ಫೋನ್‌ನಲ್ಲಿ ಆಪ್‌ಗಳು ಇನ್‌ಸ್ಟಾಲ್ ಆಗುತ್ತಿಲ್ಲವೇ? ಹಾಗಿದ್ರೆ ಈ ಕೆಲಸ ಮಾಡಿ!
ಸ್ಮಾರ್ಟ್‌ಫೋನ್‌ಗೆ (smartphone) ಒಂದು ಮೌಲ್ಯ ಬರಬೇಕು ಎಂದರೆ ಅಗತ್ಯ ಆಪ್‌ಗಳು(Apps) ಆ ಫೋನ್‌ನಲ್ಲಿ ಇರಬೇಕು. ಅದರಲ್ಲೂ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲವು ಆಪ್‌ಗಳು ಪೂರ್ವದಲ್ಲೇ ಇನ್‌ಸ್ಟಾಲ್ ಆಗಿರುತ್ತವೆ. ಈ ನಡುವೆ ಹೊಸ ಆಪ್‌ಗಳನ್ನು ಇನ್‌ಸ್ಟಾಲ್(install) ಮಾಡುವವರು ಸಹ ಕೆಲವು ಸಮಸ್ಯೆಗಳನ್ನು ಎದುರಿಸುತ್ತಾರೆ.
ಹೌದು, ಆಪ್‌ಗಳು ಇಂದು ಎಲ್ಲಾ ರೀತಿಯಲ್ಲೂ ಬಳಕೆದಾರರಿಗೆ ಸೌಲಭ್ಯ ಕಲ್ಪಿಸಿಕೊಡುತ್ತಿದ್ದು, ಕೆಲವೊಂದು ಬಾರಿ ಫೋನ್‌ನಲ್ಲಿ ಏನೇ ಮಾಡಿದರೂ ಸಹ ಆಪ್‌ಗಳು ಇನ್‌ಸ್ಟಾಲ್ ಆಗುವುದೇ ಇಲ್ಲ. ಈ ವೇಳೆ ಬಳಕೆದಾರರು ತುಂಬಾ ಬೇಸರ ಹೊರಹಾಕುವ ಅದೆಷ್ಟೋ ಘಟನೆಗಳು ನಮ್ಮ ಮುಂದಿವೆ. ಆದರೆ ,ಆಪ್‌ಗಳನ್ನು ಇನ್‌ಸ್ಟಾಲ್ ಮಾಡಬೇಕು ಎಂದರೆ ಮೊದಲು ಫೋನ್ ಉತ್ತಮವಾಗಿರಬೇಕು. ಕೆಲವು ಆಪ್‌ಗಳು ಕೆಲವು ಫೋನ್‌ಗಳಿಗೆ ಬೆಂಬಲಿಸುವುದಿಲ್ಲ ಎನ್ನುವುದೂ ಸಹ ನಿಮಗೆ ಗೊತ್ತಿರಲಿ. ಅದಾಗ್ಯೂ ಆಪ್‌ಗಳು ಯಾವೆಲ್ಲಾ ಸಮಯದಲ್ಲಿ ಇನ್‌ಸ್ಟಾಲ್ ಆಗುವುದಿಲ್ಲ ಎನ್ನುವುದನ್ನು ತಿಳಿಯೋಣ ಬನ್ನಿ.

ಗೂಗಲ್ ಪ್ಲೇ ಸ್ಟೋರ್(Google play store) ಎಂಬುದು ಆಂಡ್ರಾಯ್ಡ್ ಡಿವೈಸ್‌ಗಳಿಗೆ ಅಧಿಕೃತ ಆಪ್ ಸ್ಟೋರ್ ಆಗಿದೆ. ಈ ಮೂಲಕ ಬಳಕೆದಾರರು ತಮಗೆ ಬೇಕಾದ ಆಪ್‌ಗಳನ್ನು ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳುವುದು ಸಾಮಾನ್ಯವಾದ ವಿಷಯ. ಆದರೆ, ಕೆಲವೊಮ್ಮೆ, ಬಳಕೆದಾರರು ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡದಂತೆ ತಡೆಯುವ ಕೆಲವು ಸಮಸ್ಯೆಗಳು ಫೋನ್‌ನಲ್ಲಿ ಕಾಣಿಸಿಕೊಳ್ಳುತ್ತವೆ. ಅದನ್ನು ಈ ರೀತಿ ಪರಿಶೀಲನೆ ಮಾಡಿ.
ಇಂಟರ್ನೆಟ್ ಸಂಪರ್ಕ ಪರಿಶೀಲಿಸಿ: ಇಂಟರ್ನೆಟ್ ಇಲ್ಲದೆ ಸ್ಮಾರ್ಟ್‌ಫೋನ್ ಇಲ್ಲ ಎಂದರೆ ತಪ್ಪಾಗಲಾರದು. ಅದರಂತೆ ಫೋನ್‌ನಲ್ಲಿ ಯಾವುದೇ ಮಾಹಿತಿ ಜಾಲಾಡಲು ಇಂಟರ್ನೆಟ್ ಅಗತ್ಯವಾಗಿದ್ದು, ಪ್ಲೇ ಸ್ಟೋರ್‌ನಿಂದ ಆಪ್‌ಗಳು ಮತ್ತು ಗೇಮ್‌ಗಳನ್ನು ಡೌನ್‌ಲೋಡ್ ಮಾಡಲು ಸ್ಥಿರವಾದ ಇಂಟರ್ನೆಟ್ ಸಂಪರ್ಕ ಅಗತ್ಯವಾಗಿದೆ. ಇದರಿಂದಾಗಿ ವಿಶ್ವಾಸಾರ್ಹ ವೈ-ಫೈ ನೆಟ್‌ವರ್ಕ್ ಅಥವಾ ಬಲವಾದ ಮೊಬೈಲ್ ಡೇಟಾ ಸಿಗ್ನಲ್ ಹೊಂದಿದ್ದೀರೋ ಎಂದು ಖಚಿತಪಡಿಸಿಕೊಳ್ಳಿ.
ಪ್ಲೇ ಸ್ಟೋರ್‌ನ ಸ್ಟೋರೇಜ್ ಪರಿಶೀಲಿಸಿ: ಪ್ಲೇ ಸ್ಟೋರ್ ಅಪ್ಲಿಕೇಶನ್‌ನಲ್ಲಿನ ಸ್ಟೋರೇಜ್ ಸಹ ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳು ಡೌನ್‌ಲೋಡ್ ಆಗುವುದನ್ನು ತಡೆಯುತ್ತದೆ. ಇದನ್ನು ಪರಿಹರಿಸಲು ನಿಮ್ಮ ಡಿವೈಸ್‌ನ ಸೆಟ್ಟಿಂಗ್ ವಿಭಾಗಕ್ಕೆ ಹೋಗಿ ಬಳಿಕ ಅಪ್ಲಿಕೇಶನ್‌ಗಳು ಅಥವಾ ಅಪ್ಲಿಕೇಶನ್ ಮ್ಯಾನೇಜರ್ ವಿಭಾಗವನ್ನು ನ್ಯಾವಿಗೇಟ್ ಮಾಡಿ. ಅಲ್ಲಿ ಗೂಗಲ್ ಪ್ಲೇ ಸ್ಟೋರ್ ಮೇಲೆ ಕ್ಲಿಕ್ ಮಾಡಿ ಸ್ಟೋರೇಜ್ ಮತ್ತು ಡೇಟಾವನ್ನು ತೆರವುಗೊಳಿಸಿ.
ಪ್ಲೇ ಸ್ಟೋರ್ ಆಪ್ ಅಪ್‌ಡೇಟ್ ಮಾಡಿ: ಇಷ್ಟು ಮಾಡಿದರೂ ಆಪ್‌ಗಳು ಇನ್‌ಸ್ಟಾಲ್ ಆಗುತ್ತಿಲ್ಲ ಎಂದಾದರೆ ತಡೆರಹಿತ ಕಾರ್ಯವನ್ನು ಖಚಿತಪಡಿಸಿಕೊಳ್ಳಲು ಆಪ್ ಅನ್ನೇ ಅಪ್‌ಡೇಟ್ ಮಾಡಿ. ಪ್ಲೇ ಸ್ಟೋರ್‌ನ ಹಳೆಯ ಆವೃತ್ತಿ ಹೊಂದಾಣಿಕೆಯ ಸಮಸ್ಯೆಗಳನ್ನು ಎದುರಿಸುವ ಹಿನ್ನೆಲೆ ಆಪ್‌ಗಳು ಸಾಮಾನ್ಯವಾಗಿ ಇನ್‌ಸ್ಟಾಲ್ ಆಗುವುದಿಲ್ಲ. ಇದರಿಂದಾಗಿ ಡೌನ್‌ಲೋಡ್ ವಿಫಲಗೊಳ್ಳುತ್ತದೆ.
ನೀವು ಪ್ಲೇ ಸ್ಟೋರ್ ಅಪ್ ಅನ್ನು ನವೀಕರಿಸಲು, ಪ್ಲೇ ಸ್ಟೋರ್ ಆಪ್ ಓಪನ್ ಮಾಡಿ. ಬಳಿಕ ಮೇಲಿನ ಎಡ ಮೂಲೆಯಲ್ಲಿರುವ ಮೆನು ಐಕಾನ್ ಅಂದರೆ ಮೂರು ಗೆರೆ ಇರುವ ಐಕಾನ್ ಮೇಲೆ ಟ್ಯಾಪ್ ಮಾಡಿ. ಬಳಿಕ ಸೆಟ್ಟಿಂಗ್ ವಿಭಾಗಕ್ಕೆ ತಲುಪಿ ಅಲ್ಲಿ ಪ್ಲೇ ಸ್ಟೋರ್ ಹೊಸ ಆವೃತ್ತಿ ಹುಡುಕಲು ಕೆಳಗೆ ಸ್ಕ್ರಾಲ್ ಮಾಡಿದರೆ ಸಾಕು. ನವೀಕರಣವು ಲಭ್ಯವಿದ್ದರೆ ಅದನ್ನು ಇನ್‌ಸ್ಟಾಲ್ ಮಾಡಿ.

ಸ್ಟೋರೇಜ್ ಸಾಮರ್ಥ್ಯ ಪರಿಶೀಲಿಸಿ: ಆಪ್ ಹಾಗೂ ಇಂಟರ್ನೆಟ್ ಹೊರತುಪಡಿಸಿ ನಿಮ್ಮ ಫೋನ್ ಸಹ ಈ ವೇಳೆ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಫೋನ್ ಸ್ಟೋರೇಜ್ ಕಡಿಮೆ ಇದ್ದರೆ ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯ ಆಗುವುದಿಲ್ಲ. ಇದಕ್ಕಾಗಿ ಫೋನ್ ಸಾಕಷ್ಟು ಉಚಿತ ಸ್ಟೋರೇಜ್ ಆಯ್ಕೆ ಹೊಂದಿರಬೇಕಾಗುತ್ತದೆ. ಇಲ್ಲದಿದ್ದರೆ, ಕೆಲವು ಫೋಟೋಗಳು, ವಿಡಿಯೋಗಳು ಅಥವಾ ಬಳಕೆಯಾಗದ ಆಪ್‌ಗಳನ್ನು ಅಳಿಸಿ ಮತ್ತು ನಂತರ ಆಪ್ ಅನ್ನು ಡೌನ್‌ಲೋಡ್ ಮಾಡಲು ಪ್ರಯತ್ನಿಸಿ.
ಸ್ಮಾರ್ಟ್‌ಫೋನ್ ಅನ್ನು ರೀಸ್ಟಾರ್ಟ್ ಮಾಡಿ: ಇದನ್ನೆಲ್ಲಾ ಮಾಡಿದ್ರೂ ಸಹ ಫೋನ್‌ನಲ್ಲಿ ಆಪ್‌ಗಳು ಇನ್‌ಸ್ಟಾಲ್ ಆಗುತ್ತಿಲ್ಲ ಎಂದಾದರೆ ರೀಸ್ಟಾರ್ಟ್ ಕೊನೆಯ ಆಯ್ಕೆ ಆಗಿರುತ್ತದೆ. ಇದು ನಿಮ್ಮ ಡಿವೈಸ್ ಅನ್ನು ಸಂಪೂರ್ಣವಾಗಿ ರಿಫ್ರೆಶ್ ಮಾಡುತ್ತದೆ. ಇದಾದ ಬಳಿಕ ನಿಮ್ಮ ಫೋನ್‌ನಲ್ಲಿ ಸುಲಭವಾಗಿ ಬೇಕಾದ ಎಲ್ಲಾ ಆಪ್‌ಗಳನ್ನು ಕ್ಷಣ ಮಾತ್ರದಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬಹುದು.


Click it and Unblock the Notifications








