Home
ಸುದ್ದಿಜಾಲ

ನೋಕಿಯಾ ಬ್ರ್ಯಾಂಡ್‌ ಕೈಬಿಟ್ಟ HMD ಗ್ಲೋಬಲ್!..ಸ್ವಂತ ಫೋನ್‌ ಲಾಂಚ್‌ಗೆ HMD ಸಿದ್ಧತೆ!

ಕಳೆದ ಏಳು ವರ್ಷಗಳಿಂದ ನೋಕಿಯಾ ಬ್ರಾಂಡ್ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುತ್ತಿರುವ ಹೆಚ್‌ಎಮ್‌ಡಿ (HMD) ಗ್ಲೋಬಲ್ ಇನ್ನು HMD ಬ್ರಾಂಡ್‌ನ ತನ್ನದೇ ಆದ ಸ್ಮಾರ್ಟ್‌ಫೋನ್‌ಗಳ ಮೂಲಕ ಮಾರುಕಟ್ಟೆ ಪ್ರವೇಶಿಸಲಿದೆ. ಹಾಗೆಯೇ ಸಂಸ್ಥೆಯು ಸಾಮಾಜಿಕ ಜಾಲತಾಣಗಳ ಪ್ರೋಫೈಲ್‌ಗಳಲ್ಲಿಯೂ ಈಗಾಗಲೇ ಹೆಸರನ್ನು ಬದಲಾಯಿಸುವ ಮೂಲಕ ಇದನ್ನು ದೃಢೀಕರಿಸಿದೆ.

ಹೌದು, Human Mobile Devices (HMD Global) ಸಂಸ್ಥೆಯು ಇದೀಗ ನೋಕಿಯಾದಿಂದ ಬೇರ್ಪಟ್ಟಿದ್ದು, ತನ್ನದೇ ಬ್ರ್ಯಾಂಡ್‌ ಮೂಲಕ ಉತ್ಪನ್ನಗಳನ್ನು ಘೋಷಿಸಲಿದೆ. ಇದಕ್ಕೆ ಪೂರಕ ಎಂಬಂತೆ ಹೆಚ್‌ಎಮ್‌ಡಿಯು Nokia.com/phones ವೆಬ್‌ಸೈಟ್ ಈಗ HMD.com ಗೆ ಬದಲಾಯಿಸಿದೆ. ಹಾಗೆಯೇ ಎಕ್ಸ್‌ ತಾಣದಲ್ಲಿ @nokiamobile, ID ಈಗ @HMDglobal ಗೆ ಬದಲಾಯಿಸಲಾಗಿದೆ.

ನೋಕಿಯಾ ಬ್ರ್ಯಾಂಡ್‌ ಕೈಬಿಟ್ಟ HMD ಗ್ಲೋಬಲ್!..ಸ್ವಂತ ಫೋನ್‌ ಲಾಂಚ್‌ಗೆ ಸಿದ್ಧತೆ!

ಇನ್ನು ಬಾರ್ಸಿಲೋನಾದಲ್ಲಿ ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) 2024 ಕಾರ್ಯಕ್ರಮದಲ್ಲಿ HMD ಬ್ರಾಂಡ್ ತನ್ನ ಮೊದಲ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವ ನಿರೀಕ್ಷೆಗಳು ಹೆಚ್ಚಿವೆ. ಅಂದಹಾಗೆ ಮೈಕ್ರೋಸಾಫ್ಟ್ 10 ವರ್ಷಗಳ ಕಾಲ ನೋಕಿಯಾ ಬ್ರ್ಯಾಂಡ್‌ಗೆ ತನ್ನ ಹಕ್ಕುಗಳನ್ನು ಮಾರಾಟ ಮಾಡಿದ ನಂತರ 2016 ರಲ್ಲಿ HMD ಗ್ಲೋಬಲ್ ಅನ್ನು ಶುರುಮಾಡಲಾಯಿತು.

HMD ಶೇರ್‌ ಮಾಡಿರುವ ಟೀಸರ್ ವೀಡಿಯೋ, ಸಂಸ್ಥೆಯು ಮಾರುಕಟ್ಟೆಯಲ್ಲಿ ಪ್ರತಿಯೊಂದು ರೀತಿಯ ಗ್ರಾಹಕರನ್ನು ಪೂರೈಸಲು ಎದುರು ನೋಡುತ್ತಿದೆ ಎಂದು ಖಚಿತಪಡಿಸುತ್ತದೆ. ಸಂಸ್ಥೆಯಿಂದ ಮುಂದೆ ಬರಲಿರುವ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್‌ಗಳು, ವೈರ್‌ಲೆಸ್ ಇಯರ್‌ಬಡ್‌ಗಳು ಮತ್ತು ಇತರ ಉತ್ಪನ್ನಗಳ ಕುರಿತು ವೀಡಿಯೊ ಸ್ನೀಕ್-ಪೀಕ್ ನೀಡುತ್ತದೆ.

ಇನ್ನು ಹೆಚ್‌ಎಮ್‌ಡಿ ಗ್ಲೋಬಲ್ ಸಂಸ್ಥೆಯು ತನ್ನ ಗ್ರಾಹಕರಿಗೆ ಹೆಚ್ಚಿನ ಮೌಲ್ಯವನ್ನು ಒದಗಿಸುವ ಸ್ಮಾರ್ಟ್‌ಫೋನ್ ಅನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿದೆ. ಅಲ್ಲದೇ ಮನರಂಜನೆ, ಸುರಕ್ಷಿತ, ವೇಗದ ಮತ್ತು ಬೆಲೆಯಿಂದಲು ಗ್ರಾಹಕರಿಗೆ ಕೈಗೆಟುಕುವ ಸ್ಮಾರ್ಟ್‌ಫೋನ್‌ಗಳನ್ನು ಪ್ರಾರಂಭಿಸಲು ಬ್ರ್ಯಾಂಡ್‌ನ ಉದ್ದೇಶವನ್ನು ವೆಬ್‌ಸೈಟ್ ಸ್ಪಷ್ಟವಾಗಿ ಹೇಳುತ್ತದೆ.

ನೋಕಿಯಾ ಬ್ರ್ಯಾಂಡ್‌ ಕೈಬಿಟ್ಟ HMD ಗ್ಲೋಬಲ್!..ಸ್ವಂತ ಫೋನ್‌ ಲಾಂಚ್‌ಗೆ ಸಿದ್ಧತೆ!

HMD ಗ್ಲೋಬಲ್ ನೂತನ ಫೋನ್‌ ನಿರೀಕ್ಷೆಗಳು

HMD ಗ್ಲೋಬಲ್ ಸಂಸ್ಥೆಯಿಂದ ಬರಲಿರುವ ನೂತನ ಹಾಗೂ ಮೊದಲ ಸ್ಮಾರ್ಟ್‌ಫೋನ್‌ ಮೊಬೈಲ್‌ ಮಾರುಕಟ್ಟೆಯಲ್ಲಿ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ನೂತನ ಫೋನ್‌ 108ಎಂಪಿ ಕ್ಯಾಮೆರಾ ಸೆನ್ಸಾರ್‌ ಸಾಮರ್ಥ್ಯ ಪಡೆದಿರಲಿದೆ ಎಂದು ವರದಿಯಾಗಿದೆ. ಈ ಮೂಲಕ ಈ ಸ್ಮಾರ್ಟ್‌ಫೋನ್‌ ಮಿಡ್‌ರೇಂಜ್‌ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುವ ಸೂಚನೆಯನ್ನು ನೀಡಿದೆ.

ಅಂದಹಾಗೆ ಫೋನಿನ ಹಿಂಭಾಗದ ಕ್ಯಾಮೆರಾ ಮಾಡ್ಯೂಲ್‌ನಲ್ಲಿ '108ಎಂಪಿ OIS' ಬ್ಯಾಡ್ಜಿಂಗ್ ಇರುವುದನ್ನು ಸಹ ಕಾಣಬಹುದಾಗಿದೆ. ಹೀಗಾಗಿ ಈ ಸ್ಮಾರ್ಟ್‌ಫೋನ್‌ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಸಪೋರ್ಟ್‌ ಜೊತೆಗೆ 108 ಮೆಗಾ ಪಿಕ್ಸಲ್‌ ಕ್ಯಾಮೆರಾ ಸೆನ್ಸಾರ್‌ ಸಾಮರ್ಥ್ಯ ಪಡೆಯುವುದು ಅಧಿಕೃತ ಖಚಿತ ಆಗಿದೆ. ಅದಾಗ್ಯೂ, ಆರಂಭದಲ್ಲಿ ಇದು ಪ್ರಮೋಷನ್‌ ಸ್ಟಂಟ್‌ ಎಂದು ಅನಿಸಿದರೂ ಸ್ಮಾರ್ಟ್‌ಪೋನ್‌ನ ಲಾಂಚ್‌ ಟೀಸರ್‌ನಲ್ಲಿ ಈ ಮೊಬೈಲ್‌ನ ಕ್ಯಾಮೆರಾ ವಿವರಗಳ ಕುತೂಹಲಕ್ಕೆ ತೆರೆಬಿಳಲಿದೆ.

ಪ್ರಸ್ತುತ ಸೋರಿಕೆಯಾದ ರೆಂಡರ್‌ನಲ್ಲಿ ಮಹಿಳೆಯೊಬ್ಬರು ಸಯಾನ್ ಕಲರ್‌ ಸ್ಮಾರ್ಟ್‌ಫೋನ್ ಮೇಲೆ ಕುಳಿತಿರುವುದನ್ನು ಕಾಣಬಹುದು. ಇದು ಹಿಂಭಾಗದಲ್ಲಿ HMD ಬ್ರ್ಯಾಂಡಿಂಗ್ ಕಾಣಬಹುದಾಗಿದೆ. ಅಲ್ಲದೆ ಕ್ಯಾಮೆರಾ ರಿಂಗ್‌ಗಳ ಸುತ್ತಲೂ ಸಿಯಾನ್ ಉಚ್ಚಾರಣೆಯೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಇರಬಹುದು ಎಂದು ನಿರೀಕ್ಷಿಸಲಾಗಿದೆ.

HMD ಗ್ಲೋಬಲ್ ಸಂಸ್ಥೆಗೆ ಭಾರತಯ ಮಾರುಕಟ್ಟೆ ಪ್ರಮುಖ ಮಾರುಕಟ್ಟೆ ಆಗಲಿದೆ. ಈ ಬಗ್ಗೆ ಭಾರತದ HMD ಗ್ಲೋಬಲ್ ಉಪಾಧ್ಯಕ್ಷರಾಗಿರುವ ರವಿ ಕುನ್ವಾರ್ ಮಾಹಿತಿ ನೀಡಿದ್ದಾರೆ. ಹೀಗಾಗಿ HMD ಗ್ಲೋಬಲ್‌ನ ಎಲ್ಲಾ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿಯೇ ತಯಾರಿಸಲಾಗುವುದು ಎಂದು ಹೇಳಿದ್ದಾರೆ. 2024 ರ ಮೊದಲಾರ್ಧದಲ್ಲಿ HMD ಗ್ಲೋಬಲ್ ತನ್ನ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇವೆ.

Best Mobiles in India

English summary
HMD Global Drops Nokia Branding From Official Social Media Profiles. all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+