Online fraud: ಮೈಸೂರು ಮೂಲದ ವ್ಯಕ್ತಿಗೆ ಆನ್‌ಲೈನ್ ವಂಚನೆ! ನಿಮ್ಮ ಹಣ ಸೇಫ್ ಆಗಿರಬೇಕು ಅಂದರೆ ಈ ಕೆಲಸ ಮಾಡಿ
ಆನ್‌ಲೈನ್ ವಂಚನೆ (Online fraud) ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ರೀತಿಯ ವಂಚನೆಗಳಿಗೆ ಇಂತಹುದೇ ಎಂಬ ವ್ಯಾಪ್ತಿ ಪ್ರದೇಶ ಅನ್ನೋದು ಇಲ್ಲ. ಈ ಕಾರಣಕ್ಕಾಗಿಯೇ ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆಯ ಸರ್ಕಾರಿ ನೌಕರರೊಬ್ಬರು ಆನ್‌ಲೈನ್ ವಂಚನೆಗೆ ಒಳಗಾಗಿದ್ದಾರೆ. ಇದು ಈಗ ಆ ಭಾಗದ ಜನರಿಗೆ ಆತಂಕ ಉಂಟಾಗುವಂತೆ ಮಾಡಿದೆ.
ಹೌದು, ಆನ್‌ಲೈನ್ ವಂಚನೆಗೆ ಫುಲ್ ಸ್ಟಾಪ್ ಇಡಲು ಸಾಧ್ಯವಿಲ್ಲ. ಇದು ಪೊಲೀಸರಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಕಾರಣಕ್ಕೆ ಜನರಿಗೆ ಆನ್‌ಲೈನ್ ವಂಚನೆ ಸಂಬಂಧ ಆಗಾಗ್ಗೆ ಎಚ್ಚರಿಕೆಗಳನ್ನು ನೀಡುತ್ತಲೇ ಇರುತ್ತಾರೆ. ಅದಾಗ್ಯೂ ಕೆಲವರು ಇದರಿಂದ ಎಚ್ಚೆತ್ತುಕೊಳ್ಳದ ಪರಿಣಾಮ ಹಣ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಇಂತಹುದೇ ಘಟನೆ ಈಗ ಮೈಸೂರಿನಲ್ಲಿ ಜರುಗಿದೆ. ಹಾಗಿದ್ರೆ, ಈ ಆನ್‌ಲೈನ್ ಹಣದ ವಂಚನೆಯನ್ನು ಹೇಗೆ ಮಾಡಲಾಗಿದೆ?, ಈ ರೀತಿಯ ವಂಚನೆಗಳಿಂದ ಎಚ್ಚೆತ್ತುಕೊಳ್ಳುವುದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಮೈಸೂರು ಮೂಲಕದ ವ್ಯಕ್ತಿಗೆ ಮೋಸ: ಮೈಸೂರು (mysore) ಜಿಲ್ಲೆಯ ಹೆಚ್ ಡಿ ಕೋಟೆ (HD Kote) ತಾಲೂಕಿನಲ್ಲಿ ಕೆಎಸ್‌ಆರ್‌ಟಿಸಿ (KSRTC) ನೌಕರನಾಗಿ ಕೆಲಸ ಮಾಡುವ ರವಿ ಎಂಬುವರು ಹಣ ಕಳೆದುಕೊಂಡಿದ್ದಾರೆ. ಈ ಸಂಬಂಧ ಸ್ಥಳೀಯ ಪತ್ರಿಕೆ ಆಂದೋಲನ ಈ ಬಗ್ಗೆ ವರದಿ ಮಾಡಿದೆ. ರವಿ ಎಂಬುವರು ಎಸ್‌ಬಿಐ ಖಾತೆ ಹೊಂದಿದ್ದು, ಸುಲಭ ವ್ಯವಹಾರಕ್ಕೆ ಯೋನೋ ಆಪ್ ಬಳಕೆ ಮಾಡುತ್ತಿದ್ದರಂತೆ. ಈ ಆಪ್ ಅನ್ನೇ ಹ್ಯಾಕ್ ಮಾಡಿರುವ ಆನ್‌ಲೈನ್ ಸ್ಕ್ಯಾಮರ್‌ಗಳು ಇವರ ಖಾತೆಯಲ್ಲಿದ್ದ ಹಣವನ್ನು ಬೇರೆ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರಂತೆ.
ರವಿ ಅವರು ತಮ್ಮ ಖಾತೆಯಲ್ಲಿ 35 ಸಾವಿರ ರೂ.ಗಳನ್ನು ಇಟ್ಟಿದ್ದು, ಇದರಲ್ಲಿ 30 ಸಾವಿರ ರೂ.ಗಳನ್ನು ಹೊರರಾಜ್ಯದ ಸ್ಲ್ಯಾಮರ್‌ಗಳು ಆಪ್‌ಗೆ ಎಂಟ್ರಿ ಪಡೆಯುವ ಮೂಲಕ ಹಣ ದೋಚಿದ್ದಾರೆ ಎಂದು ಹೇಳಲಾಗಿದೆ. ಇದ್ದಕ್ಕಿಂದ್ದತೆ ಒಮ್ಮೆ 10 ಸಾವಿರ ಹಾಗೂ ಮತ್ತೊಮ್ಮೆ 20 ಸಾವಿರ ಹಣ ಡ್ರಾ ಆಗಿದೆ. ಇದರಿಂದ ಆತಂಕಗೊಂಡ ಅವರು ತಕ್ಷಣವೇ ಬ್ಯಾಂಕ್ ಅಧಿಕಾರಿಗಳ ಬಳಿ ಹೋಗಿ ವಿಚಾರಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ರವಿ ಅವರು ಪೊಲೀಸರಿಗೆ ದೂರ ಸಲ್ಲಿಕೆ ಮಾಡಿದ್ದಾರೆ.

ನಿಮಗೂ ಈ ರೀತಿ ಆನ್‌ಲೈನ್ ವಂಚನೆ ಆಗಬಾರದು ಎಂದರೆ ಹೀಗೆ ಮಾಡಿ: ಯಾವುದೇ ಈ ರೀತಿಯ ಘಟನೆಗಳು ಮುಂದಿನ ದಿನಗಳಲ್ಲಿ ಸಂಭವಿಸಬಾರದು ಎಂದರೆ ನೀವೇ ಸ್ವತಃ ಎಚ್ಚೆತ್ತುಕೊಳ್ಳಬೇಕಿದೆ. ಇದಕ್ಕೆ ನೂರಾರು ಮಾರ್ಗಗಳಿವೆ. ಆದರೆ, ಕೆಲವರು ತಿಳಿಯದೇ ಸ್ಕ್ಯಾಮರ್‌ಗಳ ಬಲೆಗೆ ಬಿದ್ದು ಈ ರೀತಿಯಲ್ಲಿ ಮೋಸ ಹೋಗುತ್ತಿದ್ದಾರೆ. ಹಾಗಿದ್ರೆ, ಬನ್ನಿ ಈ ರೀತಿಯ ವಂಚನೆಗಳಿಂದ ಪಾರಾಗುವುದು ಹೇಗೆ ಅನ್ನೋದನ್ನು ತಿಳಿಯೋಣ.
-ಬ್ಯಾಂಕಿಂಗ್ ವಿಚಾರ ಎಂದಿಗೂ ಖಾಸಗಿಯಾಗಿ ಇರಲಿ. ಇದರೊಂದಿಗೆ ನೀವ ಯಾವುದೇ ಅಪೇಕ್ಷಿಸದ ಕರೆಗಳು ಅಥವಾ ಮೆಸೆಜ್‌ಗಳ ಬಗ್ಗೆ ಸಂಶಯ ಇಟ್ಟುಕೊಳ್ಳಿ. ಇಲ್ಲವಾದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುವ ಪೂರ ಹಣವನ್ನು ಎಗರಿಸಿಬಿಡುತ್ತಾರೆ. ಜೊತೆಗೆ ಪರಿಶೀಲಿಸಿದ ಆಪ್‌ಗಳು ಮತ್ತು ಅಧಿಕೃತ ವೆಬ್‌ಸೈಟ್‌ಗಳನ್ನು ಮಾತ್ರ ಬಳಕೆ ಮಾಡಿಕೊಂಡು ಬ್ಯಾಂಕಿಂಗ್ ವ್ಯವಹಾರ ಮಾಡಿ.
- ನಿಮ್ಮ ಡಿವೈಸ್‌ನಲ್ಲಿ ಫೈರ್‌ವಾಲ್ ಮತ್ತು ಆಂಟಿವೈರಸ್ ಸಾಫ್ಟ್‌ವೇರ್ ಅನ್ನು ಬಳಕೆ ಮಾಡುವುದನ್ನು ರೂಢಿಸಿಕೊಳ್ಳಿ. ಎಲ್ಲಕ್ಕಿಂತ ಮಿಗಿಲಾಗಿ ನಿಮ್ಮ ಡಿವೈಸ್ ಅನ್ನು ಆಗಾಗ್ಗೆ ಅಪ್‌ಡೇಟ್ ಮಾಡುವ ಕೆಲಸ ಮಾಡಿ. ಈ ಮೂಲಕ ಹೆಚ್ಚಿನ ಸುರಕ್ಷತೆಯನ್ನು ನಿಮ್ಮ ಫೋನ್‌ನಲ್ಲಿ ಕಾಣಬಹುದು. ಇಲ್ಲವಾದರೆ ನಿಮ್ಮ ಫೋನ್ ಸುಲಭವಾಗಿ ಹ್ಯಾಕರ್‌ಗಳ ಕಂಟ್ರೋಲ್‌ಗೆ ಹೋಗುತ್ತದೆ.

-ಎಲ್ಲಕ್ಕಿಂತ ಮಿಗಿಲಾಗಿ ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್ ಮತ್ತು ವಹಿವಾಟಿನ ಹಿಸ್ಟರಿಯನ್ನು ಆಗಾಗ್ಗೆ ಪರಿಶೀಲನೆ ಮಾಡಿ. ಒಂದು ರೂ. ಕಡಿತ ಆಗಿದ್ದರೂ ಸಹ ಅದು ಯಾವ ಕಾರಣಕ್ಕೆ ಕಡಿತ ಆಗಿದೆ ಎಂದು ತಿಳಿದುಕೊಳ್ಳಿ. ಈ ವೇಳೆ ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ತಕ್ಷಣವೇ ನಿಮ್ಮ ಬ್ಯಾಂಕ್‌ಗೆ ವರದಿ ಮಾಡಿ.
- ಇದರೊಂದಿಗೆ ಮೆಸೆಜಿಂಗ್ ಆಪ್‌ನಲ್ಲಿ ಕಂಡುಬರುವ ಯಾವುದೇ ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ. ಅದರಲ್ಲೂ ಅನಾಮಿಕ ವ್ಯಕ್ತಿಯಿಂದ ಬರುವ ಇಮೇಲ್ ಲಗತ್ತುಗಳನ್ನು ಓಪನ್ ಮಾಡಲೇಬೇಡಿ. ಮಾಡಿದರೂ ಸಹ ಅಲ್ಲಿ ನೀಡಲಾಗುವ ಲಿಂಕ್ ಮೇಲೆ ಕ್ಲಿಕ್ ಮಾಡುವ ಕೆಲಸ ಮಾಡಬೇಡಿ.
-ಯಾವುದೇ ಪ್ರತಿಷ್ಠಿತ ಬ್ಯಾಂಕ್ ನಿಮ್ಮನ್ನು ಸಂಪರ್ಕಿಸುವುದಿಲ್ಲ ಮತ್ತು ನಿಮ್ಮ ಸಾಮಾಜಿಕ ಭದ್ರತೆ ಸಂಖ್ಯೆ, ಆನ್‌ಲೈನ್ ಖಾತೆಯ ಪಾಸ್‌ವರ್ಡ್ ಅಥವಾ ಇತರ ವೈಯಕ್ತಿಕ ಮಾಹಿತಿಯನ್ನು ಅವರು ಎಂದಿಗೂ ಕೇಳುವುದಿಲ್ಲ ಅನ್ನೋದು ನಿಮ್ಮ ಗಮನಕ್ಕೆ ಇರಲಿ. ಇದರೊಟ್ಟಿಗೆ ನೀವು ಸಾರ್ವಜನಿಕ ವೈ-ಫೈ ಬಳಕೆ ಮಾಡುವುದನ್ನು ಕಡಿಮೆ ಮಾಡಿ ಹಾಗೂ ಅಸುರಕ್ಷಿತ ವೆಬ್‌ಸೈಟ್‌ಗಳು ಮತ್ತು ವಿಶ್ವಾಸಾರ್ಹವಲ್ಲದ ಲಿಂಕ್‌ಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ.


Click it and Unblock the Notifications