ಹೊಸ ಫೋನ್ ಖರೀದಿಸುವ ಗ್ರಾಹಕರಿಗೆ ಖುಷಿ!..ಈ ಫೋನ್ ಬೆಲೆಯಲ್ಲಿ ಇಳಿಕೆ!
ಬಜೆಟ್ ಬೆಲೆಯ ಫೋನ್‌ಗಳ ಮೂಲಕ ಜನಪ್ರಿಯತೆ ಪಡೆದಿರುವ ರಿಯಲ್‌ಮಿ ಮೊಬೈಲ್ ಸಂಸ್ಥೆಯು ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ. ಸಂಸ್ಥೆಯ ನಾರ್ಜೋ ಸರಣಿಯಲ್ಲಿ ಇತ್ತೀಚಿಗೆ ಸೇರ್ಪಡೆಯಾದ 'ರಿಯಲ್‌ಮಿ ನಾರ್ಜೊ N55' ಫೋನ್ ಫೀಚರ್ಸ್ ತನ್ನ ವರ್ಗದಲ್ಲೇ ಆಕರ್ಷಕ ಎನಿಸಿವೆ. ಖುಷಿ ವಿಷಯ ಅಂದ್ರೆ ಈ ಮೊಬೈಲ್ ಇದೀಗ ಭರ್ಜರಿ ಬೆಲೆ ಇಳಿಕೆ ಕಂಡಿದೆ.
ಹೌದು, ಅಮೆಜಾನ್ ಇ ಕಾಮರ್ಸ್ ರಿಯಲ್‌ಮಿ ಕಂಪನಿಯ ರಿಯಲ್‌ಮಿ ನಾರ್ಜೊ N55 ಮೊಬೈಲ್ ಶೇ. 27% ರಷ್ಟು ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. ಈ ಫೋನ್ 6GB + 128 GB ಸ್ಟೋರೇಜ್‌ನ ವೇರಿಯಂಟ್ 14,999 ರೂ. ಬೆಲೆಯನ್ನು ಪಡೆದಿದ್ದು, ಸದ್ಯ ಆಫರ್‌ನಲ್ಲಿ 10,999 ರೂ. ಗಳ ಡಿಸ್ಕೌಂಟ್ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. ಇದರೊಂದಿಗೆ ಇತರೆ ಕೊಡುಗೆ ಸಹ ಲಭ್ಯ ಇವೆ.

ಅಂದಹಾಗೆ ಈ ಫೋನ್ ಮೀಡಿಯಾ ಟೆಕ್ ಹಿಲಿಯೋ G88 SoC ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಇನ್ನು ಈ ಮೊಬೈಲ್ ಫೋನ್ ಲೈಮ್, ಗ್ರ್ಯಾಫೈಟ್ ಮತ್ತು ವೈಲೆಟ್ ಕಲರ್ ಆಯ್ಕೆಗಳನ್ನು ಪಡೆದುಕೊಂಡಿದೆ. ಇನ್ನುಳಿಂದತೆ ರಿಯಲ್‌ಮಿ ನಾರ್ಜೊ N55 ಮೊಬೈಲ್ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

LCD ಡಿಸ್‌ಪ್ಲೇ ರಚನೆ ಸೌಲಭ್ಯ
ರಿಯಲ್‌ಮಿ ನಾರ್ಜೊ N55 ಮೊಬೈಲ್ 6.72 ಇಂಚಿನ IPS LCD ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಹೊಂದಿದ್ದು, ಇದರ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಅನ್ನು ಸಪೋರ್ಟ್ ಮಾಡಲಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ ಕ್ಯಾಮರಾ ಪಂಚ್-ಹೋಲ್ ಕಟೌಟ್ ಪಡೆದಿದೆ.
ಪ್ರೊಸೆಸರ್ ಕಾರ್ಯವೈಖರಿ ಏನಿದೆ
ರಿಯಲ್‌ಮಿ ನಾರ್ಜೊ N55 ಫೋನ್ ಮೀಡಿಯಾ ಟೆಕ್ ಹಿಲಿಯೋ G88 SoC ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದು ಆಂಡ್ರಾಯ್ಡ್ 13 ಆಧಾರಿತ ರಿಯಲ್‌ಮಿ UI ಔಟ್-ಆಫ್-ದಿ-ಬಾಕ್ಸ್ ಸಪೋರ್ಟ ಪಡೆದಿದೆ. ಹಾಗೆಯೇ 4GB + 64GB ಮತ್ತು 6GB RAM + 128GB ಸ್ಟೋರೇಜ್ ಸಾಮರ್ಥ್ಯದ ಎರಡು ವೇರಿಯೆಂಟ್ ಆಯ್ಕೆ ಹೊಂದಿದೆ.

ಡ್ಯುಯಲ್ ಕ್ಯಾಮೆರಾ ಸೆನ್ಸಾರ್ ರಚನೆ
ರಿಯಲ್‌ಮಿ ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಇದರ ಮೊದಲ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಪಡೆದಿದೆ. ಇನ್ನು ಎರಡನೇಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ. ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒದಗಿಸಲಾಗಿದೆ.
ದೀರ್ಘ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ
ರಿಯಲ್‌ಮಿ ನಾರ್ಜೊ N55 ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆದುಕೊಂಡಿದೆ. ಇದಕ್ಕೆ ಪೂರಕವಾಗಿ 33W ಸೂಪರ್‌ವೂಕ್ ವೇಗದ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡಲಿದೆ. ಇದರಿಂದ ಈ ಸ್ಮಾರ್ಟ್‌ಫೋನ್ ಕೇವಲ 29 ನಿಮಿಷಗಳಲ್ಲಿ 0 ದಿಂದ 50% ವರೆಗೆ ಚಾರ್ಜ್ ಮಾಡಬಹುದು.
ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೌಲಭ್ಯ ಇದೆ. ಇದರೊಂದಿಗೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಪಡೆದಿದೆ. ಈ ಫೋನ್ 4GB + 64GB ಮತ್ತು 6GB RAM + 128GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. ಗ್ರಾಹಕರು ಇದನ್ನು ಬ್ಲೂ ಹಾಗೂ ಬ್ಲ್ಯಾಕ್ ಕಲರ್ ಆಯ್ಕೆಯಲ್ಲಿ ಖರೀದಿ ಮಾಡಬಹುದು.


Click it and Unblock the Notifications








