Subscribe to Gizbot

ಇಯರ್ ಎಂಡ್ ಸೇಲ್‌ನಲ್ಲಿ ಮೊಬೈಲ್ ಖರೀದಿಸುವ ಮುನ್ನ ಒಮ್ಮೆ ಇಲ್ಲಿ ನೋಡಿ...!

Written By:

ದೇಶದಲ್ಲಿ ಸ್ಮಾರ್ಟ್‌ಫೋನ್‌ಗಳ ಹಾವಳಿಯೂ ಹೆಚ್ಚಾಗುತ್ತಿದ್ದು, ದಿನಕ್ಕೊಂದು ಸ್ಮಾರ್ಟ್‌ಫೋನ್ ಕಂಪನಿಗಳು ಹುಟ್ಟಿಕೊಳ್ಳುತ್ತಿವೆ. ಅಲ್ಲದೇ ಸ್ಮಾರ್ಟ್‌ಫೋನ್‌ಗಳು ಆನ್‌ಲೈನ್ ಮೂಲಕವೇ ಹೆಚ್ಚು ಮಾರಾಟವಾಗುವುದು ಇಂದಿನದಲ್ಲಿ ಹೆಚ್ಚಾಗುತ್ತಿದೆ. ಅದರಲ್ಲಿಯೂ ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್ ಮೂಲಕ ಎಕ್ಸ್‌ಕ್ಲೂಸಿವ್‌ಆಗಿ ಸ್ಮಾರ್ಟ್‌ಫೋನ್ ಗ್ರಾಹಕರ ಕೈಗೆ ಸೇರುತ್ತಿದೆ.

ಇಯರ್ ಎಂಡ್ ಸೇಲ್‌ನಲ್ಲಿ ಮೊಬೈಲ್ ಖರೀದಿಸುವ ಮುನ್ನ ಒಮ್ಮೆ ಇಲ್ಲಿ ನೋಡಿ...!

ಓದಿರಿ: ಮೊಬೈಲ್ ಸಿಮ್‌ ಸಂಖ್ಯೆಯಲ್ಲಿ ನಿಮಗೆ ಗೊತ್ತಿಲ್ಲದ ಆಚ್ಚರಿ ವಿಷಯಗಳು ಅಡಗಿದೆ..!

ಇದೇ ಸಂದರ್ಭದಲ್ಲಿ ಫ್ಲಿಪ್‌ಕಾರ್ಟ್‌ ತನ್ನದೇ ಸ್ಮಾರ್ಟ್‌ಫೋನ್‌ ಅನ್ನು ಬಿಲಿಯನ್ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದು, ಇದೇ ಕಾರಣಕ್ಕೆ ಅಮೆಜಾನ್‌ ಸಹ ಹೊಸ ಮಾದರಿಯ ತನ್ನದೇ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಲು ತುದಿಗಾಲಿನಲ್ಲಿ ನಿಂತಿದೆ. ಮೂಲಕಗಳ ಪ್ರಕಾರ ಮುಂದಿನ ವರ್ಷದ ಆರಂಭದಲ್ಲಿ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎನ್ನಲಾಗಿದೆ. ಇದು ಬೇರೆ ಸ್ಮಾರ್ಟ್‌ಫೋನ್‌ಗಳಿಗೆ ಸಾಕಷ್ಟು ಸ್ಪರ್ಧೆಯನ್ನು ನೀಡಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟೆನರ್ ಬ್ರಾಂಡ್:

ಟೆನರ್ ಬ್ರಾಂಡ್:

ಜನವರಿಯಲ್ಲಿ ಅಮೆಜಾನ್ ಟೆನರ್ ಬ್ರಾಂಡ್ ಅನ್ನು ಲಾಂಚ್ ಮಾಡಲಿದ್ದು, ಈ ಬ್ರಾಂಡ್ ಮೂಲಕ ತನ್ನ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟವಾಗಲಿದೆ ಎನ್ನಲಾಗಿದೆ. ಒಟ್ಟು ಎರಡು ಫೋನ್‌ಗಳನ್ನು ಆರಂಭದಲ್ಲಿ ಲಾಂಚ್ ಮಾಡಲಿದೆ ಎನ್ನಲಾಗಿದೆ. ಮೊದಲಿಗೆ ಒಂದು ಬಜೆಟ್ ಮತ್ತೊಂದು ಮಧ್ಯಮ ಸರಣಿಯ ಸ್ಮಾರ್ಟ್‌ಫೋನ್ ಅನ್ನು ಪರಿಚಯ ಮಾಡಲಿಡದೆ.

ಮಾರುಕಟ್ಟೆಯಲ್ಲಿ ಟೆಂಡ್:

ಮಾರುಕಟ್ಟೆಯಲ್ಲಿ ಟೆಂಡ್:

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸಾಕಷ್ಟು ಪಳಗಿರುವ ಅಮೆಜಾನ್ ಜನರ ನಾಡಿ ಮಿಡಿತವನ್ನು ಅರಿತು ಕೊಂಡಿದ್ದು, ಮಾರುಕಟ್ಟೆಯ ಟ್ರೆಂಡ್ ಅನುಸಾರವಾಗಿ ಸ್ಮಾರ್ಟ್‌ಫೋನ್ ತಯಾರಿಸುತ್ತಿದ್ದು, ಅತ್ಯುತ್ತಮ ಗುಣಮಟ್ಟದ ಸ್ಮಾರ್ಟ್‌ಫೋನ್ ಅನ್ನು ಕಡಿಮೆ ಬೆಲೆಗೆ ನೀಡಲಿದೆ ಎನ್ನಲಾಗಿದೆ.

ಶಿಯೋಮಿಗೆ ಸಂಕಟ:

ಶಿಯೋಮಿಗೆ ಸಂಕಟ:

ಈಗಾಗಲೇ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಬಜೆಟ್ ಸ್ಮಾರ್ಟ್‌ಫೋನ್ ಮೂಲವೇ ಗುರುತಿಸಿಕೊಂಡಿರುವ ಶಿಯೋಮಿಗೆ ಅಮೆಜಾನ್ ಬಿಡುಗಡೆ ಮಾಡಲಿರುವ ಸ್ಮಾರ್ಟ್‌ಫೋನ್ ಸಾಕಷ್ಟು ಸಂಕಷ್ಟವನ್ನು ತಂದಿಡಲಿದೆ ಎನ್ನಲಾಗಿದೆ. ಕಾರಣ ಬೆಲೆ ಮತ್ತು ಗುಣಮಟ್ಟದಲ್ಲಿ ಟೆನರ್ ಉತ್ತಮವಾಗಿರಲಿದೆ.

ಹೊಸ ಪ್ರಯತ್ನ:

ಹೊಸ ಪ್ರಯತ್ನ:

ಮಾರುಕಟ್ಟೆಯಲ್ಲಿ ತನ್ನದೇ ಸ್ಮಾರ್ಟ್‌ಫೋನ್ ಬ್ರಾಂಡ್ ಅನ್ನು ಪ್ರಚಾರ ಮಾಡಲು ಹೊಸ ಮಾದರಿಯ ಪ್ರಯತ್ನಕ್ಕೆ ಅಮೆಜಾನ್ ಮುಂದಾಗಿದೆ ಎನ್ನುವ ಮಾತು ಕೇಳಿ ಬಂದಿದೆ. ಒಟ್ಟಿನಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ಅಮೆಜಾನ್ ಫೋನ್ ಮತ್ತಷ್ಟು ಕಳೆತಂದು ಕೊಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Amazon smartphone 'Tenor' coming in January. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot