ರಕ್ಷಾ ಬಂಧನಕ್ಕೆ ಯಾವ ಉಡುಗೊರೆ ನೀಡಬೇಕೆಂಬ ಆಲೋಚನೆಯಲ್ಲಿದ್ದೀರಾ? ಇಲ್ಲಿವೆ ನೋಡಿ ಬೆಸ್ಟ್ ಗಿಫ್ಟ್!
ರಕ್ಷಾ ಬಂಧನ ಸಂಭ್ರಮಕ್ಕೆ (Raksha Bandhan) ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಈಗಾಗಲೇ ಅಂಗಡಿಗಳಲ್ಲಿ ರಾಖಿಗಳ ಮಾರಾಟ ಸಹ ಭರ್ಜರಿಯಾಗಿ ನಡೆಯುತ್ತಿದೆ. ಈ ರಕ್ಷಾ ಬಂಧನದ ವೇಳೆ ಸಹೋದರರು ರಾಖಿ ಕಟ್ಟಿದವರಿಗೆ ಉಡುಗೊರೆ ನೀಡುವುದು ಇತ್ತೀಚಿನ ವರ್ಷಗಳಲ್ಲಿ ಸಂಪ್ರದಾಯದಂತಾಗಿದೆ.
ಹೌದು, ಹಿಂದೂ ಕ್ಯಾಲೆಂಡರ್ ಪ್ರಕಾರ ಶ್ರಾವಣ ಮಾಸದ ಹುಣ್ಣಿಮೆಯಂದು ರಕ್ಷಾ ಬಂಧನ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಈ ವೇಳೆ ರಾಖಿಯನ್ನು ಸಹೋದರಿ ತನ್ನ ಸಹೋದರನ ಮಣಿಕಟ್ಟಿಗೆ ಕಟ್ಟುವುದು ವಾಡಿಕೆ. ಇದಾದ ನಂತರ ಹಲವಾರು ಜನರಿಗೆ ಯಾವ ಉಡುಗೊರೆ ನೀಡಲಿ ಎಂಬ ಚಿಂತೆ ಮೂಡಿರುತ್ತದೆ. ಆದರೆ, ನೀವು ಈ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ, ಯಾಕೆಂದರೆ ನಾವಿಲ್ಲಿ ಕೆಲವು ಸ್ಮಾರ್ಟ್ ಗ್ಯಾಜೆಟ್‌ಗಳನ್ನು ಸೂಚಿಸಿದ್ದೇವೆ ಗಮನಿಸಿ.

ಡೈಮಂಡ್ ಕಟ್ ಡಯಲ್ ಆಯ್ಕೆಯ ದಿವಾ ಸ್ಮಾರ್ಟ್‌ವಾಚ್: ಈ ವಾಚ್ ಅನ್ನು ಅಮೆಜಾನ್‌ನಲ್ಲಿ ನೀವು 3,499 ರೂ.ಗಳಿಗೆ ಖರೀದಿ ಮಾಡಬಹುದು. ಈ ಸ್ಮಾರ್ಟ್‌ವಾಚ್ 1.1 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 100 ಕ್ಕೂ ಹೆಚ್ಚು ವಾಚ್ ಫೇಸ್‌ಗಳ ಆಯ್ಕೆ ಪಡೆದುಕೊಂಡಿದೆ. ಜೊತೆಗೆ 4 ದಿನಗಳವರೆಗೆ ಬ್ಯಾಟರಿ ಬ್ಯಾಕಪ್ ಲಭ್ಯ ಇರಲಿದ್ದು, ಬ್ಲೂಟೂತ್ ಕರೆ, SpO2 ಮತ್ತು ಸೈಕಲ್ ಟ್ರ್ಯಾಕಿಂಗ್‌ನಂತಹ ವಿಶೇಷ ಫೀಚರ್ಸ್ ಆಯ್ಕೆಯನ್ನು ಈ ವಾಚ್ ಹೊಂದಿದೆ.
ಅಮೆಜಾನ್ ಎಕೋ ಡಾಟ್ ಸ್ಮಾರ್ಟ್ ಸ್ಪೀಕರ್: ನಿಮ್ಮ ಸಹೋದರಿ ಸಂಗೀತ ಪ್ರಿಯೆ ಆಗಿದ್ದರೆ ಈ ಗ್ಯಾಜೆಟ್ ಬೆಸ್ಟ್ ಆಯ್ಕೆಯಾಗಿದೆ. ಇದು ಸಹ ಅಮೆಜಾನ್‌ನಲ್ಲಿ 2,749ರೂ.ಗಳಿಗೆ ಲಭ್ಯ ಇದ್ದು, 4ನೇ ತಲೆಮಾರಿನ ಅಮೆಜಾನ್ ಎಕೋ ಡಾಟ್ ಟಕೋ ಡಾಟ್ ಸ್ಪೀಕರ್ ಧ್ವನಿ ಆಜ್ಞೆಗಳ ಮೂಲಕ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಅಲೆಕ್ಸಾದ ದ್ವಿಭಾಷಾ ಸಾಮರ್ಥ್ಯ ಪಡೆದಿದ್ದು,ಆಟೋಮ್ಯಾಟಿಕ್ ಲೈಟ್ ಮತ್ತು ಅಸಿಸ್ಟೆಂಟ್‌ನಂತಹ ಬಹುಮುಖ ಫೀಚರ್ಸ್ ಆಯ್ಕೆ ಪಡೆದುಕೊಂಡಿದೆ.
ಸಿಸ್ಕಾ ಹೇರ್ ಸ್ಟ್ರೈಟ್ನರ್ : ಈ ಡಿವೈಸ್ ಅಂತೂ ಎಲ್ಲಾ ಯುವತಿಯರಿಗೂ ಇಷ್ಟವಾಗುತ್ತದೆ. ಅಮೆಜಾನ್‌ನಲ್ಲಿ ಇದನ್ನು ನೀವು ಕೇವಲ 898ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಈ ಡಿವೈಸ್ ಉತ್ತಮ ಗುಣಮಟ್ಟದ ಸೆರಾಮಿಕ್ ಪ್ಲೇಟ್‌ಗಳನ್ನು ಹೊಂದಿದ್ದು, ಸಿಕ್ಕಾದ ಕೂದಲನ್ನು ನಯವಾಗಿ ಮಾಡುವ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ ಕೂದಲನ್ನು ಸುರುಳಿಗಳಾಗಿಯೂ ಮಾಡಿಕೊಳ್ಳಬಹುದು. ಇದು ತಾಪಮಾನ ಹೊಂದಾಣಿಕೆ ಸೆಟ್ಟಿಂಗ್ ಅನ್ನು ಸಹ ಹೊಂದಿದೆ.
ಗೋವೊ ಗೋಬಡ್ಸ್ 577 ವೈರ್‌ಲೆಸ್ ಇಯರ್‌ಬಡ್ಸ್: ಈ ಡಿವೈಸ್ ನಿಮಗೆ 4,599ರೂ.ಗಳ ಆಫರ್ ಬೆಲೆಯಲ್ಲಿ ಲಭ್ಯ ಇದೆ. ಇದು 13mm ಡ್ರೈವರ್ ಅನ್ನು ಹೊಂದಿದ್ದು, 470mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದೆ. ಈ ಮೂಲಕ 52 ಗಂಟೆಗಳ ಪ್ಲೇಬ್ಯಾಕ್ ಟೈಮ್ ಸಿಗಲಿದೆ. ಇದರೊಂದಿಗೆ ಸ್ಫಟಿಕ-ಸ್ಪಷ್ಟ ಇನ್-ಗೇಮ್ ಸಂವಹನಗಳು ಮತ್ತು ಸ್ಪಷ್ಟತೆಯನ್ನು ಖಚಿತಪಡಿಸಿಕೊಳ್ಳಲು ಕ್ವಾಡ್ ಮೈಕ್ ಆಯ್ಕೆಯನ್ನೂ ಸಹ ಈ ಬಡ್ಸ್‌ಗಳಲ್ಲಿ ನೀಡಲಾಗಿದೆ.
ಗೋವೊ ಗೋಸರೌಂಡ್ 200 ಸೌಂಡ್‌ಬಾರ್: ಇನ್ನು ಈ ಡಿವೈಸ್ 1,199 ರೂ.ಗಳಿಗೆ ಲಭ್ಯ ಇರಲಿದ್ದು, ಇದು ಇಂಪಾದ ಧ್ವನಿ ಅನುಭವವನ್ನು ನೀಡಲು ಇಂಟಿಗ್ರೇಟೆಡ್ ಸಬ್ ವೂಫರ್‌ನೊಂದಿಗೆ ಪ್ಯಾಕ್ ಆಗಿದೆ. ಇದರೊಂದಿಗೆ ಈ ಸೌಂಡ್‌ಬಾರ್ ಡೀಪ್ ಆಗಿ ಪ್ರತಿಧ್ವನಿಸಲಿದ್ದು, ಪ್ರತಿ ಸೌಂಡ್ ಸಹ ಸಂಗೀತದ ಲೋಕದಲ್ಲಿ ತೇಲುವಂತೆ ಮಾಡುತ್ತವೆ. ನಿಮ್ಮ ಸಹೋದರಿ ಸಂಗೀತ ಪ್ರೇಮಿ, ಪಾರ್ಟಿ ಪ್ರೇಮಿ ಆಗಿದ್ದರೆ ಇದು ಬೆಸ್ಟ್.

ಪೋರ್ಟ್ರಾನಿಕ್ಸ್ ಪೋರ್ಟಬಲ್ ರಫ್‌ಪ್ಯಾಡ್ ಇ-ರೈಟರ್: ನಿಮ್ಮ ಸಹೋದರಿ ತುಂಬಾ ಚಿಕ್ಕವಳಾಗಿದ್ದರೆ ಅಥವಾ ಆಕೆ ಶಾಲೆಗೆ ಹೋಗುತ್ತಿದ್ದರೆ ಈ ಗಿಫ್ಟ್ ಬೆಸ್ಟ್ ಎಂದೇ ಹೇಳಬಹುದು. ಇದನ್ನು ನೀವು ಅಮೆಜಾನ್ ಮೂಲಕ ಆಫರ್ ಬೆಲೆ 311ರೂ.ಗಳಿಗೆ ಕೊಂಡುಕೊಳ್ಳಬಹುದು. ಇದು 8.5 ಇಂಚಿನ LCD ಡಿಸ್‌ಪ್ಲೇ ಹೊಂದಿದ್ದು, ಸ್ಟೈಲಸ್ ಡ್ರಾಯಿಂಗ್ ಹ್ಯಾಂಡ್‌ರೈಟಿಂಗ್ ಬೋರ್ಡ್ ನಿಮ್ಮ ಸಹೋದರಿಯ ಕಲೆಗೆ ಹಾಗೂ ವಿದ್ಯಾಭ್ಯಾಸಕ್ಕೆ ಸಹಾಯಕವಾಗಬಹುದು.


Click it and Unblock the Notifications








