ಜಿಯೋ, ವಿ, ಬಿಎಸ್‌ಎನ್‌ಎಲ್, ಏರ್‌ಟೆಲ್‌ಗಳ ಅಗ್ಗದ ಡೇಟಾ ಟೆಲಿಕಾಂ ಪ್ಲ್ಯಾನ್‌ಗಳು!
ದೇಶದ ಟೆಲಿಕಾಂ ವಲಯದಲ್ಲಿ ಜಿಯೋ, ಏರ್‌ಟೆಲ್, ವಿ ಟೆಲಿಕಾಂ ಹಾಗೂ ಬಿಎಸ್‌ಎನ್‌ಎಲ್ ಟೆಲಿಕಾಂಗಳು ಗ್ರಾಹಕರನ್ನು ಹೆಚ್ಚಿಸಿಕೊಳ್ಳಲು ಹಲವು ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಸಾಗಿವೆ. ಅಧಿಕ ಡೇಟಾ, ದೀರ್ಘಾವಧಿಯ ವ್ಯಾಲಿಡಿಟಿ, ಅನಿಯಮಿತ ವಾಯಿಸ್ ಕರೆಗಳಂತಹ ಪ್ರಯೋಜನಗಳನ್ನು ನೀಡುತ್ತಿವೆ. ಕೆಲವು ಪ್ಲ್ಯಾನ್‌ಗಳು ದುಬಾರಿ ಬೆಲೆಯಲ್ಲಿದ್ದರೇ, ಮತ್ತೆ ಕೆಲವು ಅಗ್ಗದ ಯೋಜನೆಗಳನ್ನು ಹೊಂದಿವೆ.

ಹೌದು, ಜಿಯೋ, ಏರ್‌ಟೆಲ್, ವಿ ಟೆಲಿಕಾಂ ಹಾಗೂ ಬಿಎಸ್‌ಎನ್‌ಎಲ್ ಟೆಲಿಕಾಂಗಳು ಕಡಿಮೆ ದರದಲ್ಲಿ ಆರಂಭಿಕ ಪ್ರೀಪೇಯ್ಡ್ ಡೇಟಾ ರೀಚಾರ್ಜ್ ಪ್ಲ್ಯಾನ್‌ಗಳ ಆಯ್ಕೆಯನ್ನು ಹೊಂದಿವೆ. ಅವುಗಳು 50ರೂ. ಒಳಗಿವೆ. ಈ ಯೋಜನೆಗಳಲ್ಲಿ ಹೆಚ್ಚಿನ ಸೌಲಭ್ಯಗಳು ಲಭ್ಯವಾಗದಿದ್ದರೂ, ಅಗತ್ಯತೆಯ ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗಾದರೇ ಜಿಯೋ, ಏರ್‌ಟೆಲ್, ವಿ ಟೆಲಿಕಾಂ ಹಾಗೂ ಬಿಎಸ್‌ಎನ್‌ಎಲ್ ಟೆಲಿಕಾಂಗಳ ಅಗ್ಗದ ಡೇಟಾ ರೀಚಾರ್ಜ್ ಪ್ಲ್ಯಾನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ವಿ ಟೆಲಿಕಾಂ 16ರೂ. ಡೇಟಾ ಪ್ಲ್ಯಾನ್
ವಿ ಟೆಲಿಕಾಂನ ಈ ಯೋಜನೆಯು ಒಂದು ದಿನ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ 1GB ಡೇಟಾ ಪ್ರಯೋಜನವನ್ನು ಒದಗಿಸುತ್ತದೆ. ಈ ಯೋಜನೆ ವಿ ಟೆಲಿಕಾಂನ ಅಗ್ಗದ ಡೇಟಾ ರೀಚಾರ್ಜ್ ಆಗಿದೆ. ಇದರ ನಂತರದ ಡೇಟಾ ರೀಚಾರ್ಜ್ ಅಂದರೇ ಅದು 48ರೂ. ಆಗಿದೆ.

ಜಿಯೋ 11ರೂ. ಡೇಟಾ ಪ್ಲ್ಯಾನ್
ಜಿಯೋ ಟೆಲಿಕಾಂನ ಅತೀ ಅಗ್ಗದ ಡೇಟಾ ಯೋಜನೆ ಅಂದರೇ ಅದು 11ರೂ. ಆಗಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 1GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಮೂಲ ಯೋಜನೆಯ ವ್ಯಾಲಿಡಿಟಿ ಲಭ್ಯವಾಗಲಿದೆ. ಈ ಯೋಜನೆಯ ನಂತರದ ಜಿಯೋ ಡೇಟಾ ರೀಚಾರ್ಜ್ ಪ್ಲ್ಯಾನ್ ಅಂದರೇ ಅದು 21ರೂ. ಆಗಿದ್ದು, 2GB ಡೇಟಾ ಸೌಲಭ್ಯವನ್ನು ಒದಗಿಸುತ್ತದೆ.

ಬಿಎಸ್‌ಎನ್‌ಎಲ್ 19ರೂ. ಪ್ಲ್ಯಾನ್
ಬಿಎಸ್‌ಎನ್‌ಎಲ್ ಟೆಲಿಕಾಂನ ಅತೀ ಅಗ್ಗದ ಡೇಟಾ ಯೋಜನೆ ಅಂದರೇ ಅದು 19ರೂ. ಆಗಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 1GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಈ ಯೋಜನೆಯ ನಂತರದ ಬಿಎಸ್‌ಎನ್‌ಎಲ್ ಡೇಟಾ ರೀಚಾರ್ಜ್ ಪ್ಲ್ಯಾನ್ ಅಂದರೇ ಅದು 56ರೂ. ಆಗಿದ್ದು, 10GB ಡೇಟಾ ಸೌಲಭ್ಯವನ್ನು ಒದಗಿಸುತ್ತದೆ.

ಏರ್‌ಟೆಲ್ 48ರೂ. ಪ್ಲ್ಯಾನ್
ಏರ್‌ಟೆಲ್ ಟೆಲಿಕಾಂನ 48ರೂ. ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ 3GB ಡೇಟಾ ಪ್ರಯೋಜನವನ್ನು ಒದಗಿಸುತ್ತದೆ. ಉಳಿದಂತೆ ಏರ್‌ಟೆಲ್ ಸಹ ಹಲವು ದೈನಂದಿನ ಡೇಟಾ ಸೌಲಭ್ಯದ ಯೋಜನೆಗಳ ಆಯ್ಕೆಯನ್ನು ಹೊಂದಿದೆ.


Click it and Unblock the Notifications








