Subscribe to Gizbot

ನಿಮ್ಮ ಕೈಬರಹವನ್ನು ಕಂಪ್ಯೂಟರ್‌ ಫಾಂಟ್‌ ಮಾಡುವುದು ಹೇಗೆ ?

Written By:

ನಿಮ್ಮ ಕಂಪ್ಯೂಟರ್‌ನಲ್ಲಿನ ಅಕ್ಷರ ವಿನ್ಯಾಸಗಳು (Font style) ನಿಮಗೆ ಬೇಸರ ವೆನಿಸಿದ್ದಲ್ಲಿ ನಿಮ್ಮ ಕೈಬರಹದ ಶೈಲಿಯಲ್ಲಿ ನಿಮ್ಮ ಕಂಪ್ಯೂಟರ್‌ನಲ್ಲಿ ವಯಕ್ತಿಕ ಅಕ್ಷರ ವಿನ್ಯಾಸವನ್ನು ಈಗ ಸರಳವಾಗಿ ವ್ಯವಸ್ಥೆ ಮಾಡಬಹುದಾಗಿದೆ. ಈ ವಿನ್ಯಾಸವನ್ನು ವಿಂಡೋಸ್‌, ಲಿನಕ್ಸ್‌ ಅಥವಾ ಮ್ಯಾಕ್‌ ಸಿಸ್ಟಮ್‌ಗಳಲ್ಲೂ ಸಹ ವ್ಯವಸ್ಥೆಗೊಳಿಸಬಹುದಾಗಿದೆ. ಅದು ಹೇಗೆ ಎಂಬುದನ್ನು ಲೇಖನದ ಸ್ಲೈಡರ್‌ಗಳನ್ನು ಓದಿ ತಿಳಿಯಿರಿ.

ಓದಿರಿ: ಯಾವುದೇ ಲೆಕ್ಕಗಳನ್ನು ಬಗೆಹರಿಸಿ 1 ಸೆಕೆಂಡ್‌ನಲ್ಲಿ : ಆಪ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
yourFonts.com

yourFonts.com

ನೆನಪಿಡಿ : ನೀವು ನಿಮ್ಮ ಕೈಬರಹದ ಅಕ್ಷರ ವಿನ್ಯಾಸ ವ್ಯವಸ್ಥೆಗೊಳಿಸಲು ಪ್ರಿಂಟರ್, ಸ್ಕ್ಯಾನರ್‌ ಮತ್ತು ಇಂಟರ್ನೆಟ್‌ ವ್ಯವಸ್ಥೆ ಖಂಡಿತ ಬೇಕು. ಇಂಟರ್ನೆಟ್‌ ವ್ಯವಸ್ಥೆಯಿಂದ yourFonts.com ಗೆ ಸಂಪರ್ಕ ಹೊಂದಬೇಕು.

ಅಕ್ಷರ ವಿನ್ಯಾಸ

ಅಕ್ಷರ ವಿನ್ಯಾಸ

ನೀವು yourFonts.com ನಲ್ಲಿ ಡೌನ್‌ಲೋಡ್‌ ಮಾಡುವ ಅಕ್ಷರ ವಿನ್ಯಾಸವನ್ನು ನಿಮ್ಮ ಕಂಪ್ಯೂಟರ್‌ನ ಯಾವುದೇ ಅಪ್ಲಿಕೇಶನ್‌ಗಳಲ್ಲೂ ಸಹ ಬಳಸಬಹುದು. ನೀವು ಡೌನ್‌ಲೋಡ್‌ ಮಾಡುವ ಟೆಂಪ್ಲೇಟ್‌ ಈ ಚಿತ್ರದಲ್ಲಿರುವಂತೆ ಕಾಣುತ್ತದೆ.

ಡೌನ್‌ಲೋಡ್‌ ಶೀಟ್‌ ಬಳಕೆ

ಡೌನ್‌ಲೋಡ್‌ ಶೀಟ್‌ ಬಳಕೆ

yourFonts.com ನಲ್ಲಿ ಡೌನ್‌ಲೋಡ್‌ ಮಾಡಿದ ಶೀಟ್‌ ಅನ್ನು ಪ್ರಿಂಟ್‌ ತೆಗೆದುಕೊಳ್ಳಬೇಕು. ನಂತರದಲ್ಲಿ ಶೀಟ್‌ನಲ್ಲಿರುವ ಬಾಕ್ಸ್‌ಗಳಲ್ಲಿ ಆ ಅಕ್ಷರಕ್ಕೆ ಸರಿಹೊಂದುವ ನಿಮ್ಮ ಕೈಬರಹವನ್ನು ಬರೆಯಬೇಕು. ಡೌನ್‌ಲೋಡ್‌ ಮಾಡಿದ ಶೀಟ್‌ನಲ್ಲಿ ಎರಡನೇ ಶೀಟ್‌ ವಿಶೇಷ ಅಕ್ಷರಗಳನ್ನು ಹೊಂದಿರುತ್ತದೆ.

ನೀವು ಫಿಲ್‌ ಮಾಡಿದ ಶೀಟ್‌

ನೀವು ಫಿಲ್‌ ಮಾಡಿದ ಶೀಟ್‌

ಚಿತ್ರದಲ್ಲಿ ನೀವು ಫೀಲ್‌ ಮಾಡಿದ ಶೀಟ್‌ ಉದಾಹರಣೆಗೆ ಈ ರೀತಿ ಇರಬೇಕು. ಈ ಶೀಟ್‌ ಅನ್ನು ಸ್ಕ್ಯಾನ್‌ ಮಾಡಿ ಡಿಜಿಟಲ್‌ ಫೈಲ್‌ ಮಾಡಬೇಕು. ನಂತರದಲ್ಲಿ ಸ್ಕ್ಯಾನ್‌ ಮಾಡಿದ ಫೈಲ್‌ ಅನ್ನು JPG, GIF, PNG ಫೈಲ್‌ ಆಗಿ ಬದಲಾಯಿಸಬೇಕು. ನಂತರ ಅದನ್ನು yourFonts.com ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಬೇಕು. ವೆಬ್‌ಸೈಟ್‌ ಅಕ್ಷರ ವಿನ್ಯಾಸವನ್ನು ನಿಮಗೆ ಕ್ರಿಯೇಟ್‌ ಮಾಡಿಕೊಡುತ್ತದೆ.

ಅಕ್ಷರಕ್ಕೆ ಹೆಸರು ಮತ್ತು ಹಕ್ಕುಸ್ವಾಮ್ಯ ಪ್ರಕ್ರಿಯೆ

ಅಕ್ಷರಕ್ಕೆ ಹೆಸರು ಮತ್ತು ಹಕ್ಕುಸ್ವಾಮ್ಯ ಪ್ರಕ್ರಿಯೆ

ಟೆಂಪ್ಲೇಟ್‌ ಅಪ್‌ಲೋಡ್‌ ವಿಧಾನದಲ್ಲಿ ಸರಳ ಮಾಹಿತಿಗಳನ್ನು ಫಿಲ್‌ ಮಾಡಬೇಕು.

ಅಕ್ಷರಕ್ಕೆ ಹೆಸರು ಮತ್ತು ಹಕ್ಕುಸ್ವಾಮ್ಯ ಪ್ರಕ್ರಿಯೆ

ಅಕ್ಷರಕ್ಕೆ ಹೆಸರು ಮತ್ತು ಹಕ್ಕುಸ್ವಾಮ್ಯ ಪ್ರಕ್ರಿಯೆ

ಒಮ್ಮೆ ನೀವು ನೀಡಿದ ಅಕ್ಷರ ಹೆಸರನ್ನು ಮರು ನಿರ್ದೇಶಿಸಲಾಗುತ್ತದೆ. ಹಾಗೂ ಈ ಹಂತದಲ್ಲಿ ನಿಮ್ಮ ಅಕ್ಷರ ವಿನ್ಯಾಸ ಕ್ರಿಯೇಟ್‌ ಆಗಿ ಡೌನ್‌ಲೋಡ್‌ ಅನ್ನು ಸಹ ಕೇಳುತ್ತದೆ.

 ಡೌನ್‌ಲೋಡ್‌ ಮಾಡಿ

ಡೌನ್‌ಲೋಡ್‌ ಮಾಡಿ

ಡೌನ್‌ಲೋಡ್‌ ಮಾಡಿ ಇನ್ಸ್ಟಾಲ್‌ ಮಾಡಿ ಬಳಕೆ ಮಾಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here’s How You Can Create A Computer Font With Your Own Handwriting.Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot