instagram storyನಲ್ಲಿ ನ್ಯೂ ಇಯರ್‌ ಸ್ಟಿಕ್ಕರ್‌ಗಳನ್ನು ಸೆಟ್‌ ಮಾಡುವುದು ಹೇಗೆ?

|

ಜಗತ್ತಿನೆಲ್ಲೆಡೆ ಹೊಸ ವರ್ಷವನ್ನು ಸಡಗರದಿಂದ ಸ್ವಾಗತ ಮಾಡಿಕೊಳ್ಳಲಾಗಿದೆ. 2021ಕ್ಕೆ ಬಾಯ್‌ ಹೇಳಿ 2022ಕ್ಕೆ ಕಾಲಿಟ್ಟಾಗಿದೆ. ಕೊರೊನಾ ಮೂರನೇ ಅಲೆಯ ನಡುವೆಯೂ ಸಾಕಷ್ಟು ಭರವಸೆಗಳೊಂದಿಗೆ ಹೊಸ ವರುಷದ ಶುಭಾಶಯಗಳನ್ನು ಎಲ್ಲೆಡೆ ಕೋರಲಾಗುತ್ತಿದೆ. ಇನ್ನು ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿಯೂ ಹೊಸ ವರ್ಷದ ಕುರಿತು ಅನೇಕ ಶುಭಾಶಯಗಳನ್ನು ಕೋರಲಾಗುತ್ತಿದೆ. ಇದಕ್ಕೆ ಇನ್‌ಸ್ಟಾಗ್ರಾಮ್‌ ಪ್ಲಾಟ್‌ಫಾರ್ಮ್‌ ಕೂಡ ಹೊರತಾಗಿಲ್ಲ.

ಇನ್‌ಸ್ಟಾಗ್ರಾಮ್‌

ಹೌದು, ಹೊಸ ವರ್ಷದ ಪ್ರಯುಕ್ತ ಇನ್‌ಸ್ಟಾಗ್ರಾಮ್‌ನಲ್ಲಿಯೂ ಅನೇಕ ಮಂದಿ ತಮ್ಮ ಪ್ರೀತಿ ಪಾತ್ರರಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ. ಇನ್ನು ಇನ್‌ಸ್ಟಾಗ್ರಾಮ್‌ ಸ್ಟೋರೀಸ್‌ನಲ್ಲಿಯೂ ಕೂಡ ನಿವು ಹ್ಯಾಪಿ ನ್ಯೂ ಇಯರ್‌ ಸ್ಟಿಕ್ಕರ್‌ಗಳನ್ನು ಪೋಸ್ಟ್‌ ಮಾಡಬಹುದು. ಇನ್‌ಸ್ಟಾಗ್ರಾಮ್‌ ಸ್ಟಿಕ್ಕರ್ ಫೀಚರ್ಸ್‌ ಬಳಸಲು ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಇದಕ್ಕಾಗಿ ನೀವು ಸ್ಟಿಕ್ಕರ್ ಟೂಲ್‌ಗೆ ಹೋಗಬೇಕಾಗುತ್ತದೆ. ಹಾಗಾದ್ರೆ ಇನ್‌ಸ್ಟಾಗ್ರಾಮ್‌ ಸ್ಟೋರೀಸ್‌ನಲ್ಲಿ ನ್ಯೂ ಇಯರ್‌ ಸ್ಟಿಕ್ಕರ್‌ ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇನ್‌ಸ್ಟಾಗ್ರಾಮ್‌

ಇನ್‌ಸ್ಟಾಗ್ರಾಮ್‌ ಸ್ಟೋರೀಸ್‌ನಲ್ಲಿ ನ್ಯೂ ಇಯರ್‌ ಸ್ಟಿಕ್ಕರ್‌ಗಳನ್ನು ಪೋಸ್ಟ್‌ ಮಾಡವುದಕ್ಕೆ ಸ್ಟಿಕ್ಕರ್‌ ಟೂಲ್‌ಗೆ ಹೋಗಬೇಕಾಗುತ್ತದೆ. ಇದರಲ್ಲಿ ನೀವು ವಿಷಯವನ್ನು ಸೆರೆಹಿಡಿಯುವುದು ಅಥವಾ ಅಪ್‌ಲೋಡ್ ಮಾಡುವುದನ್ನು ಪೂರ್ಣಗೊಳಿಸಿದಾಗ, ಮೇಲಿನ ನ್ಯಾವಿಗೇಷನ್ ಬಾರ್‌ನಿಂದ ಸ್ಟಿಕ್ಕರ್ ಟೂಲ್‌ಗೆ ಹೋಗಬೇಕು. ಇನ್‌ಸ್ಟಾಗ್ರಾಮ್‌ ಪ್ರಕಾರ, ಈ ಹೊಸ ಫೀಚರ್ಸ್‌ ಉದ್ದೇಶ ಹೆಚ್ಚಿನ ಜನರು ನಿಮ್ಮ ಸ್ಟೋರಿಸ್‌ ಮೂಲಕ ಕನೆಕ್ಟ್‌ ಆಗಲು ಸಾಧ್ಯವಾಗಲಿದೆ.

ನಿಮ್ಮ ಸ್ಟೋರೀಸ್‌ನಲ್ಲಿ ಹೊಸ ವರ್ಷದ ಸ್ಟಿಕ್ಕರ್‌ಗಳನ್ನು ಸೇರಿಸುವುದು ಹೇಗೆ?

ನಿಮ್ಮ ಸ್ಟೋರೀಸ್‌ನಲ್ಲಿ ಹೊಸ ವರ್ಷದ ಸ್ಟಿಕ್ಕರ್‌ಗಳನ್ನು ಸೇರಿಸುವುದು ಹೇಗೆ?

ಹಂತ:1 ಮೊದಲಿಗೆ, ನಿಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಸ್‌ ಅನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.
ಹಂತ:2 ನಂತರ ಮೇಲಿನ ನ್ಯಾವಿಗೇಶನ್ ಬಾರ್‌ನಿಂದ ಸ್ಟಿಕ್ಕರ್ ಟೂಲ್ ಅನ್ನು ಆಯ್ಕೆಮಾಡಿ.
ಹಂತ:3 ಇದಾದ ಮೇಲೆ "ಲಿಂಕ್" ಸ್ಟಿಕ್ಕರ್ ಮೇಲೆ ಟ್ಯಾಪ್ ಮಾಡಿ ಮತ್ತು ನಿಮ್ಮ ಲಿಂಕ್ ಸೇರಿಸಲು "ಡನ್‌" ಟ್ಯಾಪ್ ಮಾಡಿ.
ಹಂತ:4 ಈಗ, ನಿಮ್ಮ ಸ್ಟೋರೀಸ್‌ ಮೇಲೆ ಸ್ಟಿಕ್ಕರ್ ಅನ್ನು ಇರಿಸಿ.
ಹಂತ:5 ಕಲರ್‌ ವೇರಿಯೇಷನ್‌ ನೋಡಲು ಸ್ಟಿಕ್ಕರ್ ಮೇಲೆ ಟ್ಯಾಪ್ ಮಾಡಿ.

ಸ್ಟೋರೀಸ್‌

ಇನ್‌ಸ್ಟಾಗ್ರಾಮ್‌ ಸ್ಟೋರೀಸ್‌ 24 ಗಂಟೆಗಳ ನಂತರ ಮುಕ್ತಾಯಗೊಳ್ಳುತ್ತವೆ. ಆದರೆ ಇದು ಇಂಟರ್‌ ಆಕ್ಟಿವ್‌ ಸ್ಟಿಕ್ಕರ್‌ಗಳೊಂದಿಗೆ ನಿಮ್ಮ ಪೋಸ್ಟ್‌ಗಳನ್ನು ವೈಯಕ್ತೀಕರಿಸಲು ನಿಮಗೆ ಅನುಮತಿಸುತ್ತದೆ. ಈ ಸ್ಟಿಕ್ಕರ್‌ಗಳು ನಿಮ್ಮ ಅನುಯಾಯಿಗಳಿಗೆ ಪ್ರಶ್ನೋತ್ತರಗಳಲ್ಲಿ ಭಾಗವಹಿಸಲು ಅವಕಾಶ ನೀಡುವುದಲ್ಲದೆ, ಚಾರಿಟಿ, ಕೌಂಟ್‌ಡೌನ್‌ಗಳು, ರಸಪ್ರಶ್ನೆಗಳು ಮತ್ತು ಸಮೀಕ್ಷೆಗಳಲ್ಲಿ ಸಹಾಯ ಮಾಡುತ್ತದೆ. ಇನ್‌ಸ್ಟಾಗ್ರಾಮ್‌ನ ಹೊಸ ಕ್ಯಾಪ್ಶನ್‌ ಸ್ಟಿಕ್ಕರ್ ಫೀಚರ್ಸ್‌ ಸ್ಟಿಕ್ಕರ್ ಟ್ರೇನಲ್ಲಿ ಲಭ್ಯವಿದೆ. ವೀಡಿಯೊವನ್ನು ರೆಕಾರ್ಡ್ ಮಾಡಿದ ನಂತರ ಬಳಕೆದಾರರು ಕ್ಯಾಪ್ಶನ್‌ ಸ್ಟಿಕ್ಕರ್ ಅನ್ನು ಕ್ಲಿಕ್ ಮಾಡಿದ ತಕ್ಷಣ, ಕ್ಯಾಪ್ಶನ್‌ ಸ್ವಯಂಚಾಲಿತವಾಗಿ ವೀಡಿಯೊಗೆ ಸೇರಿಸಬಹುದಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಲೈಕ್ಸ್‌ ಮತ್ತು ವ್ಯೂ ಕೌಂಟ್ಸ್‌ ಹೈಡ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ನಲ್ಲಿ ಲೈಕ್ಸ್‌ ಮತ್ತು ವ್ಯೂ ಕೌಂಟ್ಸ್‌ ಹೈಡ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ಪ್ರೊಫೈಲ್‌ ಚಿತ್ರದ ಮೇಲೆ ಟ್ಯಾಪ್ ಮಾಡಿ.
ಹಂತ:2 ನಂತರ ಮೇಲಿನ ಬಲಭಾಗದಲ್ಲಿರುವ ಮೋರ್‌ ಆಯ್ಕೆಗಳನ್ನು ಟ್ಯಾಪ್ ಮಾಡಿ, ಸೆಟ್ಟಿಂಗ್ಸ್‌ ಟ್ಯಾಪ್ ಮಾಡಿ.
ಹಂತ:3 ಇದಾದ ಮೇಲೆ ಪ್ರೈವೆಸಿ ಮೇಲೆ ಕ್ಲಿಕ್ ಮಾಡಿ ನಂತರ ಪೋಸ್ಟ್‌ಗಳ ಮೇಲೆ ಟ್ಯಾಪ್ ಮಾಡಿ.
ಹಂತ:4 ಸ್ವಿಚ್ ಆಫ್ ಅಥವಾ ಸ್ವಿಚ್ ಆನ್ ಟ್ಯಾಪ್ ಮಾಡಿ, ಇದನ್ನು ಆನ್‌ ಅಥವಾ ಆಫ್ ಮಾಡಿದ ನಂತರ ಲೈಕ್ಸ್‌ ಮತ್ತು ವ್ಯೂ ಕೌಂಟ್‌ಗಳನ್ನು ಹೈಡ್‌ ಮಾಡುವ ಆಯ್ಕೆ ಕಾಣಲಿದೆ. ಇದರ ಮೂಲಕ ಲೈಕ್ಸ್‌ ಕೌಂಟ್‌ ಹೈಡ್‌ ಮಾಡಬಹುದು.

ಇನ್‌ಸ್ಟಾಗ್ರಾಮ್‌ ಫೀಡ್‌ನಲ್ಲಿ ನಿಮ್ಮ ಪೋಸ್ಟ್‌ಗಳ ಲೈಕ್ಸ್‌ ಮತ್ತು ವ್ಯೂ ಕೌಂಟ್‌ ಹೈಡ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ ಫೀಡ್‌ನಲ್ಲಿ ನಿಮ್ಮ ಪೋಸ್ಟ್‌ಗಳ ಲೈಕ್ಸ್‌ ಮತ್ತು ವ್ಯೂ ಕೌಂಟ್‌ ಹೈಡ್‌ ಮಾಡುವುದು ಹೇಗೆ?

ಇದಲ್ಲದೆ ನೀವು ಇನ್‌ಸ್ಟಾಗ್ರಾಮ್‌ ಫೀಡ್‌ ನಲ್ಲಿ ಶೇರ್‌ಮಾಡುವ ಪೋಸ್ಟ್‌ಗಳ ಲೈಕ್ಸ್‌ ಮತ್ತು ವ್ಯೂ ಕೌಂಟ್‌ ಸೆಟ್ಟಿಂಗ್‌ಗಳನ್ನು ಸಹ ನೀವು ಬದಲಾಯಿಸಬಹುದು. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ:1 ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೊದಲು, ಕೆಳಭಾಗದಲ್ಲಿರುವ ಸುಧಾರಿತ ಸೆಟ್ಟಿಂಗ್‌ಗಳನ್ನು ಟ್ಯಾಪ್ ಮಾಡಿ.
ಹಂತ:2 ಸೆಟ್ಟಿಂಗ್ಸ್‌ನಲ್ಲಿ ಲೈಕ್ಸ್‌ ಕೌಂಟ್‌ ಆನ್ ಅಥವಾ ಆಫ್ ಅನ್ನು ಆಯ್ಕೆ ಮಾಡಿ.

Best Mobiles in India

Read more about:
English summary
Here's how to set new year stickers on your instagram story.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X