Home
ಸುದ್ದಿಜಾಲ

ದೇಶಿಯ ಮಾರುಕಟ್ಟೆಯಲ್ಲಿ ನಾಲ್ಕು ಹೊಸ ಸ್ಮಾರ್ಟ್‌ಟಿವಿಗಳು ಲಾಂಚ್‌!..ಜಬರ್ದಸ್ತ್‌ ಫೀಚರ್ಸ್‌!

ಭಾರತೀಯ ಟಿವಿ ಮಾರುಕಟ್ಟೆಯು ಸಾಕಷ್ಟು ಬದಲಾಗಿದ್ದು, ಭಿನ್ನ ಶ್ರೇಣಿಯಲ್ಲಿ ಹಲವು ಬ್ರ್ಯಾಂಡ್‌ಗಳ ಸ್ಮಾರ್ಟ್‌ ಟಿವಿಗಳು ಮಾರುಕಟ್ಟೆಯಲ್ಲಿ ಲಭ್ಯ. ಪ್ರಮುಖ ಬ್ರ್ಯಾಂಡ್‌ಗಳಲ್ಲಿ ಒಂದಾದ ಹೈಯರ್‌ (Haier) ಸಂಸ್ಥೆಯು ಇದೀಗ ಭಾರತದಲ್ಲಿ ನೂತನವಾಗಿ ಹೈಯರ್‌ S800QT QLED ಟಿವಿ ಸರಣಿ ಅನ್ನು ಬಿಡುಗಡೆ ಮಾಡಿದೆ.

ಹೌದು, ಹೈಯರ್‌ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಹೈಯರ್‌ S800QT QLED ಸರಣಿಯಲ್ಲಿ ಒಟ್ಟು ಭಿನ್ನ ಗಾತ್ರದ ನಾಲ್ಕು ಸ್ಮಾರ್ಟ್ ಟಿವಿಗಳನ್ನು ಪರಿಚಯಿಸಿದೆ. ಅವುಗಳು ಕ್ರಮವಾಗಿ 43 ಇಂಚಿನ, 55 ಇಂಚಿನ, 65 ಇಂಚಿನ ಮತ್ತು 75 ಇಂಚಿನ ಗಾತ್ರದಲ್ಲಿ ಕಾಣಿಸಿಕೊಂಡಿವೆ. ಆರಂಭಿಕ ಟಿವಿಯ ಬೆಲೆಯು 38,990ರೂ. ಗಳು ಆಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ನಾಲ್ಕು ಹೊಸ ಟಿವಿಗಳು ಲಾಂಚ್‌!..ಜಬರ್ದಸ್ತ್‌ ಫೀಚರ್ಸ್‌!

ಈ ನೂತನ ಟಿವಿಗಳು ಡ್ಯುಯಲ್ ಲೈನ್ ಗೇಟ್ (DLG) ತಂತ್ರಜ್ಞಾನ ಮತ್ತು MEMC ಅನ್ನು ಸಹ ಸಪೋರ್ಟ್ ಮಾಡುತ್ತವೆ. ಹಾಗೆಯೇ ಈ ಟಿವಿಗಳು 4K QLED ಪ್ಯಾನೆಲ್ ಅನ್ನು ಒಳಗೊಂಡಿವೆ. ಅಲ್ಲದೇ ಆಂಡ್ರಾಯ್ಡ್‌ ಸಪೋರ್ಟ್‌ ಸಹ ಲಭ್ಯ ಇದೆ. ಹಾಗಾದರೇ ಹೈಯರ್‌ ಸಂಸ್ಥೆಯ ಈ ಟಿವಿಗಳ ಇತರೆ ಫೀಚರ್ಸ್‌ ಹಾಗೂ ಬೆಲೆ ವಿವರ ಮುಂದೆ ನೋಡೋಣ ಬನ್ನಿರಿ.

ಫೀಚರ್ಸ್‌ ಮಾಹಿತಿ

ಹೈಯರ್‌ ಸಂಸ್ಥೆಯ ಹೈಯರ್‌ S800QT ಸರಣಿಯ ನಾಲ್ಕು ಟಿವಿಗಳ ಸ್ಕ್ರೀನ್‌ ಗಾತ್ರಗಳಲ್ಲಿ 4K ಪಿಕ್ಸಲ್‌ ರೆಸಲ್ಯೂಶನ್ ಸೌಲಭ್ಯದ ಕ್ವಾಂಟಮ್ ಡಾಟ್ LED ಪ್ಯಾನೆಲ್ ಅನ್ನು ಒಳಗೊಂಡಿವೆ. ಹಾಗೆಯೇ ಈ ಟಿವಿಗಳು ಡಾಲ್ಬಿ ವಿಷನ್ ಅಟ್ಮಾಸ್‌ನೊಂದಿಗೆ ಪ್ರಮಾಣೀಕರಿಸಲ್ಪಟ್ಟಿವೆ. ಜೊತೆಗೆ ಇವು ಅತ್ಯುತ್ತಮ ಕಾಂಟ್ರಾಸ್ಟ್ ಮತ್ತು ಆಳವಾದ ಕಪ್ಪುಗಳನ್ನು ಸಾಧಿಸಲು ಸ್ಕ್ರೀನ್‌ ಮೈಕ್ರೋ-ಡಿಮ್ಮಿಂಗ್ ಅನ್ನು ಸಹ ಹೊಂದಿದೆ.

ಇನ್ನು ಇವು ಡ್ಯುಯಲ್ ಲೈನ್ ಗೇಟ್ (DLG) ತಂತ್ರಜ್ಞಾನ ಮತ್ತು MEMC ಅನ್ನು ಸಹ ಸಪೋರ್ಟ್ ಮಾಡುತ್ತವೆ. ಹಾಗೆಯೇ ಇದು ಕ್ರೀಡೆಗಳು ಮತ್ತು ಗೇಮಿಂಗ್‌ನಂತಹ ವೇಗದ ಗತಿಯ ಕಂಟೆಂಟ್‌ಗಾಗಿ ಟಿವಿಯ ರಿಫ್ರೆಶ್ ರೇಟ್‌ ಅನ್ನು ಸರಿಹೊಂದಿಸುತ್ತದೆ.

ಹೊಸದಾದ ಈ ಟಿವಿಗಳು ಕಡಿಮೆ ಸುಪ್ತತೆ ಅನ್ನು ಹೊಂದಿವೆ ಎಂದು ಸಂಸ್ಥೆಯು ಹೇಳುತ್ತದೆ. ಟಿವಿಗಳು ಫ್ರಂಟ್-ಫೈರಿಂಗ್ 20W ಸ್ಪೀಕರ್‌ಗಳನ್ನು ಹೊಂದಿದ್ದು, ಟ್ಯೂನ್ ಮಾಡಿದ ಟ್ರೆಬಲ್ ಮತ್ತು ಬಾಸ್ ಲೈವ್ ತರಹದ ವಾಯಿಸ್‌ ಅನ್ನು ನೀಡುತ್ತದೆ. ಅಲ್ಲದೇ ಇದು ಗೇಮಿಂಗ್‌ಗೆ ಸೂಕ್ತವಾಗಿದೆ.

ಹೊಸ ಹೈಯರ್ ಟಿವಿಗಳು ತಲ್ಲೀನಗೊಳಿಸುವ ದೃಶ್ಯ ಅನುಭವಕ್ಕಾಗಿ ಬಹಳ ಕಿರಿದಾದ ಬೆಜೆಲ್‌ಗಳನ್ನು ಹೊಂದಿವೆ. ಅವುಗಳು ಗೂಗಲ್ ಟಿವಿಯ ನೇರ ಏಕೀಕರಣದೊಂದಿಗೆ ಸ್ಮಾರ್ಟ್ ಕನೆಕ್ಟ್ ಅನ್ನು ಸಹ ಪಡೆದಿವೆ. ಈ ನೂತನ ಟಿವಿ ಶ್ರೇಣಿಯು 2GB RAM ಮತ್ತು 32GB ಸಂಗ್ರಹಣೆ ಸೌಲಭ್ಯ ಸಹ ಇದೆ ಮತ್ತು ಆಂಡ್ರಾಯ್ಡ್‌ ಟಿವಿ ಆಪ್ಸ್‌, ಸ್ಕ್ರೀನ್‌ಕಾಸ್ಟ್ ಮತ್ತು ಇತರ ಗೂಗಲ್‌ ಟಿವಿ ಫೀಚರ್ಸ್‌ಗಳನ್ನು ಕೂಡಾ ರನ್ ಮಾಡಬಹುದು.

ಹೈಯರ್‌ ಸಂಸ್ಥೆಯ ಈ ನೂತನ ಟಿವಿಗಳು ಹ್ಯಾಂಡ್ಸ್-ಫ್ರೀ ನಿಯಂತ್ರಣಕ್ಕಾಗಿ ವಾಯಿಸ್‌ ಅಸಿಸ್ಟಂಟ್‌ ಆಯ್ಕೆಯ ಸಪೋರ್ಟ್‌ ಪಡೆದಿವೆ. ಬಳಕೆದಾರರು OK Google ಎಂದು ಹೇಳುವ ಮೂಲಕ ಸ್ಮಾರ್ಟ್‌ ಟಿವಿಯ ಫೀಚರ್ಸ್‌ಗಳನ್ನು ಕಂಟ್ರೋಲ್‌ ಮಾಡಬಹುದು. ಟಿವಿಯು ಮನೆಯಲ್ಲಿರುವ ಇತರ IoT ಡಿವೈಸ್‌ಗಳ ಜೊತೆಗೆ ಸಂಯೋಜಿಸಲು ಅವಕಾಶ ಇದೆ.

ಹೈಯರ್‌ ಟಿವಿಗಳ ಬೆಲೆ ಹಾಗೂ ಲಭ್ಯತೆ

ಹೈಯರ್‌ S800QT 43 ಇಂಚಿನ 38,990ರೂ

ಹೈಯರ್‌ S800QT 55 ಇಂಚಿನ 56,990ರೂ

ಹೈಯರ್‌ S800QT 65 ಇಂಚಿನ 79,990ರೂ

ಹೈಯರ್‌ S800QT 75 ಇಂಚಿನ 1,27,990ರೂ

ಹೈಯರ್‌ S800QT ಸರಣಿ ಟಿವಿಗಳು ಅಮೆಜಾನ್‌, ಫ್ಲಿಪ್‌ಕಾರ್ಟ್‌, ಹೈಯರ್‌ ನ ಅಧಿಕೃಥ ವೆಬ್‌ಸೈಟ್ ಮತ್ತು ಭಾರತದಾದ್ಯಂತ ಪ್ರಮುಖ ಆಫ್‌ಲೈನ್ ರಿಟೇಲ್‌ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಿರುತ್ತವೆ.

Best Mobiles in India

English summary
Haier S800QT QLED TVs Launched in India. Check Price and features details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+