Home
ಸುದ್ದಿಜಾಲ

ಭಾರತೀಯರನ್ನೇ ಗುರಿಯಾಗಿಸಿಕೊಂಡಿದ್ದಾರೆ ಹ್ಯಾಕರ್ಸ್‌ಗಳು: ನೀವು ಮಾಡಬೇಕಿರುವುದೇನು?

ಭಾರತವು ಅತ್ಯಂತ ವೇಗವಾಗಿ ಟೆಕ್ನಾಲಜಿಯನ್ನು ಅಳವಡಿಸಿಕೊಳ್ಳುತ್ತಿದೆ. ಈ ಕಾರಣಕ್ಕಾಗಿಯೇ ಇಂದು ಎಲ್ಲವೂ ಡಿಜಿಟಲೀಕರಣ ಆಗುತ್ತಿದ್ದು, ಈ ಮೂಲಕ ಸರ್ಕಾರಕ್ಕೆ ಹಾಗೂ ವಿವಿಧ ಸಂಸ್ಥೆಗಳಿಗೆ ಸಹಕಾರ ಆಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಹ್ಯಾಕರ್ಸ್‌ಗಳು ಭಾರತದ ಈ ಜನರ ಮೇಲೆ ತಮ್ಮ ಹದ್ದಿನ ಕಣ್ಣಿಟ್ಟಿದ್ದು, ವಂಚನೆ ಮಾಡಲು ಎದುರು ನೋಡುತ್ತಿದ್ದಾರೆ.

ಹೌದು, ಭಾರತದ ಆರ್ಥಿಕ ವರ್ಷವು ಮಾರ್ಚ್ 31 ರಂದು ಕೊನೆಯಾಗಿದ್ದು, ಜನರು ಈಗ ತಮ್ಮ ತೆರಿಗೆ ರಿಟರ್ನ್ಸ್ ಕೆಲಸದಲ್ಲಿ ತಲ್ಲೀನವಾಗಿದ್ದಾರೆ. ಇದರೊಂದಿಗೆ ಸ್ಕ್ಯಾಮರ್‌ಗಳು ಸಹ ಎಚ್ಚರವಾಗಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಮತ್ತು ತೆರಿಗೆ ಸಮಯ ಸ್ಮಿಶಿಂಗ್ ಅಭಿಯಾನಗಳ ಮೂಲಕ ಭಾರತೀಯ ಖಾತೆದಾರರನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ ಎಂದು ಎಚ್ಚರಿಸಲಾಗಿದೆ. ಹಾಗಿದ್ರೆ, ಇವರು ಹೇಗೆಲ್ಲಾ ಮೋಸ ಮಾಡಲು ಮುಂದಾಗಿದ್ದಾರೆ, ನೀವೆಲ್ಲಾ ಹೇಗೆ ಎಚ್ಚರಿಕೆ ವಹಿಸಬೇಕು ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಭಾರತೀಯರನ್ನೇ ಗುರಿಯಾಗಿಸಿಕೊಂಡಿದ್ದಾರೆ ಹ್ಯಾಕರ್ಸ್‌ಗಳು: ನೀವು ಮಾಡಬೇಕಿರುವುದೇನು?

ಏನಿದು ಸ್ಮಿಶಿಂಗ್ ಕ್ಯಾಂಪೇನ್ ಮೋಸ: ಸ್ಮಿಶಿಂಗ್ ಕ್ಯಾಂಪೇನ್ ಎನ್ನುವುದು ಭಾರತದ ಜನರನ್ನು ಮೋಸ ಮಾಡುವ ಒಂದು ಕ್ಯಾಂಪೇನ್ ಆಗಿದ್ದು, ಇದರಲ್ಲಿ ಭಾರತೀಯ ಜನಪ್ರಿಯ ಬ್ಯಾಂಕ್‌ಗಳಿಂದ ಬಂದಿರುವ ದುರುದ್ದೇಶಪೂರಿತ ಪಠ್ಯ ಸಂದೇಶಗಳನ್ನು ಬಳಕೆದಾರರಿಗೆ ಮೋಸಗೊಳಿಸುವ ಮತ್ತು ಅವರ ವೈಯಕ್ತಿಕ ಮಾಹಿತಿಯನ್ನು ಪಡೆಯುವ ಉದ್ದೇಶದಿಂದ ಹ್ಯಾಕರ್ಸ್‌ಗಳು ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ವಂಚನೆಗೆ ಭಾರತೀಯರೇ ಗುರಿ: ಮೊದಲೇ ತಿಳಿಸಿದಂತೆ ಭಾರತೀಯರು ತೆರಿಗೆ ರಿಟರ್ನ್ಸ್ ಸಲ್ಲಿಸುವಲ್ಲಿ ಬ್ಯುಸಿಯಾಗಿದ್ದಾರೆ. ಈ ಬೇಳೆ ತಮ್ಮ ಫೋನ್‌ಗೆ ಯಾವುದೇ ಮೆಸೆಜ್‌ ಬಂದರು ಸಹ ಅದನ್ನು ನಂಬುವ ಪರಿಸ್ಥಿತಿಯಲ್ಲಿ ಅವರಿದ್ದು, ಇದನ್ನೇ ಹ್ಯಾಕರ್ಸ್‌ ಬಂಡವಾಳ ಮಾಡಿಕೊಂಡಿದ್ದಾರೆ. ಇನ್ನು ಸ್ವೀಕರಿಸುವವರ ಬ್ಯಾಂಕ್ ಖಾತೆಯನ್ನು ನಿರ್ಬಂಧಿಸಲಾಗುವುದು ಎಂದು ಸುಳ್ಳು ಸಂದೇಶವನ್ನು ಸ್ಕ್ಯಾಮರ್‌ಗಳು ಕಳುಹಿಸುತ್ತಿದ್ದಾರೆ. ಈ ಮೂಲಕ ಖಾತೆಗಳಲ್ಲಿ ಪ್ಯಾನ್‌ ಮತ್ತು ಆಧಾರ್ ಕಾರ್ಡ್ ಮಾಹಿತಿಯನ್ನು ನವೀಕರಿಸಲು ಹೇಳುವ ಸ್ಮಿಶಿಂಗ್ ಅಭಿಯಾನವನ್ನು ಸಹ ನಡೆಯುತ್ತಿದೆ.

ಬ್ರಿಟಿಷ್ ಮೂಲದ ಭದ್ರತಾ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಕಂಪೆನಿಯಾಗಿರುವ ಸೋಫೋಸ್ (Sophos) ವರದಿಯ ಪ್ರಕಾರ, ಈ ಪಠ್ಯಗಳು ಆಂಡ್ರಾಯ್ಡ್‌ಪ್ಯಾಕೇಜ್ (APK) ಫೈಲ್‌ಗೆ ಲಿಂಕ್ ಅನ್ನು ಒಳಗೊಂಡಿವೆ. ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ APK ಅನ್ನು ಡೌನ್‌ಲೋಡ್ ಮಾಡಲಾಗುತ್ತದೆ. ಬಳಿಕ ಇನ್‌ಸ್ಟಾಲ್‌ ಮಾಡಲಾಗುತ್ತದೆ. ಇದಾದ ಬಳಿಕ ಬಳಕೆದಾರರನ್ನು ಮೋಸಗೊಳಿಸಲು ಈ APK ನಕಲಿ ಬ್ಯಾಂಕ್ ಲಾಗಿನ್ ಪುಟಗಳನ್ನು ಓಪನ್‌ ಮಾಡುತ್ತದೆ ಎನ್ನುವ ಬೆಚ್ಚಿ ಬೀಳಿಸುವ ವಿಷಯವನ್ನು ತಿಳಿಸಲಾಗಿದೆ.

ಇದು APK ಸ್ವೀಕರಿಸುವವರನ್ನು ಮಾತ್ರವಲ್ಲದೆ ಬ್ಯಾಂಕ್ ಬ್ರ್ಯಾಂಡ್‌ಗಳಿಗೂ ಸಮಸ್ಯೆ ನಿರ್ಮಾಣ ಮಾಡುತ್ತದೆ. APK ನಂತರ ಸ್ವೀಕರಿಸುವವರ ಲಾಗಿನ್, ಪಾಸ್‌ವರ್ಡ್, ಡೆಬಿಟ್ ಕಾರ್ಡ್ ಸಂಖ್ಯೆ ಮತ್ತು ಎಟಿಎಂ ಪಿನ್ ಅನ್ನು ಇದು ಸುಲಭವಾಗಿ ಪಡೆದುಕೊಳ್ಳುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಇದರೊಂದಿಗೆ ಸ್ವೀಕರಿಸುವವರು ಯಾವುದೇ ವೈಯಕ್ತಿಕ ಮಾಹಿತಿಯನ್ನು ನಮೂದಿಸಿದರೂ ಸಹ ಈ ಮಾಹಿತಿಯನ್ನೂ ಅದು ಕದಿಯುತ್ತದೆ ಎನ್ನಲಾಗಿದೆ.

ಇದರಿಂದ ಸುರಕ್ಷಿತವಾಗಿರುವುದು ಹೇಗೆ?: ಸೋಫೋಸ್ ಹೇಳುವಂತೆ ತಮ್ಮ ಬ್ಯಾಂಕ್‌ನಿಂದ ಅಥವಾ ಇತರ ಸೇವಾ ಪೂರೈಕೆದಾರರಿಂದ ಅನಿರೀಕ್ಷಿತ ಸಂದೇಶವನ್ನು ಸ್ವೀಕಾರ ಮಾಡಿದಾಗ ಅದನ್ನು ಓಪನ್‌ ಮಾಡುವ ಮುನ್ನ ಪರಿಶೀಲನೆ ಮಾಡಬೇಕಿದೆ. ಅಂದರೆ ಆ ಮೆಸೆಜ್‌ ಅಧಿಕೃತ ಮೂಲದಿಂದ ಬಂದಿದೆಯಾ ಎಂದು ತಿಳಿದುಕೊಳ್ಳಬೇಕು. ಅದಾಗ್ಯೂ ಈ ಸಂಬಂಧ ಅಧಿಕೃತ ವೆಬ್‌ಸೈಟ್‌ಗೆ ತಲುಪಿ ಅಲ್ಲಿ ಮಾಹಿತಿ ಪಡೆದುಕೊಳ್ಳಬೇಕಿದೆ.

ಭಾರತೀಯರನ್ನೇ ಗುರಿಯಾಗಿಸಿಕೊಂಡಿದ್ದಾರೆ ಹ್ಯಾಕರ್ಸ್‌ಗಳು: ನೀವು ಮಾಡಬೇಕಿರುವುದೇನು?

ಅದೆಲ್ಲಕ್ಕೂ ಮುಖ್ಯವಾಗಿ ಬಳಕೆದಾರರು ಪಠ್ಯ ಸಂದೇಶಗಳ ಮೂಲಕ ಕಳುಹಿಸದ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡಲೇ ಬಾರದು. ಈ ಮೂಲಕ ವಿಶ್ವಾಸಾರ್ಹವಲ್ಲದ ಮೂಲಗಳಿಂದ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್‌ ಮಾಡುವುದು ತಪ್ಪಿಸಿದಂತೆ ಆಗುತ್ತದೆ. ಇದರಿಂದ ಬಳಕೆದಾರರು ತಮ್ಮ ಹಣ ಹಾಗೂ ಖಾಸಗಿ ಡೇಟಾವನ್ನು ಸೇಫ್‌ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
Indian financial year ends on March 31 and people are now engrossed in their tax returns work. But this time hackers are cheating through smishing campaign.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+