Home
ಸುದ್ದಿಜಾಲ

ನಿಮ್ಮ ಬುದ್ಧಿವಂತಿಕೆಗೆ ಸವಾಲು ಹಾಕುವ ಜಿಮೇಲ್ ತಂತ್ರ

By Shwetha

ಅತ್ಯಂತ ಶಕ್ತಿಯುತ ಇಮೇಲ್ ಸೇವೆ ಎಂದೇ ಪರಿಗಣಿತವಾಗಿರುವ ಜಿಮೇಲ್, ತನ್ನಲ್ಲಿ ಹಲವಾರು ಅದ್ಭುತ ವಿಶೇಷತೆಗಳನ್ನು ಅಳವಡಿಸಿಕೊಂಡಿದೆ. ಈ ವಿಶೇಷತೆಗಳು ನಿಮ್ಮ ದಿನನಿತ್ಯದ ಜಿಮೇಲ್ ಬಳಕೆಯಲ್ಲಿ ಹೆಚ್ಚಿನ ಮಾರ್ಪಾಡುಗಳನ್ನು ಉಂಟುಮಾಡುತ್ತವೆ ಎಂಬುದರಲ್ಲಿ ಸಂದೇಹವೇ ಇಲ್ಲ.

ಓದಿರಿ: 10 ಅತ್ಯದ್ಭುತ ಜಿಮೇಲ್ ಲ್ಯಾಬ್ ಫೀಚರ್‌ಗಳು

ಹೌದು ನಿತ್ಯವೂ ಜಿಮೇಲ್ ಬಳಸುವವರು ನೀವಾಗಿದ್ದಲ್ಲಿ ಈ ವಿಶೇಷತೆಗಳು ನಿಮ್ಮನ್ನು ಜಿಮೇಲ್‌ಗೆ ಇನ್ನಷ್ಟು ನಿಕಟವನ್ನಾಗಿಸಬಹುದು. ಅದು ಹೇಗೆ ಎಂಬುದನ್ನು ಅರಿತುಕೊಳ್ಳುವ ಕುತೂಹಲ ನಿಮ್ಮದಾಗಿದ್ದಲ್ಲಿ ಈ ಜಿಮೇಲ್ ವಿಶೇಷತೆಗಳು ನಿಮ್ಮನ್ನು ಆಶ್ಚರ್ಯಚಕಿತಗೊಳಿಸುವುದರಲ್ಲಿ ಸಂದೇಹವೇ ಇಲ್ಲ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಜಿಮೇಲ್ ಕುರಿತ ಟಾಪ್ ವಿಶಿಷ್ಟ ಸಂಗತಿಗಳನ್ನು ಅರಿತುಕೊಳ್ಳೋಣ.

ಅನ್‌ಡು ಸೆಂಡ್

ಅನ್‌ಡು ಸೆಂಡ್

ನೀವು ಏನಾದರೂ ತಪ್ಪಾಗಿರುವುದನ್ನು ಕಳುಹಿಸಿದ್ದೀರಾ ಮತ್ತು ಇದನ್ನು ಸರಿಪಡಿಸಿಕೊಳ್ಳಬೇಕು ಎಂದು ಬಯಸಿದ್ದೀರಾ. ಜಿಮೇಲ್‌ನ ಅನ್‌ಡು ಸೆಂಡ್ ಫೀಚರ್‌ಗೆ ನೀವು ಋಣಿಯಾಗಿರಲೇಬೇಕು. ನೀವು ಏನಾದರೂ ವಿಷಯವನ್ನು ಕಳುಹಿಸಿದ ನಂತರ ಇದು ತಪ್ಪು ಎಂದು ನಿಮಗನಿಸಿದಲ್ಲಿ ಕೆಲವು ಸೆಕುಂಡುಗಳ ಅನ್‌ಡು ವಿನಾಯಿತಿಯನ್ನು ಗೂಗಲ್ ನಿಮಗೆ ಒದಗಿಸುತ್ತದೆ.

ಕಸ್ಟಮ್ ಕೀಬೋರ್ಡ್ ಶಾರ್ಟ್‌ಕಟ್‌ಗಳು

ಕಸ್ಟಮ್ ಕೀಬೋರ್ಡ್ ಶಾರ್ಟ್‌ಕಟ್‌ಗಳು

ಕೀಬೋರ್ಡ್ ಶಾರ್ಟ್‌ಕಟ್‌ಗಳು ಯಾರಿಗೆ ಇಷ್ಟವಿಲ್ಲ ಹೇಳಿ. ಜಿಮೇಲ್‌ನಲ್ಲಿರುವ ಕೆಲವೊಂದು ಶಾರ್ಟ್‌ಕಟ್‌ಗಳು ನಮ್ಮ ಮೆಚ್ಚಿನದು ಎಂದೂ ಹೇಳಬಹುದು.

ಸಂದೇಶಗಳಲ್ಲಿರುವ ಸೇವೆಗಳು

ಸಂದೇಶಗಳಲ್ಲಿರುವ ಸೇವೆಗಳು

ನಿರ್ದಿಷ್ಟ ಸೇವೆಗಳಿಂದ ವೀಡಿಯೋಗಳು, ಡಾಕ್ಯುಮೆಂಟ್‌ಗಳು ಮೊದಲಾದ ಅಂಶಗಳನ್ನು ನಿಮಗೆ ಪೂರ್ವವೀಕ್ಷಿಸಬಹುದಾಗಿದೆ.

ಆಟೊ ಅಡ್ವಾನ್ಸ್

ಆಟೊ ಅಡ್ವಾನ್ಸ್

ನೀವು ಡಿಲೀಟ್ ಮಾಡಿರುವ ಆರ್ಕೈವ್ ಮಾಡಿರುವ ಹಲವಾರು ಸಂದೇಶಗಳ ದೊಡ್ಡ ರಾಶಿಗೆ ಜಿಮೇಲ್ ನಿಮ್ಮನ್ನು ಕರೆದೊಯ್ಯುತ್ತದೆ. ಇದು ಒಮ್ಮೆಮ್ಮೆ ನಿಮಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಆದರೆ ಆಟೊ ಅಡ್ವಾನ್ಸ್ ನೀವು ಅಳಿಸಿದ ನಿರ್ದಿಷ್ಟ ಇಮೇಲ್‌ಗೆ ನಿಮ್ಮನ್ನು ಕೊಂಡೊಯ್ಯುತ್ತದೆ.

ಅನ್‌ರೀಡ್ ಮೆಸೇಜ್ ಐಕಾನ್

ಅನ್‌ರೀಡ್ ಮೆಸೇಜ್ ಐಕಾನ್

ನಿಮಗೆ ಹೊಸ ಸಂದೇಶಗಳು ಬಂದಾಗ, ಯಾವುದೆಲ್ಲಾ ಓದದೇ ಇರುವ ಸಂದೇಶಗಳನ್ನು ನೀವು ಹೊಂದಿರುವಿರಿ ಎಂಬುದನ್ನು ಇದು ಹೈಲೈಟ್ ಮಾಡುತ್ತದೆ.

ಕಳುಹಿಸಿ ಮತ್ತು ಆರ್ಕೈವ್

ಕಳುಹಿಸಿ ಮತ್ತು ಆರ್ಕೈವ್

ಜಿಮೇಲ್‌ನ ಜನರಲ್ ಸೆಟ್ಟಿಂಗ್ಸ್ ಮತ್ತು ಶೋ ಸೆಂಡ್ ಏಂಡ್ ಆರ್ಕೈವ್ ಕ್ಲಿಕ್ ಮಾಡಿ.

ಅಪ್ಲಿಕೇಶನ್ ಸರ್ಚ್

ಅಪ್ಲಿಕೇಶನ್ ಸರ್ಚ್

ಗೂಗಲ್ ಡಾಕ್ಸ್ ಅಥವಾ ಗೂಗಲ್ ಸೈಟ್ಸ್ ಅಪ್ಲಿಕೇಶನ್ ಸರ್ಚ್ ಅನ್ನು ನೀವು ಬಳಸುತ್ತಿದ್ದೀರಿ ಎಂದಾದಲ್ಲಿ ಜಿಮೇಲ್‌ನ ಹುಡುಕಾಟ ಸಾಮರ್ಥ್ಯಗಳನ್ನು ಇದು ಸುಧಾರಿಸುತ್ತದೆ.

Best Mobiles in India

English summary
The list is pretty massive, so we've narrowed down our 10 favourite Lab features to help increase your email productivity.Here's over to 10 Gmail Labs features you should enable right now.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+