Subscribe to Gizbot

ಇನ್ನು ನಮ್ಮ ಪೋಲೀಸರಿಗೆ ನೂರಾನೆ ಬಲ!!!

Written By:

ನಮ್ಮ ಸಮಾಜವನ್ನು ಕಾಪಾಡುವ ಪೋಲೀಸರು ಅವಿರತವಾಗಿ ಶ್ರಮ ಪಡುತ್ತಾರೆ. ಕಳ್ಳರು ದರೋಡೆಕೋರರು, ರೌಡಿಗಳಿಂದ ಸಮಾಜಕ್ಕೆ ಉಂಟಾಗುವ ಆಪತ್ತನ್ನು ತಮ್ಮ ಮೇಲೆ ತಂದುಕೊಂಡು ಸಾವಿನ ಅಂಜಿಕೆಯಿಲ್ಲದೆ ಹೋರಾಡುತ್ತಾರೆ. ನಿಜಕ್ಕೂ ಜನರ ಸೇವೆಯನ್ನು ಜನಾರ್ದನ ಸೇವೆ ಎಂದೇ ಪರಿಗಣಿಸಿ ಕಾರ್ಯನಿರ್ವಹಿಸುತ್ತಾರೆ.

ಓದಿರಿ: ದುಬಾರಿ ಫೋನ್ಸ್ ಮೇಲೆ ಫ್ಲಿಪ್‌ಕಾರ್ಟ್ ವಿನಾಯಿತಿ ಕೊಡುಗೆ

ಆಧುನಿಕ ವ್ಯವಸ್ಥೆಗಳನ್ನು ಇಂದಿನ ಪೋಲೀಸ್ ತಂಡ ಬಳಸಿಕೊಳ್ಳುತ್ತಿದ್ದು ಪ್ರತಿಯೊಂದು ಹಂತದಲ್ಲೂ ಅವರಿಗೆ ಸಹಾಯ ಮಾಡುವಂತಹ ಕೆಲವೊಂದು ವಿಧಾನಗಳನ್ನು ಇಂದು ಆರಕ್ಷಕರ ತಂಡಕ್ಕೆ ಒದಗಿಸಲಾಗುತ್ತಿದೆ. ಇನ್ನು ಟೆಕ್ ಮಾದರಿಯಲ್ಲಿ ಇವರಿಗೆ ಯಾವ ವಿಧಾನದಲ್ಲಿ ಸಹಾಯ ಮಾಡಬಹುದು ಎಂಬುದನ್ನು ಇಂದಿನ ವಿಶೇಷ ಲೇಖನದಲ್ಲಿ ತಿಳಿಸಿಕೊಡಲಾಗುತ್ತಿದೆ. ಅದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ನಿಂದ ಅರಿತುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮನಸ್ಸಿನಲ್ಲಿರುವ ಮಾತು

ಸೂಪರ್ ರೆಕಗ್ನೈಸರ್ಸ್

ಲಂಡನ್ ಪೋಲೀಸ್ ವಿಭಾಗದವರು ಈ ಪರಿಕರವನ್ನು ಬಳಸಿಕೊಳ್ಳುತ್ತಿದ್ದಾರೆ. ದುಷ್ಕರ್ಮಿಗಳ ಮನಸ್ಸಿನಲ್ಲಿರುವ ಮಾತುಗಳನ್ನು ಅರಿತುಕೊಳ್ಳುವುದನ್ನು ಈ ವಿಧಾನ ಒಳಗೊಂಡಿದೆ.

ಶತ್ರುಗಳನ್ನು ಮಟ್ಟ ಹಾಕುವ ತಂತ್ರಜ್ಞಾನ

ರೊಬೋಟ್

ಕ್ರಿಮಿನಲ್‌ಗಳ ವಿರುದ್ಧ ಹೋರಾಡಲು ರೊಬೋಟ್ ಬಳಕೆಯನ್ನು ಇಂದಿನ ಪೋಲೀಸ್ ತಂಡ ಮಾಡುತ್ತಿದೆ. ರೊಬೋಟ್ ಅನ್ನು ಬಳಸಿ ಶತ್ರುಗಳನ್ನು ಮಟ್ಟ ಹಾಕುವ ತಂತ್ರಜ್ಞಾನ ಕೂಡ ಚಾಲ್ತಿಯಲ್ಲಿದೆ.

ಆತ್ಮಹತ್ಯೆ

ಡಿಜಿಟಲ್ ಆಟೊಪ್ಸೈ

ಆತ್ಮಹತ್ಯೆಯಂತಹ ಘಟನೆಗಳಲ್ಲಿ ಆಟೊಪ್ಸೈ ಸಹಕಾರವನ್ನು ನೀಡುತ್ತದೆ. ಸಿಟಿ ಮತ್ತು ಎಮ್‌ಆರ್ಐ ಸ್ಕ್ಯಾನ್‌ಗಳನ್ನು ವರ್ಚುವಲ್ ಆಟೊಪ್ಸೈ ಒಳಗೊಂಡಿದ್ದು ದೇಹದ 3ಡಿ ಚಿತ್ರವನ್ನು ಎದುರಿನವರಿಗೆ ಒದಗಿಸುತ್ತದೆ.

ಪ್ರತಿಬಿಂಬಿತವಾಗುವ ಜನರು ಅಥವಾ ವಸ್ತುವನ್ನು ಗುರುತಿಸುವುದು

ಕೋರ್ನಿಯಲ್ ಇಮೇಜಿಂಗ್

ಕೋರ್ನಿಯಲ್ ಇಮೇಜಿಂಗ್ ಎಂಬ ವ್ಯವಸ್ಥೆಯನ್ನು ರೋಬ್ ಜಾಕಿನ್ಸ್ ಮತ್ತು ಕ್ರಿಸ್ಟಿ ಕೇರ್ ಅಭಿವೃದ್ಧಿಪಡಿಸಿದ್ದು ಫೋಟೋದಲ್ಲಿರುವ ವ್ಯಕ್ತಿಯ ಕಣ್ಣಿನ ಕೋರ್ನಿಯಾದಲ್ಲಿ ಪ್ರತಿಬಿಂಬಿತವಾಗುವ ಜನರು ಅಥವಾ ವಸ್ತುವನ್ನು ಗುರುತಿಸುವುದು

ಡಿಎನ್‌ಎ ಪರೀಕ್ಷೆ

ತ್ವರಿತ ಡಿಎನ್‌ಎ ಪ್ರೊಫಿಲ್ಲಿಂಗ್

ಎಲ್‌ಜಿಸಿ ಎಂಬ ಕಂಪೆನಿ ಗಂಟೆಗಳಲ್ಲಿ ವ್ಯಕ್ತಿಯ ಡಿಎನ್‌ಎ ಪರೀಕ್ಷೆಯನ್ನು ಮಾಡುತ್ತದೆ. ಸಂಶಯಿತರನ್ನು ಇದರ ಮೂಲಕ ಕೂಡಲೇ ಸೆರೆಹಿಡಿಯಬಹುದಾಗಿದೆ.

ಸಾಫ್ಟ್‌ವೇರ್

3ಡಿ - ಐಡಿ

ಇನ್ನು ಮೃತ ಶರೀರವನ್ನು ಕೂಡಲೇ ಪತ್ತೆಹಚ್ಚುವ ವ್ಯವಸ್ಥೆಯನ್ನು ಉತ್ತರ ಕ್ಯಾರೊಲಿನಾದ ಸಂಶೋಧಕರು ಪತ್ತೆಹಚ್ಚಿದ್ದಾರೆ. 3ಡಿ ಐಡಿ ಎಂಬ ಸಾಫ್ಟ್‌ವೇರ್ ಮೃತದೇಹವನ್ನು ಪತ್ತೆಹಚ್ಚುವಲ್ಲಿ ಸಹಕಾರಿಯಾಗಿದೆ.

ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲು

NYPD2020

ಹೈಟೆಕ್ ಪರಿಕರಗಳನ್ನು ಹೊಂದಿರುವ ಪೋಲೀಸ್ ಕಾರುಗಳಲ್ಲಿ NYPD2020 ಈ ತಂತ್ರಜ್ಞಾನ ಇದ್ದು ಇನ್ನಷ್ಟು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲು ಪೋಲೀಸರಿಗೆ ನೆರವನ್ನೀಯುತ್ತದೆ.

ಶೀಘ್ರವೇ ಪತ್ತೆಹಚ್ಚುತ್ತದೆ

ಪ್ರಿಡಿಕ್ಟಿಂಗ್ ಕ್ಯಾಮೆರಾ

ವರ್ಜೀನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕ್ಯಾಮೆರಾವನ್ನು ಅಭಿವೃದ್ಧಿಪಡಿಸಿದ್ದು ದುಷ್ಕ್ರತ್ಯಗಳನ್ನು ಎಸಗುವ ವ್ಯಕ್ತಿಯನ್ನು ಶೀಘ್ರವೇ ಪತ್ತೆಹಚ್ಚುತ್ತದೆ.

ಪೋಲೀಸರಿಗೆ ಮಾಹಿತಿ

ಟ್ರ್ಯಾಕಿಂಗ್ ಬುಲೆಟ್ಸ್

ಸ್ಟಾರೇಚೇಸ್ ಎಂಬ ವರ್ಜೀನಿಯಾ ಕಂಪೆನಿ ಸಣ್ಣ ಜಿಪಿಎಸ್ ಡಿವೈಸ್ ಅನ್ನು ಅಭಿವೃದ್ಧಿಪಡಿಸಿದ್ದು ಇದು ವ್ಯಕ್ತಿ ಇರುವ ಸ್ಥಳದ ಬಗ್ಗೆ ಪೋಲೀಸರಿಗೆ ಮಾಹಿತಿ ನೀಡುತ್ತದೆ.

ಇಲೆಕ್ಟ್ರಿಕ್ ಶಾಕ್

ಹ್ಯಾಂಡ್ ಕಫ್ಸ್

ಈ ಕೋಳಗಳಲ್ಲಿ ಮೈಕ್ರೋಫೋನ್, ಕ್ಯಾಮೆರಾ ಮತ್ತು ಸೆನ್ಸಾರ್ ಇದ್ದು ವ್ಯಕ್ತಿಯ ದೈಹಿಕ ಆರೋಗ್ಯದ ಮೇಲೆ ಗಮನ ಹರಿಸುತ್ತದೆ. ಇನ್ನು ತಪ್ಪಿಸಿಕೊಳ್ಳಲು ಯತ್ನಿಸಿದಲ್ಲಿ ಇದು ಬಂಧಿತರಿಗೆ ಇಲೆಕ್ಟ್ರಿಕ್ ಶಾಕ್ ಅನ್ನು ನೀಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
From issuing parking tickets to arresting drug lords, police forces work hard to prevent criminal pursuits and maintain peace and order in the community. Here are 10 ways in which Science is advancing police work.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot