Home
ಸುದ್ದಿಜಾಲ

ಜಿಯೋ ಗ್ರಾಹಕರೇ ಇಲ್ಲಿ ಗಮನಿಸಿ!..ಬೆಲೆ ಏರಿಕೆ ಕಂಡ ಪ್ಲ್ಯಾನ್‌ಗಳ ಹೊಸ ಬೆಲೆ ಎಷ್ಟು ಗೊತ್ತಾ?

ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್‌ ಹಾಗೂ ವಿ ಟೆಲಿಕಾಂ ಸಂಸ್ಥೆಗಳು ದೇಶದ ಖಾಸಗಿ ಟೆಲಿಕಾಂ ಸಂಸ್ಥೆಗಳಾಗಿ ಗುರುತಿಸಿಕೊಂಡಿವೆ. ಈ ಟೆಲಿಕಾಂಗಳು ಇದೀಗ ತಮ್ಮ ರೀಚಾರ್ಜ್‌ ಯೋಜನೆಗಳಿಗೆ ಪರಿಷ್ಕೃತ ಶುಲ್ಕ ಘೋಷಿಸಿವೆ. ನೂತನ ಬೆಲೆಗಳು ಇದೇ ಜುಲೈ 3, 2024 ರಿಂದ ಜಾರಿಗೆ ಬರಲಿವೆ. ಹಾಗೆಯೇ ಜಿಯೋದ ಯೋಜನೆಗಳು ಬೆಲೆ ಏರಿಕೆ ಕಂಡಿರುವುದು ಗ್ರಾಹಕರಿಗೆ ಅಚ್ಚರಿ ಮೂಡಿಸಿದೆ. ಹಾಗಾದರೇ ಜಿಯೋ ಟೆಲಿಕಾಂನ ಹೊಸ ಯೋಜನೆಗಳ ಪೂರ್ಣ ಲಿಸ್ಟ್‌ ಮುಂದೆ ನೋಡೋಣ ಬನ್ನಿರಿ.

ಜಿಯೋದ ಈ ಹಿಂದಿನ 155ರೂ ಯೋಜನೆಯು ಈಗ 189ರೂ ಬೆಲೆಯಲ್ಲಿ ಲಭ್ಯ ಇರಲಿದೆ. ಇದು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ನೀಡುತ್ತದೆ. ಅಲ್ಲದೇ 2GB ಡೇಟಾ, ಅನಿಯಮಿತ ವಾಯಿಸ್‌ ಕರೆ ಮತ್ತು ನಿತ್ಯ 100 ಎಸ್‌ಎಮ್‌ಎಸ್‌ ಪ್ರಯೋಜನ ಪಡೆದಿದೆ. ಅನ್ನು ಜಿಯೋದ 209ರೂ. ಪ್ಲ್ಯಾನ್‌ ಈಗ 249 ರೂ. ಗಳ ಪ್ರೈಸ್‌ ಟ್ಯಾಗ್‌ನಲ್ಲಿ ಗ್ರಾಹಕರಿಗೆ ಲಭ್ಯ. ಈ ಯೋಜನೆಯಲ್ಲಿ ಪ್ರತಿದಿನ 1GB ಡೇಟಾ, ಅನಿಯಮಿತ ವಾಯಿಸ್‌ ಕರೆ ಮತ್ತು ನಿತ್ಯ 100 ಎಸ್‌ಎಮ್‌ಎಸ್‌ ಪ್ರಯೋಜನ ಸಿಗಲಿವೆ.

ಜಿಯೋ ಗ್ರಾಹಕರೇ ಇಲ್ಲಿ ಗಮನಿಸಿ!..ಬೆಲೆ ಏರಿಕೆ ಕಂಡ ಪ್ಲ್ಯಾನ್‌ಗಳ ಹೊಸ ಬೆಲೆ ಎಷ್ಟು

ಅದೇ ರೀತಿ ಜಿಯೋದ 239ರೂ. ಪ್ಲ್ಯಾನ್‌ ಇದೀಗ 299 ರೂ. ಗಳ ಬೆಲೆಯಲ್ಲಿ ಲಭ್ಯವಾಗಲಿದೆ. ಈ ಯೋಜನೆಯು ಪ್ರತಿದಿನ 1.5GB ಡೇಟಾ ಪ್ರಯೋಜನ ಪಡೆದುಕೊಂಡಿದ್ದು, ಜೊತೆಗೆ ಅನಿಯಮಿತ ವಾಯಿಸ್‌ ಕರೆ ಮತ್ತು ನಿತ್ಯ 100 ಎಸ್‌ಎಮ್‌ಎಸ್‌ ಪ್ರಯೋಜನ ಅನ್ನು ಒಳಗೊಂಡಿದೆ. ಅಲ್ಲದೇ ಜಿಯೋದ 399 ರೂ. ಯೋಜನೆಯು ಈಗ 449 ರೂ. ಬೆಲೆಯಲ್ಲಿ ರೀಚಾರ್ಜ್‌ಗೆ ಲಭ್ಯ. ಈ ಯೋಜನೆಯು ದಿನಕ್ಕೆ 3 GB ಡೇಟಾ ಸೌಲಭ್ಯವನ್ನು ಒಳಗೊಂಡಿದೆ.

ಅದೇ ರೀತಿ ಜಿಯೋ ಟೆಲಿಕಾಂನ 479ರೂ. ಗಳ ಯೋಜನೆಯು ಈಗ 579ರೂ. ಗಳ ದರದಲ್ಲಿ ಲಭ್ಯ ಇರಲಿದೆ. ಈ ಯೋಜನೆಯು 56 ದಿನಗಳ ವ್ಯಾಲಿಡಿಟಿ ಪಡೆದಿದ್ದು, ನಿತ್ಯ 1.5 GB ಡೇಟಾ ಪ್ರಯೋಜನ ನೀಡುತ್ತದೆ. ಹಾಗೆಯೇ ಅನಿಯಮಿತ ವಾಯಿಸ್‌ ಕರೆ, 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಸಿಗಲಿದೆ. ಜಿಯೋದ 533ರೂ. ಇದ್ದ ಪ್ರೀಪೇಯ್ಡ್‌ ಯೋಜನೆ ಈಗ 629 ರೂ. ಬೆಲೆಯಲ್ಲಿ ಸಿಗಲಿದೆ. ಈ ಯೋಜನೆಯು 56 ದಿನಗಳ ವ್ಯಾಲಿಡಿಟಿ ಪಡೆದಿದ್ದು, ನಿತ್ಯ 2GB ಡೇಟಾ ಪ್ರಯೋಜನ ನೀಡುತ್ತದೆ. ಹಾಗೆಯೇ ಅನಿಯಮಿತ ವಾಯಿಸ್‌ ಕರೆ, 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಸಿಗಲಿದೆ.

ಹಾಗೆಯೇ ಜಿಯೋದ 666ರೂ. ಬೆಲೆಯ ಯೋಜನೆ ಈಗ 799 ರೂ. ಬೆಲೆಯಲ್ಲಿ ರೀಚಾರ್ಜ್‌ಗೆ ಸಿಗಲಿದೆ. ಈ ಪ್ಲ್ಯಾನ್‌ 84 ದಿನಗಳ ವ್ಯಾಲಿಡಿಟಿ ಪಡೆದಿದ್ದು, ಪ್ರತಿದಿನ 1.5GB ಡೇಟಾ ಪ್ರಯೋಜನ ನೀಡುತ್ತದೆ. ಹಾಗೆಯೇ ಅನಿಯಮಿತ ವಾಯಿಸ್‌ ಕರೆ, 100 ಎಸ್‌ಎಮ್‌ಎಸ್‌ ಸೌಲಭ್ಯ ಕೂಡಾ ಲಭ್ಯ. ಜಿಯೋದ 719 ರೂ. ದರದ ಪ್ಲ್ಯಾನ್‌ ಈಗ 859 ರೂ. ಬೆಲೆಯಲ್ಲಿ ಲಭ್ಯ. ಈ ಪ್ಲ್ಯಾನ್‌ 84 ದಿನಗಳ ವ್ಯಾಲಿಡಿಟಿ ಪಡೆದಿದ್ದು, ಪ್ರತಿದಿನ 2GB ಡೇಟಾ ಪ್ರಯೋಜನ ನೀಡುತ್ತದೆ. ಹಾಗೆಯೇ ಅನಿಯಮಿತ ವಾಯಿಸ್‌ ಕರೆ, 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಸಿಗಲಿದೆ.

ಜಿಯೋದ 999ರೂ. ದರದ ಪ್ಲ್ಯಾನ್‌ ಈಗ 1199 ರೂ. ಬೆಲೆಯಲ್ಲಿ ಲಭ್ಯ. ಈ ಪ್ಲ್ಯಾನ್‌ 84 ದಿನಗಳ ವ್ಯಾಲಿಡಿಟಿ ಪಡೆದಿದ್ದು, ಪ್ರತಿದಿನ 3GB ಡೇಟಾ ಪ್ರಯೋಜನ ನೀಡುತ್ತದೆ. ಹಾಗೆಯೇ ಅನಿಯಮಿತ ವಾಯಿಸ್‌ ಕರೆ, 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಸಿಗಲಿದೆ. ಹಾಗೆಯೇ 2999ರೂ. ಬೆಲೆಯ ಪ್ಲ್ಯಾನ್‌ 3599ರೂ. ಗಳಿಗೆ ಜಿಗಿತ ಕಂಡಿದೆ. ಇನ್ನು ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಪಡೆದಿದ್ದು, ದಿನವೂ 2.5 GB ಡೇಟಾ ನೀಡುತ್ತದೆ.

Best Mobiles in India

English summary
Here is the Full list of JIO Plans that have received a Price Hike. check all plans new price here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+