ಸದ್ಯ ವಿಶ್ವದಲ್ಲಿಯೇ ಅತೀ ದೊಡ್ಡ 10 ಸ್ಮಾರ್ಟ್‌ಫೋನ್ ಕಂಪನಿಗಳು ಯಾವುವು ಗೊತ್ತಾ?

|

ಪ್ರಸ್ತುತ ವಿಶ್ವದಲ್ಲಿಯೇ ಸ್ಮಾರ್ಟ್‌ಫೋನ್ ಅತೀ ಅಗತ್ಯ ಡಿವೈಸ್‌ ಆಗಿದ್ದು, ಈ ನಿಟ್ಟಿನಲ್ಲಿ ಹಲವು ಮೊಬೈಲ್ ತಯಾರಿಕಾ ಕಂಪನಿಗಳು ಮಾರುಕಟ್ಟೆಯನ್ನು ಆವರಿಸಿಕೊಂಡಿವೆ. ಮಾರುಕಟ್ಟೆಯಲ್ಲಿ ಕೆಲವು ಮೊಬೈಲ್‌ ಕಂಪನಿಗಳು ತಮ್ಮದೇ ಆದ ಛಾಪು ಮೂಡಿಸಿವೆ. ಆದರೆ ವಿಶ್ವದಲ್ಲಿಯೇ ಯಾವ ಮೊಬೈಲ್‌ ಕಂಪನಿ ದೊಡ್ಡದು ಎಂದು ತಿಳಿಯುವ ಕುತೂಹಲ ಇದೆಯೇ?..ಅದಕ್ಕೆ ಉತ್ತರ ಕೌಂಟರ್‌ಪಾಯಿಂಟ್‌ ಸಂಸ್ಥೆ ವರದಿಯಲ್ಲಿದೆ.

ಕೌಂಟರ್‌ಪಾಯಿಂಟ್

ಹೌದು, ಕೌಂಟರ್‌ಪಾಯಿಂಟ್ ಸಂಶೋಧನಾ ಸಂಸ್ಥೆಯು ಇತ್ತೀಚೆಗೆ ವಿಶ್ವದ ಅತಿದೊಡ್ಡ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳ ಬಗ್ಗೆ ತನ್ನ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಿದೆ. ವರದಿಗಳು ತಮ್ಮ ಜಾಗತಿಕ ಮಾರುಕಟ್ಟೆ ಹಂಚಿಕೆಯ ಆಧಾರದ ಮೇಲೆ ಕಂಪನಿಗಳನ್ನು ಶ್ರೇಣೀಕರಿಸುತ್ತವೆ ಎಂದು ಹೇಳಲಾಗುತ್ತದೆ. ಕೌಂಟರ್ಪಾಯಿಂಟ್ ಪ್ರಕಾರ, 2020 ರ ಮೂರನೇ ತ್ರೈಮಾಸಿಕದಲ್ಲಿ ದಕ್ಷಿಣ ಕೊರಿಯಾದ ದೈತ್ಯ ಸ್ಯಾಮ್‌ಸಾಂಗ್‌ ಅತೀ ದೊಡ್ಡ ಕಂಪನಿಯಾಗಿ ಕಾಣಿಸಿಕೊಂಡಿದೆ. ಇನ್ನುಳಿದಂತೆ ಯಾವೆಲ್ಲಾ ಕಂಪನಿಗಳು ಟಾಪ್‌ ಟೆನ್‌ ಲಿಸ್ಟ್‌ನಲ್ಲಿ ಸ್ಥಾನ ಪಡೆದಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌

ದಕ್ಷಿಣ ಕೊರಿಯಾದ ಸ್ಮಾರ್ಟ್‌ಫೋನ್‌ ಕಂಪನಿ ಸ್ಯಾಮ್‌ಸಂಗ್‌, 2020 ರ ಮೂರನೇ ತ್ರೈಮಾಸಿಕದಲ್ಲಿ ಜಾಗತಿಕ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಮೊದಲ ಸ್ಥಾನವನ್ನು ಗಳಿಸಿದೆ. ಮೂರನೇ ತ್ರೈಮಾಸಿಕದಲ್ಲಿ ಕಂಪನಿಯು 79.8 ಮಿಲಿಯನ್ ಫೋನ್‌ಗಳನ್ನು ರವಾನಿಸಿದ್ದು, ಮತ್ತು 22% ಮಾರುಕಟ್ಟೆ ಪಾಲನ್ನು ಹೊಂದಿದೆ.

ಹುವಾವೆ ಸಂಸ್ಥೆ

ಹುವಾವೆ ಸಂಸ್ಥೆ

ಎರಡನೇ ಸ್ಥಾನದಲ್ಲಿ ಚೀನಾದ ಮೊಬೈಲ್ ದೈತ್ಯ ಹುವಾವೇ ಸ್ಥಾನ ಪಡೆದಿದ್ದು, ಶೇ. 14% ಮಾರುಕಟ್ಟೆ ಪಾಲನ್ನು ಹೊಂದಿದೆ. 2020 ರ ಮೂರನೇ ತ್ರೈಮಾಸಿಕದಲ್ಲಿ ಹುವಾವೇ 50.9 ಮಿಲಿಯನ್ ಸ್ಮಾರ್ಟ್‌ಫೋನ್‌ಗಳನ್ನು ರವಾನಿಸಿದೆ.

ಶಿಯೋಮಿ

ಶಿಯೋಮಿ

ಚೀನಾ ಮೂಲದ ಶಿಯೋಮಿ ಈ ಬಾರಿ ಆಪಲ್‌ನ ಹಿಂದಿಕ್ಕಿ 3 ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಶಿಯೋಮಿ ಕಂಪನಿಯು 46.2 ಮಿಲಿಯನ್ ಯೂನಿಟ್‌ಗಳನ್ನು ರವಾನಿಸಿದ್ದು, ಶೇ.13% ಮಾರುಕಟ್ಟೆ ಪಾಲನ್ನು ಹೊಂದಿದೆ.

ಆಪಲ್‌

ಆಪಲ್‌

2020 ರ ಮೂರನೇ ತ್ರೈಮಾಸಿಕದಲ್ಲಿ ಐಫೋನ್ ತಯಾರಕ ಸಂಸ್ಥೆ ಆಪಲ್ 41.7 ಮಿಲಿಯನ್ ಸಾಗಣೆಯೊಂದಿಗೆ 4 ನೇ ಸ್ಥಾನದಲ್ಲಿದೆ. ಸಂಸ್ಥೆಯು 11% ಬೆಳವಣಿಗೆಯೊಂದಿಗೆ ಕಂಪನಿಯು 11% ಮಾರುಕಟ್ಟೆ ಹಂಚಿಕೆಯನ್ನು ಹೊಂದಿದೆ.

ಒಪ್ಪೋ

ಒಪ್ಪೋ

2020 ರ ಮೂರನೇ ತ್ರೈಮಾಸಿಕದಲ್ಲಿ ಒಪ್ಪೊ ಕಂಪನಿಯು 31 ಮಿಲಿಯನ್ ಸ್ಮಾರ್ಟ್‌ಫೋನ್‌ ಸಾಗಣೆಗಳೊಂದಿಗೆ 5 ನೇ ಸ್ಥಾನದಲ್ಲಿದೆ. ಇದು ತ್ರೈಮಾಸಿಕದಲ್ಲಿ 26% ಬೆಳವಣಿಗೆಯೊಂದಿಗೆ 8% ಮಾರುಕಟ್ಟೆ ಪಾಲನ್ನು ಹೊಂದಿದೆ.

ವಿವೋ

ವಿವೋ

ಚೀನಾದ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ ವಿವೊ ಕಂಪನಿಯು 31 ಮಿಲಿಯನ್ ಸಾಗಣೆಗಳೊಂದಿಗೆ 6 ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಸಂಸ್ಥೆಯು 8% ಮಾರುಕಟ್ಟೆ ಪಾಲನ್ನು ಹೊಂದಿದೆ.

ರಿಯಲ್‌ ಮಿ

ರಿಯಲ್‌ ಮಿ

ರಿಯಲ್‌ ಮಿ ಕಂಪನಿಯು 14.8 ಮಿಲಿಯನ್ ಸಾಗಣೆಗಳೊಂದಿಗೆ 7 ನೇ ಸ್ಥಾನದಲ್ಲಿದೆ ಕಾಣಿಸಿಕೊಂಡಿದೆ. ವಿಶ್ವಾದ್ಯಂತ 4% ಮಾರುಕಟ್ಟೆ ಪಾಲನ್ನು ಸಂಸ್ಥೆಯು ಹೊಂದಿದೆ.

ಲೆನೊವೋ ಗ್ರೂಪ್

ಲೆನೊವೋ ಗ್ರೂಪ್

ಲೆನೊವೊ ಮತ್ತು ಮೊಟೊರೊಲಾ ಫೋನ್‌ಗಳನ್ನು ಒಳಗೊಂಡ ಲೆನೊವೊ ಗ್ರೂಪ್ 8 ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಈ ಗ್ರೂಪ್ 10.2 ಮಿಲಿಯನ್ ಸ್ಮಾರ್ಟ್‌ಫೋನ್‌ಗಳನ್ನು ರವಾನಿಸಿದ್ದು, 3% ಮಾರುಕಟ್ಟೆ ಪಾಲನ್ನು ಹೊಂದಿದೆ.

ಎಲ್‌ಜಿ

ಎಲ್‌ಜಿ

2020 ರ ಮೂರನೇ ತ್ರೈಮಾಸಿಕದಲ್ಲಿ ದಕ್ಷಿಣ ಕೊರಿಯಾದ ಎಲ್‌ಜಿ ಕಂಪನಿಯು 6.5 ಮಿಲಿಯನ್ ಸ್ಮಾರ್ಟ್‌ಫೋನ್‌ಗಳನ್ನು ರವಾನಿಸಿದ್ದು, 9 ನೇ ಸ್ಥಾನದಲ್ಲಿದೆ. ತ್ರೈಮಾಸಿಕದಲ್ಲಿ 26% ಬೆಳವಣಿಗೆಯೊಂದಿಗೆ 8% ಮಾರುಕಟ್ಟೆ ಪಾಲನ್ನು ಹೊಂದಿದೆ.

ಟೆಕ್ನೋ

ಟೆಕ್ನೋ

2020 ರ ಮೂರನೇ ತ್ರೈಮಾಸಿಕದಲ್ಲಿ ಟೆಕ್ನೋ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ ಹತ್ತನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಈ ಸಂಸ್ಥೆಯು 5.6 ಮಿಲಿಯನ್ ಸ್ಮಾರ್ಟ್‌ಫೋನ್‌ಗಳನ್ನು ರವಾನಿಸಿದ್ದು, 2% ಮಾರುಕಟ್ಟೆ ಪಾಲನ್ನು ರವಾನಿಸಿದೆ.

Best Mobiles in India

Read more about:
English summary
Research company Counterpoint recently released its quarterly report on the world’s biggest smartphone brands.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X