Home
ಸುದ್ದಿಜಾಲ

100Mbps ವೇಗ ನೀಡುವ ಅತ್ಯುತ್ತಮ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳು!

ಇಂದಿನ ದಿನಗಳಲ್ಲಿ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಅನಿಯಮಿತ ವೇಗದ ಇಂಟರ್‌ನೆಟ್‌ ಸೌಲಭ್ಯಕ್ಕಾಗಿ ಹೆಚ್ಚಿನ ಜನರು ಬ್ರಾಡ್‌ಬ್ಯಾಂಡ್‌ ಸೇವೆಗಳನ್ನು ಪಡೆದುಕೊಳ್ಳಲು ಬಯಸುತ್ತಾರೆ. ಇದೇ ಕಾರಣಕ್ಕೆ ಟೆಲಿಕಾಂ ಕಂಪೆನಿಗಳು ಸೇರಿದಂತೆ ಹಲವು ಕಂಪೆನಿಗಳು ಅತ್ಯುತ್ತಮ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಇವುಗಳಲ್ಲಿ ಅಲ್ಫಾವಧಿಯಿಂದ ಹಿಡಿದು ದೀರ್ಘಾವಧಿಯ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳು ಲಭ್ಯವಿದೆ.

ಇಂಟರ್‌ನೆಟ್‌

ಹೌದು, ಅನಿಯಮಿತ ವೇಗದ ಇಂಟರ್‌ನೆಟ್‌ ಸೇವೆ ನೀಡುವ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳು ಪ್ರಸಿದ್ಧಿ ಪಡೆದುಕೊಂಡಿವೆ. ಇದರಲ್ಲಿ ಜಿಯೋಫೈಬರ್‌, ಟಾಟಾ ಪ್ಲೇ, ಏರ್‌ಟೆಲ್‌ ಎಕ್ಸ್‌ಟ್ರಿಮ್ ಕಂಪೆನಿಯ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳು ಗ್ರಾಹಕರನ್ನು ಆಕರ್ಷಿಸಿವೆ. ಇವುಗಳಲ್ಲಿ 100Mbps ವೇಗದ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳು ಸಾಕಷ್ಟು ಸದ್ದು ಮಾಡಿವೆ. ಹಾಗಾದ್ರೆ 100Mbps ವೇಗ ನೀಡುವ ಅತ್ಯುತ್ತಮ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಜಿಯೋ ಫೈಬರ್‌

ಜಿಯೋ ಫೈಬರ್‌

ಜಿಯೋ ಪೈಬರ್‌ 100Mbps ಬ್ರಾಡ್‌ಬ್ಯಾಂಡ್‌ ಪ್ಲಾನ್‌ 699ರೂ.ಬೆಲೆಯಲ್ಲಿ ಬರಲಿದೆ. ಆದರೆ ಈ ಪ್ಲಾನ್‌ GST ಯೊಂದಿಗೆ, ಅಧಿಕೃತ MyJio ಅಪ್ಲಿಕೇಶನ್‌ನಲ್ಲಿ 824ರೂ. ಬೆಲೆ ಪಾವತಿಸಬೇಕಾಗುತ್ತದೆ. ಇನ್ನು ಈ ಪ್ಲಾನ್‌ 30 ದಿನಗಳ ಮಾನ್ಯತೆಯನ್ನು ಒಳಗೊಂಡಿದೆ. ಇದರಲ್ಲಿ ಬಳಕೆದಾರರು ಅನಿಯಮಿತ ಡೇಟಾ ಮತ್ತು ಉಚಿತ ವಾಯ್ಸ್‌ ಕಾಲ್‌ ಸೌಲಭ್ಯ ಕೂಡ ಲಭ್ಯ. ಇನ್ನು ಈ ಪ್ಲಾನ್‌ನಲ್ಲಿ ನಿಮಗೆ ಯಾವುದೇ OTT ಪ್ರಯೋಜನಗಳನ್ನು ಪಡೆಯಲು ಅವಕಾಶವಿಲ್ಲ.

ಏರ್‌ಟೆಲ್ ಎಕ್ಸ್‌ಸ್ಟ್ರೀಮ್

ಏರ್‌ಟೆಲ್ ಎಕ್ಸ್‌ಸ್ಟ್ರೀಮ್

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ 100Mbps ಬ್ರಾಡ್‌ಬ್ಯಾಂಡ್ ಪ್ಲಾನ್‌ 799ರೂ.ಬೆಲೆ ಹೊಂದಿದೆ. ಈ ಪ್ಲಾನ್‌ನಲ್ಲಿ ಬಳಕೆದಾರರು ಅನಿಯಮಿತ ಸ್ಥಳೀಯ ಮತ್ತು STD ಕರೆ ಸೌಲಭ್ಯ ಲಭ್ಯವಿದೆ. ಜೊತೆಗೆ 100Mbps ವೇಗದೊಂದಿಗೆ ಅನಿಯಮಿತ ಡೇಟಾ ದೊರೆಯಲಿದೆ. ಇದಲ್ಲದೆ ಈ ಪ್ಲಾನ್‌ನಲ್ಲಿ FASTag ಕ್ಯಾಶ್‌ಬ್ಯಾಕ್ ಆಫರ್‌ ಮತ್ತು ವಿಂಕ್‌, ಅಪೋಲೋ, ಎಕ್ಸ್‌ಟ್ರಿಮ್‌ ಪ್ರಿಮೀಯಂಗೆ ಪ್ರವೇಶ ದೊರೆಯಲಿದೆ.

ಟಾಟಾ ಪ್ಲೇ

ಟಾಟಾ ಪ್ಲೇ

ಟಾಟಾ ಪ್ಲೇ 100Mbps ಬ್ರಾಡ್‌ಬ್ಯಾಂಡ್‌ ಪ್ಲಾನ್‌ ನಿಮಗೆ 30 ದಿನಗಳ ಅವಧಿಗೆ 850ರೂ.ಬೆಲೆಯಲ್ಲಿ ಲಭ್ಯವಾಗಲಿದೆ. ಆದರೆ 3 ತಿಂಗಳ ಅವಧಿಗೆ ಖರೀದಿಸಿದರೆ 2,400ರೂ. ಪಾವತಿಸಬೇಕಾಗುತ್ತದೆ. ಈ ಪ್ಲಾನ್‌ನಲ್ಲಿ ಜನರು ಅನಿಯಮಿತ ಡೇಟಾವನ್ನು ಪಡೆಯಬಹುದಾಗಿದೆ.

ACT ಫೈಬರ್‌ನೆಟ್

ACT ಫೈಬರ್‌ನೆಟ್

ACT ಕಂಪೆನಿ ಭಾರತದಲ್ಲಿ ಎಲ್ಲಾ ನಗರಗಳಲ್ಲಿ 100Mbps ಬ್ರಾಡ್‌ಬ್ಯಾಂಡ್ ಪ್ಲಾನ್‌ ನೀಡುತ್ತಿಲ್ಲ. ಆದರೆ ಚೆನ್ನೈನಲ್ಲಿ ಮಾತ್ರ ಅನಿಯಮಿತ ಡೇಟಾ ಪ್ರಯೋಜನ ನೀಡುವ 100Mbps ಬ್ರಾಡ್‌ಬ್ಯಾಂಡ್ ಪ್ಲಾನ್‌ ನೀಡುತ್ತಿದೆ. ಈ ಪ್ಲಾನ್‌ ಅಧಿಕೃತ ಸೈಟ್‌ನ ಪ್ರಕಾರ ತಿಂಗಳಿಗೆ ಸುಮಾರು 820 ರೂ. ಬೆಲೆ ಹೊಂದಿದೆ. ಇನ್ನು ಇತರೆ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳ ಬಗ್ಗೆ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಏರ್‌ಟೆಲ್‌ 3,999ರೂ ಬ್ರಾಡ್‌ಬ್ಯಾಂಡ್‌ 1Gbps ಪ್ಲ್ಯಾನ್‌

ಏರ್‌ಟೆಲ್‌ 3,999ರೂ ಬ್ರಾಡ್‌ಬ್ಯಾಂಡ್‌ 1Gbps ಪ್ಲ್ಯಾನ್‌

ಏರ್‌ಟೆಲ್‌ನ ಈ ಯೋಜನೆ ದುಬಾರಿ ಬ್ರಾಡ್‌ಬ್ಯಾಂಡ್ ಯೋಜನೆಯಾಗಿದ್ದು, 3,999 ರೂ. ಪ್ರೈಸ್‌ಟ್ಯಾಗ್ ಪಡೆದಿದೆ. ಈ ಯೋಜನೆಯಲ್ಲಿ, ಗ್ರಾಹಕರು ಅನಿಯಮಿತ ಇಂಟರ್ನೆಟ್ ಮತ್ತು ಬೃಹತ್ 1 Gbps ಇಂಟರ್ನೆಟ್ ವೇಗವನ್ನು ಪಡೆಯುತ್ತಾರೆ. ವಾಯಿಸ್ ಕರೆ ಪ್ರಯೋಜನಗಳ ಜೊತೆಗೆ, ಗ್ರಾಹಕರಿಗೆ ಅನಿಯಮಿತ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳು ಸಿಗುತ್ತವೆ. ಹೆಚ್ಚುವರಿ ಪ್ರಯೋಜನಗಳನ್ನು ನೋಡುವುದಾದರೇ ಗ್ರಾಹಕರಿಗೆ ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಏರ್ಟೆಲ್ ಎಕ್ಸ್ಟ್ರೀಮ್ ಆಪ್ ಪ್ರೀಮಿಯಂನ ಉಚಿತ ಚಂದಾದಾರಿಕೆ ಲಭ್ಯ.

Best Mobiles in India

English summary
Here's best 100Mbps broadband plans from JioFiber, Tata Play, Airtel Xstream
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+