ಯೂಟ್ಯೂಬ್ ಬಳಕೆದಾರರೇ ಎಚ್ಚರಿಕೆ; ಈ ಫೈಲ್ ಡೌನ್‌ಲೋಡ್ ಮಾಡಬೇಡಿ
ಯೂಟ್ಯೂಬ್ ಇದೀಗ ವಿವಿಧ ಸುಧಾರಿತ ಫೀಚರ್ಸ್‌ಗಳೊಂದಿಗೆ ಹಲವಾರು ರೀತಿಯಲ್ಲಿ ಬಳಕೆದಾರರಿಗೆ ಸೇವೆ ನೀಡುತ್ತಿದೆ. ಹಾಗೆಯೇ ಕೆಲವರು ಯೂಟ್ಯೂಬ್‌ನಲ್ಲಿ ಹೊಸ ಹೊಸ ಚಾನಲ್‌ಗಳನ್ನು ಕ್ರಿಯೇಟ್ ಮಾಡುವ ಮೂಲಕ ಹಣ ಸಂಪಾದನೆಯ ಮಾರ್ಗ ಕಂಡುಕೊಂಡಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಶಾಕಿಂಗ್ ವಿಷಯವೊಂದು ಹೊರಬಿದ್ದಿದೆ.
ಹೌದು, ಯೂಟ್ಯೂಬ್ ತನ್ನ ನೀತಿಗಳನ್ನು ಬದಲಾಯಿಸಿದೆ ಎನ್ನುವು ಇಮೇಲ್‌ಗಳನ್ನು ನೀವೇನಾದರೂ ಸ್ವೀಕರಿಸಿದ್ದರೆ ನಿಮ್ಮನ್ನು ಸಹ ಈ ಗಾಳಕ್ಕೆ ಬೀಳಿಸಲು ಹ್ಯಾಕರ್ಸ್ ಮುಂದಾಗಿದ್ದಾರೆ ಎಂದರ್ಥ. ಇದೊಂದು ಫಿಶಿಂಗ್ ಪ್ರಯತ್ನವಾಗಿದೆ ಎನ್ನಲಾಗಿದ್ದು, ಈಗಾಗಲೇ ಹಲವಾರು ಬಳಕೆದಾರರು ಇದರಿಂದ ಗೊಂದಲಕ್ಕೆ ಒಳಗಾಗಿದ್ದಾರೆ. ಹಾಗಿದ್ರೆ, ಯೂಟ್ಯೂಬ್ ಮೂಲಕ ಹ್ಯಾಕರ್ಸ್‌ಗಳು ಮಾಡುತ್ತಿರುವ ಕಿತಾಪತಿ ಏನು, ಇದರಿಂದ ಬಳಕೆದಾರರಿಗೆ ಆಗುವ ಸಮಸ್ಯೆ ಏನು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಯೂಟ್ಯೂಬ್‌ನಲ್ಲಿ ಸೈಬರ್ ಅಪರಾಧಿಗಳು: ಯೂಟ್ಯೂಬ್ ಪ್ರಪಂಚದಾದ್ಯಂತ ಜನಪ್ರಿಯವಾಗಿದ್ದು, 2.5 ಶತಕೋಟಿ ಮಾಸಿಕ ಬಳಕೆದಾರರನ್ನು ಹೊಂದಿದೆ ಎಂದು ಸೈಬರ್ ಗುಪ್ತಚರ ಸಂಸ್ಥೆ ಕ್ಲೌಡ್‌ಸೆಕ್ಈ ಹಿಂದೆ ಮಾಹಿತಿ ನೀಡಿತ್ತು. ಇದರ ನಡುವೆ ವಿಡಿಯೋ ಶೇರ್ ಪ್ಲಾಟ್‌ಪಾರ್ಮ್ ಹೆಸರಿನಲ್ಲಿ ಸಾಕಷ್ಟು ಫಿಶಿಂಗ್ ಪ್ರಯತ್ನಗಳು ನಡೆಯುತ್ತಿದ್ದು, ಮಾಲ್‌ವೇರ್ ದಾಳಿ ಮೂಲಕ ಹಣದ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಸೈಬರ್ ಅಪರಾಧಿಗಳು ತಮ್ಮ ಹಾನಿಕಾರಕ ಚಟುವಟಿಕೆಗಳಿಗಾಗಿ ಯೂಟ್ಯೂಬ್ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದು, ಯೂಟ್ಯೂಬ್‌ನ 'ಹೊಸ ನಿಯಮಗಳು ಮತ್ತು ನೀತಿಗಳ' ಕುರಿತು ಬಳಕೆದಾರರಿಗೆ ತಿಳಿಹೇಳುವ ರೀತಿಯಲ್ಲಿ ಮೋಸ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಕಳೆದ ಕೆಲವು ದಿನಗಳಲ್ಲಿ ನೀವು ಅಂತಹ ಯಾವುದೇ ಇಮೇಲ್ ಅನ್ನು ಸ್ವೀಕರಿಸಿದ್ದರೆ, ಇದೊಂದು ಹೊಸ ಹಗರಣದ ಭಾಗವಾಗಿದೆ ಎಂದು ಅರಿತುಕೊಳ್ಳಿ.
ಯೂಟ್ಯೂಬ್ ಫಿಶಿಂಗ್: ಟೆಕ್ ಪ್ರಭಾವಿಯಾಗಿರುವ ಕೆವಿನ್ ಬ್ರೀಜ್ ಅವರು ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಹೊಸ ಹಗರಣದ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಹಾಗೆಯೇ ಕೆವಿನ್ ಅವರು ಸ್ವೀಕರಿಸಿದ ಮೇಲ್‌ನ ಸ್ಕ್ರೀನ್‌ಶಾಟ್ ಅನ್ನು ಶೇರ್ ಮಾಡಿಕೊಂಡಿದ್ದು, ಅದರಲ್ಲಿ ಯೂಟ್ಯೂಬ್‌ನ ಹೊಸ ನೀತಿ ಹಾಗೂ ನಿಯಮಗಳು ಇರುವ ಮಾಹಿತಿ ಕಾಣಿಸಿಕೊಂಡಿದೆ.

ಇನ್ನು ಈ ಇಮೇಲ್‌ಗಳನ್ನು [email protected] ನಿಂದ ಸ್ವೀಕಾರ ಮಾಡಲಾಗಿದ್ದು, ಇದರಲ್ಲಿ ಯೂಟ್ಯೂಬ್ ತನ್ನ ಹಣಗಳಿಕೆ ನಿಯಮಗಳು ಮತ್ತು ನೀತಿಗಳನ್ನು ಬದಲಾಯಿಸಲಿದ ಎಂದು ಉಲ್ಲೇಖಿಸಲಾಗಿದ್ದು, ಅಧಿಕೃತ ಡಾಕ್ಯುಮೆಂಟ್‌ನಲ್ಲಿ ಹೆಚ್ಚಿನ ಮಾಹಿತಿ ಇದ್ದು, ಅದನ್ನು ಡೌನ್‌ಲೋಡ್ ಮಾಡಲು ಬಳಕೆದಾರರಿಗೆ ಒತ್ತಾಯಿಸಲಾಗಿದೆ. ಡಾಕ್ಯುಮೆಂಟ್ ಅನ್ನು ಪರಿಶೀಲಿಸಲು ಮತ್ತು ಪ್ರತ್ಯುತ್ತರವನ್ನು ಕಳುಹಿಸಲು 7 ದಿನಗಳ ಮಾನ್ಯತೆ ಸಹ ನೀಡಲಾಗಿದ್ದು, ಇದಾದ ನಂತರ ಅವರ ಪ್ರವೇಶವನ್ನು ನಿರ್ಬಂಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಯೂಟೂಬರ್ಸ್‌ಗಳೇ ಟಾರ್ಗೆಟ್: ಇನ್ನು ಈ ಇಮೇಲ್‌ನಲ್ಲಿ ಇರುವ ಮಾಹಿತಿ ಗಮನಿಸಿದರೆ ಹ್ಯಾಕರ್ಸ್‌ಗಳು ಯೂಟೂಬರ್ಸ್‌ಗಳನ್ನೇ ಟಾರ್ಗೆಟ್ ಮಾಡಿದ್ದಾರೆ ಎಂದು ತೋರುತ್ತದೆ. ಯಾಕೆಂದರೆ ಇದರಲ್ಲಿ ಹಣಗಳಿಕೆಯ (monetization) ವಿಷಯವನ್ನು ಉಲ್ಲೇಖ ಮಾಡಲಾಗಿದೆ. ಇದಕ್ಕೆ ಕಾರಣ ಬಹುಪಾಲು ಮಂದಿ ಉತ್ತಮ ಕಂಟೆಂಟ್ ನೀಡುವ ಮೂಲಕ ಲಕ್ಷ ಲಕ್ಷ ಹಣವನ್ನು ಯೂಟ್ಯೂಬ್‌ನಿಂದ ಗಳಿಕೆ ಮಾಡುತ್ತಿರುವುದು.

ಯೂಟ್ಯೂಬ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಈ ಸಂಬಂಧ ಮಾಹಿತಿ ನೀಡಿದ್ದು, ಫಿಶಿಂಗ್ ಪ್ರಯತ್ನದ ಬಗ್ಗೆ ಎಚ್ಚರಿಕೆ ನೀಡಿದೆ ಹಾಗೆಯೇ ಸುರಕ್ಷಿತವಾಗಿರಲು ಬಳಕೆದಾರರನ್ನು ಒತ್ತಾಯಿಸಿದೆ. ನಾವು ಫಿಶಿಂಗ್ ಪ್ರಯತ್ನದ ವರದಿಗಳನ್ನು ನೋಡುತ್ತಿದ್ದೇವೆ [email protected] ನಿಂದ ಬರುವ ಮೆಸೆಜ್‌ನಿಂದ ಜಾಗರೂಕರಾಗಿರಿ, ಯಾವುದೇ ಫೈಲ್ ಅನ್ನು ಡೌನ್‌ಲೋಡ್ ಮಾಡಬೇಡಿ ಎಂದು ತಿಳಿಸಿದೆ.


Click it and Unblock the Notifications








