Home
ಸುದ್ದಿಜಾಲ

HCL ನಲ್ಲಿ ಕೆಲಸ ಕಳೆದುಕೊಂಡ ಸಾಫ್ಟ್‌ವೇರ್ ಡೆವಲಪರ್ ಈಗ ರಾಪಿಡೋ ಡ್ರೈವರ್ !

ಮಾಡೋದಕ್ಕೆ ಕೆಲಸ ಯಾವುದಾದರೇನು? ಕಾಯದಲ್ಲಿ ನಿಷ್ಟೆ ಇದ್ದರೆ ನಮಗೆ ಸಿಗಬೇಕಾದದ್ದು ಸಿಕ್ಕೇ ಸಿಗುತ್ತದೆ ಎಂಬ ಹಿರಿಯರ ನುಡಿಗಳು ಇಂದಿಗೆ ಪ್ರಸ್ತುತ ಎನಿಸುತ್ತವೆ. ಜಗತ್ತಿನಲ್ಲಿ ಆಗುತ್ತಿರುವ ಕೆಲವು ಬದಲಾವಣೆಯಿಂದಾಗಿ ವಿದ್ಯಾಭ್ಯಾಸಕ್ಕೆ ತಕ್ಕ ಉದ್ಯೋಗ ಸಿಗುತ್ತಿಲ್ಲ, ಸಿಕ್ಕರೂ ಇತ್ತೀಚಿನ ಆರ್ಥಿಕ ಪರಿಸ್ಥಿತಿಯಿಂದಾಗಿ ಕೆಲವೇ ದಿನಗಳಲ್ಲಿ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಈ ನಡುವೆ ಇಲ್ಲೋರ್ವ ವ್ಯಕ್ತಿ ಈ ಸಮಸ್ಯೆಗಳನ್ನೆಲ್ಲಾ ಮೆಟ್ಟಿ ನಿಂತಿದ್ದಾರೆ.

ಹೌದು, ಪ್ರಮುಖ ಟೆಕ್‌ ಕಂಪೆನಿಯಾದ HCL ನಲ್ಲಿ ಇತ್ತೀಚೆಗಷ್ಟೇ ವಜಾಗೊಂಡಿರುವ ಸಾಫ್ಟ್‌ವೇರ್ ಡೆವಲಪರ್ ಓರ್ವರು ಕೆಲಸ ಹೋಯ್ತು ಎಂದು ನೊಂದು ನಿರಾಸೆಯಾಗದೆ ಜೊತೆಗೆ ತಾವು ಅಷ್ಟು ಓದಿದ್ದೇವೆ ಇಷ್ಟು ಓದಿದ್ದೇವೆ ಎಂಬ ಅಹಃ ಅನ್ನು ಸಹ ಇರಿಸಿಕೊಳ್ಳದೆ ಈಗ ರಾಪಿಡೋ(Rapido) ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಿದ್ರೆ, ಯಾರು ಈ ವಿಶೇಷ ವ್ಯಕ್ತಿ?, ಅವರು ಈ ನಿರ್ಧಾರ ಮಾಡಿದ್ದಾದರೂ ಯಾಕೆ ಎಂಬ ಇಂಟ್ರೆಸ್ಟಿಂಗ್‌ ಮಾಹಿತಿ ಇಲ್ಲಿದೆ ನೋಡಿ.

HCL ನಲ್ಲಿ ಕೆಲಸ ಕಳೆದುಕೊಂಡ ಸಾಫ್ಟ್‌ವೇರ್ ಡೆವಲಪರ್ ಈಗ ರಾಪಿಡೋ ಡ್ರೈವರ್ !

ಕಂಪೆನಿಗಳಲ್ಲಿ ಹೆಚ್ಚುತ್ತಿದೆ ವಜಾಗೊಳಿಸುವ ಸಂಪ್ರದಾಯ: ಇತ್ತೀಚಿನ ದಿನಗಳಲ್ಲಿಈ ವಜಾಗೊಳಿಸುವ ಪ್ರಕ್ರಿಯೆ ಜನರ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಈ ಮೂಲಕ ಉತ್ತಮ ಕೌಶಲ್ಯ ಹೊಂದಿರುವವರು ಸಹ ಅಗತ್ಯ ಕೆಲಸವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅದರಂತೆ HCL ನಲ್ಲಿ ಇತ್ತೀಚೆಗಷ್ಟೇ ವಜಾಗೊಂಡಿರುವ ಸಾಫ್ಟ್‌ವೇರ್ ಡೆವಲಪರ್ ಶ್ರೀನಿವಾಸ್ ರಾಪೋಲು ಎಂಬುವರು ಇದೀಗ ರಾಪಿಡೋ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ.

ಎಸಿ ರೂಂ ನಲ್ಲಿ ಲ್ಯಾಪ್‌ಟಾಪ್‌ ಮೇಲೆ ಕೈ ಬೆರಳಾಡಿಸುತ್ತಿದ್ದ ಇವರು ಇದೀಗ ಬೈಕ್‌ ಹ್ಯಾಂಡಲ್‌ ಹಿಡಿದುಕೊಂಡು ಜೀವನ ನಿರ್ವಹಣೆ ಮಾಡುವಲ್ಲಿ ಸಂತಸಗೊಂಡಿದ್ದಾರೆ. ಕೆಲಸ ಹೋಯ್ತು ಎಂದು ಇವರು ನಿರಾಶೆಗೊಂಡಿಲ್ಲ. ಜೊತೆಗೆ ಈಗಿರುವ ಅನುಭವದ ಆಧಾರದ ಮೇಲೆ ಇನ್ನೂ ಉತ್ತಮವಾದ ಕೆಲಸ ಮಾಡುವ ಭರವಸೆಯಲ್ಲಿದ್ದಾರೆ. ಅದಾಗ್ಯೂ ರಾಪಿಡೋನಲ್ಲಿ ಯಾಕೆ ಇವರು ಕೆಲಸ ಮಾಡಬೇಕು?, ಬೇರೆ ಮಾಡಬಹುಹುದಿತ್ತಲ್ಲ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಬನ್ನಿ ಅದಕ್ಕೂ ರಾಪೋಲು ಅವರು ಉತ್ತಮವಾದ ಉತ್ತರ ನೀಡಿದ್ದಾರೆ.

ಬೆಂಗಳೂರಿನ ಸುತ್ತಲೂ ಈ ಮೂಲಕ ಸಂಚರಿಸುವ ಮಾಡುವ ಹಿನ್ನೆಲೆ ಜಾವಾ ಸಂಬಂಧಿ ಉದ್ಯೋಗಾವಕಾಶಗಳನ್ನು ಹುಡುಕಬಹುದು ಎಂಬುದು ಇವರವಾದ. ಈ ಮೂಲಕ ಯಾರೇ ಇವರ ಬೈಕ್‌ ಹತ್ತಿದರೂ ಸಹ ಅವರ ಬಳಿ ಉದ್ಯೋಗ ಸಂಬಂಧ ಎಲ್ಲಾ ಮಾಹಿತಿಯಗಳನ್ನು ಪಡೆದುಕೊಳ್ಳುತ್ತಿದ್ದಾರಂತೆ. ಇನ್ನು ಒಮ್ಮೆ ರಾಪೋಲು ಅವರು ಲವ್ನೀಶ್ ಧೀರ್ ಎಂಬುವ ಟೆಕ್ಕಿಯನ್ನು ಭೇಟಿಯಾಗಿದ್ದು, ರಾಪೋಲು ಅವರ ಸ್ಟೋರಿಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಇನ್ನೊಬ್ಬ ಟೆಕ್ಕಿಗೆ ಬೇರೆ ದಾರಿ ಸಿಗಬಹುದೇ ಎಂದು ಬರೆದುಕೊಂಡಿದ್ದಾರೆ.

ನನ್ನ ರಾಪಿಡೋ ಚಾಲಕ ಇತ್ತೀಚೆಗೆ HCL ನಲ್ಲಿ ಆದ ವಜಾ ಪ್ರಕ್ರಿಯೆಯಿಂದ ಕೆಲಸ ಕಳೆದಿಕೊಂಡಿದ್ದಾರೆ. ಇದಾದ ನಂತರ ಬೆಂಗಳೂರಿನ ಸುತ್ತ ಮುತ್ತ ಎಲ್ಲಾದರೂ ಜಾವಾ ಡೆವಲಪರ್ ಓಪನಿಂಗ್‌ಗಳಿಗೆ ಸರ್ಚ್‌ ಮಾಡುತ್ತಿದ್ದಾರೆ. ಇದಕ್ಕಾಗಿಯೇ ರಾಪಿಡೋ ವೃತ್ತಿ ಆಯ್ದುಕೊಂಡಿದ್ದಾರೆ ಎಂದು ಧೀರ್ ಅವರು ಬರೆದುಕೊಂಡಿದ್ದಾರೆ. ಜೊತೆಗೆ ಇವರಿಗೆ ಕೆಲಸ ನೀಡುವ ಮನಸ್ಸು ಇರುವವರು ಇವರ ರೆಸ್ಯೂಮ್‌ ಕೇಳಿ ಪಡೆದುಕೊಳ್ಳಬಹುದು. ಜೊತೆಗೆ ರಾಪೋಲು ಅವರನ್ನೂ ಸಂಪರ್ಕಿಸಬಹುದು ಎಂದು ಉಲ್ಲೇಖಿಸಿದ್ದಾರೆ.

ಜಗತ್ತಿನಲ್ಲಿ ಎಐ ಅಭಿವೃದ್ಧಿ ಆಗುತ್ತಿದ್ದಂತೆ ಮಾನವರ ಉದ್ಯೋಗಗಳಿಗೆ ಕತ್ತರಿ ಬೀಳುತ್ತಿದೆ. ಅದರಂತೆ 34 ವರ್ಷದ ಎರಿಕ್ ಫೆಯಿನ್ ಇತ್ತೀಚೆಗೆ ವಾಷಿಂಗ್ಟನ್ ಪೋಸ್ಟ್‌ಗೆ ಪ್ರತಿಕ್ರಿಯಿಸಿ ಚಾಟ್‌ಜಿಪಿಟಿ ತನ್ನ ಸ್ಥಾನವನ್ನು ಕಳೆದುಕೊಳ್ಳುವಂತೆ ಮಾಡಿದೆ. ಈಗ ಕುಟುಂಬವನ್ನು ಪೋಷಿಸಲು ಸಾಕಷ್ಟು ಸಂಪಾದಿಸಲು ಆಗುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದರು. ಇದೇ ರೀತಿಯ ಘಟನೆಗಳು ಜಗತ್ತಿನಾದ್ಯಂತ ಸಂಭವಿಸುತ್ತಿದ್ದು, ಈ ಮೂಲಕ ಎಷ್ಟೇ ಓದಿದರೂ ಕೆಲವರಿಗೆ ಕೆಲಸವೇ ಇಲ್ಲದೆ ಜೀವನವನ್ನು ಸಂಕಷ್ಟದಲ್ಲಿ ದೂಡುವಂತಾಗಿದೆ.

ಇಷ್ಟು ಮಾತ್ರವಲ್ಲದೆ ಕಂಟೆಂಟ್‌ ರೈಟರ್ಸ್‌ಗಳ ಕೆಲಸವನ್ನೂ ಸಹ ಈ ಚಾಟ್‌ಜಿಪಿಟಿ ಕಿತ್ತುಕೊಳ್ಳುತ್ತಿದ್ದು, ಇದರಿಂದಾಗಿ ಈ ಕೆಲಸವನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದವರು ಇದೀಗ ಬೇರೆ ಕೆಲಸದತ್ತ ಗಮನಹರಿಸುವಂತಾಗಿದೆ. ಯಾಕೆಂದರೆ ಚಾಟ್‌ಜಿಪಿಟಿ ಯಾವುದೇ ವಿಷಯದ ಮೇಲೆ ಉತ್ತಮವಾದ ಕಂಟೆಂಟ್‌ಗಳನ್ನು ಕ್ರಿಯೇಟ್‌ ಮಾಡುತ್ತಿದ್ದು, ಹಲವಾರು ಕಂಪೆನಿಗಳು ಈಗ ಇದನ್ನೇ ಬಳಕೆ ಮಾಡಲು ಮುಂದಾಗಿವೆ.

Best Mobiles in India

English summary
A recently fired software developer at a leading tech company HCL is now working as a Rapido driver.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+