ಭಾರತದ ಆರ್ಥಿಕತೆಗೆ ಡ್ರೋನ್‌ಗಳ ಕೊಡುಗೆ ಏನು?

By Shwetha
|

ಇಂದು ವೆಬ್ ಜಗತ್ತನ್ನು ಡ್ರೋನ್‌ಗಳು ಆಳುತ್ತಿದ್ದು ರಕ್ಷಣೆಗಾಗಿ, ಫೋಟೋಗ್ರಫಿಗಾಗಿ ಮತ್ತು ಉತ್ಪನ್ನಗಳ ವಿತರಣೆಗಾಗಿ ಹೀಗೆ ಡ್ರೋನ್‌ಗಳನ್ನು ಹಲವಾರು ವಿಧದಲ್ಲಿ ಬಳಸಲಾಗುತ್ತಿದೆ. ಸಾಮಾನ್ಯ ಜನರಿಗಾಗಿ ಮತ್ತು ಇಂಡಸ್ಟ್ರಿಗಳಿಗಾಗಿ ತಯಾರಿಸಿರುವ ಕೆಲವೊಂದು ಡ್ರೋನ್‌ಗಳನ್ನು ನಮಗೆ ಕಾಣಬಹುದಾಗಿದೆ.

ಇದನ್ನೂ ಓದಿರಿ: ಬಿಎಂಟಿಸಿ' ಬಸ್‌ಗಳ ಸಂಪೂರ್ಣ ಮಾಹಿತಿ ಒಂದೇ ಅಪ್ಲಿಕೇಶನ್‌ನಲ್ಲಿ

ಇದೇ ಡ್ರೋನ್‌ಗಳನ್ನು ಭಾರತದಲ್ಲಿ ಲಾಂಚ್ ಮಾಡಿದರೆ ಆರ್ಥಿಕತೆ ಮತ್ತು ಜನರ ಒಳಿತಿಗಾಗಿ ಇವುಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.

#1

#1

ಮುಖ್ಯ ಸರಕಾರಿ ಪ್ರದೇಶಗಳಲ್ಲಿ ನಮ್ಮ ಸರಕಾರವು ಡ್ರೋನ್‌ಗಳ ಬಳಕೆಯನ್ನು ಕಡಿಮೆ ಮಾಡಬೇಕೆಂಬ ಸೂಚನೆಗಳನ್ನು ಪಡೆದುಕೊಂಡಿದೆ. ಆದರೆ ಇದೇ ಡ್ರೋನ್‌ಗಳನ್ನು ಅಲ್ಲಿಯೂ ಬಳಸಿದಲ್ಲಿ, ಮುಖ್ಯ ಸ್ಥಳಗಳಲ್ಲಿ ಕಣ್ಗಾವಲನ್ನು ಅತಿ ಸುಲಭವಾಗಿ ಮಾಡಬಹುದಾಗಿದೆ.

#2

#2

ಯಾವುದೇ ಸೂಚನೆಯಿಲ್ಲದೆ ಪ್ರಕೃತಿ ವಿಕೋಪಗಳಿಗೆ ದೇಶವು ತುತ್ತಾಗುತ್ತಿದೆ. ತುರ್ತು ರಕ್ಷಣೆಗಳನ್ನು ಈ ಸ್ಥಳಗಳಿಗೆ ಪಡೆದುಕೊಳ್ಳುವುದು ಹೆಚ್ಚು ವೇಳೆಯನ್ನು ತೆಗೆದುಕೊಳ್ಳುತ್ತಿದೆ. ಡ್ರೋನ್‌ಗಳನ್ನು ಈ ಸಮಯದಲ್ಲಿ ಬಳಸುವುದರಿಂದ ಸಂರಕ್ಷಣಾ ಕಾರ್ಯಗಳನ್ನು ಮಾಡಲು ನೆರವಾಗಲಿದೆ ಅಂತೆಯೇ ಈ ಪರಿಸ್ಥಿತಿಗಳ ಲೈವ್ ಕವರೇಜ್ ಅನ್ನು ಮಾಡಬಹುದಾಗಿದೆ. ವೈದ್ಯಕೀಯ ಪೂರೈಕೆಗಳು ಮತ್ತು ಆಹಾರವನ್ನು ಸಾಗಿಸಬಹುದಾಗಿದೆ.

#3

#3

ಇ ಕಾಮರ್ಸ್ ಇಂಡಸ್ಟ್ರಿ ಈಗ ಪ್ರತಿ ಸಮಯದಲ್ಲೂ ಕಾರ್ಯನಿರ್ವಹಿಸುತ್ತಿದೆ. ಡ್ರೋನ್‌ಗಳ ಬಳಕೆಯನ್ನು ಈ ಕ್ಷೇತ್ರದಲ್ಲಿ ಬಳಸಿದಾಗ ಮನೆಯ ಬಾಗಿಲಿಗೆ ಉತ್ಪನ್ನಗಳು ಸುಲಭವಾಗಿ ದೊರೆಯುವ ಸಾಧ್ಯತೆ ಇದೆ. ಅಮೆಜಾನ್ ತನ್ನದೇ ಡ್ರೋನ್ ಡೆಲಿವರಿಯನ್ನು ಮುಂದಿನ ವರ್ಷ ಕಾರ್ಯರೂಪಕ್ಕೆ ತರುವ ಯೋಜನೆಯಲ್ಲಿದೆ.

#4

#4

ಬಳಸಲು ಸುಲಭವಾಗಿ ಡ್ರೋನ್‌ಗಳು ಕಾರ್ಯರೂಪಕ್ಕೆ ಬಂದಾಗ ಹೆಚ್ಚಿನ ಕಂಪೆನಿಗಳಿಗೆ ಇದರ ನಿರ್ಮಾಣ ಕಷ್ಟಾಸಾಧ್ಯವಾಗದು. ಶ್ಯೋಮಿ ಇನ್ನೇನು ಕೆಲವೇ ದಿನಗಳಲ್ಲಿ ತನ್ನದೇ ಡ್ರೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಭಾರತದ ಕಂಪೆನಿಗಳೂ ಕೂಡ ತನ್ನ ಗ್ರಾಹಕರಿಗಾಗಿ ಅಂತೆಯೇ ಸ್ಪರ್ಧೆಗಾಗಿ ಸಜ್ಜುಗೊಳ್ಳಲು ಡ್ರೋನ್‌ಗಳನ್ನು ನಿರ್ಮಿಸಲಿವೆ.

#5

#5

ಭಾರತದಲ್ಲಿ ಡ್ರೋನ್‌ಗಳನ್ನು ವಾಣಿಜ್ಯೀಕರಣಕ್ಕಾಗಿ ಬಳಸಿದಲ್ಲಿ ಇದು ಸಾಕಷ್ಟು ಉದ್ಯೋಗವಕಾಶಗಳನ್ನು ಜನತೆಗೆ ಒದಗಿಸಲಿದೆ. ಮುಖ್ಯ ನಗರಗಳಲ್ಲಿ ಈಗಾಗಲೇ ಭಾರೀ ಟ್ರಾಫಿಕ್ ಇದ್ದು ಏರ್‌ವೇಸ್‌ನಲ್ಲಿ ಇದನ್ನು ನಿಯಂತ್ರಿಸುವಂತಹ ಜವಬ್ದಾರಿಯನ್ನು ನಾವು ತೆಗೆದುಕೊಳ್ಳಬಹುದಾಗಿದೆ. ಜನರನ್ನು ಡ್ರೋನ್‌ಗಳು ತಲುಪುವುದಕ್ಕೆ ಇನ್ನೂ ಸಮಯವಿದ್ದು ಸೂಕ್ತವಾದ ಕಾನೂನು ಮತ್ತು ಕಾರ್ಯನಿರ್ವಹಣಾ ವ್ಯವಸ್ಥೆಗಳನ್ನು ಅಳವಡಿಸಬೇಕಾಗಿದೆ.

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

Best Mobiles in India

English summary
if drones are to be launched here in India, how far would its contribution be to the economy and the people in general.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X