Home
ಸುದ್ದಿಜಾಲ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ 5, ಫ್ಲಿಪ್‌ 5 ಖರೀದಿದಾರರೇ ಗಮನಿಸಿ,ಇವುಗಳ ರಿಪೇರಿ ವೆಚ್ಚ ತಲೆ ತಿರುಗಿಸುತ್ತೆ!

ಸ್ಯಾಮ್‌ಸಂಗ್‌ ಕೆಲವು ದಿನಗಳ ಹಿಂದೆ ವಿವಿಧ ಸ್ಮಾರ್ಟ್‌ ಡಿವೈಸ್‌ಗಳನ್ನು ಅನಾವರಣ ಮಾಡಿದೆ. ಅದರಲ್ಲೂ ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ 5 ಹಾಗೂ ಫ್ಲಿಪ್‌ 5 (Samsung Galaxy Z Fold 5 and Flip 5) ಸಹ ಲಾಂಚ್‌ ಆಗಿದ್ದು, ಆರಂಭದಲ್ಲೇ ಈ ಡಿವೈಸ್‌ಗಳ ಸಂಬಂಧ ಶಾಕ್‌ ಆಗುವ ಸುದ್ದಿ ಹೊರಬಿದ್ದಿದೆ. ಈ ಮೂಲಕ ಇವುಗಳನ್ನು ಖರೀದಿ ಮಾಡಬೇಕೋ ಅಥವಾ ಬೇಡವೋ ಎಂಬ ಗೊಂದಲದಲ್ಲಿ ಗ್ರಾಹಕರು ಇರುವಂತಾಗಿದೆ.

ಹೌದು, ಸ್ಯಾಮ್‌ಸಂಗ್‌ (Samsung) ತಮ್ಮ ಯಾವುದೇ ಡಿವೈಸ್‌ಗಳಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ಹಾಗೂ ದೀರ್ಘ ಬಾಳಿಕೆಗೆ ಹೆಚ್ಚಿನ ಮಹತ್ವ ನೀಡುತ್ತದೆ.ಆದರೆ, ಈ ಹೊಸ ಡಿವೈಸ್‌ಗಳ ವಿಚಾರಕ್ಕೆ ಬಂದರೆ ಮಾತ್ರ ಗ್ರಾಹಕರು ಕೆಲಕಾಲ ಯೋಚನೆ ಮಾಡುವಂತೆ ಆಗುತ್ತದೆ. ಯಾಕೆಂದರೆ ಇವುಗಳನ್ನು ಖರೀದಿ ಮಾಡಿದ ಮೇಲೂ ನೀವು ಭಾರೀ ಬೆಲೆ ತೆರಬೇಕಾಗುತ್ತದೆ. ಹಾಗಿದ್ರೆ, ಏನಿದು ಸಮಸ್ಯೆ?, ಯಾವ ಕಾರಣಕ್ಕೆ ಹೆಚ್ಚಿನ ಬೆಲೆ ಪಾವತಿ ಮಾಡಬೇಕು? ಎಂಬ ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ 5, ಫ್ಲಿಪ್‌ 5 ಖರೀದಿದಾರರೇ ಗಮನಿಸಿ...

ಸ್ಯಾಮ್‌ಸಂಗ್ ತನ್ನ ಇತ್ತೀಚಿನ ಅತ್ಯಾಧುನಿಕ ಗ್ಯಾಲಕ್ಸಿ Z ಫೋಲ್ಡ್ 5 ಮತ್ತು ಗ್ಯಾಲಕ್ಸಿ Z ಫ್ಲಿಪ್ 5 ಡಿವೈಸ್‌ಗಳನ್ನು ಭಾರತದಲ್ಲಿ ಅನಾವರಣ ಮಾಡಿದ್ದು, ಇವು ಪ್ರಸ್ತುತ ಮಾರುಕಟ್ಟೆಯಲ್ಲಿ ಉತ್ತಮವಾದ ಫೋಲ್ಡಬಲ್ ಫೋನ್‌ ಎನಿಸಿಕೊಂಡಿವೆ. ಜೊತೆಗೆ ಇವು ಹೆಚ್ಚಿನ ಬೆಲೆಯನ್ನೂ ಸಹ ಹೊಂದಿರುವುದು ಮತ್ತೊಂದು ವಿಷಯ. ಆದರೆ, ನೀವೇನಾದರೂ ಆಕಸ್ಮಿಕವಾಗಿ ಅವುಗಳನ್ನು ಮುರಿದರೆ ದುರಸ್ತಿ ವೆಚ್ಚವು ಎಷ್ಟೆಂದು ತಿಳಿದಿದೆಯಾ.?

ಗ್ಯಾಲಕ್ಸಿ Z ಫೋಲ್ಡ್ 5 ರಿಪೇರಿ ವೆಚ್ಚ: ಈ ಫೋನ್‌ನ ಇನ್‌ಸೈಡ್‌ ಡಿಸ್‌ಪ್ಲೇ ಹಾನಿಗೊಳಗಾದರೆ ಅದನ್ನು ಸರಿಪಡಿಸಲು ನೀವು 41,002 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಸಬ್ ಸ್ಕ್ರೀನ್ ರಿಪೇರಿ ಬೆಲೆ 6,236 ರೂ. ಮದರ್‌ಬೋರ್ಡ್‌ನ ಆರಂಭಿಕ ಬೆಲೆ 256GB ಮಾದರಿಗೆ 27,879ರೂ.ಗಳು ಮತ್ತು ಇದು 1TB ಮಾದರಿಗೆ 29,490 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಉಳಿದಂತೆ ಬ್ಯಾಟರಿ ಸಮಸ್ಯೆಯನ್ನು ಸರಿಪಡಿಸಲು ಗ್ರಾಹಕರು 1,552 ರೂ. ಹಿಂಬಾಗದ ಪ್ಯಾನಲ್‌ಗೆ 2,605ರೂ.ಗಳನ್ನು ಪಾವತಿ ಮಾಡಬೇಕಿದೆ.

ಪ್ರಮುಖ ವಿಷಯ ಏನೆಂದರೆ ಈ ಎಲ್ಲಾ ಬೆಲೆಗಳು ಸೇವಾ ಶುಲ್ಕ ಮತ್ತು ಜಿಎಸ್‌ಟಿಯನ್ನು ಹೊರತುಪಡಿಸಿವೆ. ಅಂದರೆ ನೀವೇ ಊಹೆ ಮಾಡಿಕೊಳ್ಳಿ ಈ ಬೆಲೆಯಲ್ಲೂ ಸೇರಿಸಿದರೆ ಖರೀದಿಗೆ ಎಷ್ಟು ಪಾವತಿ ಮಾಡಬೇಕಾಗುತ್ತದೆ ಎಂದು. ಅದಾಗ್ಯೂ ಗ್ಯಾಲಕ್ಸಿ Z ಫೋಲ್ಡ್‌ 4 ರಿಪೇರಿ ಬೆಲೆಗಳ ಲಿಸ್ಟ್‌ಗಿಂತ ಕಡಿಮೆ ಇದೆ ಎಂಬುದೇ ಸಂತಸದ ಸುದ್ದಿ. ಪರಿಣಾಮ ನೀವು ಖರೀದಿ ಮಾಡುವ ಅಥವಾ ಮಾಡಿರುವ ಫೋನ್‌ ಅನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿ.

ಈ ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ 5 (Samsung Galaxy Z Fold 5) ಅನ್ನು ಭಾರತದಲ್ಲಿ 12GB + 256GB ವೇರಿಯಂಟ್‌ಗೆ 154,999 ರೂ.ಗಳನ್ನು ನೀಡುವ ಮೂಲಕ ಖರೀದಿ ಮಾಡಬಹುದು. ಹಾಗೂ 12GB + 512GB ಮಾದರಿಗೆ 164,999 ರೂ. ಗಳ ಬೆಲೆ ನಿಗದಿ ಮಾಡಲಾಗಿದೆ. ಅದರಲ್ಲೂ ಕೊಡುಗೆ ಭಾಗವಾಗಿ ಈ ಫೋನ್‌ಗಳನ್ನು ಆಫರ್‌ ಬೆಲೆಗೆ ಖರೀದಿ ಮಾಡಬಹುದು.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್‌ 5 ರಿಪೇರಿ ವೆಚ್ಚ ಎಷ್ಟು?: ಮತ್ತೊಂದು ಫೋನ್‌ನ (Samsung Galaxy Z Flip 5) ರಿಪೇರಿ ವಿಚಾರಕ್ಕೆ ಬರುವುದಾದರೆ ಮುಖ್ಯ ಡಿಸ್‌ಪ್ಲೇ ವೆಚ್ಚ 21,188 ರೂ ಆಗಿದ್ದರೆ, ಹೊರ ಡಿಸ್‌ಪ್ಲೇ ಗೆ 5,507ರೂ. ಗಳನ್ನು ಪಾವತಿ ಮಾಡಬೇಕು. ಹಾಗೆಯೇ ಮದರ್‌ಬೋರ್ಡ್ ರಿಪೇರಿ ವೆಚ್ಚವು 256GB ಸ್ಟೋರೇಜ್ ವೇರಿಯಂಟ್‌ಗೆ 27,444 ರಿಂದ ಪ್ರಾರಂಭವಾಗುತ್ತದೆ ಹಾಗೂ ರಿಯರ್‌ ಗ್ಲಾಸ್ ಪ್ಯಾನಲ್ ಬೆಲೆ 1,136 ರೂ.ಗಳಾಗಿದ್ದು, ಬ್ಯಾಟರಿಯಲ್ಲಿ ಸಮಸ್ಯೆಯಿದ್ದರೆ 1,513 ರೂ.ಗಳನ್ನು ನೀಡಬೇಕಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ 5, ಫ್ಲಿಪ್‌ 5 ಖರೀದಿದಾರರೇ ಗಮನಿಸಿ...

ಸ್ಯಾಮ್‌ಸಂಗ್‌ ಹೊರತುಪಡಿಸಿ ಐಫೋನ್ 14 ಪ್ರೊ ಮಾದರಿಗಳ ದುರಸ್ತಿ ವೆಚ್ಚ ಇನ್ನೂ ಹೆಚ್ಚಾಗಿದೆ ಎಂಬುದು ನಿಮಗೆ ತಿಳಿದಿರಲಿ. ನೀವು ಆಕಸ್ಮಿಕವಾಗಿ ಐಫೋನ್‌ 14 ಪ್ರೊ ಮ್ಯಾಕ್ಸ್‌ ನ ಗ್ಲಾಸ್ ಬ್ಯಾಕ್ ಪ್ಯಾನೆಲ್ ಅನ್ನು ಒಡೆದರೆ, ಆಪಲ್‌ನ ಅಧಿಕೃತ ವೆಬ್‌ಸೈಟ್‌ನ ಪ್ರಕಾರ ಇದರ ಅಂದಾಜು ದುರಸ್ತಿ ವೆಚ್ಚ 54,900 ರೂ. ಗಳು. ಸ್ಕ್ರೀನ್ ಮತ್ತು ಬ್ಯಾಟರಿ ಹಾನಿಗೆ ಕ್ರಮವಾಗಿ 37,900 ಮತ್ತು 9,400 ರೂ.ಗಳನ್ನು ಪಾವತಿ ಮಾಡಬೇಕಿದೆ.

ಇದರಲ್ಲಿ ಗಮನಿಸಬೇಕಾದ ಒಂದು ವಿಶೇಷ ಸುದ್ದಿ ಎಂದರೆ ಈ ಬೆಲೆ ವಿಷಯದಲ್ಲಿ ಸ್ಯಾಮ್‌ಸಂಗ್‌ ಪಾರದರ್ಶಕವಾಗಿದೆ. ಯಾಕೆಂದರೆ ಈ ರೀತಿಯ ಬೆಲೆ ವಿವರಗಳನ್ನು ನೀಡದಿದ್ದರೆ ರಿಪೇರಿ ಸ್ಟೋರ್‌ಗಳು ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆ ಪೀಕುವ ಸಾಧ್ಯತೆ ಇತ್ತು. ಇದರಿಂದಾಗಿ ಹೆಚ್ಚಿನ ಶುಲ್ಕವನ್ನು ವಿಧಿಸಲು ಪ್ರಯತ್ನಿಸಬಹುದಾದ ರಿಪೇರಿ ಅಂಗಡಿಗಳ ಕ್ರಮಕ್ಕೆ ಈ ಮೂಲಕ ಬ್ರೇಕ್‌ ಹಾಕಿದಂತಾಗಿದೆ.

Best Mobiles in India

English summary
Samsung Galaxy Z Fold 5 and Galaxy Z Flip 5 devices have to be repaired after paying a huge price if there is any problem.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+