ಇನ್‌ಸ್ಟಗ್ರಾಮ್‌ನಲ್ಲಿ ಪ್ರಕಟಿಸಿದ ಒಂದು ಫೋಟೋಗೆ 69 ಕೋಟಿ!

|

ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿಕರುವ ಅಮೇರಿಕಾದ ಫೇಮಸ್​ ಸೆಲೆಬ್ರಿಟಿ ಮತ್ತು ಮಾಡೆಲ್ ಆಗಿರುವ ಕಿಮ್ ಕಾರ್ದಾಶಿಯನ್ ಅವರು ಒಂದು ಇನ್‌ಸ್ಟಗ್ರಾಮ್ ಫೋಟೊ ವಿಚಾರದಿಂದ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಕಿಮ್ ಕಾರ್ದಾಶಿಯನ್ ಅವರ ಫೋಟೊವನ್ನು ಅಮೇರಿಕಾದ ಮಿಸ್​​ಗೈಡೆಡ್​​ ಅನ್ನೋ ಕಂಪನಿ ಅಕ್ರಮವಾಗಿ ಬಳಸಿಕೊಂಡಿದ್ದು, ಆ ಕಂಪೆನಿ ನನಗೆ 69 ಕೋಟಿ ಪರಿಹಾರವನ್ನು ನೀಡಬೇಕು ಎಂದು ಕಂಪೆನಿ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ್ದಾರೆ.

ಹೌದು, ಸೆಲೆಬ್ರಿಟಿಗಳು ತೊಡುವ ಉಡುಗೆಗಳನ್ನ ನಕಲಿಸಿ ರೆಪ್ಲಿಕಾ ತಯಾರಿಸುವಲ್ಲಿ ಮಿಸ್​ಗೈಡೆಡ್ ಕಂಪನಿ​ ಫೇಮಸ್​. ಇತ್ತೀಚೆಗೆ ಈ ಕಂಪನಿ ಕಿಮ್ ಕಾರ್ದಾಶಿಯನ್ ತೊಟ್ಟಿದ್ದ ಗೋಲ್ಡನ್ ಕಲರ್​ ಡ್ರೆಸ್​​ವೊಂದರ ರೆಪ್ಲಿಕಾ ತಯಾರಿಸಿ ಮಾರಾಟಕ್ಕೆ ಬಿಟ್ಟಿತ್ತು. ಈ ಉಡುಗೆಯನ್ನು ಮಾಡೆಲ್​​ವೊಬ್ಬರು ತೊಟ್ಟಿರುವ ಫೋಟೋ ಹಾಕಿ ಅದರ ಜೊತೆಗೆ ಕಿಮ್ ಕಾರ್ದಾಶಿಯನ್ ತೊಟ್ಟಿರೋ ಬಟ್ಟೆಯ ಫೋಟೋ ಕೂಡ ಹಾಕಿತ್ತು. ಇದು ಕಿಮ್ ಕಾರ್ದಾಶಿಯನ್ ಅವರನ್ನು ಕೆರಳಿಸಿದೆ.

ಇನ್‌ಸ್ಟಗ್ರಾಮ್‌ನಲ್ಲಿ ಪ್ರಕಟಿಸಿದ ಒಂದು ಫೋಟೋಗೆ 69 ಕೋಟಿ!

ಸಾಮಾನ್ಯವಾಗಿ ನಾನು ಇಷ್ಟಪಡುವ ಕಂಪನಿಯೊಂದರ ಬ್ರ್ಯಾಂಡ್​ ಪ್ರಮೋಟ್​ ಮಾಡಲು ಒಂದು ಇನ್​​​ಸ್ಟಾಗ್ರಾಂ ಪೋಸ್ಟ್​​ಗೆ 3,00,000 ಡಾಲರ್​ನಿಂದ 5,00,000 (ಅಂದಾಜು ₹2 ರಿಂದ ₹3.5 ಕೋಟಿ) ಡಾಲರ್​ವೆರೆಗೆ ಹಣ ಪಡೆಯುತ್ತೇನೆ. ದೀರ್ಘಾವಧಿಗಾದರೆ ಇದಕ್ಕಾಗಿ ಕೋಟ್ಯಾಂತರ ರೂಪಾಯಿಗೆ ಒಪ್ಪಂದ ಮಾಡಿಕೊಳ್ಳುತ್ತೇವೇ. ಆದರೆ, ಮಿಸ್​ಗೈಡೆಡ್ ಕಂಪನಿ ತನ್ನ ಜೊತೆ ಯಾವುದೇ ಒಪ್ಪಂದವಿಲ್ಲದೇ ತನ್ನ ಚಿತ್ರವನ್ನು ಅಕ್ರಮವಾಗಿ ಪ್ರಕಟಿಸಿದೆ ಎಂದು ಕಿಮ್ ಕೋರ್ಟ್​ಗೆ ಹೇಳಿದ್ದಾರೆ.

ಮಿಸ್​ಗೈಡೆಡ್ ಕಂಪನಿ ಅನುಮತಿ ಇಲ್ಲದೇ ನನ್ನ ಹೆಸರನ್ನ ಬಳಸಿಕೊಂಡಿದೆ. ಅದರಲ್ಲಿ ನನ್ನ ಫೋಟೋ ಕೂಡ ಬಳಸಿಕೊಂಡಿರೋದ್ರಿಂದ ನಾನೇ ಈ ಬ್ರ್ಯಾಂಡ್​ ಪ್ರಮೋಟ್​​ ಮಾಡ್ತಿದ್ದೀನಿ ಎನ್ನುವಂತೆ ತೋರುತ್ತಿದೆ. ಇದರಿಂದ ತನ್ನ ಅಭಿಮಾನಿಗಳು ಗೊಂದಲವಾಗುವುದಲ್ಲದೆ, ಬೇರೆ ಕಂಪನಿಗಳು ನನ್ನೊಂದಿಗೆ ಒಪ್ಪಂದ ಮಾಡಿಕೊಳ್ಳಲು ಹಿಂದೇಟು ಹಾಕಬಹುದು. ಹಾಗಾಗಿ, ಇದನ್ನು ಅಕ್ಷಮ್ಯ ಅಪರಾಧ ಎಂದು ಪರಿಗಣಿಸಿ 10 ಮಿಲಿಯನ್ ಡಾಲರ್ ಪರಿಹಾರಕ್ಕಾಗಿ ಕೇಳಿಕೊಂಡಿದ್ದಾರೆ.

ಇನ್‌ಸ್ಟಗ್ರಾಮ್‌ನಲ್ಲಿ ಪ್ರಕಟಿಸಿದ ಒಂದು ಫೋಟೋಗೆ 69 ಕೋಟಿ!

ಇನ್‌ಸ್ಟಗ್ರಾಮ್ ನಲ್ಲಿ ಈಕೆಯನ್ನು ಫಾಲೋ ಮಾಡುವವರು ಕೋಟ್ಯಾಂತರ ಮಂದಿ ಇದ್ದು, ಈಕೆ ಒಂದು ಫೋಟೋ ಪೋಸ್ಟ್​ ಮಾಡಿದ್ರೆ ಲಕ್ಷಾಂತರ ಮಂದಿ ಲೈಕ್ ಒತ್ತಿರುತ್ತಾರೆ. ಆಕೆ ಬ್ರ್ಯಾಂಡ್​​ವೊಂದನ್ನ ಪ್ರಮೋಟ್​ ಮಾಡಿದ್ರೆ ಕ್ಷಣಾರ್ಧದದಲ್ಲೇ ಕೋಟ್ಯಾಂತರ ಜನರನ್ನು ತಲುಪುತ್ತವೆ. ಇತ್ತೀಚೆಗೆ ಕಂಪನಿಯೊಂದರ ಜೊತೆ ಕಿಮ್ ಒಪ್ಪಂದ ಮಾಡಿಕೊಂಡಿದ್ದು, ಆಕೆಯ ಹೆಸರನ್ನು ಅವರು ಬಳಸಿಕೊಳ್ಳಬಹುದು. ಇದಕ್ಕೆ ಆ ಸಂಸ್ಥೆ ವರ್ಷಕ್ಕೆ 6 ಮಿಲಿಯನ್ ಡಾಲರ್​( ಅಂದಾಜು ₹41 ಕೋಟಿ) ಹಾಗೂ ಕಂಪನಿಯ ಈಕ್ವಿಟಿನ್ನು ಕೊಟ್ಟಿದ್ದಾರೆ.

ಓದಿರಿ: 'ಮಾಡರ್ನ್ ಮಗು' ಮೊದಲು ಮಾತನಾಡಿದ ಪದ ಕೇಳಿ ಒಂದು ಕ್ಷಣ ಬೆಚ್ಚಿಬಿದ್ದ ಪೋಷಕರು!!

Best Mobiles in India

English summary
Kim Kardashian revealed in a lawsuit that she demands up to half a million dollars for a single Instagram post . to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X