Home
ಸುದ್ದಿಜಾಲ

HDFC ಬ್ಯಾಂಕ್‌ ಗ್ರಾಹಕರೇ ಗಮನಿಸಿ; ಇನ್ಮುಂದೆ ಇಂಟರ್ನೆಟ್‌ ಇಲ್ಲದೆ ಹಣ ಪಾವತಿಸಬಹುದು!

ಹೆಚ್‌ಡಿಎಫ್‌ಸಿ ಬ್ಯಾಂಕ್‌ ತನ್ನ ಗ್ರಾಹಕರಿಗೆ ಅಪ್ಲಿಕೇಶನ್‌ ಮೂಲಕ, ವೆಬ್‌ಸೈಟ್‌ ಮೂಲಕ ಹಾಗೂ ಇತರೆ ಪ್ಲಾಟ್‌ಫಾರ್ಮ್‌ ಮೂಲಕ ಬ್ಯಾಂಕಿಂಗ್ ಸೇವೆ ನೀಡುತ್ತಾ ಬರುತ್ತಿದೆ. ಅದರಲ್ಲೂ ಭಾರತದಲ್ಲಿ ಹಲವಾರು ಗ್ರಾಹಕರು ಈ ಬ್ಯಾಂಕ್ ಸೇವೆ ಪಡೆಯುತ್ತಿದ್ದು, ಇದೀಗ ಇವರೆಲ್ಲಾ ಸಂತಸ ಪಡುವ ವಿಷಯವೊಂದನ್ನು ಘೋಷಣೆ ಮಾಡಲಾಗಿದೆ. ಅದರಂತೆ ಇನ್ಮುಂದೆ ಗ್ರಾಹಕರು ಇನ್ನಷ್ಟು ಸುಲಭವಾಗಿ ಬ್ಯಾಂಕಿಂಗ್‌ ವಹಿವಾಟು ನಡೆಸಬಹುದು.

HDFC ಬ್ಯಾಂಕ್‌ ಗ್ರಾಹಕರೇ ಗಮನಿಸಿ; ಇನ್ಮುಂದೆ ಇಂಟರ್ನೆಟ್‌ ಇಲ್ಲದೆ ಹಣ ಪಾವತಿಸಿ!

ಹೌದು, ಹೆಚ್‌ಡಿಎಫ್‌ಸಿ ಬ್ಯಾಂಕ್‌ ಗ್ರಾಹಕರು ಇನ್ಮುಂದೆ ಇಂಟರ್ನೆಟ್ ಅಗತ್ಯವಿಲ್ಲದೆ ಬ್ಯಾಂಕಿಗ್‌ ವ್ಯವಹಾರ ಮಾಡಬಹುದಾಗಿದೆ. ಹಾಗೆಯೇ ಈ ರೀತಿಯ ಸೇವೆಯನ್ನು ನೀಡುತ್ತಿರುವ ಭಾರತದ ಮೊದಲ ಬ್ಯಾಂಕ್‌ ಆಗಿ ಹೆಚ್‌ಡಿಎಫ್‌ಸಿ ಗುರುತಿಸಿಕೊಳ್ಳಲಿದೆ. ಹಾಗಿದ್ರೆ, ಇಂಟರ್ನೆಟ್‌ ಇಲ್ಲದೆ ಹೇಗೆ ವ್ಯವಹಾರ ನಡೆಸಬಹುದು?, ಯಾವೆಲ್ಲಾ ಗ್ರಾಹಕರಿಗೆ ಈ ಸೌಲಭ್ಯ ಲಭ್ಯವಾಗಲಿದೆ ಎನ್ನುವ ಮಾಹಿತಿ ಇಲ್ಲಿದೆ ಓದಿರಿ.

ಆಫ್‌ಲೈನ್ ಡಿಜಿಟಲ್ ಪಾವತಿ ಪ್ಲ್ಯಾನ್‌

ಭಾರತದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಆಗಿರುವ ಹೆಚ್‌ಡಿಎಫ್‌ಸಿ ಬ್ಯಾಂಕ್ ಆಫ್‌ಲೈನ್ ಡಿಜಿಟಲ್ ಪಾವತಿ ಪೈಲಟ್ ಪ್ಲ್ಯಾನ್‌ ಅನ್ನು ಪ್ರಾರಂಭಿಸಿದ್ದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ರೆಗ್ಯುಲೇಟರಿ ಸ್ಯಾಂಡ್‌ಬಾಕ್ಸ್ ಕಾರ್ಯಕ್ರಮದ ಅಡಿಯಲ್ಲಿ ಈ ಯೋಜನೆ ಜಾರಿಯಾಗಿದೆ. ಅದರಂತೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರಂಚ್‌ಫಿಶ್‌(Crunchfish) ಸಹಭಾಗಿತ್ವದಲ್ಲಿ ಆಫ್‌ಲೈನ್‌ಪೇ ಮೋಡ್‌ ಅನ್ನು ಪರಿಚಯಿಸಲಾಗಿದೆ. ಇದರಿಂದ ಹಣವನ್ನು ಕಳುಹಿಸಲು ಹಾಗೂ ಸ್ವೀಕಾರ ಮಾಡಲು ಬಳಕೆದಾರರಿಗೆ ಇಂಟರ್ನೆಟ್‌ನ ಅಗತ್ಯ ಇರುವುದಿಲ್ಲ.

HDFC ಬ್ಯಾಂಕ್‌ ಗ್ರಾಹಕರೇ ಗಮನಿಸಿ; ಇನ್ಮುಂದೆ ಇಂಟರ್ನೆಟ್‌ ಇಲ್ಲದೆ ಹಣ ಪಾವತಿಸಿ!

ಈ ಸೌಲಭ್ಯ ಘೋಷಿಸಿದ ಮೊದಲ ಬ್ಯಾಂಕ್‌ ಹೆಚ್‌ಡಿಎಫ್‌

ಹೆಚ್‌ಡಿಎಫ್‌ಸಿ ಬ್ಯಾಂಕ್ ಈ ರೀತಿಯ ಸೌಲಭ್ಯ ನೀಡಿದ ಭಾರತದ ಮೊದಲ ಬ್ಯಾಂಕ್‌ ಆಗಿದೆ. ಈ ಮೂಲಕ ಹಣ ಪಾವತಿ ಮಾಡಲು ಕಷ್ಟಪಡುತ್ತಿದ್ದ ಭಾರತದ ಗುಡ್ಡಗಾಡಿನ ಜನರಿಗೆ, ಇಂಟರ್ನೆಟ್‌ ಸಮಸ್ಯೆ ಇರುವ ಸಣ್ಣಪುಟ್ಟ ಹಳ್ಳಿಗಳ ಜನರಿಗೆ ಡಿಜಿಟಲ್‌ ಪಾವತಿ ಮಾಡಲು ಇದು ಸಹಾಯಕವಾಗಿದೆ. ಇದಷ್ಟೇ ಅಲ್ಲದೆ, ಮೊಬೈಲ್ ನೆಟ್‌ವರ್ಕ್ ದಟ್ಟಣೆ ಇರುವ ದೊಡ್ಡ ಸಾರ್ವಜನಿಕ ಕಾರ್ಯಕ್ರಮಗಳು, ವ್ಯಾಪಾರ ಮೇಳಗಳು ಮತ್ತು ಪ್ರದರ್ಶನಗಳಲ್ಲಿ ನಗದು ರಹಿತ ವಹಿವಾಟುಗಳಿಗೆ ಈ ಪ್ಲ್ಯಾನ್‌ ಅನುಕೂಲ.

ಪಟ್ಟಣದಲ್ಲಿನ ಈ ಸ್ಥಳಗಳಿಗೆ ಅತ್ಯಾವಶ್ಯಕ

ನಗರ ಹಾಗೂ ಮಹಾನಗರಗಳಲ್ಲಿ ಅಂಡರ್‌ಗ್ರೌಂಡ್‌ ಮೆಟ್ರೋ ನಿಲ್ದಾಣಗಳು, ಪಾರ್ಕಿಂಗ್ ಸ್ಥಳಗಳು, ಚಿಲ್ಲರೆ ಅಂಗಡಿಗಳು, ವಿಮಾನಗಳು, ರೈಲುಗಳು ಮತ್ತು ಹಡಗುಗಳಂತಹ ನೆಟ್‌ವರ್ಕ್‌ ಲಭ್ಯವಾಗದ ಸ್ಥಳಗಳಲ್ಲಿ ಈ ಸೇವೆ ಉಪಯೋಗಕ್ಕೆ ಬರಲಿದೆ.

ಇನ್ನು ಸದ್ಯಕ್ಕೆ ನಾವು ನೀವೆಲ್ಲಾ ಬಳಕೆ ಮಾಡುವ ಸಾಂಪ್ರದಾಯಿ ಆನ್‌ಲೈವ್‌ ವಹಿವಾಟಿನಲ್ಲಿ ಒಬ್ಬರು ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ಇರಬೇಕಾಗುತ್ತದೆ. ಅದರಲ್ಲೂ ಏನಾದರೂ ಕಳಪೆ ಇಂಟರ್ನೆಟ್‌ ಇರುವ ಪ್ರದೇಶದಲ್ಲಿ ಹಣ ಪಾವತಿ ಮಾಡಲು ಮುಂದಾದರೆ ವಿಫಲ ಫಲಿತಾಂಶ ಲಭ್ಯವಾಗುತ್ತದೆ. ಆದರೆ, ಈ ಆಫ್‌ಲೈನ್‌ ಪೇ ಮೂಲಕ ಯಾವುದೇ ಸ್ಥಳದಲ್ಲಿದ್ದರೂ ಸಹ ಯಾವಾಗಲಾದರೂ ಸಹ ಗ್ರಾಹಕರು ಇಂಟರ್ನೆಟ್‌ ಸಹಾಯವಿಲ್ಲದೆ ಪಾವತಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಬಹುದಾಗಿದೆ.

HDFC ಬ್ಯಾಂಕ್‌ ಗ್ರಾಹಕರೇ ಗಮನಿಸಿ; ಇನ್ಮುಂದೆ ಇಂಟರ್ನೆಟ್‌ ಇಲ್ಲದೆ ಹಣ ಪಾವತಿಸಿ!

ಆಫ್‌ಲೈನ್‌ ಪೇ ಮೂಲಕ ವಹಿವಾಟು ನಡೆಸುವ ಗ್ರಾಹಕರು ಯಾವಾಗ ಆನ್‌ಲೈನ್‌ಗೆ ಮರಳುತ್ತಾರೆ ಆ ವೇಳೆ ಅವರ ಯಾವುದೇ ವಹಿವಾಟುಗಳನ್ನು ಇತ್ಯರ್ಥಗೊಳಿಸಲಾಗುತ್ತದೆ ಎಂದು ಹೆಚ್‌ಡಿಎಫ್‌ಸಿ ಬ್ಯಾಂಕ್ ಮಾಹಿತಿ ನೀಡಿದ್ದು, ಇದನ್ನು ನಾಲ್ಕು ತಿಂಗಳವರೆಗೆ ಪ್ರಾಯೋಗಿಕವಾಗಿ ಬಳಕೆ ಮಾಡಲಾಗುತ್ತದೆ. ಜೊತೆಗೆ ಇತರ ಬ್ಯಾಂಕ್‌ಗಳ ಬಳಕೆದಾರರಿಗೆ ಈ ಸೇವೆಯು ಆಮಂತ್ರಣ ಲಿಂಕ್ ಮೂಲಕ ಲಭ್ಯವಿರಲಿದ್ದು, ಸದ್ಯಕ್ಕೆ ಭಾರತದಾದ್ಯಂತ 16 ಕ್ಕೂ ಹೆಚ್ಚಿನ ನಗರಗಳು ಮತ್ತು ಪಟ್ಟಣಗಳಲ್ಲಿನ ಗ್ರಾಹಕರು ಇದರ ಸೌಲಭ್ಯ ಪಡೆಯಬಹುದು ಎಂದು ತಿಳಿಸಿದೆ.

ಇನ್ನು ನಿಯಂತ್ರಕ ಸ್ಯಾಂಡ್‌ಬಾಕ್ಸ್ ಕಾರ್ಯಕ್ರಮದ ಭಾಗವಾಗಿ ಸೆಪ್ಟೆಂಬರ್ 2022 ರಲ್ಲಿ ಹೆಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಕ್ರಂಚ್‌ಫಿಶ್‌ ಅಭಿವೃದ್ಧಿಪಡಿಸಿದ ಆಪ್‌ ಅನ್ನು ಆರ್‌ಬಿಐ ಅನುಮೋದಿಸಿದ್ದು, ಪ್ರಾಯೋಗಿಕವಾಗಿ ನಡೆಸುತ್ತಿರುವ ವಹಿವಾಟುಗಳು ಯಶಸ್ಸು ಕಂಡರೆ ಮುಂದಿನ ದಿನಗಳಲ್ಲಿ ಆಫ್‌ಲೈನ್ ಡಿಜಿಟಲ್ ಪಾವತಿಗಳಲ್ಲಿ ಹೊಸ ಯುಗವೇ ಆರಂಭವಾಗುವುದರಲ್ಲಿ ಎರಡು ಮಾತಿಲ್ಲ.

ಎಷ್ಟು ಹಣ ಪಾವತಿ ಮಾಡಬಹುದು?

ಈ ವಿಷಯ ಖಂಡಿತವಾಗಿಯೂ ನಿಮ್ಮ ಮನಸ್ಸಲ್ಲಿ ಮೂಡಿರುತ್ತದೆ. ಯಾಕೆಂದರೆ, ಹಣಪಾವತಿ ವಿಷಯಕ್ಕೆ ಬಂದಾಗ 10 ರೂ. ನಿಂದ ಹಿಡಿದು ಲಕ್ಷಾಂತರ ಹಣದ ವಹಿವಾಟನ್ನು ನಡೆಸಲಾಗುತ್ತದೆ.ಆದರೆ, ಈ ಆಫ್‌ಲೈನ್ ಪೇ ಪ್ರಕ್ರಿಯೆಯಲ್ಲಿ ಗ್ರಾಹಕರು 200 ರೂ. ಗಳ ವರೆಗೆ ಮಾತ್ರ ಹಣವನ್ನು ಪಾವತಿ ಮಾಡಲು ಸಾಧ್ಯವಾಗುತ್ತದೆ.

Best Mobiles in India

English summary
offline digital payments pilot project has been launched by HDFC Bank, the largest private sector bank in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+