ಅಮೆಜಾನ್‌ನಲ್ಲಿನ ಮುಂದಿನ ವಿಶೇಷ ಸೇಲ್‌ಗಳ ಲಿಸ್ಟ್ ಇಲ್ಲಿದೆ, ಆಫರ್ ಮೇಲೆ ಆಫರ್!
ಅಮೆಜಾನ್ (Amazon) ಪ್ರಮುಖ ಇ-ಕಾಮರ್ಸ್ ಸೈಟ್‌ಗಳಲ್ಲಿ ಒಂದಾಗಿದ್ದು, ಈಗಾಗಲೇ ಸಾಕಷ್ಟು ವಿಶೇಷ ಸೇಲ್‌ಗಳ ಮೂಲಕ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಸ್ಮಾರ್ಟ್‌ಟಿವಿ, ವಾಷಿಂಗ್ ಮೆಷಿನ್ ಸೆರಿದಂತೆ ಅನೇಕ ಡಿವೈಸ್‌ಗಳನ್ನು ಕಡಿಮೆ ಬೆಲೆಗೆ ಲಭ್ಯವಾಗಿಸಿದೆ. ಈ ವರ್ಷ ಮುಗಿಯುವುದರ ಒಳಗೆ ಇನ್ನೂ ಅನೇಕ ವಿಶೇಷ ಸೇಲ್‌ಗಳನ್ನು ಅಮೆಜಾನ್ ಆಯೋಜಿಸಲಿದೆ.
ಹೌದು, ಇನ್ನೇನು 2023 ರ ಅಂತ್ಯಕ್ಕೆ ಬಂದಿದ್ದೇವೆ. ಈ ವೇಳೆ ಇ-ಕಾಮರ್ಸ್ ಸೈಟ್‌ಗಳು (E-commerce site) ಈ ಹಿಂದೆ ನೀಡುವುದಕ್ಕಿಂತ ಹೆಚ್ಚಿನ ಡಿಸ್ಕೌಂಟ್‌ನಲ್ಲಿ ವಿಶೇಷ ಸೇಲ್‌ಗಳನ್ನು ಆಯೋಜನೆ ಮಾಡುತ್ತವೆ. ಅದರಂತೆ ಅಮೆಜಾನ್ (Amazon) ಸಾಕಷ್ಟು ಸೇಲ್‌ಗಳನ್ನು ಆಯೋಜನೆ ಮಾಡಲಿದ್ದು, ಯಾವೆಲ್ಲಾ ನಿರೀಕ್ಷಿತ ಸೇಲ್‌ನಲ್ಲಿ ಏನೆಲ್ಲಾ ಆಫರ್ ಇದೆ. ಈ ಸೇಲ್‌ಗಳನ್ನು ಯಾವಾಗ ಘೋಷಣೆ ಮಾಡಲಾಗುತ್ತದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಅಮೆಜಾನ್‌ನಲ್ಲಿ ವಿಶೇಷ ಸೇಲ್: ಅಮೆಜಾನ್ ಭಾರತದಲ್ಲಿನ ಅತಿದೊಡ್ಡ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದ್ದು, ಎಲೆಕ್ಟ್ರಾನಿಕ್ಸ್, ಸ್ಮಾರ್ಟ್‌ಫೋನ್‌ಗಳು, ಗೃಹೋಪಯೋಗಿ ವಸ್ತುಗಳು, ಪುಸ್ತಕಗಳು, ಫ್ಯಾಷನ್ ಸೇರಿದಂತೆ ಇನ್ನೂ ಅನೇಕ ವಸ್ತುಗಳಿಗೆ ಭರ್ಜರಿ ರಿಯಾಯಿತಿ ಘೋಷಣೆ ಮಾಡುತ್ತದೆ. ಈ ನಡುವೆ ಗ್ರಾಹಕರ ಶಾಪಿಂಗ್ ಅನುಭವವನ್ನು ಇನ್ನಷ್ಟು ಆಕರ್ಷಕವಾಗಿಸಲು ಮುಂದಿನ ದಿನಗಳಲ್ಲಿ ಈ ಸೇಲ್‌ಗಳನ್ನು ಆಯೋಜನೆ ಮಾಡಲಿದೆ.
*ಮೆಗಾ ಮ್ಯೂಸಿಕ್ ಫೆಸ್ಟ್ ಸೇಲ್ ಸೆಪ್ಟೆಂಬರ್ 18 -20 ರಂದು ನಡೆಯಲಿದೆ. ಈ ಸೇಲ್‌ನಲ್ಲಿ ಹೆಡ್‌ಫೋನ್‌ಗಳು, ಸ್ಪೀಕರ್‌ಗಳು ಸೇರಿದಂತೆ ಇನ್ನೂ ಅನೇಕ ಮ್ಯೂಸಿಕ್‌ಗೆ ಸಂಬಂಧಿಸಿದ ಡಿವೈಸ್‌ಗಳ ಮೇಲೆ ಭರ್ಜರಿ ಆಫರ್ ನೀಡಲಾಗುತ್ತದೆ. ಅಂದರೆ 60% ವರೆಗೂ ಸಹ ನೀವು ರಿಯಾಯಿತಿ ಪಡೆದುಕೊಳ್ಳಬಹುದು.
* ಇದಾದ ನಂತರದಲ್ಲಿ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಆಯೋಜನೆ ಮಾಡಲಾಗುತ್ತಿದ್ದು, ಇದು ಅಕ್ಟೋಬರ್ 11 - 18 ರ ವರೆಗೆ ನಡೆಯಲಿದೆ ಎನ್ನಲಾಗಿದೆ. ಈ ಸೇಲ್‌ನಲ್ಲಿ ಗ್ರಾಹಕರು ವಿವಿಧ ವರ್ಗಗಳಾದ್ಯಂತ ಐಟಂಗಳ ಮೇಲೆ ದೊಡ್ಡ ರಿಯಾಯಿತಿ ಪಡೆಯಬಹುದು. ಅಷ್ಟೇ ಅಲ್ಲದೆ SBI ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಲ್ಲಿ 10% ವರೆಗೆ ರಿಯಾಯಿತಿ ಸಿಗಲಿದೆ.
* ಸ್ಟೈಲ್ ಬಜಾರ್ ಸೇಲ್ ನವೆಂಬರ್ 9 - 13ರ ವರೆಗೆ ನಡೆಯಲಿದೆ ಈ ಸೇಲ್‌ನಲ್ಲಿ ನೀವು ಉತ್ತಮವಾದ ಬಟ್ಟೆಗಳು ಹಾಗೂ ಪಾದರಕ್ಷೆಗಳ ಮೇಲೆ ಭರ್ಜರಿ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಅದರಲ್ಲೂ 399ರೂ.ಒಳಗೆ ಉತ್ತಮ ಬ್ರ್ಯಾಂಡ್‌ನ ಉಡುಪುಗಳನ್ನು ಖರೀದಿ ಮಾಡಬಹುದಾಗಿದೆ.
* ಬುಕ್ ಬಜಾರ್ ಸೇಲ್ ನವೆಂಬರ್ 10 - 14ರ ವರೆಗೆ ನಡೆಯಲಿದೆ ಎಂದು ತಿಳಿದುಬಂದಿದೆ. ಈ ಸೇಲ್‌ನಲ್ಲಿ 15,000+ ಪುಸ್ತಕಗಳ ಮೇಲೆ 60% ವರೆಗೆ ರಿಯಾಯಿತಿ ಸಿಗಲಿದೆ. ಈ ಮೂಲಕ ನಿಮ್ಮಿಷ್ಟದ ಬುಕ್‌ಗಳನ್ನು ಕಡಿಮೆ ಬೆಲೆಗೆ ಖರೀದಿ ಮಾಡಬಹುದು.
*ಬ್ಲ್ಯಾಕ್ ಫ್ರೈಡೇ ಸೇಲ್ ನವೆಂಬರ್ 25 - 27ರ ವರೆಗೆ ನಡೆಯಲಿದೆ. ಈ ಸೇಲ್‌ನಲ್ಲಿ ಗ್ರಾಹಕರು ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳಲ್ಲಿ ಅತ್ಯುತ್ತಮ ಕೊಡುಗೆಗಳನ್ನು ಪಡೆದುಕೊಳ್ಳಬಹುದಾಗಿದೆ.
*ಫ್ಯಾಬ್ ಫೋನ್‌ಗಳ ಫೆಸ್ಟ್ ಸಹ ನವೆಂಬರ್ 26 - 29ರ ವರೆಗೆ ನಡೆಯಲಿದ್ದು, ಈ ಸೇಲ್‌ನಲ್ಲಿ ಇತ್ತೀಚಿಗೆ ಲಾಂಚ್ ಆದ ಹಾಗೂ ಹೆಚ್ಚು ಬೇಡಿಕೆ ಇರುವ ಸ್ಮಾರ್ಟ್‌ಫೋನ್‌ಗಳಿಗೆ ಆಫರ್ ಘೋಷಣೆ ಮಾಡಲಾಗುತ್ತದೆ.
* ಅಮೆಜಾನ್ ದಸರಾ ಸೇಲ್ ಅಕ್ಟೋಬರ್ 5 ರಿಂದ ಆರಂಭ ಆಗಲಿದೆ. ಈ ಸೇಲ್‌ನಲ್ಲಿ ದಸರಾ ಸಂಭ್ರಮದೊಂದಿಗೆ ಎಲೆಕ್ಟ್ರಾನಿಕ್ಸ್, ಫ್ಯಾಷನ್ ಮತ್ತು ಇನ್ನೂ ಅನೇಕ ವಸ್ತುಗಳ ಮೇಲೆ ಭಾರೀ ಕೊಡುಗೆ ಇರಲಿದೆ.
* ಸೂಪರ್ ವ್ಯಾಲ್ಯೂ ಡೇಸ್ ಸೇಲ್ ಡಿಸೆಂಬರ್ 1-7ರ ವರೆಗೆ ನಡೆಯಲಿದೆ ಎನ್ನಲಾಗಿದ್ದು, ಅಮೆಜಾನ್ ಪ್ಯಾಂಟ್ರಿ ಐಟಂಗಳ ಮೇಲೆ 45% ವರೆಗೆ ರಿಯಾಯಿತಿ ನೀಡಲಾಗುತ್ತದೆ. ಈ ಮೂಲಕ ನೀವು ಹೆಚ್ಚಿನ ಹಣ ಉಳಿತಾಯ ಮಾಡಬಹುದಾಗಿದೆ.

* ವಾರ್ಡ್‌ರೋಬ್ ರಿಫ್ರೆಶ್ ಸೇಲ್ ಸಹ ಡಿಸೆಂಬರ್ 9 ರಿಂದ 14 ರವರೆಗೆ ನಡೆಯಲಿದೆ. ಈ ಸೇಲ್‌ನಲ್ಲಿ ಪುರುಷರು ಮತ್ತು ಮಹಿಳೆಯರ ಫ್ಯಾಷನ್ ವಸ್ತುಗಳ ಮೇಲೆ ಬರೋಬ್ಬರಿ 80% ವರೆಗೆ ರಿಯಾಯಿತಿ ನೀಡಲಾಗುತ್ತದೆ.
* ಇದಾದ ನಂತರ ಮತ್ತೆ ಬುಕ್ ಬಜಾರ್ ಸೇಲ್ ಡಿಸೆಂಬರ್ 10 - 14ರ ವರೆಗೆ ಇರಲಿದೆ. ಈ ಸೇಲ್‌ನಲ್ಲಿ 15,000+ ಪುಸ್ತಕಗಳ ಮೇಲೆ 60% ವರೆಗೆ ರಿಯಾಯಿತಿ ಸಿಗಲಿದೆ ಹಾಗೆಯೇ ಅಮೆಜಾನ್ ಕ್ರಿಸ್ಮಸ್ ಸೇಲ್ ಡಿಸೆಂಬರ್ 20 - 26ರ ವರೆಗೆ ಇರಲಿದ್ದು, ಅಮೆಜಾನ್ ವರ್ಷದ ಅಂತ್ಯದ ಮಾರಾಟ ಡಿಸೆಂಬರ್ 28 - 31ರ ವರೆಗೆ ಇರಲಿದೆ.


Click it and Unblock the Notifications








