Home
ಸುದ್ದಿಜಾಲ

ಉದ್ಯೋಗಕ್ಕಾಗಿ ಆನ್‌ಲೈನ್‌ನಲ್ಲಿ ಸರ್ಚ್‌ ಮಾಡುವ ಮುನ್ನ ಇರಲಿ ಎಚ್ಚರ!

ಈಗಂತೂ ಓದಿಗೆ ತಕ್ಕ ಉದ್ಯೋಗ ಸಿಗುವುದಿರಲಿ ಜೀವನ ನಿರ್ವಹಣೆ ಮಾಡಲು ಸಹ ಕಷ್ಟಪಡುವ ಪರಿಸ್ಥಿತಿ ಹಲವರಿಗೆ ನಿರ್ಮಾಣ ಆಗಿದೆ. ಯಾಕೆಂದರೆ ಕೆಲವು ಟೆಕ್‌ ದೈತ್ಯ ಕಂಪೆನಿಗಳು ಉದ್ಯೋಗಿಗಳನ್ನು ವಜಾ ಮಾಡುತ್ತಿದ್ದು, ಇದನ್ನೇ ಬಂಡವಾಳ ಮಾಡಿಕೊಂಡಿರುವ ಹ್ಯಾಕರ್ಸ್‌ಗಳು ಏನೆಲ್ಲಾ ಕಿತಾಪತಿ ಮಾಡುತ್ತಿದ್ದಾರೆ ಗೊತ್ತಾ!?.

ಹೌದು, ಸದ್ಯಕ್ಕೆ ಹಲವಾರು ನಿರುದ್ಯೋಗಿಗಳು ಉದ್ಯೋಗ ಹುಡುಕುತ್ತಿದ್ದು, ಇನ್ನೂ ಕೆಲವರು ಇರುವ ಉದ್ಯೋಗ ಕಳೆದುಕೊಂಡು ಬೇರೆ ಯಾವುದಾದರೂ ಕೆಲಸ ಸಿಕ್ಕರೆ ಸಾಕು ಅಂತಾ ಸಿಕ್ಕ ಸಿಕ್ಕಲ್ಲಿ ಅಪ್ಲಿಕೇಶನ್‌ ಹಾಕುತ್ತಿದ್ದಾರೆ. ಇದನ್ನೇ ಸದುಪಯೋಗಪಡಿಸಿಕೊಂಡಿರುವ ಹ್ಯಾಕರ್ಸ್‌ಗಳು ಉದ್ಯೋಗ ಇಲ್ಲದೆ ಕಷ್ಟ ಅನುಭವಿಸುತ್ತಿರುವ ಯುವಕರ ಬಾಳಲ್ಲಿ ಇನ್ನಷ್ಟು ನೋವು ನೀಡುತ್ತಿದ್ದಾರೆ. ಹಾಗಿದ್ರೆ, ಹ್ಯಾಕರ್ಸ್‌ಗಳು ಮಾಡುತ್ತಿರುವ ಕೆಲಸವೇನು?, ಉದ್ಯೋಗ ಹುಡುಕುತ್ತಿರುವವರು ಹೇಗೆ ಎಚ್ಚರಿಕೆ ವಹಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

ಉದ್ಯೋಗಕ್ಕಾಗಿ ಆನ್‌ಲೈನ್‌ನಲ್ಲಿ ಸರ್ಚ್‌ ಮಾಡುವ ಮುನ್ನ ಇರಲಿ ಎಚ್ಚರ!

ಆರ್ಥಿಕ ಹಿಂಜರಿತದಿಂದ ಹಲವು ಸಮಸ್ಯೆ

ಆರ್ಥಿಕ ಹಿಂಜರಿತದಿಂದಾಗಿ ಜಾಗತಿಕವಾಗಿ ಹಲವು ಸಮಸ್ಯೆಗಳು ಈಗಾಗಲೇ ನಿರ್ಮಾಣ ಆಗಿವೆ. ಇದರ ನಡುವೆ ಸೈಬರ್ ಅಪರಾಧಿಗಳು ಸೂಕ್ಷ್ಮ ಮಾಹಿತಿಯನ್ನು ಕದಿಯಲು ಮುಂದಾಗಿದ್ದು, ಉದ್ಯೋಗಾಕಾಂಕ್ಷಿಗಳನ್ನು ಗುರಿಯಾಗಿಸಲು ಫಿಶಿಂಗ್ ಮತ್ತು ಮಾಲ್‌ವೇರ್ ಪ್ರಚಾರಗಳನ್ನು ಬಳಸುತ್ತಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ. ಇದರ ಜೊತೆಗೆ ಉದ್ಯೋಗಾಕಾಂಕ್ಷಿಗಳು ಸಹ ನಕಲಿ ಕಂಪನಿಗಳು ಅಥವಾ ನೇಮಕಾತಿ ಏಜೆನ್ಸಿಗಳಿಂದ ಇಮೇಲ್‌ಗಳನ್ನು ಸ್ವೀಕರಿಸುತ್ತಿದ್ದಾರೆ.

ಇನ್ನು ಈ ಮೇಲ್‌ ಅಥವಾ ಇನ್ನಿತರೆ ಮೂಲದಲ್ಲಿ ಬರುವ ಸಂದೇಶಗಳಲ್ಲಿ ಹ್ಯಾಕರ್ಸ್‌ಗಳು ತಮ್ಮ ಗುರಿ ಈಡೇರಿಸಿಕೊಳ್ಳಲು ಮುಂದಾಗಿದ್ದು, ಇದರಲ್ಲಿ ಪಾಸ್‌ವರ್ಡ್‌ ಹಾಗೂ ಹಣದ ವಹಿವಾಟಿನ ಎಲ್ಲಾ ಮಾಹಿತಿಯನ್ನು ಉದ್ಯೋಗಾಕಾಂಕ್ಷಿಗಳಿಗೆ ತಿಳಿಯದಂತೆ ಪಡೆದುಕೊಳ್ಳುತ್ತಿದ್ದರೆ. ಯಾಕೆಂದರೆ ಈ ಮೇಲ್‌ಗಳನ್ನು ಇದಕ್ಕೆಂದೇ ವಿನ್ಯಾಸಗೊಳಿಸಲಾಗಿದೆ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ.

ಉದ್ಯೋಗಕ್ಕಾಗಿ ಆನ್‌ಲೈನ್‌ನಲ್ಲಿ ಸರ್ಚ್‌ ಮಾಡುವ ಮುನ್ನ ಇರಲಿ ಎಚ್ಚರ!

ಕಳುಹಿಸಲಾಗುವ ಮೇಲ್‌ನಲ್ಲಿ ಏನಿರಲಿದೆ?

ಉದ್ಯೋಗಾಕಾಂಕ್ಷಿಗಳ ಕಾತುರತೆಯನ್ನು ಅರ್ಥ ಮಾಡಿಕೊಂಡಿರುವ ಹ್ಯಾಕರ್ಸ್‌ಗಳು ದುರುದ್ದೇಶಪೂರಿತ ಲಗತ್ತು ಅಥವಾ ಯುಆರ್‌ಎಲ್‌ ಗಳನ್ನು ನೀಡುತ್ತಿದ್ದಾರೆ. ಜೊತೆಗೆ ಮಾಲ್‌ವೇರ್‌ನಿಂದ ದುರುದ್ದೇಶಪೂರಿತ ಸಾಫ್ಟ್‌ವೇರ್ ಅನ್ನು ಡೌನ್‌ಲೋಡ್ ಮಾಡಲು ಕೇಳುತ್ತಾರೆ. ಇದರಿಂದಾಗಿ ಬಳಕೆದಾರರ ಖಾಸಗಿ ಡೇಟಾ ಹಾಗೂ ಇನ್ನಿತರೆ ಮಾಹಿತಿಗಳು ಹ್ಯಾಕರ್ಸ್‌ ವಶವಾಗುತ್ತಿವೆ.

ಉದ್ಯೋದಾತರನ್ನೂ ಬಿಟ್ಟಿಲ್ಲ ಈ ಕಿಡಿಗೇಡಿಗಳು

ಉದ್ಯೋಗಾಕಾಂಕ್ಷಿಗಳು ಮಾತ್ರವಲ್ಲದೆ ಉದ್ಯೋಗ ನೀಡುವ ಉದ್ಯೋದಾತರನ್ನೂ ಇವರು ಗುರಿಯಾಗಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಉದ್ಯೋಗಾಕಾಂಕ್ಷಿಗಳಂತೆ ನಟಿಸಿ ರೆಸ್ಯೂಮ್ ಅಥವಾ ಗುರುತಿನ ದಾಖಲೆಗಳ ಮೂಲಕ ಮಾಲ್ವೇರ್ ಅನ್ನು ರವಾನೆ ಮಾಡುತ್ತಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ. ಈ ಮೂಲಕ ಉದ್ಯೋಗದಾತರು ಸ್ವೀಕರಿಸುವ ಹೆಚ್ಚಿನ ಪ್ರಮಾಣದ ಉದ್ಯೋಗ ಅರ್ಜಿಗಳನ್ನು ಇವರು ವೀಕ್ಷಿಸಿ ನಂತರ ಉದ್ಯೋಗಾಕಾಂಕ್ಷಿಗಳನ್ನು ಮೋಸ ಮಾಡಲು ಮುಂದಾಗುತ್ತಿದ್ದಾರೆ.

ಹ್ಯಾಕರ್ಸ್‌ಗಳ ಗುರಿ ಏನು?

ಉದ್ಯೋಗದ ವಿಷಯದಲ್ಲಿ ಚೆಲ್ಲಾಟ ಆಡುತ್ತಿರುವ ಹ್ಯಾಕರ್ಸ್‌ ಸೂಕ್ಷ್ಮ ಮಾಹಿತಿಗೆ ಅನಧಿಕೃತ ಪ್ರವೇಶವನ್ನು ಪಡೆಯಲು, ವೈಯಕ್ತಿಕ ಡೇಟಾವನ್ನು ಕದಿಯಲು ಮತ್ತು ಸಂಸ್ಥೆಯ ಕಾರ್ಯಾಚರಣೆಗಳನ್ನು ಅಡ್ಡಿಪಡಿಸುವ ಗುರಿಯನ್ನು ಹೊಂದಿದ್ದಾರೆ ಎನ್ನಲಾಗಿದೆ. ಅದರಲ್ಲೂ ಯಾವುದೇ ಮೇಲ್‌ ಅಥವಾ ದಾಖಲಾತಿ ಮೂಲಕ ಸಂವಹನ ನಡೆಸುವಾಗ ಕದ್ದ ದಾಖಲೆಗಳನ್ನೇ ಬಳಕೆ ಮಾಡಿಕೊಳ್ಳುತ್ತಿದ್ದು, ಇದರಿಂದಾಗಿ ಜನರು ಸುಲಭವಾಗಿ ಮೋಸಕ್ಕೆ ಒಳಗಾಗುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಉದ್ಯೋಗಕ್ಕಾಗಿ ಆನ್‌ಲೈನ್‌ನಲ್ಲಿ ಸರ್ಚ್‌ ಮಾಡುವ ಮುನ್ನ ಇರಲಿ ಎಚ್ಚರ!

ಎಲ್ಲೆಲ್ಲಿ ಈ ರೀತಿಯ ಘಟನೆ ಸಂಭವಿಸುತ್ತಿವೆ?

ಶೇಕಡಾ 70 ಕ್ಕಿಂತ ಹೆಚ್ಚು ಯುಎಸ್‌ ಅನ್ನು ಹ್ಯಾಕರ್ಸ್‌ಗಳು ಗುರಿಯಾಗಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದ್ದು. ಇದೇ ರೀತಿಯ ದಾಳಿಗಳು ಜಪಾನ್, ಐರ್ಲೆಂಡ್, ಯುಕೆ, ಸ್ವೀಡನ್, ಪೆರು, ಭಾರತ, ಫಿಲಿಪೈನ್ಸ್, ಜರ್ಮನಿ ಮತ್ತು ಹೆಚ್ಚಿನ ದೇಶಗಳಲ್ಲಿಯೂ ಕಂಡು ಬಂದಿದೆ ಎನ್ನಲಾಗಿದೆ. ಹೀಗಾಗಿ ಉದ್ಯೋಗ ಹುಡುಕುತ್ತಿರುವವರು ಎಚ್ಚರಿಕೆ ವಹಿಸುವ ಮೂಲಕ ಉದ್ಯೋಗದಾತರ ಜೊತೆಗೆ ಸಂವಹನ ನಡೆಸಬೇಕಿದೆ.

Best Mobiles in India

English summary
Hackers are targeting job seekers through phishing, malware and stealing sensitive data and other information of job seekers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+