ರಜಿನಿಕಾಂತ್ ರೋಬೊ ಮಾದರಿ ಕೆಎಎಸ್ ಪರೀಕ್ಷೆಯಲ್ಲಿ ಹೈ'ಟೆಕ್' ನಕಲು ಮಾಡಲು ಹೋಗಿ ಸಿಕ್ಕಿಬಿದ್ದಿದ್ದು ಹೇಗೆ?

|

ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸು ಮಾಡುವ ಸಲುವಾಗಿ ಚೀಟಿ ಬಳಸಿ ಇಲ್ಲವೇ ಅಕ್ಕ-ಪಕ್ಕ ನೋಡಿಕೊಂಡು ಬರೆಯುವುದನ್ನು ನೋಡಿರುವ ಕಾಲದಲ್ಲಿ ಮೈಕ್ರೋ ಜೆರಾಕ್ಸ್ ಮಾಡಿಸಿಕೊಂಡು ಪರೀಕ್ಷೆ ಬರೆಯುವರನ್ನು ಕಂಡಿದ್ದೇವೆ. ಆದರೆ ಇಲ್ಲೋಬ್ಬ ಕೆಎಎಸ್ ಪರೀಕ್ಷೆಯಲ್ಲಿ ಹೈ'ಟೆಕ್' ಮಾದರಿಯಲ್ಲಿ ನಕಲು ಮಾಡಲು ಹೋಗಿ ಕೊನೆ ಕ್ಷಣದಲ್ಲಿ ಸಿಕ್ಕಿಬಿದಿದ್ದಾನೆ, ಈ ಮೂಲಕ ಕ್ರಿಮಿನಲ್ ಕೇಸ್ ಎದುರಿಸುತ್ತಿದ್ದಾನೆ.

ಕೆಎಎಸ್ ಪರೀಕ್ಷೆಯಲ್ಲಿ ಹೈ'ಟೆಕ್' ನಕಲು ಮಾಡಲು ಹೋಗಿ ಸಿಕ್ಕಿಬಿದ್ದಿದ್ದು ಹೇಗೆ?

ಓದಿರಿ: ಇಯರ್ ಎಂಡ್ ಸೇಲ್‌ನಲ್ಲಿ ಮೊಬೈಲ್ ಖರೀದಿಸುವ ಮುನ್ನ ಒಮ್ಮೆ ಇಲ್ಲಿ ನೋಡಿ...!

ಬೆಂಗಳೂರು ಮತ್ತು ಧಾರಾವಾಡದಲ್ಲಿ ಕೆಪಿಎಸ್ಸಿಯ ಗೆಜೆಟೆಡ್ ಪ್ರೊಬೇಷನರಿ ಮುಖ್ಯ ಪರಿಕ್ಷೆಯು ನಡೆಯುತ್ತಿದ್ದು, ಸಾಮಾನ್ಯ ಜ್ಞಾನ ಪ್ರಥಮ ಪತ್ರಿಕೆಯನ್ನು ಬರೆಯುವ ಸಂದರ್ಭದಲ್ಲಿ ಧಾರವಾಡದಲ್ಲಿ ಅಭ್ಯರ್ಥಿಯೋರ್ವ ಬನಿಯನ್‌ನಲ್ಲಿ ಚಿಪ್‌, ವೈರ್‌ ಬಳಸಿ ನಕಲು ಮಾಡಲು ಹೋಗಿ ಪರೀಕ್ಷಾ ವೀಕ್ಷಕರ ಕೈಗೆ ಸಿಕ್ಕಿ ಬಿದಿದ್ದಾನೆ.

ರೋಬೊ ಚಿತ್ರದ ಸ್ಪೂರ್ತಿ:

ರೋಬೊ ಚಿತ್ರದ ಸ್ಪೂರ್ತಿ:

ರೋಬೊ ಚಿತ್ರದಲ್ಲಿ ರಜಿನಿಕಾಂತ್ - ಐಶ್ವರ್ಯ ರೈಗೆ ಮೈಕ್‌ ಮೂಲಕ ದೂರದಲ್ಲಿ ಕುಳಿತು ಪರೀಕ್ಷೆಗೆ ಸಹಾಯವ ಮಾಡುವುದನ್ನು ನೋಡಿ ಅದರಿಂದ ಸ್ಪೂರ್ತಿ ಪಡೆದು ಕೆಎಎಸ್ ಪರೀಕ್ಷೆಯಲ್ಲಿ ಹೈ'ಟೆಕ್' ನಕಲು ಮಾಡಲು ರಾಜಕುಮಾರ್ ಗೌಡಪ್ಪಗೋಳ ಮುಂದಾಗಿ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ಬನಿಯನ್‌ನಲ್ಲಿ ಚಿಪ್‌, ವೈರ್‌:

ಬನಿಯನ್‌ನಲ್ಲಿ ಚಿಪ್‌, ವೈರ್‌:

ಯಾರಿಗೂ ಕಾಣದ ರೀತಿಯಲ್ಲಿ ಬನಿಯನ್ ಒಳಗೆ ಚಿಪ್‌ವೊಂದನ್ನು ಅಳವಡಿಸಿಕೊಂಡು ವೈರ್ ಮೂಲಕ ಮೈಕ್-ಸ್ಪೀಕರ್ ಅನ್ನು ಸಂಪರ್ಕಿಸಿಕೊಂಡು ಪರೀಕ್ಷೆಯಲ್ಲಿ ನೀಡಿದ್ದ ಪ್ರಶ್ನೆಗಳಿಗೆ ಉತ್ತರವನ್ನು ಪಡೆಯುವ ಮೂಲಕ ಆತ್ಯಾಧುನಿಕವಾಗಿ ನಕಲು ಮಾಡುತ್ತಿದ್ದ ಎನ್ನಲಾಗಿದೆ. ಆದರೆ ಪರೀಕ್ಷೆ ಹಾಲ್‌ ನಲ್ಲಿ ಇದ್ದ ಮೇಲ್‌ ವಿಚಾರಕರು ಇದನ್ನು ಕಂಡು ಹಿಡಿದಿದ್ದಾರೆ ಎನ್ನಲಾಗಿದೆ.

ವಿದ್ಯಾರ್ಥಿ ಡಿಬಾರ್- ಕ್ರಿಮಿನಲ್ ಕೇಸ್:

ವಿದ್ಯಾರ್ಥಿ ಡಿಬಾರ್- ಕ್ರಿಮಿನಲ್ ಕೇಸ್:

ಕೆಎಎಸ್ ಮುಖ್ಯ ಪರೀಕ್ಷೆ ವೇಳೆ ಹೈ'ಟೆಕ್' ನಕಲು ಮಾಡುತ್ತಿದ್ದ ರಾಜಕುಮಾರ್ ಗೌಡಪ್ಪಗೋಳ ಅವರನ್ನು ಡಿಬಾರ್ ಮಾಡಿರುವುದಲ್ಲದೇ, ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ ಎನ್ನಲಾಗಿದೆ. ಅಲ್ಲದೇ ನಕಲು ಮಾಡಲು ಬಳಕೆ ಮಾಡಿಕೊಂಡಿದ್ದ ಚಿಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

Best Mobiles in India

English summary
hitec cheat in KAS exam hall. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X