ಫೇಸ್‌ಬುಕ್ : ಸೆಲೆಬ್ರಿಟಿಗಳ ಅಧಿಕೃತ ಖಾತೆಗೆ ವಿಶೇಷ ಗುರುತು
ಸೆಲೆಬ್ರಿಟಿ ಫಾಲೋ ಮಾಡುವ ಫೇಸ್‌ಬುಕ್ ಅಭಿಮಾನಿಗಳಿಗೆ ಗುಡ್‌ನ್ಯೂಸ್.ಇನ್ನೂ ಮುಂದೆ ನೀವು ನಿಮ್ಮ ನೆಚ್ಚಿನ ಸೆಲೆಬ್ರಿಟಿಗಳ ಫೇಸ್‌ಬುಕ್ ಅಕೌಂಟ್‌ನ್ನು ಸುಲಭವಾಗಿ ಪತ್ತೆಹಚ್ಚಬಹುದು. ಈ ಸಂಬಂಧ ಫೇಸ್‌ಬುಕ್ ಸೆಲೆಬ್ರಿಟಿಗಳ ಅಧಿಕೃತ ಖಾತೆಯನ್ನು ಪರೀಶಿಲಿಸಿ ಒಂದು ವಿಶೇಷ ಗುರುತು ಇರುವ ಚಿಹ್ನೆಯನ್ನು ನೀಡಲಿದೆ.
ಲಿಂಕ್ : ಬಾಲಿವುಡ್ ಸ್ಟಾರ್‌ಗಳ ಕೈಯಲ್ಲಿ ಯಾವ ಕಂಪೆನಿಯ ಫೋನಿದೆ ಗೊತ್ತಾ.?
ಫೇಸ್‌ಬುಕ್ ಸೆಲೆಬ್ರಿಟಿಗಳ ಗುರುತಿಗಾಗಿ ಅವರ ಅಧಿಕೃತ ಖಾತೆಯಲ್ಲಿ ಟೈಮ್‌ಲೈನ್‌ನಲ್ಲಿರುವ ಹೆಸರಿನ ಸಮೀಪ ನೀಲಿ ಬಣ್ಣದ ವೃತ್ತದಲ್ಲಿ ಸರಿ ಚಿಹ್ನೆಯನ್ನು ನೀಡಲಿದ್ದೇವೆ ಎಂದು ಫೇಸ್‌ಬುಕ್ ತನ್ನ ನ್ಯೂಸ್‌ರೂಮ್‌ನಲ್ಲಿ ಪ್ರಕಟಿಸಿದೆ.

ಫೇಸ್‌ಬುಕ್‌ನಲ್ಲಿ ಸೆಲೆಬ್ರಿಟಿಗಳ ಹೆಸರಿನಲ್ಲಿ ಬೇರೆ ವ್ಯಕ್ತಿಗಳು ಅಕೌಂಟ್ ತೆರೆಯುತ್ತಿರುವುದು ಹೆಚ್ಚಾಗುತ್ತಿದ್ದು,ಇದರಲ್ಲಿ ಸೆಲಬ್ರಿಟಿಗಳ ಅಧಿಕೃತ ಅಕೌಂಟ್ ಯಾವುದು ಅನಧಿಕೃತ ಅಕೌಂಟ್ ಯಾವುದು ಎಂಬುದರ ಬಗ್ಗೆ ಅಭಿಮಾನಿಗಳಿಗೆ ಗೊಂದಲ ಮೂಡುತಿತ್ತು. ಈ ಗೊಂದಲ ನಿವಾರಣೆಗೆ ಫೇಸ್‌ಬುಕ್ ಮುಂದಾಗಿದ್ದು,ಅಭಿಮಾನಿಗಳು ಸುಲಭವಾಗಿ ಇನ್ನು ಮುಂದೆ ತಮ್ಮ ಸೆಲೆಬ್ರೆಟಿಗಳ ಅಕೌಂಟ್‌ನ್ನು ನೋಡಬಹುದಾಗಿದೆ.
ಈ ಹಿಂದೆ ಟ್ವೀಟರ್ ಸೆಲೆಬ್ರಿಟಿಗಳಿಗಾಗಿ ಈ ಸೇವೆಯನ್ನು ಆರಂಭಿಸಿದ್ದು ಈಗ, ಫೇಸ್‌ಬುಕ್ ಸಹ ಇದೇ ರೀತಿಯ ಸೇವೆಯನ್ನು ನೀಡಲಿದೆ.
ಲಿಂಕ್ : ಟ್ವೀಟರ್‌ನಲ್ಲಿ ಸ್ಯಾಂಡಲ್‌ವುಡ್ ನಟ ನಟಿಯರು


Click it and Unblock the Notifications








