ಆಪಲ್ ಐಓಎಸ್ 9 ಹ್ಯಾಕ್ ಮಾಡಿ 1 ಮಿಲಿಯನ್ ಗಳಿಸಿ

By Shwetha
|

ನಿಮ್ಮನ್ನು ದಿಗ್ಭ್ರಮೆಗೊಳಿಸುವ ಸುದ್ದಿಯೊಂದನ್ನು ನಾವು ನಿಮಗಾಗಿ ಹೊತ್ತು ತಂದಿದ್ದೇವೆ. ಕಂಪ್ಯೂಟರ್ ಭದ್ರತಾ ಸಂಸ್ಥೆ ಜರೋಡಿಯಮ್ ಆಪಲ್‌ನ ಅತ್ಯಾಧುನಿಕ ಐಓಎಸ್ 9 ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಅನ್ನು ಹ್ಯಾಕ್ ಮಾಡಿದವರಿಗೆ $1 ಮಿಲಿಯನ್ ನೀಡುವುದಾಗಿ ಘೋಷಿಸಿದೆ.

ಓದಿರಿ: ಭೂಮಿಗೆ ಬರಲಿವೆ ಭಾರೀ ಗಾತ್ರದ ಏಲಿಯನ್‌ಗಳು

ಫ್ರೆಂಚ್ ಆನ್‌ಲೈನ್ ಭದ್ರತಾ ಪರಿಣಿತ ಚವೊಕಿ ಬೇಕರರ್ ಜರೋಡಿಯಮ್ ಅನ್ನು ಲಾಂಚ್ ಮಾಡಿದ್ದು, ಐಓಎಸ್ 9 ಸಾಫ್ಟ್‌ವೇರ್ ಒಳಗೊಂಡಿರುವ ಐಫೋನ್ ಅಥವಾ ಐಪ್ಯಾಡ್ ಅನ್ನು ಭೇದಿಸಿದ ಮೂರು ವ್ಯಕ್ತಿ ಅಥವಾ ತಂಡಕ್ಕೆ $1 ಮಿಲಿಯನ್ ಅನ್ನು ಕೊಡುಗೆಯಾಗಿ ನೀಡಲಿದೆ ಎಂದು ತಿಳಿಸಿದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಈ ಕುರಿತು ಇನ್ನಷ್ಟು ಮಾಹಿತಿ ಅರಿತುಕೊಳ್ಳೋಣ

ಐಓಎಸ್ 9 ಭದ್ರತೆ

ಐಓಎಸ್ 9 ಭದ್ರತೆ

ಹಣವನ್ನು ಗಳಿಸಲು, ಬಳಕೆದಾರರು ವೆಬ್ ಪುಟ ಅಥವಾ ಪಠ್ಯ ಸಂದೇಶವನ್ನು ಬಳಸಬೇಕು ಮತ್ತು ದೂರದಿಂದಲೇ ಐಓಎಸ್ 9 ಭದ್ರತೆಯನ್ನು ಭೇದಿಸಬೇಕು.

ಇನ್‌ಸ್ಟಾಲ್

ಇನ್‌ಸ್ಟಾಲ್

ಅಕ್ಟೋಬರ್ 31 ಕ್ಕೆ ಐಫೋನ್ ಅಥವಾ ಐಪ್ಯಾಡ್‌ನಲ್ಲಿ ನೇರವಾಗಿ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಬೇಕು ಎಂಬುದಾಗಿ ಕಂಪೆನಿ ಆನ್‌ಲೈನ್ ಹೇಳಿಕೆ ನೀಡಿದೆ.

ಅಪರಿಚಿತ ದೌರ್ಬಲ್ಯ

ಅಪರಿಚಿತ ದೌರ್ಬಲ್ಯ

ಭದ್ರತಾ ವ್ಯವಸ್ಥೆಯಲ್ಲಿ ಹಿಂದಿನ ಅಪರಿಚಿತ ದೌರ್ಬಲ್ಯವನ್ನು ಬಳಸಿಕೊಂಡು ಮಾತ್ರವೇ ಈ ಕಾರ್ಯವನ್ನು ನಡೆಸಬಹುದಾಗಿದೆ.

ವ್ಯವಸ್ಥೆಯು ಕಟ್ಟುನಿಟ್ಟಿನದ್ದು

ವ್ಯವಸ್ಥೆಯು ಕಟ್ಟುನಿಟ್ಟಿನದ್ದು

ಮಾರುಕಟ್ಟೆಯಲ್ಲಿ ಆಪಲ್‌ನ ಭದ್ರತಾ ವ್ಯವಸ್ಥೆಯು ಕಟ್ಟುನಿಟ್ಟಿನದ್ದು ಎಂಬ ಹಣೆಬರಹವನ್ನು ಪಡೆದುಕೊಂಡಿದೆ ಎಂದು ಜರೋಡಿಯಮ್ ತಿಳಿಸಿದೆ.

ಭದ್ರತೆ

ಭದ್ರತೆ

ಇನ್ನು ಇದನ್ನು ಕೇಳಿ ನೀವು ಹಿಂದಕ್ಕೆ ಸರಿಯಬೇಕಾಗಿಲ್ಲ. ಭದ್ರತೆ ಎಂದರೆ ಮುರಿಯಲು ಸಾಧ್ಯವಿಲ್ಲ ಎಂಬುದಾಗಿ ತಿಳಿದುಕೊಳ್ಳಬೇಕಾಗಿಲ್ಲ, ಇದರ್ಥ ಇಷ್ಟೇ! ಐಓಎಸ್ ಪ್ರಸ್ತುತ ಹೆಚ್ಚುವರಿ ದರದ್ದಾಗಿದೆ ಮತ್ತು ಇದನ್ನು ಮುರಿಯುವುದು ಎಂದರೆ ಅದಕ್ಕೆ ಗಟ್ಟಿಗುಂಡಿಕೆ ಬೇಕು. ಆದ್ದರಿಂದಲೇ ಐಓಎಸ್ 9 ಛೇದನಕ್ಕೆ ಇಷ್ಟು ದುಬಾರಿ ಮೌಲ್ಯವನ್ನು ನಾವು ಗೊತ್ತುಪಡಿಸಿರುವೆವು.

ಹೊಸ ಸಾಫ್ಟ್‌ವೇರ್ ದೋಷ

ಹೊಸ ಸಾಫ್ಟ್‌ವೇರ್ ದೋಷ

ಇನ್ನು ಸ್ವತಂತ್ರ ಸಂಶೋಧಕರಿಗೆ ಹೊಸ ಸಾಫ್ಟ್‌ವೇರ್ ದೋಷಗಳನ್ನು ಅನ್ವೇಷಿಸುವುದಕ್ಕಾಗಿ ಕೂಡ ಸೈಟ್ ಬಹುಮಾನವನ್ನು ಘೋಷಿಸಿದೆ.

ಸೆಕ್ಯುರಿಟಿ ಡೇಟಾ

ಸೆಕ್ಯುರಿಟಿ ಡೇಟಾ

ಸೆಕ್ಯುರಿಟಿ ಡೇಟಾವನ್ನು ಇದು ವಿಶ್ಲೇಷಣೆ ಮಾಡಿ ಇದು ಕಾರ್ಪೊರೇಟ್ ಮತ್ತು ಸರಕಾರೀ ಏಜೆನ್ಸಿ ಕ್ಲೈಂಟ್‌ಗಳಿಗೆ ತಮ್ಮ ಆನ್‌ಲೈನ್ ದೋಷಗಳನ್ನು ಸರಿಪಡಿಸಲು ಸಹಾಯ ಮಾಡಲಿದೆ.

ಭದ್ರತಾ ಪದರ

ಭದ್ರತಾ ಪದರ

ಐಓಎಸ್ ಆಧರಿಸಿರುವ ಭದ್ರತಾ ಪದರ ಪ್ರತ್ಯೇಕವಾಗಿ ದುರ್ಬಲವಾಗಿದೆ ಆದರೆ ಜೊತೆಯಾಗಿ ಹೆಚ್ಚು ಪರಿಣಾಮಕಾರಿ ಎಂದೆನಿಸಿದೆ.

ದುಬಾರಿ ಪ್ರಕ್ರಿಯೆ

ದುಬಾರಿ ಪ್ರಕ್ರಿಯೆ

ಇನ್ನು ಈ ಅಂಶಗಳ ಮೇಲೆ ದಾಳಿ ಮಾಡುವುದು ಎಂದರೆ ಇದು ಸಾಧ್ಯವಿಲ್ಲದ ಮಾತಾಗಿದೆ. ಇದು ಅತಿ ದೀರ್ಘವಾದ ಮತ್ತು ದುಬಾರಿ ಪ್ರಕ್ರಿಯೆ ಎಂದೆನಿಸಿದೆ ಎಂಬುದಾಗಿ ಬೇಕರ್ ತಿಳಿಸಿದ್ದಾರೆ.

ಸಪ್ಟೆಂಬರ್ 16

ಸಪ್ಟೆಂಬರ್ 16

ಇನ್ನು ಆಪಲ್ ಈ ಕುರಿತಾಗಿ ವೆಬ್‌ಸೈಟ್ ಅನ್ನು ಇದುವರೆಗೆ ಸಂಧಿಸಿಲ್ಲ. ಆಪಲ್ ಐಓಎಸ್ 9 ಅನ್ನು ಸಪ್ಟೆಂಬರ್ 16 ರಂದು ಲಾಂಚ್ ಮಾಡಿತ್ತು ಆದ್ದರಿಂದ ಅಭಿಪ್ರಾಯ ಮಂಡನೆ ತುರ್ತಾಗಿ ಸಾಧ್ಯವಿರಲಿಲ್ಲ.

Best Mobiles in India

English summary
Computer security firm Zerodium has offered a $1 million bounty to hackers who can find a way to breach Apple's latest iOS 9 mobile operating system.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X