ಬಜೆಟ್ ಬೆಲೆಯಲ್ಲಿ ಸದ್ದು ಮಾಡಲು ಸಿದ್ಧವಾಗುತ್ತಿವೆ HMDಯ ಹೊಸ ಫೋನ್‌ಗಳು!
HMD ಗ್ಲೋಬಲ್, ತನ್ನದೇ ಆದ ಸ್ಮಾರ್ಟ್‌ಫೋನ್ ಲೈನ್ ಅನ್ನು ಪ್ರಾರಂಭಿಸಲು ಸಜ್ಜಾಗಿರುವುದು ಈಗಾಗಲೇ ನಿಮಗೆ ತಿಳಿದಿರುವ ಸಂಗತಿಯೇ ಆಗಿದೆ. ಇದೀಗ ಹೊಸ ಸುದ್ದಿ ಏನೆಂದರೆ, HMD ಗ್ಲೋಬಲ್ ಮೊಬೈಲ್ ಸಂಸ್ಥೆಯು ಎರಡು ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ವರದಿಯಾಗಿದೆ.
ಹೌದು, HMD ಗ್ಲೋಬಲ್ ನೂತನ ಫೋನ್ ತಯಾರಿಕೆಯಲ್ಲಿ ತೊಡಗಿದ್ದು, 91ಮೊಬೈಲ್ಸ್ ವರದಿಯ ಪ್ರಕಾರ ಅವುಗಳ ಹೆಸರು HMD ಗ್ಲೋಬಲ್ ಲೆಜೆಂಡ್ ಮತ್ತು HMD ಗ್ಲೋಬಲ್ ಲೆಜೆಂಡ್ ಪ್ರೊ ಎಂದು ಹೇಳಲಾಗಿದೆ. ಫೋನ್‌ಗಳ ಕಾರ್ಯಕ್ಷಮತೆಯ ಮಾನದಂಡದ ಪ್ಲಾಟ್‌ಫಾರ್ಮ್ ಗೀಕ್‌ಬೆಂಚ್‌ನಲ್ಲಿನ ಪಟ್ಟಿಯಲ್ಲಿ ಎರಡೂ ಸ್ಮಾರ್ಟ್‌ಫೋನ್‌ಗಳು ಕಾಣಿಸಿಕೊಂಡಿವೆ ಎಂದು ವರದಿ ತಿಳಿದು ಬಂದಿದೆ.

ಲಭ್ಯ ಮಾಹಿತಿ ಪ್ರಕಾರ, HMD ಗ್ಲೋಬಲ್ HMD ಗ್ಲೋಬಲ್ ಲೆಜೆಂಡ್ ಮತ್ತು HMD ಗ್ಲೋಬಲ್ ಲೆಜೆಂಡ್ ಪ್ರೊ ಈ ಎರಡೂ ಸ್ಮಾರ್ಟ್‌ಫೋನ್‌ಗಳು ಆಕ್ಟಾ-ಕೋರ್ ಚಿಪ್‌ಸೆಟ್ ಪ್ರೊಸೆಸರ್‌ನಿಂದ ಕಾರ್ಯ ನಿರ್ವಹಿಸಲಿವೆ ಎಂದು ಹೇಳಲಾಗಿದೆ. ಇದರೊಂದಿಗೆ ಮಾಲಿ G57 ಗ್ರಾಫಿಕ್ ಪ್ರೊಸೆಸಿಂಗ್ ಯೂನಿಟ್ (GPU) ನೊಂದಿಗೆ ಸಪೋರ್ಟ್ ಕೂಡಾ ಇರಲಿದೆ ಎನ್ನಲಾಗಿದೆ. ಹಾಗೆಯೇ ಈ ಚಿಪ್ Unisoc T606 ಎಂದು ನಿರೀಕ್ಷಿಸಲಾಗಿದೆ.
ಗೀಕ್‌ಬೆಂಚ್ ಸ್ಕೋರ್ HMD ಗ್ಲೋಬಲ್ ಲೆಜೆಂಡ್ 4GB RAM ಅನ್ನು ಒಳಗೊಂಡಿರುವ ಸಾಧ್ಯತೆ ಇದೆ ಎಂದು ಸೂಚಿಸುತ್ತದೆ. ಆದರೆ HMD ಗ್ಲೋಬಲ್ ಲೆಜೆಂಡ್ ಪ್ರೊ ವೇರಿಯಂಟ್ 8GB RAM ಅನ್ನು ಪಡೆದಿರಲಿದೆ ಎಂದು ಹೇಳಲಾಗಿದೆ. ಇನ್ನು ಮುಂಬರುವ ಈ ಎರಡೂ ಸ್ಮಾರ್ಟ್‌ಫೋನ್‌ಗಳು ಇತ್ತೀಚಿನ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಅನ್ನು ಪಡೆದಿರುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ಅಂದಹಾಗೆ ಮುಂದೆ ಬರಲಿರುವ ಈ ಎರಡು ನೂತನ ಸ್ಮಾರ್ಟ್‌ಫೋನ್‌ಗಳ ಕುರಿತು HMD ಗ್ಲೋಬಲ್ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದಾಗ್ಯೂ, ಮುಂಬರುವ ಹೊಸ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಎಕ್ಸ್ ಪ್ಲಾಟ್‌ಫಾರ್ಮ್ (ಈ ಹಿಂದೆ ಟ್ವಿಟರ್ ) ನಲ್ಲಿ ಅದರ ಅಧಿಕೃತ ಸೋಶೀಯಲ್ ಮೀಡಿಯಾ ತಾಣ ಬ್ಲೂ, ಗ್ರೀನ್ ಮತ್ತು ಪಿಂಕ್ ಕಲರ್ ಆಯ್ಕೆಯಲ್ಲಿ ಇರಲಿವೆ ಎನ್ನುವ ಟೀಸರ್ ಪೋಸ್ಟ್ ಮಾಡಲಾಗಿದೆ.
ಎಕ್ಸ್ ತಾಣದಲ್ಲಿನ ಇತ್ತೀಚಿನ ಪೋಸ್ಟ್‌ಗಳಲ್ಲಿ, HMD ಗ್ಲೋಬಲ್ ಸಂಸ್ಥೆಯು ತನ್ನ ಮುಂಬರುವ ಫೋನ್ ಪಿಂಕ್ ಕಲರ್‌ನಲ್ಲಿ ಇರುವ ಕುರಿತು ಪೂರ್ವವೀಕ್ಷಣೆ ಮಾಡಿದೆ. ಇದು ಬಾಹ್ಯರೇಖೆಯ ಎಡ್ಜ್ ನೊಂದಿಗೆ ಫ್ಲಾಟ್ ಫ್ರೇಮ್ ವಿನ್ಯಾಸವನ್ನು ಪಡೆದಿರುವಂತೆ ಸೂಚಿಸುತ್ತದೆ. ಹಾಗೆಯೇ ಹೊಸ ಫೋನ್ ಪಂಚ್ ಹೋಲ್ ವಿನ್ಯಾಸ ಹೊಂದಿರಲಿದ್ದು, ಸೆಲ್ಫಿ ಕ್ಯಾಮೆರಾವನ್ನು ಹೊಂದಿರುವ ಫ್ಲಾಟ್ ಸ್ಕ್ರೀನ್ ಒಳಗೊಂಡಿದೆ.
HMD ಗ್ಲೋಬಲ್ ಸಂಸ್ಥೆ ತನ್ನ ಮೊದಲ ಬ್ಯಾಚ್‌ನಲ್ಲಿ ಮೂರು ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಬಹುದು ಎಂದು 91ಮೊಬೈಲ್ಸ್ ವರದಿ ಮಾಡಿದೆ. ಬಾರ್ಸಿಲೋನಾದಲ್ಲಿ ಮುಂಬರುವ ಈ ವರ್ಷದ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಈವೆಂಟ್ ಅನ್ನು ಆಯೋಜಿಸುವ ಬಗ್ಗೆ ಕಂಪನಿಯು ಈ ಹಿಂದೆ ಘೋಷಿಸಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯು ಹೊಸ ಬ್ರಾಂಡ್ ಹೆಸರಿನಲ್ಲಿ ಮುಂದೆ ಬರುವ ಫೋನ್‌ಗಳನ್ನು ಅನಾವರಣ ಮಾಡುವ ಸಾಧ್ಯತೆಯಿದೆ.
ಇತ್ತೀಚಿನ ಕೆಲವು ವದಂತಿ ಮಾಹಿತಿ ಪ್ರಕಾರ HMD ಗ್ಲೋಬಲ್ ಸಂಸ್ಥೆಯು ಮೂರು ಸ್ಮಾರ್ಟ್‌ಫೊನ್‌ಗಳನ್ನು ಪರಿಚಯಿಸಲು ಯೋಜಿಸಿದೆ ಎಂದು ಹೇಳಲಾಗಿದೆ. ಸಂಸ್ಥೆಯು ಪರಿಚಯಿಸುವ ಫೋನ್‌ಗಳಲ್ಲಿ 10000ರೂ ಹಾಗೂ 15000ರೂ. ಪ್ರೈಸ್ ಟ್ಯಾಗ್ ಕೈಗೆಟುಕುವ ವೇರಿಯಂಟ್ ಮಾಡೆಲ್‌ಗಳು ಇರಲಿವೆ ಎಂದು ಅಂದಾಜಿಸಲಾಗಿದೆ. ಮುಂಬರುವ MWC ಕಾರ್ಯಕ್ರಮದಲ್ಲಿ ನೂತನ ಫೋನ್‌ಗಳು ಬಿಡುಗಡೆ ಆಗಲಿವೆಯೇ ಎಂದು ಕಾದು ನೋಡಬೇಕಿದೆ.


Click it and Unblock the Notifications








