143ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ 'ಹ್ಯಾರಿ ಪಾಟರ್' ಮಾಂತ್ರಿಕ ಗೇಮ್‌ ಬಿಡುಗಡೆ!

|

ಹ್ಯಾರಿ ಪಾಟರ್‌ ಎಂದ ತಕ್ಷಣ ನಿಮಗೆ ಇಂಗ್ಲಿಷ ಸಿನಿಮಾ ನೆನಪಾಗಬಹುದು. ಯಸ್‌, ಮಾಂತ್ರಿಕ ಶಕ್ತಿಯ ಹುಡುಗನ ಕಥಾಹಂದರ ಇರುವ ಈ ಸಿನಿಮಾ ವಿಶ್ವ ಮಟ್ಟದಲ್ಲಿ ಭಾರಿ ಜನಪ್ರಿಯತೆ ಗಳಿಸಿತ್ತು. ಅದೇ ಜನಪ್ರಿಯತೆಯ ಅಲೆಯಲ್ಲಿ ಹ್ಯಾರಿ ಪಾಟರ್‌ ಸರಣಿಯ ವಿಡಿಯೊ ಗೇಮ್‌ಗಳ ಸಹ ಬಂದಿದ್ದವು. ಆದರೆ ಈಗ ಹ್ಯಾರಿ ಪಾಟರ್‌ ವಿಜರ್ಡ್‌ ಆನ್‌ಲೈನ್‌ ಗೇಮ್‌ ಬಿಡುಗಡೆ ಆಗಿದ್ದು, ಗೇಮ್ಸ್‌ ಪ್ರಿಯರಲ್ಲಿ ಹೊಸ ಕ್ರೇಜ್‌ ಹುಟ್ಟುಹಾಕಲಿದೆ.

143ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ 'ಹ್ಯಾರಿ ಪಾಟರ್' ಮಾಂತ್ರಿಕ ಗೇಮ್‌ ಬಿಡುಗಡೆ!

ಹೌದು, ಅಮೇರಿಕಾ ಮೂಲದ ಮನರಂಜನಾ ಸಂಸ್ಥೆ ವಾರ್ನರ್ ಬ್ರದರ್ಸ್‌ ಇದೀಗ ಹ್ಯಾರಿ ಪಾಟರ್‌ ವಿಜರ್ಡ್‌ ಗೇಮ್‌ ಅನ್ನು(ಜೂ.22) ಬಿಡುಗಡೆ ಮಾಡಿದ್ದು, ಭಾರತ ಸೇರಿದಂತೆ ಸುಮಾರು 150 ದೇಶಗಳಲ್ಲಿ ಲಭ್ಯವಾಗಲಿದೆ. ಈ ಗೇಮ್‌ ಆಂಡ್ರಾಯ್ಡ್‌ ಮತ್ತು ಐಓಎಸ್‌ ಆಪರೇಟಿಂಗ್‌ ಸಿಸ್ಟಮ್‌ಗಳೆರಡರಲ್ಲಿಯೂ ದೊರೆಯಲಿದ್ದು, 71 MB ಸಾಮರ್ಥ್ಯದಲ್ಲಿದೆ. ಲೊಕೇಶನ್ ಆಧಾರಿತ ಗೇಮ್‌ ಆಗಿದ್ದು, ಲೊಕೇಶನ್ ಆನ್‌ ಆಗಿರಬೇಕು.

143ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ 'ಹ್ಯಾರಿ ಪಾಟರ್' ಮಾಂತ್ರಿಕ ಗೇಮ್‌ ಬಿಡುಗಡೆ!

ಗೇಮ್ಸ್‌ ಪ್ರಿಯರಿಗೆ ಇಷ್ಟವಾಗುವಂತಹ ಪಾತ್ರಗಳು ಹ್ಯಾರಿ ಪಾಟರ್‌ ವಿಜರ್ಡ್‌ನಲ್ಲಿದ್ದು, ಆಟಗಾರರಿಗೆ ರಹಸ್ಯ ಭೇದಿಸುವ ಸನ್ನಿವೇಶಗಳು ಎದುರಾಗಲಿವೆ. ಆದರೆ ಈ ಆನ್‌ಲೈನ್‌ ಗೇಮ್‌ ಪಬ್‌ಜಿ ಜನಪ್ರಿಯತೆಯತೆಗೆ ಭಂಗ ತರುವುದೇ ಎಂಬುದನ್ನು ಕಾದುನೋಡಬೇಕಿದೆ. ಹಾಗಾದರೇ ಹ್ಯಾರಿ ಪಾಟರ್‌ ವಿಜರ್ಡ್‌ ಗೇಮ್‌ನ ಇತರೆ ವಿಶೇಷತೆಗಳೆನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : BSNL 'ಸೂಪರ್‌ ಸ್ಟಾರ್‌ 300' ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌!.ಹಾಟ್‌ಸ್ಟಾರ್‌ ಉಚಿತ!

ಹ್ಯಾರಿ ಪಾಟರ್‌ ಕಥೆ

ಹ್ಯಾರಿ ಪಾಟರ್‌ ಕಥೆ

ಹ್ಯಾರಿ ಪಾಟರ್‌ ಕಥೆಯು ಜೆ ಕೆ ರೊಲಿಂಗ್ ಅವರ ಕಾದಂಬರಿ ಆಧಾರಿತವಾಗಿದ್ದು, ಈ ಕಥೆಯನ್ನು ಸಿನಿಮಾ ಮಾಡಿದಾಗ ಭಾರಿ ಜನಪ್ರಿಯತೆ ಕಂಡಿತು. ವಾರ್ನರ್ ಬ್ರದರ್ಸ್‌ ಇದನ್ನು ಡಿಸ್ಟ್ರಿಬ್ಯೂಷನ್‌ ಮಾಡಿದ್ದು, ವಿಡಿಯೊ ಅವತರಣಿಕೆಯು ಹೊರತಂದರು. ಇದೀಗ ಸಂಸ್ಥೆಯು ಆನ್‌ಲೈನ್‌ ಗೇಮ್‌ ಮಾದರಿಯಲ್ಲಿ ಗೇಮ್ಸ್‌ ಪ್ರಿಯರನ್ನು ತಲುಪಲು ಮುಂದಾಗಿದೆ.

ಪ್ಲೇಸ್ಟೋರ್‌ನಲ್ಲಿ ಲಭ್ಯ

ಪ್ಲೇಸ್ಟೋರ್‌ನಲ್ಲಿ ಲಭ್ಯ

ಹ್ಯಾರಿ ಪಾಟರ್‌ ವಿಜರ್ಡ್‌ ಗೇಮ್‌ ಪ್ಲೇ ಸ್ಟೋರ್‌ನಲ್ಲಿ ಉಚಿತ ವರ್ಷನ್‌ನಲ್ಲಿ ದೊರೆಯಲಿದ್ದು, ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಈ ಗೇಮ್‌ 71 MB ಡೇಟಾ ಗಾತ್ರವನ್ನು ಹೊಂದಿದ್ದು, ಪಬ್‌ಜಿ ಮತ್ತು ಫಾರ್ಟಿನೈಟ್‌ ಗೇಮ್ಸ್‌ಗಳಿಂಗಿತ ಡೇಟಾ ಗಾತ್ರದಲ್ಲಿ ಚಿಕ್ಕದಾಗಿದೆ. ಹೀಗಾಗಿ ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚಿನ ಸ್ಥಳಾವಕಾಶ ಬೇಡುವುದಿಲ್ಲ.

ಓದಿರಿ : ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡುವಾಗ ಈ ಕ್ರಮಗಳನ್ನು ಮರೆಯದೇ ಅನುಸರಿಸಿ!

143 ರಾಷ್ಟ್ರಗಳಲ್ಲಿ ಲಭ್ಯತೆ

143 ರಾಷ್ಟ್ರಗಳಲ್ಲಿ ಲಭ್ಯತೆ

ಭಾರತ ಸೇರಿದಂತೆ ಬ್ರೆಜಿಲ್, ಕೆನಡಾ, ಫ್ರಾನ್ಸ್, ಜರ್ಮನಿ, ಹಾಂಗ್ ಕಾಂಗ್, ಐರ್ಲೆಂಡ್, ಇಟಲಿ, ಮೆಕ್ಸಿಕೊ, ಪಾಕಿಸ್ತಾನ, ಸಿಂಗಾಪುರ್, ದಕ್ಷಿಣ ಆಫ್ರಿಕಾ, ಸ್ಪೇನ್ ಮತ್ತು ಯುಎಇ, ಒಳಗೊಂಡಂತೆ ಸುಮಾರು 143 ರಾಷ್ಟ್ರಗಳಲ್ಲಿ ಈ ಗೇಮ್‌ ಬಿಡುಗಡೆ ಆಗಿದ್ದು, ಸಂಸ್ಥೆಯು ಶೀಘ್ರದಲ್ಲಿಯೇ ಮತ್ತಷ್ಟು ರಾಷ್ಟ್ರಗಳಿಗೂ ವಿಸ್ತರಿಸಲಿದೆ.

ಕ್ಯಾಮೆರಾ ಮತ್ತು ಲೊಕೇಶನ್

ಕ್ಯಾಮೆರಾ ಮತ್ತು ಲೊಕೇಶನ್

ಹ್ಯಾರಿ ಪಾಟರ್‌ ವಿಜರ್ಡ್‌ ಗೇಮ್‌ ಅನ್ನು ಗೂಗಲ್‌ ಪ್ಲೇ ಸ್ಟೋರ್‌, ಆಪಲ್ ಆಪ್‌ ಸ್ಟೋರ್‌ ಅಥವಾ ಸ್ಯಾಮ್‌ಸಂಗ್‌ ಸ್ಟೋರ್‌ಗಳಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದ್ದು, ಡೌನ್‌ಲೋಡ್‌ ಮಾಡುವಾಗ ಲೊಕೇಶನ್ ಆಕ್ಸ್‌ಸ್ ಆಯ್ಕೆಯನ್ನು ನೀಡಲೆಬೇಕು. ಈ ಗೇಮ್‌ ಲೊಕೇಶನ್ ಆಧಾರಿತವಾಗಿದೆ. ಹಾಗೆಯೇ ಕ್ಯಾಮೆರಾ ಆಕ್ಸಸ್‌ಗೂ ಅನುಮತಿ ನೀಡಬೇಕು.

ಓದಿರಿ : 4,000mAh ಬ್ಯಾಟರಿ ಫುಲ್‌ ಚಾರ್ಜ್‌ ಆಗಲು ಕೇವಲ 13 ನಿಮಿಷ ಅಷ್ಟೇ ಸಾಕು!

WB ಸಂಸ್ಥೆಯ ಜನಪ್ರಿಯ ಗೇಮ್ಸ್

WB ಸಂಸ್ಥೆಯ ಜನಪ್ರಿಯ ಗೇಮ್ಸ್

ಈ ಸಂಸ್ಥೆ ಪೋಕ್ಮನ್ ಗೋ, ಹಿಟ್‌ಮ್ಯಾನ್‌ ಗೇಮ್‌ ಸರಣಿ, ವೆಸ್ಟ್‌ವರ್ಡ್‌, ಗೇಮ್‌ ಆಫ್‌ ಥ್ರೋನ್ಸ್, ಕಾರ್ಸ್‌ 3, ಬ್ಯಾಟ್‌ಮ್ಯಾನ್‌ ಸರಣಿ, ಸೇರಿದಂತೆ ಹಲವು ಗೇಮ್ಸ್‌ಗಳು ಈಗಾಗಲೇ ಜನಪ್ರಿಯವಾಗಿವೆ. ಈಗ ಹ್ಯಾರಿ ಪಾಟರ್‌ ವಿಜರ್ಡ್‌ ಗೇಮ್ಸ್‌ ಗೇಮ್ಸ್‌ ಪ್ರಿಯರನ್ನು ಸೆಳೆಯಲಿದ್ದು, ಹಾಗೆಯೇ 2020ರ ವೇಳೆಗೆ ಸ್ಟಾರ್‌ ವಾರ್‌ ಮತ್ತು ಸೈಬರ್‌ಪಂಕ್‌ ಗೇಮ್ಸ್‌ಗಳು ಬರುವ ನಿರೀಕ್ಷೆ ಇದೆ.

ಓದಿರಿ : ಮಾರುಕಟ್ಟೆಯಲ್ಲಿ ಲಭ್ಯವಿರುವ 5 ಬೆಸ್ಟ್‌ ಬ್ಯುಸಿನೆಸ್‌ ಪ್ರೊಜೆಕ್ಟರ್‌ಗಳು!

Most Read Articles
Best Mobiles in India

English summary
Harry Potter: Wizards Unite is now available in India and 143 additional countries and territories. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X