Home
ಸುದ್ದಿಜಾಲ

'ಹಾಥ್ ವೇ' ಕೈ ಜೋಡಿಸಿದೆ ಮೈಕ್ರೋಸಾಫ್ಟ್!..ಬ್ರಾಂಡ್‌ಬ್ಯಾಂಡ್ ಬಳಕೆದಾರರಿಗೆ ಬಂಪರ್ ಆಫರ್ಸ್!!

ಮೈಕ್ರೋಸಾಫ್ಟ್ ಜೊತೆಗೆ ಹಾಥ್ ವೇ ಸಂಸ್ಥೆ ವಿಶೇಷ ವ್ಯವಹಾರಿಕ ಒಪ್ಪಂದ ಮಾಡಿಕೊಂಡಿದ್ದು ಈ ಮೂಲಕ ತನ್ನ ಗ್ರಾಹಕರಿಗೆ ವಿಶಿಷ್ಟ ಸೇವೆ ನೀಡಲು ಮುಂದಾಗಿದೆ.!!

By Bhaskar N J

ಅಂತರ್ಜಾಲ ಪ್ರಪಂಚದಲ್ಲಿ ಬೇರೂರಿರುವ ಪ್ರಮುಖ ಕೇಬಲ್ ಬ್ರಾಡ್‌ಬ್ಯಾಂಡ್ ಸೇವಾ ಸಂಸ್ಥೆ ಹಾಥ್ ವೇ ಇದೀಗ ಮೈಕ್ರೋಸಾಫ್ಟ್ ಜೊತೆಗೆ ಕೈ ಜೋಡಿಸಿದೆ.! ಮೈಕ್ರೋಸಾಫ್ಟ್ ಜೊತೆಗೆ ಹಾಥ್ ವೇ ಸಂಸ್ಥೆ ವಿಶೇಷ ವ್ಯವಹಾರಿಕ ಒಪ್ಪಂದ ಮಾಡಿಕೊಂಡಿದ್ದು ಈ ಮೂಲಕ ತನ್ನ ಗ್ರಾಹಕರಿಗೆ ವಿಶಿಷ್ಟ ಸೇವೆ ನೀಡಲು ಮುಂದಾಗಿದೆ.!!

ಈ ವ್ಯವಹಾರಿ ಒಪ್ಪಂದದ ಭಾಗವಾಗಿ ಹಾಥ್ ವೇ ಸಂಸ್ಥೆ ತನ್ನ ಗ್ರಾಹಕರಿಗೆ ಆಫೀಸ್ 365 ಪರ್ಸನಲ್‌ನ ಒಂದು ವರ್ಷದ ಚಂದಾದಾರಿಕೆಯನ್ನು ನೀಡುತ್ತಿದ್ದು, ಮೈಕ್ರೋಸಾಫ್ಟ್ ವರ್ಡ್, ಮೈಕ್ರೋಸಾಫ್ಟ್ ಎಕ್ಸೆಲ್, ಮೈಕ್ರೋಸಾಫ್ಟ್ ಪವರ್ ಪಾಯಿಂಟ್, ಒನ್ ನೋಟ್, ಔಟ್ ಲುಕ್ ಆಕ್ಸಸ್ ಮತ್ತು ಪಬ್ಲಿಷರ್‌ಗಳು ಗ್ರಾಹಕರಿಗೆ ಉಚಿತವಾಗಿ ದೊರೆಯಲಿವೆ.!!

'ಹಾಥ್ ವೇ' ಕೈ ಜೋಡಿಸಿದೆ ಮೈಕ್ರೋಸಾಫ್ಟ್!.ಬ್ರಾಂಡ್‌ಬ್ಯಾಂಡ್ ಬಳಕೆದಾರರಿಗೆ ಬಂಪರ್!

ಇದರ ಜೊತೆಯಲ್ಲಿಯೇ ಗ್ರಾಹಕರು ಒನ್ ಡ್ರೈವ್ ನಲ್ಲಿ ಒಂದು ಟಿಬಿ ಕ್ಲೌಡ್ ಸ್ಟೋರೇಜ್‌ಗೆ ಸಂಪರ್ಕವನ್ನು ಕೂಡ ಪಡೆಯಲಿದ್ದು, ಆನ್‌ಲೈನ್‌ನಲ್ಲಿ ಹೆಚ್ಚು ಡೇಟಾ ಶೇಖರಣೆ ಮಾಡಬಯಸುವವರಿಗೆ ಈ ಸೌಲಭ್ಯ ವರದಾನವಾಗಲಿದೆ. ಹಾಗಾಗಿ, ಯಾವುದೇ ಸಮಯದಲ್ಲಿ ಯಾವುದೇ ಉಪಕರಣದಿಂದ ಸಂಪರ್ಕ ಹೊಂದಲು ಇದರಿಂದ ಸಾಧ್ಯವಾಗಲಿದೆ.!!

'ಹಾಥ್ ವೇ' ಕೈ ಜೋಡಿಸಿದೆ ಮೈಕ್ರೋಸಾಫ್ಟ್!.ಬ್ರಾಂಡ್‌ಬ್ಯಾಂಡ್ ಬಳಕೆದಾರರಿಗೆ ಬಂಪರ್!

ಇನ್ನು ಈ ಎಲ್ಲಾ ಸೇವೆಗಳನ್ನು ಹಾಥ್ ವೇ ಸಂಸ್ಥೆ ತನ್ನ ಹಳೆ ದರದಲ್ಲಿಯೇ ನೀಡಲು ಮುಂದಾಗಿದ್ದು, ಮಾಸಿಕ 999 ರೂ.ಗಳ ಪಾವತಿಯೊಂದಿಗೆ 200ಎಂಬಿಪಿಎಸ್ ಹೈ ಸ್ಪೀಡ್ ಬ್ರಾಡ್‌ಬ್ಯಾಂಡ್ ಮತ್ತು 1000 ಜಿಬಿಯ ಅನಿಯಮಿತ ಡೇಟಾವನ್ನು ಸಹ ಒದಗಿಸಲಾಗುವುದು ಎಂದು ಹಾಥ್ ವೇ ತಿಳಿಸಿದೆ.!!

ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಹೇಗೆ..?

ಓದಿರಿ: 6,999 ರೂ.ಗೆ ಡ್ಯುಯಲ್ ಸೆಲ್ಫಿ ಕ್ಯಾಮೆರಾ ಫೋನ್ ಬಿಡುಗಡೆ!!

More from GizBot

Best Mobiles in India

English summary
Hathway, India’s largest high-speed cable broadband service.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+