ ವಿರುದ್ಧ ಕಿಡಿಕಾರಿದ್ದರಿಂದ ಟ್ರಂಪ್ ಒತ್ತಡಕ್ಕೆ ಮಣಿದಿದ್ದಾರೆ ಎನ್ನಲಾಗಿದೆ.!!

ಕಾಯಂ ಪೌರತ್ವಕ್ಕೆ ನಿರ್ಭಂದವಿಲ್ಲ.!!

ಕಾಯಂ ಪೌರತ್ವಕ್ಕೆ ನಿರ್ಭಂದವಿಲ್ಲ.!!

ಅಮೆರಿಕದಲ್ಲಿ ಆರು ವರ್ಷಕ್ಕಿಂತ ಹೆಚ್ಚು ನೆಲೆಸಿರುವ ವಿದೇಶಿಗರ ಎಚ್-1ಬಿ ವೀಸಾ ಅವಧಿ ವಿಸ್ತರಣೆಗೆ ಯಾವುದೇ ನಿರ್ಬಂಧ ಹೇರುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ.ಅಮೆರಿಕದ ಕಾಯಂ ಪೌರತ್ವಕ್ಕೆ ಎದುರು ನೋಡುತ್ತಿರುವವರಿಗೆ ನಿರ್ಬಂಧ ಹೇರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.!!

ಈ ಬಗ್ಗೆ ಅಧಿಕೃತವಾಗಿ ಹೇಳಿದ್ದೇನು?

ಈ ಬಗ್ಗೆ ಅಧಿಕೃತವಾಗಿ ಹೇಳಿದ್ದೇನು?

‘ಅಮೆರಿಕನ್ ಉತ್ಪನ್ನ ಖರೀದಿಸಿ, ಅಮೆರಿಕನ್​ಗೆ ನೇಮಿಸಿಕೊಳ್ಳಿ' ಅನ್ವಯ ಉದ್ಯೋಗ ಆಧಾರಿತ ವೀಸಾ ಯೋಜನೆಗಳ ಪರಿಶೀಲನೆ ನಡೆಯುತ್ತಿರುವುದು ನಿಜ. ಈ ಬಗ್ಗೆ ಕಟ್ಟುನಿಟ್ಟಾದ ವಲಸೆ ನಿಯಮ ರೂಪಿಸಲಾಗುತ್ತಿದೆ. ಆದರೆ ಎಚ್-1ಬಿ ವೀಸಾಗೆ ನಿರ್ಬಂಧ ಮೂಲಕ ಸ್ವದೇಶಕ್ಕೆ ಕಳಿಸುವ ಪ್ರಸ್ತಾವನೆ ಇಲ್ಲ ಎಂದು ಮಾಧ್ಯಮ ವಕ್ತಾರ ಜೊನಾಥನ್ ವಿಥಿಂಗ್ಟನ್ ಹೇಳಿದ್ದಾರೆ.!!

How to create two accounts in one Telegram app (KANNADA)
5.5 ಲಕ್ಷ ಭಾರತೀಯರು ನಿರಾಳ.!!

5.5 ಲಕ್ಷ ಭಾರತೀಯರು ನಿರಾಳ.!!

ಎಚ್-1ಬಿ ವೀಸಾ ನಿರ್ಬಂಧ ತೆರೆದಿರುವುದರಿಮದ ಅಮೆರಿಕದಲ್ಲಿ ಐಟಿ ಸಹಿತ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 5.25 ಲಕ್ಷ ಭಾರತೀಯರ ಆತಂಕ ದೂರವಾಗಿದೆ. ಐಟಿ ಕಂಪನಿಗಳಲ್ಲಿನ ಶೇ.75ಭಾರತೀಯ ನೌಕರರು ಎಚ್-1ಬಿ ವೀಸಾ ಹೊಂದಿದ್ದು ಇದೀಗ ನಿರಾಳವಾಗಿದ್ದಾರೆ.!!

ಓದಿರಿ:ಮೊಬೈಲ್ ಮೆಮೊರಿ ಸಾಲುತಿಲ್ಲವೇ?..ಎಲ್ಲಾ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ!!

Best Mobiles in India

English summary
The Trump administration appears to be creating distance between itself and rumors that it might end the practice of extending H-1B visas during the green card application process. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+