ಜಗತ್ತಿನ ದೊಡ್ಡ ಸೆಲ್ಫೀ ಮೈಕ್ರೋಸಾಫ್ಟ್‌ನಿಂದ

Written By:

ಕ್ಯಾಮೆರಾ ಫೋನ್‌ಗಳಲ್ಲಿ ಸೆಲ್ಫೀ ಕರಾಮತ್ತು ಬಂದ ನಂತರ ಉತ್ತಮ ಸೆಲ್ಫೀ ಫೋನ್‌ಗಳತ್ತಲೇ ಜನ ವಾಲುತ್ತಿದ್ದಾರೆ. ಸೆಲ್ಫೀ, ಗ್ರೂಫೀ ಎಂದು ಜನ ಮುಗಿಬಿದ್ದು ತಮ್ಮ ತಮ್ಮ ಫೋನ್‌ಗಳಲ್ಲಿ ಚಿತ್ರಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

ಸೆಲ್ಫೀ ತೆಗೆಯುವುದರಲ್ಲೂ ಈಗ ಲಿಮ್ಕ ಹಾಗೂ ಗಿನ್ನಿಸ್ ದಾಖಲೆಗಳನ್ನ ಜನರು ನಿರ್ಮಿಸುತ್ತಿದ್ದಾರೆ. ಅಷ್ಟರಮಟ್ಟಿಗೆ ಸೆಲ್ಫೀ ತನ್ನ ಪರಿಣಾಮವನ್ನು ಫೋನ್ ಪ್ರಿಯರ ಮೇಲೆ ಬೀರಿದೆ. ಇದಕ್ಕೆ ಪುರಾವೆ ಎಂಬಂತೆ ಬಾಂಗ್ಲಾದೇಶದ ಮೈಕ್ರೋಸಾಫ್ಟ್ ಲ್ಯೂಮಿಯಾ ತನ್ನ ಫೇಸ್‌ಬುಕ್ ಪುಟದಲ್ಲಿ 1,151 ಜನ ಜೊತೆಗೆ ನಿಂತು ತೆಗೆಸಿದ ಅತ್ಯದ್ಭುತ ಸೆಲ್ಫೀಯನ್ನು ಪೋಸ್ಟ್ ಮಾಡಿದೆ.

ಇದನ್ನೂ ಓದಿ: ಅತ್ಯುತ್ತಮ ಕ್ಯಾಮೆರಾ ಫೋನ್‌ಗಳು ಕಡಿಮೆ ಬೆಲೆಗೆ

ತನ್ನ ಸೆಲ್ಫೀ ಫೋನ್ ಅನ್ನು ಪ್ರಮೋಟ್ ಮಾಡುತ್ತಾ ನೋಕಿಯಾ ಲ್ಯೂಮಿಯಾ 730, ಮೈಕ್ರೋಸಾಫ್ಟ್ ಜಗತ್ತಿನ ದೊಡ್ಡ ಸೆಲ್ಫೀ ಎಂಬುದನ್ನು ದಾಖಲಿಸುವುದಕ್ಕಾಗಿ ಬಾಂಗ್ಲಾದೇಶದಲ್ಲಿ ಸೆಲ್ಫೀ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು. ಜನರು ಇದಕ್ಕೆ ತಮ್ಮ ಸಂಪೂರ್ಣ ಸಮ್ಮತಿಯನ್ನು ನೀಡಿದ್ದು ಉಚಿತ ವೈಫೈಯನ್ನು ಇವರಿಗೆ ಒದಗಿಸಲಾಗಿತ್ತು. ಹೆಚ್ಚಿನ ಪ್ರೇಕ್ಷಕರನ್ನು ಆಕರ್ಷಿಸಲು, ಮೈಕ್ರೋಸಾಫ್ಟ್ ತನ್ನ ಫೇಸ್‌ಬುಕ್‌ನಲ್ಲಿ ಕೊಡುಗೆಗಳನ್ನು ಪ್ರಸ್ತುತಪಡಿಸಿತ್ತು ಅಂದರೆ ಲ್ಯೂಮಿಯಾ 730, ವೆಲೋಸ್ ಸೈಕಲ್, ಫಾಸ್ಟ್‌ ಟ್ರ್ಯಾಕ್ ಸನ್‌ಗ್ಲಾಸ್ ಮತ್ತು ಇತರ ಕೊಡುಗೆಗಳನ್ನು ಸೆಲ್ಫೀ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವವರಿಗೆ ನೀಡುವುದಾಗಿ ತಿಳಿಸಿತ್ತು.

ನಿಜಕ್ಕೂ ಮೈಕ್ರೋಸಾಫ್ಟ್ ನಡೆಸಿದ ವಿಶ್ವದ ಅದ್ಭುತ ಸೆಲ್ಫೀ ಇದಾಗಿತ್ತು ಎಂಬುದು ನಿಜವಾಗಿದ್ದರೂ ಬಾಂಗ್ಲಾದೇಶದ ಜನತೆ ಈ ಅತಿ ದೊಡ್ಡ ಸೆಲ್ಫೀಗೆ ಒದಗಿಸಿದ ಸಹಕಾರ ಅಭೂತಪೂರ್ಣವಾಗಿತ್ತು.

English summary
This article tells about Recently, Microsoft Lumia Bangladesh posted on its Facebook page, a gigantic selfie of around 1,151 people in Bangladesh, which is fit to be world’s largest selfie.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot