ಅನಿಯಮಿತ ಬ್ರಾಡ್‌ಬ್ಯಾಂಡ್‌ ಡೇಟಾ ಪ್ಲ್ಯಾನ್‌ ಬೇಕೆ?..ಇಲ್ಲಿವೇ ನೋಡಿ!

|

ಪ್ರಸ್ತುತ ಲಭ್ಯವಿರುವ ಎಲ್ಲ ಸ್ಮಾರ್ಟ್‌ ಗ್ಯಾಜೆಟ್ಸ್‌ಗಳಿಗೆ ಇಂಟರ್ನೆಟ್‌ ಅಗತ್ಯವಿದ್ದು, ಹೀಗಾಗಿ ಗ್ರಾಹಕರು ಬ್ರಾಡ್‌ಬ್ಯಾಂಡ್‌ ಇಂಟರ್ನೆಟ್‌ ಸೇವೆಯ ಸೌಲಭ್ಯವನ್ನು ಪಡೆಯಲು ಬಯಸುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಟೆಲಿಕಾಂ ಸಂಸ್ಥೆಗಳು ಸಹ ದೇಶದಲ್ಲಿ ತಮ್ಮ ಬ್ರಾಡ್‌ಬ್ಯಾಂಡ್‌ ಸೇವೆಯ ಜಾಲವನ್ನು ವಿಸ್ತರಿಸುವುದರ ಜೊತೆಗೆ ಗ್ರಾಹಕರಿಗೆ ಅತ್ಯುತ್ತಮ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳನ್ನು ನೀಡುತ್ತಿದ್ದಾರೆ. ಆದರೆ ಕಡಿಮೆ ಬೆಲೆಗೆ ಹೆಚ್ಚು ವೇಗದ ಪ್ಲ್ಯಾನುಗಳಿಗೆ ಬೇಡಿಕೆ ಅಧಿಕವಿದೆ.

ಜಿಯೋ ಗಿಗಾಫೈಬರ್

ಹೌದು, ಈ ನಿಟ್ಟಿನಲ್ಲಿ ಜಿಯೋ ಗಿಗಾಫೈಬರ್ ಭಾರತದಲ್ಲಿ ಕಡಿಮೆ ಬೆಲೆಗೆ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿದ್ದು, ಆದರೆ ಅದಕ್ಕೆ ಪ್ರತಿಯಾಗಿ ಏರ್‌ಟೆಲ್, ಟಾಟಾಸ್ಕೈ, ಹಾತ್‌ವೇ ಸೇರಿದಂತೆ ಇತರೆ ಜನಪ್ರಿಯ ಟೆಲಿಕಾಂ ಸಂಸ್ಥೆಗಳು ಪೈಪೋಟಿ ನೀಡುತ್ತಿವೆ. ತಿಂಗಳ ಬ್ಯಾಡ್‌ಬ್ಯಾಂಡ್ ಪ್ಲ್ಯಾನಿನಲ್ಲಿ ಅಧಿತ ಎಂಬಿಪಿಎಸ್‌ ವೇಗದ ಜೊತೆಗೆ ಅನಿಯಮಿತ ಡೇಟಾ ಆಯ್ಕೆ ನೀಡುವ ಟೆಲಿಕಾಂ ಸಂಸ್ಥೆಗಳತ್ತ ಗ್ರಾಹಕರು ಮುಖ ಮಾಡಿತ್ತಾರೆ. ಹಾಗಾದರೇ ಅನಿಯಮಿತ ಡೇಟಾ ಸೇವೆ ನೀಡುವ ಕೆಲವು ಜನಪ್ರಿಯ ಟೆಲಿಕಾಂ ಕಂಪನಿಗಳ ಪ್ಲ್ಯಾನಿಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಟಾಟಾಸ್ಕೈ ಬ್ರಾಡ್‌ಬ್ಯಾಂಡ್

ಟಾಟಾಸ್ಕೈ ಬ್ರಾಡ್‌ಬ್ಯಾಂಡ್

ಜನಪ್ರಿಯ ಟಾಟಾಸ್ಕೈ ಸಂಸ್ಥೆಯು ವಿವಿಧ ಶ್ರೇಣಿಯ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿದ್ದು, ಅವುಗಳಲ್ಲಿ ಕೆಲವು ಅನಿಯಮಿತ ಡೇಟಾ ಸೌಲಭ್ಯವನ್ನು ಪಡೆದಿದೆ. ಟಾಟಾಸ್ಕೈನ 999ರೂ. ಪ್ಲ್ಯಾನ್‌ 25 Mbps ವೇಗದಲ್ಲಿ ಡೇಟಾ ನೀಡಲಿದ್ದು, 1,249ರೂ.ಪ್ಲ್ಯಾನ್‌ 50 Mbps ವೇಗದಲ್ಲಿ ಡೇಟಾ ಒದಗಿಸಲಿದೆ. ಹಾಗೆಯೇ 100 Mbps ವೇಗದಲ್ಲಿ ಅನಿಯಮಿತ ಡೇಟಾ ಸೌಲಭ್ಯ ಪಡೆಯಲು 1,599ರೂ. ಪ್ಲ್ಯಾನ್‌ ನೀಡಲಾಗಿದೆ. ಈ ಪ್ಲ್ಯಾನ್‌ಗಳು ಮುಂಬೈ ಸೇರಿದಂತೆ ಹಲವು ನಗರ ವ್ಯಾಪ್ತಿಯಲ್ಲಿ ಲಭ್ಯ.

ಹಾತ್‌ವೇ ಬ್ರಾಡ್‌ಬ್ಯಾಂಡ್

ಹಾತ್‌ವೇ ಬ್ರಾಡ್‌ಬ್ಯಾಂಡ್

ಹಾತ್‌ವೇ ಸಂಸ್ಥೆಯು ಸಹ ಅಗ್ಗದ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳನ್ನು ಹೊಂದಿದ್ದು, ಕಂಪನಿಯ 349ರೂ.ಗಳ ಬೇಸಿಕ ಪ್ಲ್ಯಾನ್‌ ಹೆಚ್ಚು ಗಮನಸೆಳೆದಿದೆ. ಈ ಪ್ಲ್ಯಾನಿನಲ್ಲಿ 50 Mbps ವೇಗದ ಇಂಟರ್ನೆಟ್‌ ಸೇವೆಯು ಲಭ್ಯವಾಗಲಿದ್ದು, ಹೆಚ್ಚಿನ ಇಂಟರ್ನೆಟ್‌ ಬಳಕೆ ಇಲ್ಲದಿದ್ದರೇ ಈ ಪ್ಲ್ಯಾನ್ ಯೋಗ್ಯ. ಹಾಗೆಯೇ ಹಾತ್‌ವೇ 699ರೂ. ಪ್ಲ್ಯಾನ್‌ನಲ್ಲಿ 100 Mbps ವೇಗದ ಅನಿಯಮಿತ ಇಂಟರ್ನೆಟ್‌ ಸೌಲಭ್ಯ ದೊರೆಯಲಿದೆ.

ಏರ್‌ಟೆಲ್ ಬ್ರಾಡ್‌ಬ್ಯಾಂಡ್‌

ಏರ್‌ಟೆಲ್ ಬ್ರಾಡ್‌ಬ್ಯಾಂಡ್‌

ಭಾರ್ತಿ ಏರ್‌ಟೆಲ್‌ ಸಂಸ್ಥೆಯು ಹಲವು ಆಕರ್ಷಕ ಪ್ಲ್ಯಾನ್‌ಗಳನ್ನು ಗ್ರಾಹಕರಿಗೆ ನೀಡಿದ್ದು, ಜೊತೆಗೆ ವಿಐಪಿ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಏರ್‌ಟೆಲ್‌ ವಿಐಪಿ ಪ್ಲ್ಯಾನ್‌ಗಳು ದುಬಾರಿ ಪ್ರೈಸ್‌ಟ್ಯಾಗ್‌ನಲ್ಲಿದ್ದು, 100 Mbps ವೇಗದ ಇಂಟರ್ನೆಟ್‌ ಸೌಲಭ್ಯವನ್ನು ನೀಡುತ್ತದೆ. ಇದರೊಂದಿಗೆ ಗ್ರಾಹಕರಿಗೆ ಏರ್‌ಟೆಲ್ ಥ್ಯಾಂಕ್ಸ್‌, ಅಮೆಜಾನ್ ಪ್ರೈಮ್‌, ಸದಸ್ಯತ್ವ, ನೆಟ್‌ಫ್ಲಿಕ್ಸ್‌ ಮತ್ತು ಜಿ5 ಸೇವೆಗಳ ಆಕ್ಸಸ್‌ ಸಹ ಸಿಗಲಿದೆ.

ಅಲೈನ್ಸ್‌ ಬ್ರಾಡ್‌ಬ್ಯಾಂಡ್

ಅಲೈನ್ಸ್‌ ಬ್ರಾಡ್‌ಬ್ಯಾಂಡ್

ಅಲೈನ್ಸ್‌ ಬ್ರಾಡ್‌ಬ್ಯಾಂಡ್‌ (Alliance Broadband) ಸಹ ಅನಿಯಮಿತ ಇಂಟರ್ನೆಟ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿದ್ದು, 500ರೂ.ಗಳ ಪ್ಲ್ಯಾನಿನಲ್ಲಿ 60 Mbps ವೇಗದ ಅನಿಯಮಿತ ಡೇಟಾ ಸೌಲಭ್ಯ ಸಿಗಲಿದೆ. ಹಾಗೆಯೇ 850ರೂ. ಪ್ಲ್ಯಾನಿನಲ್ಲಿ 100 Mbps ವೇಗದಲ್ಲಿ ಇಂಟರ್ನೆಟ್‌ ಸೌಲಭ್ಯ ನೀಡಲಿದೆ. ಅಲೈನ್ಸ್‌ ಬ್ರಾಡ್‌ಬ್ಯಾಂಡ್‌ ಸೇವೆಯು ಕಲ್ಕತ್ತಾ ನಗರ ಸೇರಿದಂತೆ ಇತರೆ ಕೆಲವು ಆಯ್ದ ನಗರಗಳಲ್ಲಿ ಸೇವೆಯನ್ನು ಹೊಂದಿದೆ.

Best Mobiles in India

English summary
Various broadband service providers like Tata Sky broadband, Hathway, and Airtel are offering high-speed plans which come with unlimited data. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X