ಹ್ಯಾಮರ್ ಏಸ್ 3.0 ಸ್ಮಾರ್ಟ್‌ವಾಚ್ ಅನಾವರಣ: ಆಫರ್ ಬೆಲೆ ಎಷ್ಟು?
ಪ್ರಮುಖ ಸ್ಮಾರ್ಟ್‌ಗ್ಯಾಜೆಟ್ ತಯಾರಿಕಾ ಕಂಪೆನಿಯಾದ ಹ್ಯಾಮರ್ ಈಗಾಗಲೇ ಸಾಕಷ್ಟು ಧರಿಸಬಹುದಾದ ಡಿವೈಸ್‌ಗಳನ್ನು ಬಜೆಟ್ ಬೆಲೆಗೆ ಪರಿಚಯಿಸಿ ಭಾರೀ ಜನಪ್ರಿಯತೆ ಪಡೆದುಕೊಂಡಿದೆ. ಇದರ ನಡುವೆ ಈಗ ಹೊಸದಾಗಿ ಸ್ಮಾರ್ಟ್‌ವಾಚ್ ಅನ್ನು ಅನಾವರಣ ಮಾಡಿದೆ. ಈ ವಾಚ್ 500nits ಬ್ರೈಟ್‌ನೆಸ್ ಹೊಂದಿದೆ.
ಹೌದು, ಈಗಾಗಲೇ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಸ್ಮಾರ್ಟ್‌ವಾಚ್‌ಗಿದ್ದು, ಇವುಗಳ ಸಾಲಿಗೆ ಈಗ ಹೊಸದಾಗಿ ಹ್ಯಾಮರ್ ಕಂಪೆನಿಯ ಏಸ್ 3.0 ಸ್ಮಾರ್ಟ್ ವಾಚ್ (Hammer Ace 3.0) ಸೇರಿಕೊಳ್ಳಲಿದೆ. ಇದು ಗ್ರಾಹಕೀಯಗೊಳಿಸಬಹುದಾದ ವಾಚ್ ಫೇಸ್ ಆಯ್ಕೆಯನ್ನು ಹೊಂದಿದ್ದು, ಬ್ಲೂಟೂತ್ ಕರೆ ಸೌಲಭ್ಯವನ್ನು ನೀಡಲಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಎಂದು ಗಮನಿಸೋಣ.

ಹ್ಯಾಮರ್ ಏಸ್ 3.0 ಸ್ಮಾರ್ಟ್ ವಾಚ್ ಡಿಸ್‌ಪ್ಲೇ: ಹ್ಯಾಮರ್ ಏಸ್ 3.0 ಸ್ಮಾರ್ಟ್ ವಾಚ್ 1.85 ಇಂಚಿನ ದೊಡ್ಡ ಡಿಸ್‌ಪ್ಲೇ ಹೊಂದಿದ್ದು, ಇದು 500nits ವರೆಗೆ ಬ್ರೈಟ್‌ನೆಸ್ ನೀಡಲಿದೆ. ಇದರಿಂದ ನೀವು ಯಾವುದೇ ಪ್ರಖರತೆಯ ಬೆಳಕಿನಲ್ಲಿದ್ದರೂ ಸ್ಪಷ್ಟವಾಗಿ ವಾಚ್ ಅನ್ನು ವೀಕ್ಷಣೆ ಮಾಡಬಹುದು. ಈ ಕಾರಣದಿಂದಾಗಿ ನೀವು ರಾತ್ರಿ ಹಗಲೆನ್ನದೇ ಅಥವಾ ಯಾವುದೇ ಸ್ಥಳದಲ್ಲಾದರೂ ಇದನ್ನು ಬಳಕೆ ಮಾಡಬಹುದಾಗಿದೆ.
ಹ್ಯಾಮರ್ ಏಸ್ 3.0 ಸ್ಮಾರ್ಟ್‌ವಾಚ್ ಫೀಚರ್ಸ್: ಈ ಸ್ಮಾರ್ಟ್‌ವಾಚ್ ಪ್ರಮುಖವಾಗಿ ಬ್ಲೂಟೂತ್ ಕಾಲ್ ಫೀಚರ್ಸ್ ಪಡೆದುಕೊಂಡಿದ್ದು, ಈ ಮೂಲಕ ವಾಚ್ ಧರಿಸಿರುವವರು ನೇರವಾಗಿ ವಾಚ್ ಮೂಲಕವೇ ಕರೆಗಳನ್ನು ಕಂಟ್ರೋಲ್ ಮಾಡಬಹುದಾಗಿದೆ. ಇದಿಷ್ಟೇ ಅಲ್ಲದೆ 50 ಫೋನ್ ನಂಬರ್‌ಗಳನ್ನು ಸೇವ್ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದ್ದು, ಈ ಮೂಲಕ ಕರೆ ಮಾಡಲು ಅನುಮತಿ ನೀಡಲಾಗಿದೆ.

ಹ್ಯಾಮರ್ ಏಸ್ 3.0 ಸ್ಮಾರ್ಟ್‌ವಾಚ್ ಆರೋಗ್ಯ ಸಂಬಂಧಿ ಸೌಲಭ್ಯ: ಇನ್ನುಳಿದಂತೆ ಈ ವಾಚ್ 60 ಸ್ಪೋರ್ಟ್ ಮೋಡ್‌ಗಳನ್ನು ಹೊಂದಿದ್ದು, ಇದರೊಂದಿಗೆ ಹೃದಯ ಬಡಿತ ಸೆನ್ಸರ್‌ಹೊಂದಿದ್ದು, ಜೊತೆಗೆ SpO2 ಮಾನಿಟರ್ ಮಾಡಲಿದೆ. ಮತ್ತು ನಿದ್ರೆಯ ಮೇಲೆ ಸದಾ ನಿಗಾ ಇಡುವ ಈ ವಾಚ್ ನಿಮ್ಮ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ. ಇನ್ನುಳಿದಂತೆ ವಾಯ್ಸ್ ಅಸಿಸ್ಟೆಂಟ್ ಸೌಲಭ್ಯ ನೀಡಲಾಗಿರುವುದರಿಂದ ಬಳಕೆ ಮಾಡಲು ಸಾಕಷ್ಟು ಹಿತವೆನಿಸುತ್ತದೆ.
ಹ್ಯಾಮರ್ ಏಸ್ 3.0 ಸ್ಮಾರ್ಟ್‌ವಾಚ್ ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ : ಈ ವಾಚ್‌ನ ಬ್ಯಾಟರಿ ವಿಚಾರಕ್ಕೆ ಬರುವುದಾದರೆ ಒಂದು ಪೂರ್ಣಚಾರ್ಜ್‌ನಲ್ಲಿ ಐದು ದಿನಗಳ ಬ್ಯಾಕಪ್ ನೀಡಲಿದೆ ಎಂದು ಕಂಪೆನಿ ಮಾಹಿತಿ ನೀಡಿದೆ. ಇದರೊಂದಿಗೆ ಈ ವಾಚ್ IP67 ರೇಟಿಂಗ್ ಹೊಂದಿದ್ದು, ಈ ಮೂಲಕ ಮಳೆ ಹಾಗೂ ಮಂಜಿನಿಂದ ಯಾವುದೇ ಸಮಸ್ಯೆಗೆ ಒಳಗಾವುದಿಲ್ಲ. ಜೊತೆಗೆ ಸ್ಮಾರ್ಟ್ ನೋಟಿಫಿಕೇಶನ್ ಆಯ್ಕೆ ನೀಡಲಾಗಿದ್ದು, ಇದರಿಂದ ಮೊಬೈಲ್ ಓಪನ್ ಮಾಡುವ ಅವಶ್ಯಕತೆಯೇ ಇರುವುದಿಲ್ಲ.
ಹ್ಯಾಮರ್ ಏಸ್ 3.0 ಸ್ಮಾರ್ಟ್‌ವಾಚ್ ಬೆಲೆ ಹಾಗೂ ಲಭ್ಯತೆ: ಈ ಹ್ಯಾಮರ್ ಏಸ್ 3.0 ಸ್ಮಾರ್ಟ್ ವಾಚ್ ಗೆ ಕೊಡುಗೆ ದರವಾಗಿ 1,999 ರೂ. ಗಳ ಬೆಲೆ ನಿಗದಿ ಮಾಡಲಾಗಿದೆ. ಇದರ ಮೂಲ ದರ 4,999ರೂ. ಗಳು. ಈ ವಾಚ್ ಕಪ್ಪು ಬಣ್ಣದಲ್ಲಿ ಮಾತ್ರ ಲಭ್ಯವಿದ್ದು, ಇದನ್ನು ನೀವು Hammeronline.in ಮೂಲಕ ಖರೀದಿ ಮಾಡಬಹುದಾಗಿದೆ.

666 ರೂ.ಗಳಿಗೂ ಖರೀದಿಸಬಹುದು: ಆರು ತಿಂಗಳ ವಾರಂಟಿ ಆಯ್ಕೆ ಹೊಂದಿರುವ ಈ ವಾಚ್ ಅನ್ನು ನೀವು ಕೇವಲ 666 ರೂ. ಗಳಿಗೂ ಖರೀದಿ ಮಾಡಬಹುದಾಗಿದೆ. ಅಂದರೆ. ಈ ವಾಚ್ ಖರೀದಿಯ ಮೇಲೆ ಇಎಮ್‌ಐ ಆಫರ್ ಸಹ ಘೋಷಣೆ ಮಾಡಲಾಗಿದ್ದು, ಮೂರು ತಿಂಗಳ ವರೆಗೆ 666 ರೂ. ಗಳನ್ನು ಪಾವತಿ ಮಾಡಬೇಕಿದೆ. ಜೊತೆಗೆ ಈ ಖರೀದಿಗೆ ಕ್ರೆಡಿಟ್ ಕಾರ್ಡ್ ಸಹ ಅಗತ್ಯ ಇರುವುದಿಲ್ಲ.


Click it and Unblock the Notifications








