ಇನ್ಮುಂದೆ ಜಿ-ಮೇಲ್‌ನಲ್ಲಿ ವಿಡಿಯೋ ಕಾಲ್‌ ಮಾಡಬಹುದು?

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಪರಿಚಯಿಸಿರುವ ಹಲವು ಸೇವೆಗಳಲ್ಲಿ ಜಿ-ಮೇಲ್‌ ಸೇವೆ ಕೂಡ ಒಂದಾಗಿದೆ. ಇಂದಿನ ಡಿಜಿಟಲ್‌ ಪ್ರಪಂಚದಲ್ಲಿ ಜಿ-ಮೇಲ್‌ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇನ್ನು ಜಿ-ಮೇಲ್‌ ಕೂಡ ಬಳಕೆದಾರರ ಅನುಕೂಲಕ್ಕಾಗಿ ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಜಿ-ಮೇಲ್‌ ನಿಮಗೆ ಕರೆಗಳನ್ನು ಸಹ ಮಾಡುವುದಕ್ಕೆ ಅವಕಾಶ ನೀಡಲು ಮುಂದಾಗಿದೆ. ನೀವು ಇಮೇಲ್‌ ಕಳುಹಿಸುವವರಿಗೆ ಕರೆ ಮಾಡುವುದಕ್ಕೆ ಅವಕಾಶ ಸಿಗಲಿದೆ.

ಜಿ-ಮೇಲ್‌

ಹೌದು, ಜಿ-ಮೇಲ್‌ ಈಗ ನಿಮಗೆ ತ್ವರಿತ ಕರೆಗಳನ್ನು ಮಾಡಲು ಅನುಮತಿಸಲಿದೆ. ನೀವು ಇ-ಮೇಲ್‌ ಕಳುಹಿಸುವವರ ಬಗ್ಗೆ ಸ್ಪಷ್ಟತೆ ಪಡೆಯಲು ಅಥವಾ ಮೇಲ್‌ ಮಾಡಿರುವುದನ್ನು ನೆನಪಿಸಲು ತ್ವರಿತವಾಗಿ ಕರೆ ಮಾಡುವುದಕ್ಕೆ ಅವಕಾಶ ಸಿಗಲಿದೆ. ಸದ್ಯ ಗೂಗಲ್‌ ತನ್ನ ಹೊಸ ಅಪ್ಡೇಟ್‌ನಲ್ಲಿ ಜಿ-ಮೇಲ್‌ನಲ್ಲಿ ಕರೆ ಮಾಡುವ ಫಿಚರ್ಸ್‌ ಪರಿಚಯಿಸಿದೆ. Gmail ಅಪ್ಲಿಕೇಶನ್‌ನಿಂದ ಕರೆ ಸ್ವೀಕರಿಸುವವರಿಗೆ ಅಥವಾ ಪ್ರತಿಯಾಗಿ ಕರೆ ಮಾಡಬಹುದು. ಹಾಗಾದ್ರೆ ಜಿ-ಮೇಲ್‌ನಲ್ಲಿ ಕರೆ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿ-ಮೇಲ್‌

ಜಿ-ಮೇಲ್‌ನ ಹೊಸ ಅಪ್‌ಡೇಟ್‌ನಲ್ಲಿ ಈಗ ಕರೆ ಮಾಡುವ ಅವಕಾಶವನ್ನು ನೀಡಲಾಗಿದೆ. ಜಿ-ಮೇಲ್‌ ಬಳಕೆದಾರರಿಗೆ ಅಪ್ಲಿಕೇಶನ್‌ನಿಂದಲೇ ಆಡಿಯೋ ಮತ್ತು ವೀಡಿಯೊ ಕರೆಗಳನ್ನು ಮಾಡಲು ಅನುಮತಿಸಲಾಗಿದೆ. ಜಿ-ಮೇಲ್‌ ಅಪ್ಲಿಕೇಶನ್‌ನಲ್ಲಿ, ಬಳಕೆದಾರರು ಈಗ ಚಾಟ್‌ಗಳ ಟ್ಯಾಬ್‌ನ ಅಡಿಯಲ್ಲಿ ಆಡಿಯೊ ಮತ್ತು ವೀಡಿಯೊ ಕರೆ ಆಯ್ಕೆಗಳನ್ನು ನೋಡಬಹುದಾಗಿದೆ. ಈ ಆಯ್ಕೆಗಳಲ್ಲಿ ಬಳಕೆದಾರರು ಯಾವುದಾದರೂ ಒಂದನ್ನು ಒಮ್ಮೆ ಕ್ಲಿಕ್ ಮಾಡಿದರೆ, ಅವರು ಸಂಬಂಧಪಟ್ಟ ವ್ಯಕ್ತಿಯೊಂದಿಗೆ ಕರೆ ಮೂಲಕ ಮಾತನಾಡಲು ಸಾಧ್ಯವಾಗುತ್ತದೆ. ಆದರೆ ಗೂಗಲ್ ಇನ್ನೂ ಕೂಡ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಗ್ರೂಪ್‌ ಕಾಲ್‌ಗೆ ಅನುಮತಿಯನ್ನು ನೀಡಿಲ್ಲ ಎನ್ನಲಾಗಿದೆ.

ಜಿ-ಮೇಲ್‌ನಲ್ಲಿ ಆಡಿಯೋ/ವಿಡಿಯೋ ಕರೆಗಳನ್ನು ಮಾಡುವುದು ಹೇಗೆ?

ಜಿ-ಮೇಲ್‌ನಲ್ಲಿ ಆಡಿಯೋ/ವಿಡಿಯೋ ಕರೆಗಳನ್ನು ಮಾಡುವುದು ಹೇಗೆ?

ಹಂತ:1 ಮೊದಲನೇಯದಾಗಿ ನಿಮ್ಮ ಡಿವೈಸ್‌ನಲ್ಲಿ ಜಿ-ಮೇಲ್‌ ಅಪ್ಲಿಕೇಶನ್‌ ಇತ್ತೀಚಿನ ಆವೃತ್ತಿಗೆ ಅಪ್ಡೇಟ್‌ ಮಾಡಿ
ಹಂತ:2 ನಂತರ, ನೀವು ಜಿ-ಮೇಲ್‌ ಅನ್ನು ತೆರೆಯಬೇಕು ಮತ್ತು "ಚಾಟ್‌ಗಳು" ಟ್ಯಾಬ್ ಮೇಲೆ ಟ್ಯಾಪ್ ಮಾಡಬೇಕಾಗುತ್ತದೆ. Google Workspace ಬಳಕೆದಾರರಿಗೆ, ಇದನ್ನು ಡಿಫಾಲ್ಟ್ ಆಗಿ ಸಕ್ರಿಯಗೊಳಿಸಲಾಗಿದೆ. ನಿಯಮಿತ ಬಳಕೆದಾರರು ಸೆಟ್ಟಿಂಗ್‌ಗಳಿಂದ ಚಾಟ್ಸ್ ಆಯ್ಕೆಯನ್ನು ಸಕ್ರಿಯಗೊಳಿಸಬೇಕಾಗುತ್ತದೆ.
ಹಂತ:3 ಚಾಟ್‌ಗಳ ವಿಭಾಗದ ಅಡಿಯಲ್ಲಿ, ಪಟ್ಟಿ ಮಾಡಲಾದ ಎಲ್ಲಾ ಸಂಭಾಷಣೆಗಳನ್ನು ನೀವು ನೋಡುತ್ತೀರಿ. ಇದರಲ್ಲಿ ಒಂದನ್ನು ಟ್ಯಾಪ್ ಮಾಡಿ.
ಹಂತ:4 ನಂತರ ಮೇಲಿನ ಮೂಲೆಯಿಂದ, ನೀವು ಕ್ರಮವಾಗಿ ಆಡಿಯೋ ಮತ್ತು ವೀಡಿಯೊ ಕರೆಗಳನ್ನು ಮಾಡಲು ಫೋನ್ ಅಥವಾ ವೀಡಿಯೊ ಐಕಾನ್‌ಗಳನ್ನು ಟ್ಯಾಪ್ ಮಾಡಬಹುದು.
ಹಂತ:5 ನೀವು ಜಿ-ಮೇಲ್‌ ಮೂಲಕ ಕರೆಯನ್ನು ಸ್ವೀಕರಿಸಿದಾಗ, ಸಾಮಾನ್ಯ ಫೋನ್ ಕರೆಗಳಂತೆಯೇ ಕಾಲ್‌ ನೋಟಿಫಿಕೇಶನ್ ಕಾಣಬಹುದಾಗಿದೆ.

ಜಿ-ಮೇಲ್‌

ಇನ್ನು ಜಿ-ಮೇಲ್‌ ಮೂಲಕ ಆಡಿಯೋ ಮತ್ತು ವೀಡಿಯೊ ಕರೆಗಳನ್ನು ಮೊಬೈಲ್ ಡಿವೈಸ್‌ಗಳಲ್ಲಿ ಮಾತ್ರ ಅನುಮತಿಸಲಾಗಿದೆ. ಆದ್ದರಿಂದ, ಬಳಕೆದಾರರು Android ಮತ್ತು iOS ಸಾಧನಗಳಲ್ಲಿ Gmail ಅಪ್ಲಿಕೇಶನ್‌ನಿಂದ ಮಾತ್ರ ಕರೆಗಳನ್ನು ಮಾಡಬಹುದು. ವೆಬ್ ಕ್ಲೈಂಟ್ ಆವೃತ್ತಿಯು ಈ ವೈಶಿಷ್ಟ್ಯಗಳನ್ನು ಸ್ವೀಕರಿಸಲು ಇನ್ನೂ ಬಾಕಿಯಿದೆ. ಜಿ-ಮೇಲ್‌ ಕರೆಗಳು ವಾಟ್ಸಾಪ್‌ ಮತ್ತು ಗೂಗಲ್‌ ಡ್ಯುಯೋ ಕರೆಗಳ ಮಾದರಿಯಲ್ಲಿಯೇ ಇಂಟರ್ನೆಟ್ ಮೂಲಕ ಆಧಾರಿತವಾಗಿರುತ್ತವೆ.

ಇ-ಮೇಲ್‌

ಇದಲ್ಲದೆ ನೀವು ಇ-ಮೇಲ್‌ನಲ್ಲಿ ನಿಮ್ಮ ಮೇಲ್‌ ಅನ್ನು ಬೇರೆಯವರು ನಕಲು ಮಾಡುವುದನ್ನು ತಪ್ಪಿಸಬಹುದಾಗಿದೆ. ಅಂದರೆ ನೀವು ಕಳುಹಿಸುವ ಮೇಲ್‌ ಅನ್ನು ಇನ್ಯಾರೋ ಕಟ್‌ ಆಂಡ್‌ ಪೇಸ್ಟ್‌ ಮಾಡಿ ಬೇರೆಯವರಿಗೆ ರವಾನಿಸುವ ಸಾಧ್ಯತೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಲೇ ಇದೆ. ಇದೇ ಕಾರಣಕ್ಕೆ ಹೆಚ್ಚಿನ ಜನರು ತಾವು ಮಾಡುವ ಮೇಲ್‌ಗಳಿಗೆ ಎಂಡಿಂಗ್‌ ಡೇಟ್‌ ಅನ್ನು ಸೆಟ್‌ ಮಾಡುತ್ತಾರೆ. ಇದರಿಂದ ನೀವು ನಮೂದಿಸಿದ ದಿನಾಂಕದಂದು ನೀವು ಮಾಡಿದ ಪೋಸ್ಟ್‌ನ ಇಮೇಲ್ ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತದೆ. ಇದರಿಂದ ನಿಮ್ಮ ಮೇಲ್‌ ರಿಸೀವರ್ ಅದನ್ನು ಮತ್ತೊಮ್ಮೆ ತೆಗೆದು ನೋಡುವುದಕ್ಕೆ ಸಾಧ್ಯವಾಗುವುದಿಲ್ಲ. ಹೆಚ್ಚುವರಿಯಾಗಿ, ನಿಮ್ಮ ಸೂಕ್ಷ್ಮ ಇಮೇಲ್‌ಗಳನ್ನು ಲಾಕ್ ಮಾಡಲು ನೀವು ಆಯ್ಕೆ ಮಾಡಬಹುದು ಮತ್ತು ಸ್ವೀಕರಿಸುವವರು ಪಾಸ್‌ಕೋಡ್ ಅನ್ನು ನಮೂದಿಸಿದಾಗ ಮಾತ್ರ ಸಂದೇಶಗಳನ್ನು ಪ್ರವೇಶಿಸಲು ಅವರಿಗೆ ಎಸ್‌ಎಂಎಸ್ ಅಥವಾ ಇಮೇಲ್ ಮೂಲಕ ಕಳುಹಿಸಬಹುದು.

Best Mobiles in India

English summary
Gmail now lets users make quick calls via Google Chat within the Gmail app.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X