Home
ಸುದ್ದಿಜಾಲ

ಹಾತ್‌ವೇಯಿಂದ ಹೊಸದಾಗಿ 849ರೂ. ಬ್ರಾಡ್‌ಬ್ಯಾಂಡ್ ಪ್ಲ್ಯಾನ್!

ಆಕರ್ಷಕ ದರದಲ್ಲಿ ಹಲವು ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿ ಹಾತ್‌ವೇ ಸಂಸ್ಥೆಯು ಜನಪ್ರಿಯತೆ ಪಡೆದಿದೆ. ಇದೀಗ ಹಾತ್‌ವೇ ಸಂಸ್ಥೆಯು ಗ್ರಾಹಕ ಸ್ನೇಹಿ ಬೆಲೆಯಲ್ಲಿ ಮತ್ತೊಂದು ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ ಅನ್ನು ಪರಿಚಯಿಸಲು ಮುಂದಾಗಿದೆ. ನೂತನ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ ವೇಗದ ಇಂಟರ್ನೆಟ್ ಸಾಮರ್ಥ್ಯವನ್ನು ಹೊಂದಿರಲಿದ್ದು, ಉಚಿತ ರೂಟರ್ ಹಾಗೂ ಉಚಿತ ಇನ್‌ಸ್ಟಾಲೇಶನ್ ಸೌಲಭ್ಯ ನೀಡಲಿದೆ.

ಹಾತ್‌ವೇ ಸಂಸ್ಥೆ

ಹೌದು, ಹಾತ್‌ವೇ ಸಂಸ್ಥೆಯು ಸದ್ಯದಲ್ಲಿಯೇ 849ರೂ. ಬ್ರಾಡ್‌ಬ್ಯಾಂಡ್ ಯೋಜನೆಯೊಂದನ್ನು ಪರಿಚಯಿಸಲಿದ್ದು, ಈ ಪ್ಲ್ಯಾನ್ 1000GB ಎಫ್‌ಯುಪಿ ಮಿತಿಯನ್ನು ಪಡೆದಿದೆ. ಹಾಗೆಯೇ ಈ ಪ್ಲ್ಯಾನ್ 150mbps ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಈ ಬಗ್ಗೆ ಹಾತ್‌ವೇ ತನ್ನ ವೆಬ್‌ಸೈಟ್‌ನಲ್ಲಿ ಕಂಪನಿಯು "ನೋ ಮೋರ್ ಶಾಕ್ಸ್" ಆಫರ್ ಅಡಿಯಲ್ಲಿ ಯೋಜನೆಯನ್ನು ಜಾಹೀರಾತು ಮಾಡಿದೆ.

 ಚೆನ್ನೈ ಮತ್ತು ದೆಹಲಿ

ಹಾತ್‌ವೇ ಸಂಸ್ಥೆಯ ಈ ಯೋಜನೆಯನ್ನು ಚೆನ್ನೈ ಮತ್ತು ದೆಹಲಿ ಸೇರಿದಂತೆ ಕೆಲವು ನಗರಗಳಲ್ಲಿ ಬಿಡುಗಡೆ ಮಾಡಲಿದೆ. ಇನ್ನು ದೀರ್ಘಾವಧಿಯ ಸಂಪರ್ಕ ಪಡೆಯುವ ಚಂದಾದಾರರಿಗೆ ಸಂಸ್ಥೆಯು ಉಚಿತ ಇನ್‌ಸ್ಟಾಲೇಶನ್‌ ಮತ್ತು ಉಚಿತ ರೂಟರ್ ಪ್ರಯೋಜನಗಳನ್ನು ಕಂಪನಿಯು ಒದಗಿಸಲಿದೆ. ಬೆಂಗಳೂರಿನಲ್ಲಿ ವ್ಯಾಲ್ಯೂ ಪ್ಯಾಕ್ ಅಡಿಯಲ್ಲಿ ಇದೇ ರೀತಿ ಯೋಜನೆಯನ್ನು ಲಭ್ಯವಾಗಿಸಿದ್ದು, 6 ತಿಂಗಳು ಅಥವಾ ವಾರ್ಷಿಕ ಚಂದಾದಾರಿಕೆಗೆ ಲಭ್ಯವಿದೆ.

150 Mbps

999ರೂ.ಬೆಲೆಯಲ್ಲಿ ಹಾತ್‌ವೇ ಸಂಸ್ಥೆಯು 150 Mbps ವೇಗದ ಯೋಜನೆಯನ್ನು ಹೊಂದಿದ್ದು, ಈ ಯೋಜನೆಯಲ್ಲಿ ಬಳಕೆದಾರರಿಗೆ 1000GB ಡೇಟಾ ಎಫ್‌ಯುಪಿ ಮಿತಿಯನ್ನು ಲಭ್ಯವಾಗುತ್ತದೆ. ನಿಗದಿತ ಡೇಟಾ ಮುಗಿದ ಬಳಿಕ 5 Mbpsನಲ್ಲಿ ಡೇಟಾ ಎಫ್‌ಯುಪಿ ಮಿತಿಯನ್ನು ತಲುಪಬಹುದು. ಈ ಯೋಜನೆ ಮೂರು ತಿಂಗಳ ಚಂದಾದಾರಿಕೆಗೆ 2997 ರೂ.ಗೆ ಮತ್ತು ಆರು ತಿಂಗಳ ಚಂದಾದಾರಿಕೆಗೆ 5994 ರೂ.ಗೆ ಲಭ್ಯವಿದೆ. ಹ್ಯಾಥ್‌ವೇ 150 Mbps ಯೋಜನೆಯನ್ನು ವಾರ್ಷಿಕ ಚಂದಾದಾರಿಕೆಗಾಗಿ 11,988 ರೂ.ಗೆ ನೀಡುತ್ತದೆ.

ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌

ಹಾಗೆಯೇ ಸಂಸ್ಥೆಯು 25 Mbps, 50 Mbps, 75 Mbps, 80 Mbps, 100 Mbps ಮತ್ತು 125 Mbps ವೇಗದ ಸಾಮರ್ಥ್ಯದ ಪ್ಲ್ಯಾನ್‌ಗಳ ಆಯ್ಕೆಯನ್ನು ಹೊಂದಿದೆ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ ಹೊಂದಲು ಗ್ರಾಹಕರಿಗೆ ಒಟ್ಟು ಮೂರು ಚಂದಾದಾರಿಕೆಯ ಆಯ್ಕೆ ಇದ್ದು, ಅವುಗಳು ಕ್ರಮವಾಗಿ ಒಂದು ತಿಂಗಳಿಗೆ, ಆರು ತಿಂಗಳಿಗೆ ಮತ್ತು 12 ತಿಂಗಳಿಗೆ (ವಾರ್ಷಿಕ) ಆಯ್ಕೆಗಳಿವೆ.

75 Mbps ವೇಗದ

ಹಾತ್‌ವೇ ಟೆಲಿಕಾಂನ 75 Mbps ವೇಗದ ಬ್ರಾಡ್‌ಬ್ಯಾಂಡ್ ತಿಂಗಳ ಶುಲ್ಕವು 449ರೂ. ಆಗಿದೆ. ಇದೇ ಪ್ಲ್ಯಾನಿನ ಆರು ತಿಂಗಳ ಶುಲ್ಕವು 2,649ರೂ. ಆಗಿದ್ದು, 12 ತಿಂಗಳ ಶುಲ್ಕವು 4,788ರೂ.ಗಳಾಗಿದೆ. ಅದೇ ರೀತಿ ಸಂಸ್ಥೆಯ 100 Mbps ವೇಗದ ಬ್ರಾಡ್‌ಬ್ಯಾಂಡ್ ತಿಂಗಳ ಶುಲ್ಕವು 599ರೂ. ಆಗಿದ್ದು, ಅದೇ ಪ್ಲ್ಯಾನ್‌ ಅನ್ನು ಆರು ತಿಂಗಳಿಗೆ ಅಥವಾ 12 ತಿಂಗಳಿಗೆ ರೀಚಾರ್ಜ್ ಮಾಡಿಸಿದರೇ ರಿಯಾಯಿತಿ ಸಿಗಲಿದೆ.

Best Mobiles in India

English summary
Hathway Broadband might soon launch a new 150 Mbps plan at Rs 849 per month in several cities including Chennai and Delhi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+