Home
ಸುದ್ದಿಜಾಲ

Android 15: ಮುಂಬರುವ ವಿಶ್ವದ ಅತ್ಯಂತ ಜನಪ್ರಿಯ ಓಎಸ್‌ನಲ್ಲಿನ 10 ದೊಡ್ಡ ಫೀಚರ್ಸ್‌ ಇವು!

ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಓಎಸ್‌ ಪ್ರಮುಖ ಪಾತ್ರ ವಹಿಸುತ್ತದೆ. ಈ ನಡುವೆ ಗೂಗಲ್‌ನ ಮುಂದಿನ ಪ್ರಮುಖ ಆಂಡ್ರಾಯ್ಡ್‌ ಅಪ್‌ಡೇಟ್‌ ಬಹಳ ಸದ್ದು ಮಾಡುತ್ತಿದ್ದು, ಈ ಮೂಲಕ ಇನ್ಮುಂದೆ ಸ್ಮಾರ್ಟ್‌ಫೋನ್‌ ಬಳಕೆದಾರರು ಭಿನ್ನ ರೀತಿಯ ಅನುಭವ ಪಡೆಯಲಿದ್ದಾರೆ.

ಹೌದು, ಆಂಡ್ರಾಯ್ಡ್ 15 (Android 15)ಅನ್ನು ಮೇ 14 ರಂದು ಗೂಗಲ್‌ I/O 2024 ನಲ್ಲಿ ಹೊಸ ಹಾರ್ಡ್‌ವೇರ್ ಜೊತೆಗೆ ಆಂಡ್ರಾಯ್ಡ್‌ 15 ಅನ್ನು ಪ್ರಾರಂಭಿಸುತ್ತದೆ. ಈ ಓಎಸ್‌ ಹಲವಾರು ಹೊಸ ಫೀಚರ್ಸ್‌ ಅನ್ನು ನೀಡಲಿದೆ ಎನ್ನಲಾಗಿದೆ. ಅದರಲ್ಲಿ ಪ್ರಮುಖವಾದವು ಎಂದರೆ ಉಪಗ್ರಹ ಸಂಪರ್ಕ, ಪಿಸಿ ಗಳಿಗೆ ಉತ್ತಮ ಗುಣಮಟ್ಟದ ವೆಬ್‌ಕ್ಯಾಮ್ ಮೋಡ್, ಎಐ ಸೌಲಭ್ಯ. ಹಾಗಿದ್ರೆ, ಬನ್ನಿ ಈ ಓಎಸ್‌ನಲ್ಲಿ ಕಾಣಬಹುದಾದ ಪ್ರಮುಖ ಹತ್ತು ಫೀಚರ್ಸ್‌ ಏನು ಅನ್ನೋದನ್ನು ನೋಡೋಣ.

ಮುಂಬರುವ ವಿಶ್ವದ ಅತ್ಯಂತ ಜನಪ್ರಿಯ ಓಎಸ್‌ನಲ್ಲಿನ 10 ದೊಡ್ಡ ಫೀಚರ್ಸ್‌ ಇವು!

ಆಂಡ್ರಾಯ್ಡ್‌ 15 ಹೊಸ ಹೆಸರು ಮತ್ತು ಲೋಗೋ: ಪ್ರಮುಖವಾಗಿ ಆಂಡ್ರಾಯ್ಡ್‌ 15 ಲೋಗೋ ವಿಭಿನ್ನವಾಗಿ ಕಾಣಿಸಿಕೊಳ್ಳಲಿದೆ. ಇದು ಆಂಡ್ರಾಯ್ಡ್ 14 ಲೋಗೋದಂತೆಯೇ ಬಾಹ್ಯಾಕಾಶ ಮತ್ತು ರಾಕೆಟ್‌ಗಳಿಂದ ಪ್ರೇರಿತವಾದ ಹೊಸ ಲೋಗೋದೊಂದಿಗೆ ಬರುತ್ತದೆ. ಆಂಡ್ರಾಯ್ಡ್ 15 ಅನ್ನು ಆಂತರಿಕವಾಗಿ ವೆನಿಲ್ಲಾ ಐಸ್ ಕ್ರೀಮ್ (Vanilla ice cream) ಎಂದು ಕರೆಯಲಾಗುತ್ತದೆ. ಈ ಮೂಲಕ ಆಂಡ್ರಾಯ್ಡ್ ಆವೃತ್ತಿಗಳನ್ನು ಸಿಹಿತಿಂಡಿಗಳ ಮೂಲಕ ಹೆಸರಿಸುವ ಸಂಪ್ರದಾಯವನ್ನು ಮುಂದುವರೆಸಲಾಗಿದೆ.

ವೆಬ್ ಕ್ಯಾಮೆರಾ ಮೋಡ್: ವಿಂಡೋಸ್‌ 11 ಪಿಸಿ ಯೊಂದಿಗೆ ಜೋಡಿಸಿದಾಗ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಉತ್ತಮ ಗುಣಮಟ್ಟದ ವೆಬ್ ಕ್ಯಾಮೆರಾಗಳಾಗಿ ಬಳಕೆ ಮಾಡಲು ಆಂಡ್ರಾಯ್ಡ್‌ 15 ಅನುಮತಿಸುತ್ತದೆ. ಆಂಡ್ರಾಯ್ಡ್ 14 ನಲ್ಲಿ ಚಾಲನೆಯಲ್ಲಿರುವ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳನ್ನು ವೆಬ್ ಕ್ಯಾಮೆರಾಗಳಂತೆ ಬಳಕೆ ಮಾಡುವ ಸಾಮರ್ಥ್ಯವನ್ನು ಗೂಗಲ್‌ ಈಗಾಗಲೇ ಸಕ್ರಿಯಗೊಳಿಸಿದೆ.

ಸ್ಥಳೀಯ ಉಪಗ್ರಹ ಸಂಪರ್ಕ: ಈಗಾಗಲೇ ಕೆಲವು ಸ್ಮಾರ್ಟ್‌ಫೋನ್‌ಗಳು ಉಪಗ್ರಹ ಸಂಪರ್ಕವನ್ನು ಕಲ್ಪಿಸಿಕೊಡುತ್ತಿವೆ. ಅದರಂತೆ ಆಂಡ್ರಾಯ್ಡ್‌ 15 ನೊಂದಿಗೆ, ಗೂಗಲ್‌ ಸ್ಥಳೀಯವಾಗಿ ಉಪಗ್ರಹ ಸಂಪರ್ಕವನ್ನು ( Native satellite connectivity) ಸಂಯೋಜಿಸುತ್ತಿದೆ. ಈ ಮೂಲಕ ಬೆಂಬಲಿತ ಹಾರ್ಡ್‌ವೇರ್‌ನೊಂದಿಗೆ ಸ್ಮಾರ್ಟ್‌ಫೋನ್‌ಗಳಲ್ಲಿ ಈ ತಂತ್ರಜ್ಞಾನವನ್ನು ನಿಯೋಜಿಸಲು OEM ಗಳಿಗೆ ಸುಲಭವಾಗುತ್ತದೆ. ಮುಂದಿನ ಪೀಳಿಗೆಯ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳು ಹಾಗೂ ಐಫೋನ್ 14 ಮತ್ತು ಐಫೋನ್ 15 ಸರಣಿಯಂತೆಯೇ ಉಪಗ್ರಹ ಸಂಪರ್ಕವನ್ನು ಬೆಂಬಲಿಸುವ ಸಾಧ್ಯತೆಯಿದೆ.

ಮುಂಬರುವ ವಿಶ್ವದ ಅತ್ಯಂತ ಜನಪ್ರಿಯ ಓಎಸ್‌ನಲ್ಲಿನ 10 ದೊಡ್ಡ ಫೀಚರ್ಸ್‌ ಇವು!

ಭಾಗಶಃ ಸ್ಕ್ರೀನ್ ಶೇರ್‌: ಆಂಡ್ರಾಯ್ಡ್‌ 15 ಅಪ್‌ಡೇಟ್‌ನೊಂದಿಗೆ ಬಳಕೆದಾರರು ಡಿಸ್‌ಪ್ಲೇನ ಒಂದು ಭಾಗವನ್ನು ಶೇರ್‌ (Partial screen sharing) ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅದು ಒಂದೇ ಆಪ್‌ ಅಥವಾ ಒಂದೇ ವಿಂಡೋ ಆಗಿರಬಹುದು. ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗೆ ಯಾರಾದರೂ ವರ್ಚುವಲ್ ಪ್ರವೇಶವನ್ನು ಪಡೆದರೂ ಸಹ, ಅವರು ಅವರಿಗೆ ಗೋಚರಿಸುವ ವಿಂಡೋವನ್ನು ಮಾತ್ರ ನೋಡಲು ಮತ್ತು ಪ್ರವೇಶಿಸಲು ಸಾಧ್ಯವಾಗುತ್ತದೆ.

ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳಿಗಾಗಿ ಹೆಚ್ಚಿನ ಆಪ್ಟಿಮೈಸ್: ಫೋಲ್ಡಬಲ್ ಡಿವೈಸ್‌ಗಳನ್ನು ಬೆಂಬಲಿಸಲು ಆಂಡ್ರಾಯ್ಡ್‌15 ಅನ್ನು ಮತ್ತಷ್ಟು ಆಪ್ಟಿಮೈಸ್ ಮಾಡಲಾಗುತ್ತದೆ. ಪ್ರಾಥಮಿಕ ಡಿಸ್‌ಪ್ಲೇಯನ್ನು ಮುಚ್ಚಿದಾಗ ಆಪ್‌ಗಳು ಕವರ್ ಡಿಸ್‌ಪ್ಲೇಯಲ್ಲಿ ತಮ್ಮ ಸ್ಥಿತಿಯನ್ನು ಉಳಿಸಿಕೊಳ್ಳುತ್ತವೆ. ಹಾಗೆಯೇ ಆಂಡ್ರಾಯ್ಡ್ 15 ಹೊಸ ಟಾಸ್ಕ್ ಬಾರ್ ಅನ್ನು ಪರಿಚಯಿಸುತ್ತಿದೆ.

ಹೊಸ ಕ್ಯಾಮರಾ ಕಂಟ್ರೋಲ್: ಡೆವಲಪರ್‌ಗಳಿಗೆ ಕ್ಯಾಮೆರಾ ಪೂರ್ವವೀಕ್ಷಣೆಯ ಹೊಳಪನ್ನು ಹೆಚ್ಚಿಸುವುದು, ಫ್ಲ್ಯಾಶ್‌ ಸಾಮರ್ಥ್ಯಗಳನ್ನು ಕಂಟ್ರೋಲ್‌ ಮಾಡುವುದು ಮತ್ತು ಕಡಿಮೆ ಬೆಳಕಿನ ಪರಿಸ್ಥಿತಿಗಳಲ್ಲಿಯೂ ಸಹ ಉತ್ತಮ ಚಿತ್ರ ತೆಗೆಯುವ ಸಾಮರ್ಥ್ಯವನ್ನು ಸಕ್ರಿಯಗೊಳಿಸಲು ಕಡಿಮೆ ಬೆಳಕಿನ ವರ್ಧನೆಗಳಂತಹ ಹೆಚ್ಚಿನ ಹಸ್ತಚಾಲಿತ ಕ್ಯಾಮೆರಾ ಫೀಚರ್ಸ್‌ ಅನ್ನು ಸೇರಿಸಲು ಈ ಓಎಸ್‌ ಅನುವು ಮಾಡಿಕೊಡುತ್ತದೆ.

ನೋಟಿಫಿಕೇಶನ್‌ ಕೂಲ್‌ಡೌನ್: ನಿರ್ದಿಷ್ಟ ಆಪ್‌ನಿಂದ ಹೆಚ್ಚಿನ ನೋಟಿಫಿಕೇಶನ್‌ ಬರುತ್ತಿದ್ದರೆ ಈ ಓಎಸ್‌ ನಿಮಗೆ ಸಹಾಯ ಮಾಡಲಿದೆ. ಅಂದರೆ ಈ ಓಎಸ್‌ ಮೂಲಕ ಹಸ್ತಚಾಲಿತ ಹಸ್ತಕ್ಷೇಪವಿಲ್ಲದೆ ಸತತ ನೋಟಿಫಿಕೇಶನ್‌ ಗಳ ಹರಿವನ್ನು ಅಚ್ಚುಕಟ್ಟಾಗಿ ಕಡಿಮೆ ಮಾಡುವ ಕೆಲಸ ಮಾಡುತ್ತದೆ. ಈ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ಬಳಕೆಯನ್ನು ಉತ್ತಮಗೊಳಿಸುತ್ತದೆ.

ಪಾಪ್ಅಪ್ ಬ್ಲೂಟೂತ್ ಡೈಲಾಗ್ ಬಾಕ್ಸ್: ಬ್ಲೂಟೂತ್ ಡಿವೈಸ್‌ಗಳನ್ನು ಹೊಂದಿರುವವರು ಈ ಫೀಚರ್ಸ್‌ ಅನ್ನು ಬಳಕೆ ಮಾಡಬಹುದು. ಬ್ಲೂಟೂತ್ ಕ್ವಿಕ್ ಟಾಗಲ್‌ನಲ್ಲಿ ದೀರ್ಘಕಾಲ ಒತ್ತುವುದರಿಂದ ಬ್ಲೂಟೂತ್ ಡೈಲಾಗ್ ಬಾಕ್ಸ್ ತೆರೆಯುತ್ತದೆ. ಇದು ಇತ್ತೀಚೆಗೆ ಜೋಡಿಸಲಾದ/ಸಂಪರ್ಕಿತ ಡಿವೈಸ್‌ಗಳ ಲಿಸ್ಟ್‌ ಅನ್ನು ಹೊಂದಿರುತ್ತದೆ. ಈ ಮೂಲಕ ಬಳಕೆದಾರರು ಈ ಮೆನುವಿನಿಂದ ವಿವಿಧ ಡಿವೈಸ್‌ಗಳ ನಡುವೆ ಬದಲಾಯಿಸಬಹುದು.

ಮುಂಬರುವ ವಿಶ್ವದ ಅತ್ಯಂತ ಜನಪ್ರಿಯ ಓಎಸ್‌ನಲ್ಲಿನ 10 ದೊಡ್ಡ ಫೀಚರ್ಸ್‌ ಇವು!

ಸೂಕ್ಷ್ಮ ನೋಟಿಫಿಕೇಶನ್‌: ಓಟಿಪಿ ಗಳೊಂದಿಗೆ ಸಾಮಾನ್ಯ ಮೆಸೆಜ್‌ಗಳು ಹಾಗೂ ಇತರೆ ಮೆಸೆಜ್‌ಗಳನ್ನು ಪ್ರತ್ಯೇಕಿಸಲು ಸಾಧ್ಯವಾಗುತ್ತದೆ. ಸಿಸ್ಟಮ್ ಇತರ ಆಪ್‌ಗಳಿಂದ ಓಟಿಪಿ ಯಝತಹ ಗೌಪ್ಯ ವಿವರಗಳನ್ನು ಅಚ್ಚುಕಟ್ಟಾಗಿ ಮರೆಮಾಡುತ್ತದೆ. ಗೌಪ್ಯತೆ ಮತ್ತು ಭದ್ರತೆಯ ಹೆಚ್ಚುವರಿ ಲೇಯರ್‌ ಅನ್ನು ಈ ಮೂಲಕ ಸೇರಿಸುತ್ತದೆ. ಹಾಗೆಯೇ ಗೌಪ್ಯ ಮಾಹಿತಿಯನ್ನು ಕದಿಯುವ ಥರ್ಡ್‌ ಪಾರ್ಟಿ ಆಪ್‌ಗಳನ್ನು ನಿರ್ಬಂಧಿಸುತ್ತದೆ.

ಹೊಸ ವಾಲ್ಯೂಮ್ ಕಂಟ್ರೋಲ್‌ ಪ್ಯಾನಲ್‌: ಇದರಲ್ಲಿ ಸ್ಲೀಕರ್ ವಾಲ್ಯೂಮ್ ಕಂಟ್ರೋಲ್ ಪ್ಯಾನಲ್ ಅನ್ನು ಸಹ ನೀಡಲಾಗುತ್ತಿದೆ. ಒನ್‌ಯುಐ ಆಕ್ಸಿಜನ್‌ ಓಎಸ್‌ ನಂತಹ ಥರ್ಡ್-ಪಾರ್ಟಿ ಸ್ಕಿನ್‌ಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳಿಗೆ ಇದು ಲಭ್ಯ ಇಲ್ಲದಿದ್ದರೂ ಆಂಡ್ರಾಯ್ಡ್ 15 ನಲ್ಲಿ ಚಾಲನೆಯಲ್ಲಿರುವ ಸ್ಮಾರ್ಟ್‌ಫೋನ್ ಹೊಸ ವಾಲ್ಯೂಮ್ ಕಂಟ್ರೋಲ್ ಪ್ಯಾನಲ್‌ನ ಲಾಭವನ್ನು ಪಡೆಯಲಿದೆ.

Best Mobiles in India

English summary
Android 15 is called Vanilla Ice Cream and Google will launch Android 15 with new hardware at May 14.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+