Home
ಸುದ್ದಿಜಾಲ

ಭಾರತದಲ್ಲಿ HMD ಕ್ರೆಸ್ಟ್ ಮತ್ತು HMD ಕ್ರೆಸ್ಟ್ ಮ್ಯಾಕ್ಸ್‌ ಫೋನ್‌ಗಳು ಲಾಂಚ್‌!

HMD ಮೊಬೈಲ್‌ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಕ್ರೆಸ್ಟ್ (Crest) ಮೊಬೈಲ್‌ ಶ್ರೇಣಿಯನ್ನು ಲಾಂಚ್‌ ಮಾಡಿದೆ. ಇನ್ನು ಈ ಸರಣಿಯು HMD ಕ್ರೆಸ್ಟ್ (HMD Crest) ಮಾದರಿ ಮತ್ತು HMD ಕ್ರೆಸ್ಟ್ ಮ್ಯಾಕ್ಸ್ (HMD Crest Max ) ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ. ಭಾರತದಲ್ಲಿ ಬಿಡುಗಡೆಯಾದ ಸಂಸ್ಥೆಯ ಮೊದಲ ಸ್ಮಾರ್ಟ್‌ಫೋನ್‌ಗಳು ಇವಾಗಿವೆ. ಅಂದಹಾಗೆ ಈ ಎರಡೂ ನೂತನ ಫೋನ್‌ಗಳು 4G ಸೌಲಭ್ಯ ಪಡೆದಿದ್ದು, ದುರಸ್ತಿ ಮಾಡಬಹುದಾದ ಭಾಗಗಳೊಂದಿಗೆ ಎಂಟ್ರಿ ಕೊಟ್ಟಿವೆ.

ಹೌದು, HMD ಮೊಬೈಲ್‌ ಸಂಸ್ಥೆಯು ಭಾರತದಲ್ಲಿ ನೂತನವಾಗಿ HMD ಕ್ರೆಸ್ಟ್ (HMD Crest) ಮಾದರಿ ಮತ್ತು HMD ಕ್ರೆಸ್ಟ್ ಮ್ಯಾಕ್ಸ್ (HMD Crest Max ) ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಎರಡು ಫೋನ್‌ಗಳು Unisoc T760 SoC ಚಿಪ್‌ಸೆಟ್‌ ಪ್ರೊಸೆಸರ್‌ ಸೌಲಭ್ಯ ಪಡೆದಿದ್ದು, ಹಾಗೆಯೇ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಸಹ ಪಡೆದಿವೆ. ಅಲ್ಲದೇ 33W ಫಾಸ್ಟ್ ಚಾರ್ಜಿಂಗ್‌ ಸಪೋರ್ಟ್‌ ಕೂಡಾ ಒಳಗೊಂಡಿವೆ.

ಭಾರತದಲ್ಲಿ HMD ಕ್ರೆಸ್ಟ್ ಮತ್ತು HMD ಕ್ರೆಸ್ಟ್ ಮ್ಯಾಕ್ಸ್‌ ಫೋನ್‌ಗಳು ಲಾಂಚ್‌!

ಅಲ್ಲದೇ HMD ಕ್ರೆಸ್ಟ್ ಹಾಗೂ HMD ಕ್ರೆಸ್ಟ್ ಮ್ಯಾಕ್ಸ್ ಈ ಎರಡು ಫೋನ್‌ಗಳ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸೌಲಭ್ಯದಲ್ಲಿ ಇದೆ. ಹಾಗಾದರೇ ಇನ್ನುಳಿದಂತೆ ಈ ಎರಡು ಹೊಸ ಫೋನ್‌ಗಳ ಇತರೆ ಫೀಚರ್ಸ್‌ ಬಗ್ಗೆ ಹಾಗೂ ಬೆಲೆಯ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

HMD ಕ್ರೆಸ್ಟ್ ಫೀಚರ್ಸ್‌

HMD ಕ್ರೆಸ್ಟ್ 6.67 ಇಂಚಿನ ಪೂರ್ಣ HD+ OLED ಪ್ಯಾನೆಲ್ ಅನ್ನು ಅನ್ನು ಹೊಂದಿದ್ದು, ಇದು Unisoc T760 SoC ಪ್ರೊಸೆಸರ್‌ ಶಕ್ತಿಯಿಂದ ಕೆಲಸ ಮಾಡಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ನೀಡಲಾಗಿದೆ. ಅಲ್ಲದೇ ಇದು 6GB RAM ಮತ್ತು 128GB ಸ್ಟೋರೇಜ್‌ ಆಯ್ಕೆಯನ್ನು ಪಡೆದುಕೊಂಡಿದೆ.

ಇನ್ನು HMD ಕ್ರೆಸ್ಟ್ 50 ಮೆಗಾ ಪಿಕ್ಸಲ್‌ ಪ್ರಾಥಮಿಕ ಕ್ಯಾಮೆರಾ ಮತ್ತು AI ಲೆನ್ಸ್ ಸೇರಿದಂತೆ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇದು ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 50 ಮೆಗಾ ಪಿಕ್ಸಲ್‌ ಶೂಟರ್ ಅನ್ನು ಹೊಂದಿದೆ. ಜೊತೆಗೆ 5,00mAh ಬ್ಯಾಟರಿ ಬ್ಯಾಕ್‌ಅಪ್‌ ನೀಡಲಾಗಿದ್ದು, 33W ವೇಗದ ಚಾರ್ಜಿಂಗ್ ಸಪೋರ್ಟ್ ಇದೆ.

HMD ಕ್ರೆಸ್ಟ್ ಮ್ಯಾಕ್ಸ್‌ ಫೀಚರ್ಸ್‌

HMD ಕ್ರೆಸ್ಟ್ ಮ್ಯಾಕ್ಸ್‌ ಈ ಫೋನ್‌ ಸಹ 6.67 ಇಂಚಿನ ಪೂರ್ಣ HD+ OLED ಪ್ಯಾನೆಲ್ ಅನ್ನು ಅನ್ನು ಹೊಂದಿದ್ದು, ಇದು Unisoc T760 SoC ಪ್ರೊಸೆಸರ್‌ ಶಕ್ತಿಯಿಂದ ಕೆಲಸ ಮಾಡಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ನೀಡಲಾಗಿದೆ. ಅಲ್ಲದೇ ಇದು 8GB RAM ಹಾಗೂ 256GB ಸ್ಟೋರೇಜ್‌ ಆಯ್ಕೆಯನ್ನು ಒಳಗೊಂಡಿದೆ.

ಇನ್ನು HMD ಕ್ರೆಸ್ಟ್ ಮ್ಯಾಕ್ಸ್‌ ಮೊಬೈಲ್‌ 64 ಮೆಗಾ ಪಿಕ್ಸಲ್‌ ಪ್ರಾಥಮಿಕ ಕ್ಯಾಮೆರಾ ಮತ್ತು AI ಲೆನ್ಸ್ ಸೇರಿದಂತೆ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇದು ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 50 ಮೆಗಾ ಪಿಕ್ಸಲ್‌ ಶೂಟರ್ ಅನ್ನು ಹೊಂದಿದೆ. ಜೊತೆಗೆ 5,00mAh ಬ್ಯಾಟರಿ ಬ್ಯಾಕ್‌ಅಪ್‌ ನೀಡಲಾಗಿದ್ದು, 33W ವೇಗದ ಚಾರ್ಜಿಂಗ್ ಸಪೋರ್ಟ್ ಇದೆ.

ಬೆಲೆ ಹಾಗೂ ಲಭ್ಯತೆ

HMD ಕ್ರೆಸ್ಟ್ ಫೋನ್‌ ಮಿಡ್‌ನೈಟ್ ಬ್ಲೂ, ರಾಯಲ್ ಪಿಂಕ್ ಮತ್ತು ಲಶ್ ಲಿಲಾಕ್ ಬಣ್ಣಗಳಲ್ಲಿ ಲಭ್ಯವಾಗಲಿದೆ. 6GB + 128GB ವೇರಿಯಂಟ್‌ ಬೆಲೆಯು 14,499ರೂ. ಆಗಿದೆ. ಇನ್ನು HMD ಕ್ರೆಸ್ಟ್ ಮ್ಯಾಕ್ಸ್ ಫೋನ್‌ ಡೀಪ್ ಪರ್ಪಲ್, ರಾಯಲ್ ಪಿಂಕ್ ಮತ್ತು ಆಕ್ವಾ ಗ್ರೀನ್ ಬಣ್ಣಗಳಲ್ಲಿ ಖರೀದಿಗೆ ಸಿಗಲಿದೆ. ಇದರ 8GB + 256GB ಆವೃತ್ತಿಗೆ 16,499ರೂ. ಬೆಲೆ ಇದೆ. ಈ ಫೋನ್‌ಗಳು ಆಗಸ್ಟ್‌ನಲ್ಲಿ Amazon.in ನಲ್ಲಿ Amazon.in ನಲ್ಲಿ ಅಮೆಜಾನ್ ಗ್ರೇಟ್ ಫ್ರೀಡಮ್ ಸೇಲ್‌ನಲ್ಲಿ ಮಾರಾಟವು ಪ್ರಾರಂಭವಾಗುತ್ತದೆ.

Best Mobiles in India

English summary
HMD Crest and HMD Crest Max launched in India. know price, offer and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+