Home
ಸುದ್ದಿಜಾಲ

Nokia: ನೀವು ಹೊಸ ಸ್ಮಾರ್ಟ್‌ಫೋನ್‌ ಖರೀದಿಸಬೇಕೆ? ಹಾಗಿದ್ರೆ ನೋಕಿಯಾ ಸಾಲ ಕೊಡುತ್ತೆ!

ಸ್ಮಾರ್ಟ್‌ಫೋನ್‌ಗಳ (Smartphone) ವಿಭಾಗದಲ್ಲಿ ನೋಕಿಯಾ (Nokia) ಫೋನ್‌ಗಳು ಇಂದು ಬಹಳ ಬೇಡಿಕೆ ಪಡೆದುಕೊಂಡಿವೆ. ಅದರಲ್ಲೂ ಭಿನ್ನ ಫೀಚರ್ಸ್‌ನೊಂದಿಗೆ ಕಡಿಮೆ ದರದಲ್ಲಿ ಲಭ್ಯ ಆಗುತ್ತಿರುವುದು ಈ ಫೋನ್‌ಗಳ ವಿಶೇಷ. ಈ ನಡುವೆ ಗ್ರಾಹಕರಿಗೆ ನೋಕಿಯಾ ಬಂಫರ್ ಆಫರ್ ಘೋಷಣೆ ಮಾಡಿದೆ. ಅಂದರೆ ನೀವು ಪೂರ್ಣ ಮೊತ್ತವನ್ನು ಮುಂಗಡವಾಗಿ ಪಾವತಿಸಲು ಸಾಧ್ಯವಾಗದಿದ್ದರೂ ಸಹ ಫೋನ್‌ಗಳನ್ನು ಖರೀದಿ ಮಾಡಬಹುದು.

ಹೌದು, ಹೆಚ್‌ಎಮ್‌ಡಿ ಗ್ಲೋಬಲ್ (HMD Global) ಭಾರತದಲ್ಲಿ ಹೆಚ್‌ಎಮ್‌ಡಿ ಈಸಿ ಪೇ (HMD Easy Pay) ಎಂಬ ಹೊಸ ಹಣಕಾಸು ವ್ಯವಸ್ಥೆಯನ್ನು ಆರಂಭ ಮಾಡಿದೆ. ಇದು ಗ್ರಾಹಕರಿಗೆ ನೋ-ಕಾಸ್ಟ್ ಇಎಮ್‌ಐ ಮತ್ತು ಸುಲಭ ಕಂತು ಪಾವತಿ ಆಯ್ಕೆಗಳಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಅನುವು ಮಾಡಿಕೊಡುತ್ತದೆ. ಹಾಗಿದ್ರೆ, ಯಾವೆಲ್ಲಾ ಫೋನ್‌ಗಳನ್ನು ಈ ಆಫರ್‌ ಮೂಲಕ ಖರೀದಿ ಮಾಡಬಹುದು?, ನೋಕಿಯಾ ಯಾಕೆ ಈ ನಿರ್ಧಾರ ಪ್ರಕಟಿಸಿದೆ? ಎಂಬ ಮಾಹಿತಿ ಇಲ್ಲಿದೆ ನೋಡಿ.

ನೀವು ಹೊಸ ಸ್ಮಾರ್ಟ್‌ಫೋನ್‌ ಖರೀದಿಸಬೇಕೆ? ಹಾಗಿದ್ರೆ ನೋಕಿಯಾ ಸಾಲ ಕೊಡುತ್ತೆ!

ಬೇಕಾದ ಹಣ ಇಲ್ಲದೆಯೂ ಫೋನ್ ಖರೀದಿಸಿ: ಭಾರತದಲ್ಲಿ ಸ್ಮಾರ್ಟ್‌ಫೋನ್ ಸಾಗಣೆಗಳು ಇಳಿಮುಖವಾಗುತ್ತಿರುವ ಕಾರಣಕ್ಕೆ ನೋಕಿಯಾ ತನ್ನೆಲ್ಲಾ ಗ್ರಾಹಕರಿಗೆ ಗುಡ್‌ ನ್ಯೂಸ್‌ ನೀಡಿದೆ. ಅಂದರೆ ನೋಕಿಯಾ ಸ್ಮಾರ್ಟ್‌ಫೋನ್‌ಗಳನ್ನು ಹೆಚ್‌ಎಮ್‌ಡಿ ಗ್ಲೋಬಲ್ ತನ್ನ ಅತ್ಯುತ್ತಮ ಮಾರ್ಗವನ್ನು ಪರಿಚಯಿಸಿದೆ. ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಹೆಚ್‌ಎಮ್‌ಡಿ ಗ್ಲೋಬಲ್, ಡಿಎಮ್‌ಐ ಸಹಭಾಗಿತ್ವದಲ್ಲಿ ಭಾರತದಲ್ಲಿ ಹೊಸ ಸಾಧನ ಹಣಕಾಸು ಪರಿಹಾರವನ್ನು ಘೋಷಣೆ ಮಾಡಿದೆ.

ಇನ್ನು ಈ ಹೊಸ ಸೌಲಭ್ಯಕ್ಕೆ ಹೆಚ್‌ಎಮ್‌ಡಿ ಈಸಿ ಪೇ ಎಂದು ಕರೆಯಲಾಗಿದ್ದು, ನೀವು ನೋಕಿಯಾ ಫೋನ್ ಖರೀದಿಸಲು ಬಯಸಿದರೆ ಕಂಪನಿಯು ನಿಮಗೆ ಸಾಲವನ್ನು ನೀಡುತ್ತದೆ. ನೀವು ಫೋನ್‌ನ ವೆಚ್ಚದ 20 ಪ್ರತಿಶತವನ್ನು ಮಾತ್ರ ಆರಂಭದಲ್ಲಿ ಪಾವತಿ ಮಾಡಿದ್ರೆ ಸಾಕು. ಉಳಿದ ಮೊತ್ತವನ್ನು ಶೂನ್ಯ ಬಡ್ಡಿದರದ ಕಂತುಗಳಲ್ಲಿ ಪಾವತಿಸಬಹುದು. ಈ ಮೂಲಕ ನಿಮ್ಮ ಇಷ್ಟದ ಸ್ಮಾರ್ಟ್‌ಫೋನ್‌ ಅನ್ನು ಸುಲಭವಾಗಿ ಖರೀದಿ ಮಾಡಬಹುದಾಗಿದೆ.

ನೀವು ಹೊಸ ಸ್ಮಾರ್ಟ್‌ಫೋನ್‌ ಖರೀದಿಸಬೇಕೆ? ಹಾಗಿದ್ರೆ ನೋಕಿಯಾ ಸಾಲ ಕೊಡುತ್ತೆ!

ಹೆಚ್‌ಎಮ್‌ಡಿ ಈಸಿ ಪೇ ಹೇಗೆ ಕೆಲಸ ಮಾಡುತ್ತದೆ? : ಇದು ತುಂಬಾ ಸರಳವಾದ ಪ್ರಕ್ರಿಯೆ ಎಂದು ನೋಕಿಯಾ ತಿಳಿಸಿದೆ. ಒಮ್ಮೆ ಖರೀದಿಸಲು ಬಯಸುವ ಉತ್ಪನ್ನವನ್ನು ಗುರುತಿಸಿ ನಂತರ ಅವರು ಲೋನ್‌ಗಾಗಿ ಅರ್ಜಿ ಸಲ್ಲಿಸಬಹುದು. ಅದರ ನಂತರ ಅರ್ಹತಾ ಪರಿಶೀಲನೆಯನ್ನು ಮಾಡಲಾಗುತ್ತದೆ. ಈ ಪ್ರಕ್ರಿಯೆ ಸುಮಾರು ಎರಡರಿಂದ ಐದು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಈ ಪ್ರಕ್ರಿಯೆಗಾಗಿ ಗ್ರಾಹಕರು ಯಾವುದೇ ಭೌತಿಕ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ. ಪ್ರಕ್ರಿಯೆಗೆ ಕೇವಲ ಐಡಿ ಸಂಖ್ಯೆಗಳು ಇದ್ದರೆ ಸಾಕು ಎಂದು ಕಂಪನಿ ಹೇಳಿದೆ.

ಇಷ್ಟೆಲ್ಲಾ ಆದ ಮೇಲೆ ಒಮ್ಮೆ ಅನುಮೋದನೆ ಪಡೆದ ಬಳಿಕ ಗ್ರಾಹಕರು ಡೌನ್ ಪಾವತಿಗೆ ಬದಲಾಗಿ ತಮ್ಮ ಡಿವೈಸ್‌ ಅನ್ನು ಪಡೆದುಕೊಳ್ಳಬಹುದಾಗಿದೆ. ಸದ್ಯಕ್ಕೆ ಬಳಕೆದಾರರು 6 ತಿಂಗಳು ಮತ್ತು 8 ತಿಂಗಳ ಕಂತು ಪಾವತಿ ಆಯ್ಕೆಗಳನ್ನು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಇದು ವಿಸ್ತರಣೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಇದು ಸಂಪೂರ್ಣವಾಗಿ ಕಾಗದರಹಿತ ಕೆಲಸ ಮತ್ತು ಡಿಜಿಟಲ್ ಎಂಡ್-ಟು-ಎಂಡ್ ಎಂದು ನೋಕಿಯಾ ಹೇಳಿಕೊಂಡಿದೆ.

ನೀವು ಹೊಸ ಸ್ಮಾರ್ಟ್‌ಫೋನ್‌ ಖರೀದಿಸಬೇಕೆ? ಹಾಗಿದ್ರೆ ನೋಕಿಯಾ ಸಾಲ ಕೊಡುತ್ತೆ!

CIBIL ಸ್ಕೋರ್‌ನಲ್ಲಿ ಅನ್ನು ಆಧರಿಸಿ ಕಂಪನಿಯು ಲೋನ್‌ಗಳಿಗೆ ಅರ್ಹತೆಯನ್ನು ವಿಶ್ಲೇಷಿಸಲು ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯನ್ನು ಬಳಕೆ ಮಾಡಿಕೊಳ್ಳುತ್ತದೆ. ಇದು ಎಲ್ಲರಿಗೂ ಅನುಮೋದನೆಯನ್ನು ಪಡೆಯುವುದನ್ನು ಸುಲಭಗೊಳಿಸುತ್ತದೆ ಎಂದು ಇದೇ ವೇಳೆ ಕಂಪೆನಿ ಮಾಹಿತಿ ನೀಡಿದೆ. ಆದರೆ ಎಲ್ಲಾ ನೋಕಿಯಾ ಫೋನ್‌ಗಳು ಸುಲಭ ಪಾವತಿಗೆ ಅರ್ಹವಾಗಿರುವುದಿಲ್ಲ ಎನ್ನುವುದನ್ನೂ ಸಹ ಈ ವೇಳೆ ತಿಳಿಸಲಾಗಿದೆ. ಅಂದರೆ ನೋಕಿಯಾ G 42 5G, ನೋಕಿಯಾ C 32, ನೋಕಿಯಾ C 22 ಮತ್ತು ನೋಕಿಯಾ C 12 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಮಾತ್ರ ಖರೀದಿ ಮಾಡಬಹುದು.

ದುರ್ಬಳಕೆ ಸಾಧ್ಯತೆ ಇದೆಯಾ?: ಯಾವುದೇ ಔತ್ತಿಕ ದಾಖಲೆಗಳ ಅಗತ್ಯ ಇಲ್ಲ, ಕೇವಲ ಐಡಿ ಇದ್ದರೆ ಸಾಕು ಎಂದು ನೋಕಿಯಾ ತಿಳಿಸಿದೆ. ಈ ಕಾರಣಕ್ಕೆ ಲೋನ್‌ ಪಡೆದು ಅದನ್ನು ಮರುಪಾವತಿ ಮಾಡದೆ ದುರ್ಬಳಕೆ ಮಾಡಿಕೊಂಡರೆ ಹೇಗೆ ಎಂಬ ಪ್ರಶ್ನೆಗಳು ಮೂಡಿವೆ. ಇದಕ್ಕೂ ಉತ್ತರ ನೀಡಿರುವ ಹೆಚ್‌ಎಮ್‌ಡಿ ಗ್ಲೋಬಲ್‌, ಡಿವೈಸ್‌ಗೆ ಸಾಫ್ಟ್ ಲಾಕ್ ಎಂಬ ಸಾಫ್ಟ್‌ವೇರ್ ಅನ್ನು ಮೊದಲೇ ಇನ್‌ಸ್ಟಾಲ್‌ಮಾಡಲಾಗುತ್ತದೆ.

ಗ್ರಾಹಕರು ಪಾವತಿಗಳನ್ನು ಸಮಯಕ್ಕೆ ಸರಿಯಾಗಿ ಮಾಡುತ್ತಿದ್ದರೆ, ಎಂದಿನಂತೆ ಎಲ್ಲಾ ಸಮಯದಲ್ಲೂ ಫೋನ್‌ಗೆ ಸಂಪೂರ್ಣ ಪ್ರವೇಶವನ್ನು ಹೊಂದಬಹುದು. ಆದರೆ, ಪಾವತಿಗಳ ಸಮಸ್ಯೆಯ ಸಂದರ್ಭದಲ್ಲಿ, ಹೆಚ್‌ಎಮ್‌ಡಿ ಗ್ಲೋಬಲ್ ಡಿವೈಸ್ ಅನ್ನು ತನ್ನ ಕಂಟ್ರೋಲ್‌ಗೆ ತೆಗೆದುಕೊಳ್ಳುತ್ತದೆ. ಅಂದರೆ ಲಾಕ್ ಮಾಡುತ್ತದೆ. ಸಮಸ್ಯೆಯನ್ನು ಪರಿಹರಿಸುವವರೆಗೆ, ಡಿವೈಸ್‌ ಅಥವಾ ಅದರಲ್ಲಿರುವ ಡೇಟಾವನ್ನು ಪ್ರವೇಶಿಸಲು ಬಳಕೆದಾರರಿಗೆ ಸಾಧ್ಯವಾಗುವುದಿಲ್ಲ.

ಭಾರತದಲ್ಲಿ ಹೆಚ್‌ಎಮ್‌ಡಿ ಗ್ಲೋಬಲ್‌ನ ಸ್ವಂತ ಸ್ಮಾರ್ಟ್‌ಫೋನ್‌ಗಳು: ಕಳೆದ ತಿಂಗಳು, ಹೆಚ್‌ಎಮ್‌ಡಿ ಗ್ಲೋಬಲ್ ಅಧ್ಯಕ್ಷ ಮತ್ತು ಸಿಇಓ ಜೀನ್-ಫ್ರಾಂಕೋಯಿಸ್ ಬರಿಲ್, ವರ್ಷಗಳ ಕಾಲ ನೋಕಿಯಾ ಫೋನ್‌ಗಳನ್ನು ತಯಾರಿಸಿದ ಬಳಿಕ, ಕಂಪನಿಯು ಶೀಘ್ರದಲ್ಲೇ ಹೆಚ್‌ಎಮ್‌ಡಿ ಗ್ಲೋಬಲ್-ಬ್ರಾಂಡ್ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸಲಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಸ್ಮಾರ್ಟ್‌ಫೋನ್‌ಗಳು 2024 ರ ಮೊದಲಾರ್ಧದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.

Best Mobiles in India

English summary
HMD Global has launched a new payment system in India called HMD Easy Pay. It enables customers to purchase Nokia smartphones on no-cost EMI and easy installment payment options.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+