Home
ಸುದ್ದಿಜಾಲ

50 ಲಕ್ಷ ಸಂಬಳ.. ಈ ಮಧ್ಯಮ ವರ್ಗದ ವಿದ್ಯಾರ್ಥಿ ಕಡೆ ದೇಶವೇ ತಿರುಗಿ ನೋಡುತ್ತಿದೆ!

ಇತ್ತೀಚಿನ ದಿನಗಳಲ್ಲಿ ಉದ್ಯೋಗ ಪಡೆದುಕೊಳ್ಳುವುದು ಅತ್ಯಂತ ಕಷ್ಟಕರವಾದ ಕೆಲಸವಾಗಿದೆ. ಯಾಕೆಂದರೆ ಆರ್ಥಿಕ ಕಾರಣಗಳನ್ನು ನೀಡಿ ಹಲವು ಕಂಪೆನಿಗಳು ಬಾಗಿಲು ಹಾಕಿಕೊಳ್ಳುತ್ತಿವೆ. . ಅಷ್ಟು ಮಾತ್ರವಲ್ಲದೆ ಇರುವ ಉದ್ಯೋಗಿಗಳನ್ನೂ ಸಹ ವಜಾ ಮಾಡುತ್ತಾ ಬರುತ್ತಿವೆ. ಅಂತಹುದರಲ್ಲಿ ಇಲ್ಲೋರ್ವ ಯುವಕ ಬರೋಬ್ಬರಿ 50 ಲಕ್ಷ ಸಂಬಳದೊಂದಿಗೆ ಕೆಲಸ ಗಿಟ್ಟಿಸಿಕೊಂಡಿದ್ದಾನೆ.

ಹೌದು, ಶಾಲಾ- ಕಾಲೇಜು ವ್ಯಾಸಂಗ ಮುಗಿಸುವ ಯುವಕರು ತಮ್ಮ ಕೌಟಿಂಬಿಕ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಭಾಗವಾಗಿ ಕೆಲಸಕ್ಕಾಗಿ ಅಲೆಯುವುದು ಭಾರತದಲ್ಲಿ ಸರ್ವೇ ಸಾಮಾನ್ಯ. ಅದರಲ್ಲೂ ಕೆಲವು ಪರಿಸ್ಥಿತಿಗಳು ಇಷ್ಟವಿಲ್ಲದ ಕೆಲಸಗಳಿಗೂ ಹೋಗುವಂತೆ ಮಾಡಿಬಿಡುತ್ತವೆ. ಈ ನಡುವೆ ಕೆಲವು ಯುವಕರು ತಮ್ಮ ಅತ್ಯುತ್ತಮ ಕೌಶಲ್ಯದಿಂದಾಗಿ ದೊಡ್ಡ ದೊಡ್ಡ ಕಂಪನಿಗಳಲ್ಲಿ ಉದ್ಯೋಗಗಳನ್ನು ಪಡೆದುಕೊಳ್ಳುತ್ತಿದ್ದು, ಇವರ ಸಾಲಿಗೆ ನಿಲ್ಲುವ ವಿದ್ಯಾರ್ಥಿಯೇ ಈ ಹರ್ಷಲ್ ಜ್ಯೂಕಾರ್.

50 ಲಕ್ಷ ಸಂಬಳ.. ಈ ಮಧ್ಯಮ ವರ್ಗದ ವಿದ್ಯಾರ್ಥಿ ಕಡೆ ದೇಶವೇ ತಿರುಗಿ ನೋಡುತ್ತಿದೆ!

ಯಾರು ಈ ಹರ್ಷಲ್ ಜ್ಯೂಕಾರ್?: ಹಲವಾರು ಯುವಕರಲ್ಲಿ ಮಿಂಚಿನ ಸಂಚಲವನವನ್ನೇ ಈ ಹರ್ಷಲ್ ಜ್ಯೂಕಾರ್(Harshal Juikar) ಹುಟ್ಟು ಹಾಕಿದ್ದಾನೆ. ಯಾಕೆಂದರೆ ಅನೇಕ ಭಾರತೀಯ ವಿದ್ಯಾರ್ಥಿಗಳು ಅಮೆರಿಕದ ಟೆಕ್ ಕಂಪನಿಗಳಲ್ಲಿ(American tech company) ಪ್ರಮುಖ ಹುದ್ದೆಗಳಲ್ಲಿದ್ದು, ಈ ಸಾಲಿನಲ್ಲಿ ಮಹಾರಾಷ್ಟ್ರದ ಪುಣೆಯ ಯುವ ಪದವೀಧರ ಹರ್ಷಲ್ ಜುಯ್ಕಾರ್ ಗೂಗಲ್‌ನಲ್ಲಿ ಹುದ್ದೆ ಪಡೆದಿದ್ದಾರೆ. ಅದೂ ಸಹ 50 ಲಕ್ಷಕ್ಕೂ ಅಧಿಕ ಸಂಬಳದೊಂದಿಗೆ.

ಪುಣೆಯಲ್ಲಿ ವಾಸವಾಗಿರುವ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಈ ಹರ್ಷೆಲ್ ಜ್ಯೂಕಾರ್ ಅದೇ ನಗರದ ಎಂಐಟಿ ವರ್ಲ್ಡ್ ಪೀಸ್ ಯೂನಿವರ್ಸಿಟಿಯಲ್ಲಿ(MIT World Peace University) ಬ್ಲಾಕ್‌ಚೈನ್ ಟೆಕ್ನಾಲಜಿಯಲ್ಲಿ ಎಂಎಸ್‌ಸಿ ಪೂರ್ಣಗೊಳಿಸಿದ್ದಾರೆ. ಓದುತ್ತಿರುವಾಗಲೇ ಅವರ ಅಸಾಧಾರಣ ಪ್ರತಿಭೆಯಿಂದಾಗಿ ಗೂಗಲ್‌ನಲ್ಲಿ ಜೂನಿಯರ್ ಡಾಟಾ ಸೈಂಟಿಸ್ಟ್ ಇಂಟರ್ನ್ ಶಿಪ್ ಗೆ ಆಯ್ಕೆ ಆಗಿದ್ದರು.

ಇದಾದ ಬಳಿಕ ಅವರು 1.5 ವರ್ಷಗಳ ಕಾಲ ಇಂಟರ್ನ್ಶಿಪ್ ಟ್ರೈನಿಯಾಗಿ ಕೆಲಸ ಮಾಡಿದ್ದಾರೆ. ಆ ಸಮಯದಲ್ಲಿ ಅವರ ಅಸಾಧಾರಣ ಪ್ರತಿಭೆ ಮತ್ತು ತಂತ್ರಜ್ಞಾನದ ಉತ್ಸಾಹವನ್ನು ತೋರಿಸಿದ್ದಾರೆ. ಪರಿಣಾಮ ಅವರು ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ಎಮ್‌ಐಟಿ ವರ್ಲ್ಡ್ ಪೀಸ್ ಯೂನಿವರ್ಸಿಟಿಯಲ್ಲಿ ಗೂಗಲ್ ನಡೆಸಿದ ಕ್ಯಾಂಪಸ್ ಸಂದರ್ಶನಕ್ಕೆ ಹಾಜರಾಗಲು ಅವಕಾಶ ಪಡೆದುಕೊಂಡಿದ್ದಾರೆ.

ಈ ಸದಾವಕಾಶ ಬಳಕೆ ಮಾಡಿಕೊಂಡ ಹರ್ಷಲ್ ಜ್ಯೂಕಾರ್, ಇದೀಗ ಗೂಗಲ್‌ನ ಸೈಂಟಿಸ್ಟ್ ಹುದ್ದೆಯನ್ನು ಅಲಂಕರಿಸಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಗೂಗಲ್ ಅವರಿಗೆ ವಾರ್ಷಿಕ 50 ಲಕ್ಷಕ್ಕೂ ಹೆಚ್ಚು ವೇತನ ನೀಡುವುದಾಗಿ ತಿಳಿಸಿದೆ. ಇಷ್ಟು ದೊಡ್ಡ ಸಂಬಳವನ್ನು ಸಾಮಾನ್ಯವಾಗಿ ಕಂಪ್ಯೂಟರ್ ಇಂಜಿನಿಯರಿಂಗ್ ಪದವೀಧರರಿಗೆ ಮಾತ್ರ ನೀಡಲಾಗುತ್ತಿತ್ತು. ಆದರೆ ಈಗ ಈ ಹರ್ಷಲ್ ಜುಗರ್ ಸಹ ಇದೇ ಸಂಬಳ ಪಡೆಯಲು ಅರ್ಹತೆ ಪಡೆದುಕೊಂಡಿದ್ದಾರೆ.

ಈ ಸಂಬಂಧ ಹರ್ಷೆಲ್ ಜ್ಯೂಕಾರ್ ಪ್ರತಿಕ್ರಿಯೆ ನೀಡಿ, ನನ್ನ ಕಾಲೇಜು ವರ್ಷಗಳಲ್ಲಿಯೇ ನಾನು ತಂತ್ರಜ್ಞಾನದ ಮೇಲಿನ ಉತ್ಸಾಹದ ಪ್ರಯಾಣ ಮುಂದುವರೆಸಿದ್ದೆ. ಇದು ಕೆಲವೊಮ್ಮೆ ಅಗಾಧವಾದ ಸವಾಲುಗಳನ್ನು ನೀಡಿದೆ. ಹಾಗೂ ಅನುಮಾನಗಳನ್ನು ಎದುರಿಸುವಂತೆ ಮಾಡಿದೆ. ಆದರೆ, ನಾನು ದಾರಿ ಬದಲಿಸದೆ ಮುಂದುವರಿದೆ. ಈಗ ಅದು ನನಗೆ ಕಲ್ಪನೆಗೂ ಮೀರಿದ ಯಶಸ್ಸನ್ನು ತಂದುಕೊಟ್ಟಿದೆ ಎಂದಿದ್ದಾರೆ.

50 ಲಕ್ಷ ಸಂಬಳ.. ಈ ಮಧ್ಯಮ ವರ್ಗದ ವಿದ್ಯಾರ್ಥಿ ಕಡೆ ದೇಶವೇ ತಿರುಗಿ ನೋಡುತ್ತಿದೆ!

ಇವರು ಇಂಜಿನಿಯರಿಂಗ್ ಪದವಿ ಮಾಡಿಲ್ಲ: ಮೊದಲೇ ತಿಳಿಸಿದಂತೆ ಹರ್ಷಲ್ ಎಂಎಸ್‌ಸಿ ವ್ಯಾಸಂಗ ಮಾಡಿದ್ದಾರೆ. ಅಷ್ಟೇ ಆದರೆ ಅವರು ಇಂಜಿನಿಯರಿಂಗ್ ಪದವೀಧರನಲ್ಲ. ಕಾರಣ ಈ ವಿಷಯದಲ್ಲಿ ಇವರು ಇನ್ನೂ ಹೆಚ್ಚು ಮೆಚ್ಚುಗೆಗೆ ಒಳಗಾಗುತ್ತಾರೆ. ಈ ಮೂಲಕ ಸಾಂಪ್ರದಾಯಿಕ ವೃತ್ತಿ ಮಾರ್ಗಗಳನ್ನು ವಿರೋಧಿಸಿ ಅಸಾಂಪ್ರದಾಯಿಕ ಕೋರ್ಸ್‌ಗಳನ್ನು ಮುಂದುವರಿಸುವ ಮೂಲಕ ಹರ್ಷಲ್ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಅಭಿನಂದನೆಗಳ ಮಹಾಪೂರ: ಈ ನಡುವೆ ಜ್ಯೂಕಾರ್ ಅವರಿಗೆ ನಾನಾ ಕಡೆಯಿಂದ ಅಭಿನಂದನೆ ಸಲ್ಲಿಸಲಾಗುತ್ತಿದೆ. ಅಷ್ಟು ಮಾತ್ರವಲ್ಲದೆ ಅವರು ಓದಿದ ವಿಶ್ವವಿದ್ಯಾಲಯದ ಉಪಕುಲಪತಿ ರವಿಕುಮಾರ್ ಸಿದ್ನಿಸ್, ಹರ್ಷಲ್ ಅವರ ಸಾಧನೆಯ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ, ಅವರ ಯಶಸ್ಸು ನಮ್ಮ ಶಿಕ್ಷಣ ಸಂಸ್ಥೆಗೆ ಅವರ ಬದ್ಧತೆಯ ಪ್ರತಿಬಿಂಬವಾಗಿದೆ. ಈ ಯಶಸ್ಸು ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ನಾವೀನ್ಯತೆಯ ಸಂಸ್ಕೃತಿಯನ್ನು ಪ್ರವೇಶಿಸಲು ಸ್ಫೂರ್ತಿಯಾಗಿದೆ ಎಂದು ಹೇಳಿದ್ದಾರೆ.

ಜ್ಯೂಕಾರ್ ಅವರು ವಿದ್ಯಾರ್ಥಿಗಳೊಂದಿಗೆ ತಮ್ಮ ಕೆಲವು ಯಶಸ್ಸಿನ ಸಲಹೆಗಳನ್ನು ಸಹ ಹಂಚಿಕೊಂಡಿದ್ದಾರೆ. ನೀವು ಯಾವಾಗಲೂ ಕುತೂಹಲದಿಂದ ಇರಿ, ಇದು ನಿರಂತರವಾಗಿರಲಿ ಮತ್ತು ಹೊಸ ಪ್ರದೇಶಗಳನ್ನು ಅನ್ವೇಷಿಸಲು ಹಿಂಜರಿಯದಿರಿ. ನಮ್ಮ ಭಾವೋದ್ರೇಕಗಳ ಅನ್ವೇಷಣೆಯಲ್ಲಿ ನಾವು ನಿಜವಾಗಿಯೂ ನಮ್ಮ ಉದ್ದೇಶವನ್ನು ಕಂಡುಕೊಳ್ಳಬಹುದು ಎಂದಿದ್ದಾರೆ.

Best Mobiles in India

English summary
Hershel Juikar, a young graduate from Pune, Maharashtra, has got a job at Google. That too with a salary of over 50 lakhs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+