'ಬಿಎಂಟಿಸಿ' ಬಸ್‌ಗಳ ಸಂಪೂರ್ಣ ಮಾಹಿತಿ ಒಂದೇ ಅಪ್ಲಿಕೇಶನ್‌ನಲ್ಲಿ

By Suneel
|

ಬಿಎಂಟಿಸಿ ಬಸ್‌ಗಳು ಹೊರಡುವ ಸಮಯ ಮತ್ತು ತಲುಪುವ ಸಮಯ, ಯಾವ ಮಾರ್ಗದಲ್ಲಿ ಹೋಗುತ್ತದೆ ಎಂಬಿತ್ಯಾದಿ ಮಾಹಿತಿಗಳನ್ನು ಈಗ ಕೇವಲ ಮೊಬೈಲ್‌ನಲ್ಲೇ ತಿಳಿಯಬಹುದು. ಹೌದು ನೆನ್ನೆತಾನೆ (ಬುಧವಾರ 25) ಮುಖ್ಯಮಂತ್ರಿ ಸಿದ್ಧರಾಮಯ್ಯ'ನವರು "ಬಿಎಂಟಿಸಿ ಟ್ರ್ಯಾನ್ಸಿಟ್ (BMTC)" ಮೊಬೈಲ್‌ ಅಪ್ಲಿಕೇಶನ್‌ ಅನ್ನು ಉದ್ಘಾಟನೆ ಮಾಡಿದ್ದಾರೆ.

ಇಂಟೆಲಿಜೆಂಟ್‌ ಸಾರಿಗೆ ವ್ಯವಸ್ಥೆ (ITS-Intelligent Transport System) ಸರ್ಕಾರಿ ಸ್ವಾಮ್ಯದ ನಿಗಮದಿಂದ ಅಭಿವದ್ಧಿಗೊಂಡಿದ್ದು, "ಜಿಪಿಎಸ್‌ ಆಧಾರಿತ ವಾಹನ ಟ್ರ್ಯಾಕಿಂಗ್‌ ವ್ಯವಸ್ಥೆ (VTU), ಇಲೆಕ್ಟ್ರಾನಿಕ್‌ ಟಿಕೆಟಿಂಗ್‌ ಮಷಿನ್‌ (ETM), ಪ್ರಯಾಣಿಕರ ಮಾಹಿತಿ ವ್ಯವಸ್ಥೆ (PIS) ಮತ್ತು ಮೊಬೈಲ್‌ ಅಪ್ಲಿಕೇಶನ್‌ ಹೊಂದಿದೆ.

ಬಿಎಂಟಿಸಿ ಬಸ್ಸುಗಳ ಹೊರಡುವ ಸಮಯ, ತಲುಪುವ ಸಮಯ, ಮಾರ್ಗ, ಇತ್ಯಾದಿ ಮಾಹಿತಿಗಳನ್ನು ತಿಳಿಸುವ "ಬಿಎಂಟಿಸಿ ಟ್ರ್ಯಾನ್ಸಿಟ್ (BMTC)" ಮೊಬೈಲ್‌ ಅಪ್ಲಿಕೇಶನ್‌ ಅನ್ನು ಆಫ್‌ಲೈನ್‌ನಲ್ಲೂ (ಇಂಟರ್ನೆಟ್ ಇಲ್ಲದೆಯೂ) ಬಳಸಬಹುದಾಗಿದೆ. "ಬಿಎಂಟಿಸಿ ಟ್ರ್ಯಾನ್ಸಿಟ್ (BMTC)" ಮೊಬೈಲ್‌ ಅಪ್ಲಿಕೇಶನ್‌ನ ವಿಶೇಷ ಫೀಚರ್‌ಗಳು ಏನು, ಬಳಸುವುದು ಹೇಗೆ? ಅಪ್ಲಿಕೇಶನ್‌ ಪಡೆಯುವುದು ಹೇಗೆ? ಎಂಬಿತ್ಯಾದಿ ವಿಶೇಷ ಮಾಹಿತಿಗಾಗಿ ಲೇಖನದ ಸ್ಲೈಡರ್‌ಗಳನ್ನು ಓದಿರಿ.

ಐಫೋನ್‌ ಬಳಕೆದಾರರಿಗಾಗಿ ಟಾಪ್‌ 5 ಫುಟ್‌ಬಾಲ್‌ ಗೇಮ್‌ಗಳು

"ಬಿಎಂಟಿಸಿ ಟ್ರ್ಯಾನ್ಸಿಟ್ (BMTC)" ಆಪ್‌ ಫೀಚರ್‌ಗಳು

"ಬಿಎಂಟಿಸಿ ಟ್ರ್ಯಾನ್ಸಿಟ್ (BMTC)" ಮೊಬೈಲ್‌ ಆಪ್‌ ನ ಅತ್ಯಧಿಕ ಉಪಯೋಗದ ಫೀಚರ್‌ ಎಂದರೆ ಸಂಪೂರ್ಣ ಆಫ್‌ಲೈನ್‌ ಅಪ್ಲಿಕೇಶನ್‌ ಇದು. ಅಪ್ಲಿಕೇಶನ್‌ ಬಳಸಲು ಯಾವುದೇ ಜಿಪಿಎಸ್‌, ವೈಫೈ, ಮೊಬೈಲ್‌ ಇಂಟರ್ನೆಟ್‌ ಬೇಡ. ಯಾವುದೇ ಸಮಯದಲ್ಲಿ, ಎಲ್ಲಿ ಬೇಕಾದರೂ ಸಹ ಮಾಹಿತಿಯನ್ನು ಆಪ್‌ನಲ್ಲಿ ಪಡೆಯಬಹುದಾಗಿದೆ.

"ಬಿಎಂಟಿಸಿ ಟ್ರ್ಯಾನ್ಸಿಟ್ (BMTC)" ಆಪ್‌ ಫೀಚರ್‌ಗಳು

ನೀವು ಇರುವ ಸ್ಥಳದ ಹತ್ತಿರ ಎಲ್ಲಿ ಬಸ್‌ ನಿಲ್ದಾಣ ಇದೆ ಎಂಬುದನ್ನು ತಿಳಿಯಬಹುದು. ಮಾಹಿತಿ ತಿಳಿಯಲು "MAP MARKER" ಕ್ಲಿಕ್ ಮಾಡಬೇಕು.

"ಬಿಎಂಟಿಸಿ ಟ್ರ್ಯಾನ್ಸಿಟ್ (BMTC)" ಆಪ್‌ ಫೀಚರ್‌ಗಳು

ಅಪ್ಲಿಕೇಶನ್‌ ಬಳಕೆದಾರರ ಸ್ನೇಹಿಯಾಗಿದ್ದು, ಟೆಕ್ನಾಲಜಿ ಬಳಕೆದಾರರಲ್ಲದವರು ಸಹ ಸುಲಭವಾಗಿ ಬಳಕೆ ಮಾಡಬಹುದಾಗಿದೆ.

"ಬಿಎಂಟಿಸಿ ಟ್ರ್ಯಾನ್ಸಿಟ್ (BMTC)" ಆಪ್‌ ಫೀಚರ್‌ಗಳು

ಟ್ರಿಪ್‌ ಪ್ಲಾನರ್‌ ಫೀಚರ್‌ ಮಾರ್ಗ ಮತ್ತು ಪ್ರಯಾಣ ಮಾರ್ಗ ಎರಡನ್ನು ತಿಳಿಯಲು ಸಹಾಯಕವಾಗಿದೆ.

"ಬಿಎಂಟಿಸಿ ಟ್ರ್ಯಾನ್ಸಿಟ್ (BMTC)" ಆಪ್‌ ಫೀಚರ್‌ಗಳು

ಬಿಎಂಟಿಸಿ ಮಾರ್ಗದರ್ಶಕರು ಎಲ್ಲಾ ಬಸ್‌ಗಳ ಮಾಹಿತಿಯನ್ನು 4 ವಿವಿಧ ವರ್ಗಗಳಲ್ಲಿ ಮಾರ್ಗಗಳನ್ನು ತಿಳಿಸಿದ್ದಾರೆ. * ಜೆನೆರಲ್‌ *ಏಸಿ *ವಿಶೇಷ *ಏರ್‌ಪೋರ್ಟ್‌ ಸೇವೆ

"ಬಿಎಂಟಿಸಿ ಟ್ರ್ಯಾನ್ಸಿಟ್ (BMTC)" ಆಪ್‌ ಫೀಚರ್‌ಗಳು

ವಿಶೇಷದಲ್ಲೂ ವಿಶೇಷತೆ ಅಂದ್ರೆ ಇದು. ಯಾಕಂದ್ರೆ ಪ್ರಯಾಣಿಕರು ಪ್ರಯಾಣಿಸುವ ಬಸ್ಸು ಹೇಗಿರುತ್ತದೆ ಎಂದು ಅಪ್ಲಿಕೇಶನ್‌ನಲ್ಲಿ ಫೋಟೋ ನೀಡಲಾಗಿರುತ್ತದೆ. ಈ ಫೀಚರ್‌ ಅನ್ನು ಬೆಂಗಳೂರಿನವರಲ್ಲದ ಪ್ರಯಾಣಿಕರಿಗಾಗಿ ವಿಶೇಷವಾಗಿ ನೀಡಲಾಗಿದೆ.

"ಬಿಎಂಟಿಸಿ ಟ್ರ್ಯಾನ್ಸಿಟ್ (BMTC)" ಆಪ್‌ ಫೀಚರ್‌ಗಳು

* ಅಪ್ಲಿಕೇಶನ್‌ನಲ್ಲೇ ಸೇವೆಗೆ ದರಗಳನ್ನು ನೀಡಲಾಗಿರುತ್ತದೆ.
* ಯಾವುದೇ ಮಾರ್ಗದ ನಂಬರ್‌ ಅನ್ನು ತಿಳಿಯಬಹುದಾಗಿದೆ.
* ಬೆಂಗಳೂರಿನ ದೃಶ್ಯಗಳ ಬಗ್ಗೆ ಮಾಹಿತಿ ಇರುತ್ತದೆ.
* ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ಬಹುಬೇಗ ಉತ್ತರ

"ಬಿಎಂಟಿಸಿ ಟ್ರ್ಯಾನ್ಸಿಟ್ (BMTC)" ಆಪ್‌ ಫೀಚರ್‌ಗಳು

ಅಪ್ಲಿಕೇಶನ್‌ ಬಳಕೆದಾರರು ಈಗಾಗಲೇ ಉತ್ತಮವಾಗಿದೆ ಎಂದು ವಿಮರ್ಶೆ ನೀಡಿದ್ದಾರೆ.
"ಬಿಎಂಟಿಸಿ ಟ್ರ್ಯಾನ್ಸಿಟ್ (BMTC)" ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಗಿಜ್‌ಬಾಟ್‌

ಗಿಜ್‌ಬಾಟ್‌

"ಜುಲೈ ತಿಂಗಳಲ್ಲಿ ಬಿಎಂಟಿಸಿ 'ಸ್ಮಾರ್ಟ್‌ ಕಾರ್ಡ್‌ ಪರಿಚಯಿಸುವ ಉದ್ದೇಶ ಹೊಂದಿದೆ" ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ "Ekroop Caur" ರವರು 'ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಸ್ಮಾರ್ಟ್‌ ಕಾರ್ಡ್‌ ಬಳಕೆಯು ಪ್ರಸ್ತುತದಲ್ಲಿ ಮೆಟ್ರೊ ರೈಲಿನಲ್ಲಿ ಬಳಕೆಯಾಗುತ್ತಿದ್ದು, ಅದಕ್ಕಿಂತ ಸ್ವಲ್ಪ ಮಟ್ಟದಲ್ಲಿ ಬದಲಾವಣೆ ತಂದು ಪ್ರಯಾಣಿಕರು ಹಣವಿಲ್ಲದೇ ಕೇವಲ 'ಸ್ಮಾರ್ಟ್‌ ಕಾರ್ಡ್‌' ಬಳಸಿ ಪ್ರಯಾಣ ಮಾಡುವ ಅವಕಾಶ ಕಲ್ಪಿಸುವ ಸೇವೆ ಇದಾಗಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Plan your BMTC bus commute 'intelligently' via mobile app. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X