ಹೊಸ 'ಮೇಡ್ ಇನ್ ಇಂಡಿಯಾ' ವಾಷಿಂಗ್ ಮೆಷಿನ್ ಲಾಂಚ್: ಅಂತಹುದೇನಿದೆ ವಿಶೇಷತೆ!?
ವಾಷಿಂಗ್ ಮೆಷಿನ್ ಬಳಕೆ ಇಂದು ವ್ಯಾಪಕವಾಗಿದೆ. ಹಳ್ಳಿಯಿಂದ ದೊಡ್ಡ ದೊಡ್ಡ ನಗರಗಳವರೆಗೆ ಮೆಷಿನ್ ಅನ್ನು ಬಳಕೆ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಬಳಕೆದಾರರ ಅನುಕೂಲಕ್ಕೆ ತಕ್ಕ ಹಲವಾರು ಬ್ರ್ಯಾಂಡ್‌ನ ವಾಷಿಂಗ್ ಮೆಷಿನ್‌ಗಳು ಲಭ್ಯ ಇದ್ದು, ಈ ನಡುವೆ ಹೊಸದಾಗಿ ಅದರಲ್ಲೂ 'ಮೇಡ್ ಇನ್ ಇಂಡಿಯಾ' ವಾಷಿಂಗ್ ಮೆಷಿನ್ ಅನ್ನು ಲಾಂಚ್ ಮಾಡಲಾಗಿದೆ.
ಹೌದು, ಹೈಯರ್ ಅಪ್ಲೈಯೆನ್ಸಸ್ ಇಂಡಿಯಾ (Haier India) ತನ್ನ ಹೊಸ 959 ಡೈರೆಕ್ಟ್ ಮೋಷನ್ ಮೋಟಾರ್ ಫುಲ್ ಆಟೋಮ್ಯಾಟಿಕ್ ಫ್ರಂಟ್ ಲೋಡ್ ವಾಷಿಂಗ್ ಮೆಷಿನ್ (HW90-DM14959CBKU1) ಅನ್ನು ದೇಶದಲ್ಲಿ ಲಾಂಚ್ ಮಾಡಿದೆ. ಈ ಮೆಷಿನ್‌ಗಳು ಸ್ಮಾರ್ಟ್ ಹೋಮ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI), ಮತ್ತು IoT ಸಾಮರ್ಥ್ಯಗಳೊಂದಿಗೆ ಸುಧಾರಿತ ಫೀಚರ್ಸ್ ಅನ್ನು ಪಡೆದುಕೊಂಡಿದೆ. ಹಾಗಿದ್ರೆ, ಈ ಮೆಷಿನ್‌ನ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಹೈಯರ್‌ನ 959 ವಾಷಿಂಗ್ ಮೆಷಿನ್ ಫೀಚರ್ಸ್: ಇತ್ತೀಚಿಗೆ ಲಾಂಚ್ ಆಗುತ್ತಿರುವ ಪ್ರತಿ ವಾಷಿಂಗ್ ಮೆಷಿನ್ ಸಹ ವಿವಿಧ ರೀತಿಯ ಫೀಚರ್ಸ್ ಅನ್ನು ಹೊಂದುವುದು ಸಾಮಾನ್ಯ. ಆದರೆ, ಈ ವಾಷಿಂಗ್ ಮೆಷಿನ್ ಮಾತ್ರ ವಿಶೇಷದಲ್ಲಿ ವಿಶೇಷವಾದ ಫೀಚರ್ಸ್ ಆಯ್ಕೆ ಪಡೆದುಕೊಂಡಿದೆ. ಅದರಲ್ಲೂ ಕಂಪನಗಳು ಮತ್ತು ಶಬ್ದವನ್ನು ಕಡಿಮೆ ಮಾಡಲು ಅತ್ಯಾಧುನಿಕ ಡೈರೆಕ್ಟ್ ಮೋಷನ್ ಮೋಟಾರ್ ತಂತ್ರಜ್ಞಾನವನ್ನು ಇದರಲ್ಲಿ ಅಳವಡಿಸಲಾಗಿದೆ.
AI-DBS (ಡೈನಾಮಿಕ್ ಬ್ಯಾಲೆನ್ಸ್ ಸಿಸ್ಟಮ್) ಸಾಫ್ಟ್‌ವೇರ್ ಆಯ್ಕೆ ಇದರಲ್ಲಿದ್ದು, ಇದು ಉತ್ತಮವಾದ ತೊಳೆಯುವ ಪ್ರಕ್ರಿಯೆಯನ್ನು ಇದು ನಿರ್ವಹಿಸುತ್ತದೆ. ಜೊತೆಗೆ ತೆಳ್ಳಗಿನ ಹಾಗೂ ಮರುವಿನ್ಯಾಸಗೊಳಿಸಲಾದ ಬಾಡಿ ಹೊಂದಿರುವ ಈ ಮೆಷಿನ್ ಭಾರತೀಯರ ಮನೆಗಳಲ್ಲಿನ ಜಾಗವನ್ನು ಅರ್ಥ ಮಾಡಿಕೊಂಡಂತೆ ಇದೆ. ಅಂದರೆ ಇದನ್ನು ಎಲ್ಲಿ ಬೇಕೆಂದರಲ್ಲಿ ಇರಿಸಬಹುದಾಗಿದೆ.
ಇದರೊಂದಿಗೆ ಮೊದಲ ಹೆಚ್ಚುವರಿ ದೊಡ್ಡ 525 mm ಸೂಪರ್ ಡ್ರಮ್ ಆಯ್ಕೆ ಪಡೆದುಕೊಂಡಿದ್ದು, ಬಟ್ಟೆಗಳಿಗೆ ಹೆಚ್ಚಿನ ಸ್ಥಳಾವಕಾಶವನ್ನು ನೀಡಲಾಗುತ್ತದೆ. ಈ ಮೂಲಕ ತೊಳೆಯುವ ಸಾಮರ್ಥ್ಯವನ್ನು ಸುಧಾರಿಸುತ್ತದೆ ಎನ್ನಲಾಗಿದೆ. ಹಾಗೆಯೇ ಕ್ರೀಸ್‌ಗಳನ್ನು ಕಡಿಮೆ ಮಾಡುತ್ತದೆ ಎಂದು ಕಂಪೆನಿ ಹೇಳಿದೆ. ಜೊತೆಗೆ ಲೋಡ್ ಮಾಡುವ ಕಾರ್ಯ ಹಾಗೂ ಬಟ್ಟೆಯಲ್ಲಿ ಹೊರತೆಗೆಯುವ ಕಾರ್ಯ ಇದರಲ್ಲಿ ಇನ್ನಷ್ಟು ಸರಳವಾಗಿರಲಿದೆ.
ಈ ಫೀಚರ್ಸ್‌ನೊಂದಿಗೆ ಈ ವಾಷಿಂಗ್ ಮೆಷಿನ್ ಬ್ಯಾಕ್ಟೀರಿಯಾ, ಅಲರ್ಜಿನ್ ಮತ್ತು ಹುಳಗಳ ವಿರುದ್ಧ ಹೋರಾಡಲು ಆಂಟಿ-ಬ್ಯಾಕ್ಟೀರಿಯಲ್ ಟೆಕ್ನಾಲಜಿ ನೀಡಲಾಗಿದ್ದು, ಡ್ಯುಯಲ್ ಸ್ಪ್ರೇ ತಂತ್ರಜ್ಞಾನ ಮತ್ತು ಪುರಿಸ್ಟೀಮ್ ಕಾರ್ಯವನ್ನು ಸಹ ಸಂಯೋಜಿಸುತ್ತದೆ. ಈ ಮೂಲಕ ಆರೋಗ್ಯದ ವಿಷಯಕ್ಕೆ ದೊಡ್ಡ ಕೊಡುಗೆ ನೀಡುವುದರಲ್ಲಿ ಎರಡು ಮಾತಿಲ್ಲ.
ಉಳಿದಂತೆ ಇಲ್ಲಿ ನೀಡಲಾದ ಪಿಲ್ಲೋ ಶೇಪ್ ಡ್ರಮ್ ಬಟ್ಟೆಯಲ್ಲಿ ವಾಷ್ ಮಾಡುವಾಗ ಆಗುವ ಘರ್ಷಣೆಯನ್ನು ಕಡಿಮೆ ಮಾಡುತ್ತದೆ. ಈ ಮೂಲಕ ಬಟ್ಟೆಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತದೆ ಮತ್ತು ಡ್ರಮ್‌ನ ವಿನ್ಯಾಸವು ಮೃದುವಾದ ಚಲನೆಯನ್ನು ಸುಲಭಗೊಳಿಸಲು ಸಣ್ಣ ರಂಧ್ರಗಳನ್ನು ಹೊಂದಿದೆ. ಇದರಿಂದಾಗಿ ಬಟ್ಟೆಗಳ ಸವೆತ ಸಹ ಕಡಿಮೆ ಆಗಲಿದೆ.
ಇದಿಷ್ಟು ಮಾತ್ರವಲ್ಲದೆ ಇಂಟಿಗ್ರೇಟೆಡ್ ವೈ-ಫೈ ಕಂಟ್ರೋಲ್ ಆಯ್ಕೆಯನ್ನೂ ಸಹ ನೀಡಲಾಗಿದ್ದು, ಈ ಮೂಲಕ ನೀವು ಸ್ಮಾರ್ಟ್‌ಫೋನ್‌ನಲ್ಲಿಯೇ ಕಂಟ್ರೋಲ್ ಮಾಡಬಹುದಾಗಿದೆ. ಜೊತೆಗೆ ಹೈಯರ್ ಹೈಸ್ಮಾರ್ಟ್ ಆಪ್ ಕಾರ್ಯಾಚರಣೆಯನ್ನು ಸರಳಗೊಳಿಸುತ್ತದೆ. ಬಳಕೆದಾರರಿಗೆ ವಾಷ್ ಪ್ರೋಗ್ರಾಂಗಳನ್ನು ಆಯ್ಕೆ ಮಾಡಲು, ಚಕ್ರಗಳನ್ನು ಪ್ರಾರಂಭಿಸಲು, ನಿಲ್ಲಿಸಲು ಮತ್ತು ವಿರಾಮಗೊಳಿಸುವ ಕೆಲಸ ಸೇರಿದಂತೆ ಅನೇಕ ಕೆಲಸಗಳು ಇದರಿಂದ ಆಗುತ್ತವೆ.
ವಾಷಿಂಗ್ ಮೆಷಿನ್ ಬೆಲೆ ಹಾಗೂ ಲಭ್ಯತೆ: ಪ್ರಮುಖವಾಗಿ ಈ ವಾಷಿಂಗ್ ಮೆಷಿನ್ 9 ಕೆಜಿ ಸಾಮರ್ಥ್ಯ ಹೊಂದಿದ್ದು, 5 ಸ್ಟಾರ್ ಎನರ್ಜಿ ರೇಟಿಂಗ್‌ನೊಂದಿಗೆ ವಿದ್ಯುತ್ ಉಳಿತಾಯ ಸಹ ಮಾಡಲಿದೆ. ಅಷ್ಟೇ ಅಲ್ಲದೆ ಮೋಟಾರ್ ಮೇಲೆ 20 ವರ್ಷಗಳ ಖಾತರಿಯೊಂದಿಗೆ 5 ವರ್ಷಗಳ ಸಮಗ್ರ ಖಾತರಿ ಪ್ರಯೋಜನ ಸಹ ನೀಡಲಾಗಿದೆ. ಈ ಮೂಲಕ ಇದನ್ನು ನೀವು 56,990ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಮೆಷಿನ್ ಹೈಯರ್‌ನ ಅಧಿಕೃತ ವೆಬ್‌ಸೈಟ್, ರಿಟೇಲರ್ ಸ್ಟೋರ್ ಮೂಲಕ ಖರೀದಿ ಮಾಡಬಹುದು.


Click it and Unblock the Notifications








