ನಿಮ್ಮದೇ ಸ್ಮಾರ್ಟ್‌ಫೋನ್ ನಿಮ್ಮ ಜೀವರಕ್ಷಕ

  By Shwetha
  |

  ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಹೆಚ್ಚು ಜನಜನಿತವಾಗಿರುವ ಅಂತೆಯೇ ಅತ್ಯಗತ್ಯವಾಗಿರುವ ಪರಿಕರವಾಗಿ ಮಾರ್ಪಟ್ಟಿದೆ. ನಿಮ್ಮ ಫೋನ್‌ನೊಂದಿಗೆ ಪೇರ್ ಆಗುವ ಕೆಲವೊಂದು ಡಿವೈಸ್‌ಗಳನ್ನು ಖರೀದಿಸುವುದು ಇಂದು ಟ್ರೆಂಡ್ ಆಗಿ ಮಾರ್ಪಡುತ್ತಿದೆ. ಹೌದು ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಕೆಲವೊಂದು ಡಿವೈಸ್‌ಗಳಿದ್ದು ಇವುಗಳನ್ನು ನಿಮ್ಮ ಫೋನ್‌ನಿಂದಲೇ ನಿಯಂತ್ರಿಸಬಹುದಾಗಿದೆ.

  ಓದಿರಿ: ಫ್ಲ್ಯಾಶ್ ಸೇಲ್ ಧಮಾಕಾದಲ್ಲಿ ಬಳಕೆದಾರರ ಮನಗೆದ್ದ ಫೋನ್ಸ್

  ಇಂದಿನ ಲೇಖನದಲ್ಲಿ ಇಂತಹುದೇ ಡಿವೈಸ್‌ಗಳ ಪರಿಚಯವನ್ನು ನಾವು ಮಾಡುತ್ತಿದ್ದು ಈ ಡಿವೈಸ್‌ಗಳು ನಿಮಗೆ ಹೇಗೆ ಪ್ರಯೋಜನಕಾರಿಯಾಗಿದೆ ಮತ್ತು ಅವುಗಳನ್ನು ಸ್ಮಾರ್ಟ್‌ಫೋನ್‌ನಿಂದ ನಿಯಂತ್ರಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಸೆನ್ಸಾರ್ ಡ್ರೋನ್

  ಇದೊಂದು ಸೆನ್ಸಾರ್ ಕಂಪ್ಯೂಟರ್ ಆಗಿದ್ದು ನಿಮ್ಮ ಪರಿಸರದ ಸಂಪೂರ್ಣ ಮಾಹಿತಿಯನ್ನು ಈ ಡಿವೈಸ್ ನೀಡುತ್ತದೆ. ಅಂದರೆ ಗಾಳಿಯ ಗುಣಮಟ್ಟ, ಗ್ಯಾಸ್ ಲೀಕ್, ತಾಪಮಾನ ಹೀಗೆ.

  ಲೊಕೇಟಿಂಗ್ ಡಿವೈಸ್

  ನಿಮ್ಮ ಕಳೆದು ಹೋದ ಡಿವೈಸ್ ಅನ್ನು ಪತ್ತೆಹಚ್ಚುವ ಕಲೆಗಾರಿಕೆ ಈ ಅಪ್ಲಿಕೇಶನ್‌ಗಿದೆ. ನಿಮ್ಮ ಕೀಗೆ ಡಿವೈಸ್ ಅನ್ನು ಸಂಪರ್ಕಪಡಿಸಿ ಮತ್ತು ಐಫೋನ್‌ನಲ್ಲಿ ಬಟನ್ ಒತ್ತಿರಿ.

  ಪಾವತಿಗಳು

  ನಿಮ್ಮ ಫೋನ್‌ನ ಮೂಲಕ ಪಾವತಿ ಮಾಡುವ ವಿಶೇಷ ತಂತ್ರಜ್ಞಾನಕ್ಕೆ ನಾವಿಂದು ಅಡಿಇಡುತ್ತಿದ್ದೇವೆ. ಯಾವುದೇ ಕ್ರೆಡಿಟ್ ಕಾರ್ಡ್ ಪಾವತಿಯನ್ನು ಯಾವಾಗ ಬೇಕಾದರೂ ಇದನ್ನು ಬಳಸಿ ಮಾಡಬಹುದಾಗಿದೆ. ಖರೀದಿದಾರರು ಸ್ಮಾರ್ಟ್‌ಫೋನ್‌ನಲ್ಲೇ ಸಹಿ ಮಾಡಿ ಯಾವುದೇ ರೀತಿಯ ಮೋಸ ತಮಗುಂಟಾಗುವುದನ್ನು ತಪ್ಪಿಸಿಕೊಳ್ಳಬಹುದಾಗಿದೆ.

  ಕಾರ್ಸ್

  ಸ್ಮಾರ್ಟ್ ಸ್ಟಾರ್ಟ್ ಡಿವೈಸ್ ಬಳಸಿ ನಿಮ್ಮ ಕಾರಿನ ರಿಮೋಟ್ ಕೀ ಮಾಡುವ ಕೆಲಸಗಳನ್ನು ಮಾಡಿಸಿಕೊಳ್ಳಬಹುದಾಗಿದೆ. ಕಾರಿನ ಡೋರ್ ಲಾಕ್ ಮಾಡುವುದು, ಮೊದಲಾದವನ್ನು ಸ್ಮಾರ್ಟ್‌ಫೋನ್ ಬಟನ್ ಒತ್ತಿ ನಿರ್ವಹಿಸಬಹುದಾಗಿದೆ.

  ಥರ್ಮೊಸ್ಟಾಟ್ಸ್

  ನೆಸ್ಟ್ ಥರ್ಮೊಸ್ಟಾಟ್ಸ್ ಅನ್ನು ನಿಮ್ಮ ಐಫೋನ್ ಮೂಲಕ ಎಲ್ಲಿಂದ ಬೇಕಾದರೂ ನಿಯಂತ್ರಿಸಬಹುದು ವೈಫೈ ಸಂಪರ್ಕದ ಮೂಲಕ ಇಂಟರ್ನೆಟ್‌ಗೆ ಸಂಪರ್ಕವನ್ನು ಬಳಸಿಕೊಳ್ಳುತ್ತದೆ.

  ಚೈಲ್ಡ್ ಟ್ರ್ಯಾಕಿಂಗ್

  ನಿಮ್ಮ ಮಗುವಿನ ರಕ್ಷಣೆಗಾಗಿ ಹೇಳಿಮಾಡಿಸಿರುವ ಡಿವೈಸ್ ಇದಾಗಿದ್ದು ಈ ಗ್ಯಾಜೆಟ್ ಧರಿಸಿರುವ ನಿಮ್ಮ ಮಗು ನಿಮ್ಮಿಂದ ಸ್ವಲ್ಪ ದೂರ ಕ್ರಮಿಸಿದರೂ ಕೂಡ ಸ್ಮಾರ್ಟ್‌ಫೋನ್‌ಗೆ ಅಧಿಸೂಚನೆಯನ್ನು ಕಳುಹಿಸುತ್ತದೆ.

  ಕ್ರೆಡಿಟ್ ಕಾರ್ಡ್ಸ್ ಮತ್ತು ಗಿಫ್ಟ್ ಕಾರ್ಡ್ಸ್

  ಜಿಯೋಡ್ ನಿಮ್ಮ ಎಲ್ಲಾ ಕ್ರೆಡಿಟ್ ಕಾರ್ಡ್‌ಗಳು, ಮೆಂಬರ್ ಶಿಪ್ ಕಾರ್ಡ್‌ಗಳನ್ನು ಡಿಜಿಟಲ್ ಮಾಹಿತಿಯಾಗಿ ಪರಿವರ್ತಿಸುತ್ತದೆ. ಕಾರ್ಡ್ ಮಾಹಿತಿಯನ್ನು ಒದಗಿಸಿರುವ ಜಿಯೋಡ್ ಕಾರ್ಡ್‌ಗೆ ತಾತ್ಕಾಲಿಕವಾಗಿ ಟ್ರಾನ್ಸ್‌ಫರ್ ಮಾಡಿಕೊಳ್ಳಬಹುದಾಗಿದೆ.

  ಲೈಟ್ಸ್

  ವಿಮೊ ಒಂದು ಅಪ್ಲಿಕೇಶನ್ ಆಗಿದ್ದು ನಿಮ್ಮ ಮನೆಯ ಲೈಟ್‌ಗಳನ್ನು ಇದು ನಿಯಂತ್ರಿಸಲು ಉಪಯೋಗಕಾರಿಯಾಗಿದೆ. ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ನಂತರ ನಿಮ್ಮ ಲೈಟ್ ಸ್ವಿಚ್‌ಗಳನ್ನು ವಿಮೊಗೆ ಸ್ಥಾನಾಂತರಿಸಬೇಕು.

  ಡಿಜಿ ಪೆಟ್ಸ್

  ಈ ಡಿವೈಸ್ ನಿಮ್ಮ ಮಕ್ಕಳಿಂದ ಫೋನ್ ಅನ್ನು ಸುರಕ್ಷಿತವಾಗಿರಿಸುತ್ತದೆ ಮತ್ತು ಮಕ್ಕಳಿಗೆ ಆಟವಾಡಲು ಅನುವು ಮಾಡಿಕೊಡುತ್ತದೆ. ನಿಮ್ಮ ಧ್ವನಿಯನ್ನು ಇದರಲ್ಲಿ ರೆಕಾರ್ಡ್ ಮಾಡಬಹುದಾಗಿದೆ.

  ಲಾಕ್ಸ್

  ಇದು ನಿಮ್ಮ ಮನೆಯ ಲಾಕ್ ಅನ್ನು ಭದ್ರಪಡಿಸುವುದು ಮಾತ್ರವಲ್ಲ ಮನೆಯ ಬಾಗಿಲನ್ನು ಯಾರಾದರೂ ಸ್ಪರ್ಶಿಸಿದರೂ ಕೂಡ ನಿಮಗೆ ಇದು ಸೂಚನೆಯನ್ನು ನೀಡುತ್ತದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Smartphones are becoming more and more ubiquitous in this day and age. So, it is absolutely essential that you get some sweet devices and accessories to pair up with your own phone. Here we are listing out some devices these all controlled by your phone...

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more