ಏರ್‌ಟೆಲ್ ಮತ್ತು ವೋಡಾಫೋನಿನ ಈ ಪ್ರೀಪೇಡ್ ಪ್ಲ್ಯಾನ್‌ಗಳಲ್ಲಿ ಬೆಸ್ಟ್ ಯಾವುದು?
ಸದ್ಯ ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಹಲವು ಪ್ರಮುಖ ಬದಲಾವಣೆಗಳು ನಡೆದಿವೆ. ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಖಾಸಗಿ ಟೆಲಿಕಾಂ ಸಂಸ್ಥೆಗಳು ಅನೇಕ ಆಫರ್‌ಗಳ ಮೂಲಕ ಗ್ರಾಹಕರನ್ನು ಸೆಳೆಯಲು ಹೆಣಗಾಡುತ್ತ ಸಾಗಿವೆ. ಜಿಯೋ ಹೊರತಪಡಿಸಿ, ಏರ್‌ಟೆಲ್ ಮತ್ತು ವೊಡಾಫೋನ್ ಸಂಸ್ಥೆಗಳ ಪ್ರೀಪೇಡ್ ಪ್ಲ್ಯಾನ್‌ಗಳ ಬಗ್ಗೆ ನೋಡುವುದಾದರೇ ಹಲವು ಸಾಮ್ಯತೆಗಳು ಕಾಣಿಸುತ್ತವೆ. ಆದರೆ ಪ್ಲ್ಯಾನ್‌ಗಳಲ್ಲಿ ಸಾಕಷ್ಟು ವಿಭಿನ್ನತೆ ಹೊಂದಿವೆ.

ಹೌದು, ಏರ್‌ಟೆಲ್ ಮತ್ತು ವೊಡಾಫೋನ್ ಟೆಲಿಕಾಂ ಸಂಸ್ಥೆಗಳು ಗ್ರಾಹಕರಿಗೆ ವಿವಿಧ ಶ್ರೇಣಿಯ ಪ್ರಿಪೇಡ್ ಪ್ಲ್ಯಾನ್‌ಗಳನ್ನು ಪರಿಚಯಿಸಿವೆ. ಈ ಎರಡು ಸಂಸ್ಥೆಗಳು ಒಂದು ತಿಂಗಳ ವ್ಯಾಲಿಡಿಟಿಯಿಂದ ಒಂದು ವರ್ಷದ ವ್ಯಾಲಿಡಿಟಿ ಅವಧಿಯವರೆಗಿನ ಆಕರ್ಷಕ ಪ್ಲ್ಯಾನ್‌ಗಳನ್ನು ಹೊಂದಿವೆ. ಅವುಗಳಲ್ಲಿ ಕೆಲವು ಪ್ರೀಪೇಡ್ ಪ್ಲ್ಯಾನ್‌ಗಳು ಒಂದೇ ರೀತಿ ಪ್ರೈಸ್‌ಟ್ಯಾಗ್ ಹೊಂದಿದ್ದು, ಆದರೆ ಪ್ಲ್ಯಾನಿನ ಪ್ರಯೋಜನಗಳಲ್ಲಿ ವ್ಯತ್ಯಾಸ ಇವೆ. ಹಾಗಾದರೇ ಏರ್‌ಟೆಲ್ ಮತ್ತು ವೊಡಾಫೋನ್ ಸಾಮ್ಯತೆಯ ಪ್ರೀಪೇಡ್ ಪ್ಲ್ಯಾನ್‌ಗಳ ನಡುವಿನ ವ್ಯತ್ಯಾಸಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಸಾಮ್ಯತೆಯ ಪ್ಲ್ಯಾನ್‌ಗಳು
ಏರ್‌ಟೆಲ್ ಮತ್ತು ವೊಡಾಫೋನ್ ಸಂಸ್ಥೆಗಳ ಕೆಲವು ಪ್ರೀಪೇಡ್ ಪ್ಲ್ಯಾನ್‌ಗಳು ಒಂದೇ ರೀತಿಯಾಗಿವೆ. ಆ ರೀತಿ ಸಾಮ್ಯತೆ ಇರುವ ಪ್ರೀಪೇಡ್ ಪ್ಲ್ಯಾನ್‌ಗಳೆಂದರೇ 169ರೂ, 199ರೂ. ಪ್ಲ್ಯಾನ್, 299ರೂ. ಪ್ಲ್ಯಾನ್, 399ರೂ.ಪ್ಲ್ಯಾನ್ ಮತ್ತು 349ರೂ. ಪ್ಲ್ಯಾನ್ ಇವುಗಳೊಂದಿಗೆ ವಾರ್ಷಿಕ 1699ರೂ. ಪ್ಲ್ಯಾನ್ ಸಹ ಸಾಮ್ಯತೆ ಆಗಿದೆ. ಆದರೆ ಈ ಪ್ಲ್ಯಾನ್‌ಗಳ ಪ್ರಯೋಜನೆಗಳಲ್ಲಿ ಭಿನ್ನತೆ ಇದೆ.

299ರೂ.ಪ್ರೀಪೇಡ್ ಪ್ಲ್ಯಾನ್
ಏರ್‌ಟೆಲ್ ಮತ್ತು ವೊಡಾಫೋನ್ ಸಂಸ್ಥೆಗಳೆರಡು 299ರೂ.ಗಳ ಪ್ರೀಪೇಡ್ ಪ್ಲ್ಯಾನ್ ಹೊಂದಿವೆ. ಏರ್‌ಟೆಲ್ 299ರೂ.ಪ್ಲ್ಯಾನಿನಲ್ಲಿ 28 ದಿನಗಳ ವ್ಯಾಲಿಡಿಟಿ, ಪ್ರತಿದಿನ 2.5GB ಡೇಟಾ, ಅನಿಯಮಿತ ಕರೆಗಳು, ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಮತ್ತು ಏರ್‌ಟೆಲ್ ಥ್ಯಾಂಕ್ಸ್ ಬೇನಿಫಿಟ್ಸ್‌ಗಳು ಲಭ್ಯವಾಗಲಿವೆ. ಹಾಗೆಯೇ ವೊಡಾಫೋನ್ 299ರೂ.ಪ್ಲ್ಯಾನಿನಲ್ಲಿ 70ದಿನಗಳ ವ್ಯಾಲಿಡಿಟಿ, ಪ್ರತಿದಿನ 3GB ಡೇಟಾ, ಅನಿಯಮಿತ ಕರೆಗಳು, ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 1000 ಉಚಿತ ಎಸ್ಎಮ್‌ಎಸ್‌ಗಳು ಸಿಗಲಿವೆ.

349ರೂ.ಪ್ರೀಪೇಡ್ ಪ್ಲ್ಯಾನ್
349ರೂ.ಪ್ರೀಪೇಡ್ ಪ್ಲ್ಯಾನಿನಲ್ಲಿ ಏರ್‌ಟೆಲ್ ಮತ್ತು ವೊಡಾಫೋನ್ ಎರಡು ಟೆಲಿಕಾಂ ಸಂಸ್ಥೆಗಳು ಅನಿಯಮಿತ ಉಚಿತ ಕರೆಗಳ ಸೌಲಭ್ಯ, ಪ್ರತಿದಿನ 3GB ಡೇಟಾ, ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಪ್ರಯೋಜನಗಳನ್ನು ಹೊಂದಿವೆ. ಆದರೆ ಏರ್‌ಟೆಲ್ ಇದರೊಂದಿಗೆ ಹೆಚ್ಚುವರಿಯಾಗಿ Wynk ಮ್ಯೂಸಿಕ್, ಏರ್‌ಟೆಲ್ ಎಕ್ಸ್‌ಟ್ರಿಮ್ ಆಪ್, Norton ಸೆಕ್ಯುರಿಟಿ, ಸೌಲಭ್ಯಗಳನ್ನು ನೀಡಲಿದೆ.

1699ರೂ.ಪ್ರೀಪೇಡ್ ಪ್ಲ್ಯಾನ್
ಏರ್‌ಟೆಲ್ ಮತ್ತು ವೊಡಾಫೋನ್ ಸಂಸ್ಥೆಗಳ ಈ 1699ರೂ.ಪ್ರೀಪೇಡ್ ಪ್ಲ್ಯಾನ್ ವಾರ್ಷಿಕ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಈ ಅವಧಿಯಲ್ಲಿ ಎರಡು ಸಂಸ್ಥೆಗಳು ಅನಿಯಮಿತ ಕರೆ ಪ್ರಯೋಜನ ಒದಗಿಸುತ್ತವೆ. ಆದರೆ ಡೇಟಾ ನೀಡಿಕೆಯಲ್ಲಿ ಭಿನ್ನತೆ ಇದ್ದು, ವೊಡಾಫೋನ್ ಪ್ರತಿದಿನ 1.5GB ಡೇಟಾ ಸೌಲಭ್ಯ ಹೊಂದಿದೆ. ಹಾಗೂ ಏರ್‌ಟೆಲ್ ಪ್ರತಿದಿನ 1.4GB ಡೇಟಾ ಪ್ರಯೋಜನ ನೀಡುತ್ತದೆ.


Click it and Unblock the Notifications








