Home
ಸುದ್ದಿಜಾಲ

ಬೋರಿಂಗ್ ಫೋನ್‌ಗಾಗಿ ಕೈಜೋಡಿಸಿದ HMD, ಹೈನೆಕೆನ್ ಮತ್ತು ಬೊಡೆಗಾ! ಯಾತಕ್ಕಾಗಿ ಈ ಫೋನ್‌?

ಸ್ಮಾರ್ಟ್‌ಫೋನ್‌ಗಳು (Smartphones) ಇಂದು ಜನರ ಅವಿಭಾಜ್ಯ ಅಂಗವಾಗುತ್ತಿವೆ. ಈ ನಡುವೆ ಕಂಪೆನಿಗಳು ತೀವ್ರ ಪೈಪೋಟಿಯೊಂದಿಗೆ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಹೊಸ ಹೊಸ ಶೈಲಿ ಹಾಗೂ ಸುಧಾರಿತ ಫೀಚರ್ಸ್‌ ಆಯ್ಕೆ ಮೂಲಕ ಲಾಂಚ್‌ ಮಾಡುತ್ತಿವೆಯಾದರೂ ಕೆಲವೊಂದು ಬ್ರ್ಯಾಂಡ್‌ಗಳು ಮಾತ್ರ ಈವರೆಗೂ ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಅವುಗಳಲ್ಲಿ ನೋಕಿಯಾ ಸಹ ಪ್ರಮುಖವಾಗಿದೆ.

ಹೌದು, ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ನೋಕಿಯಾ ಎಲ್ಲಾ ರೀತಿಯ ಏಳುಬೀಳುಗಳನ್ನು ಅನುಭವಿಸಿದೆ. ಫೀಚರ್‌ ಫೋನ್‌ಗಳ ಮೂಲಕ ಜಾಗತಿವಾಗಿ ನಂಬರ್‌ ಒನ್‌ ಎನಿಸಿಕೊಂಡಿದ್ದ ಈ ಕಂಪೆನಿ ಕಾಲ ಕಳೆದಂತೆ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿತ್ತು. ಆದರೆ, ಈಗ ಹೆಚ್‌ಎಮ್‌ಡಿ ಎಂಬ ಬ್ರ್ಯಾಂಡ್‌ನೊಂದಿಗೆ ಇತರೆ ಸ್ಮಾರ್ಟ್‌ಫೋನ್‌ಗಳು ಹಾಗೂ ಫೀಚರ್ ಫೋನ್‌ಗಳಿಗೆ ಸೆಡ್ಡು ಹೊಡೆಯಲು ಮುಂದಾಗಿದೆ. ಈ ಬೆಳವಣಿಗೆ ನಡುವೆ 'ದಿ ಬೋರಿಂಗ್ ಫೋನ್' (The Boring Phone)ಅನ್ನು ಪರಿಚಯಿಸಲು ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳುತ್ತಿದೆ. ಹಾಗಿದ್ರೆ, ಯಾವುದು ಈ ಬೋರಿಂಗ್ ಫೋನ್‌?, ಅಂತಹುದ್ದೇನಿದೆ ಇದರಲ್ಲಿ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಬೋರಿಂಗ್ ಫೋನ್‌ಗಾಗಿ ಕೈಜೋಡಿಸಿದ HMD, ಹೈನೆಕೆನ್ ,ಬೊಡೆಗಾ!

ದಿ ಬೋರಿಂಗ್ ಫೋನ್: ವಿಶೇಷ ಫಿಚರ್ ಫೋನ್‌ಗಳಿಗೆ ಹೆಸರುವಾಸಿಯಾದ ಹೆಚ್‌ಎಮ್‌ಡಿ (HMD) ಇದೀಗ ದಿ ಬೋರಿಂಗ್ ಫೋನ್ ಎಂಬ ಹೆಸರಿನ ವಿಶೇಷ ಫೀಚರ್ಸ್‌ ಇರುವ ಹಾಗೂ ವಿಶೇಷ ಶೈಲಿಯ ಫೋನ್‌ ಅನ್ನು ಬಿಡುಗಡೆ ಮಾಡಲು ಹೈನೆಕೆನ್ ಮತ್ತು ರಿಟೇಲರ್ಸ್‌ ವ್ಯಾಪಾರಿ ಸಂಸ್ಥೆಯಾದ ಬೊಡೆಗಾ (Heineken and Bodega) ಜೊತೆ ಪಾಲುದಾರಿಕೆ ಪಡೆದುಕೊಂಡಿದೆ. ಈ ಸಹಯೋಗವು ಜನ್ Z ನಲ್ಲಿ ಹೆಚ್ಚುತ್ತಿರುವ ಡಿಜಿಟಲ್ ಡಿಟಾಕ್ಸ್ ಪ್ರವೃತ್ತಿಯನ್ನು ಗುರಿಯಾಗಿಸಿಕೊಂಡಿದೆ. ಪ್ರಮುಖವಾಗಿ ಮುಖಾಮುಖಿ ಸಂವಹನಗಳಿಗೆ ಆದ್ಯತೆ ನೀಡಲು ಮತ್ತು ಡಿಸ್‌ಪ್ಲೇ ಟೈಮ್‌ ಅನ್ನು ಕಡಿಮೆ ಮಾಡಲು ಈ ಮೂಲಕ ಬಳಕೆದಾರರನ್ನು ಪ್ರೋತ್ಸಾಹಿಸುತ್ತದೆ.

ಟ್ರಾನ್ಫರೆಂಟ್‌ ಶೈಲಿ: ಈಗಾಗಲೇ ನೀವು ನಂಥಿಂಗ್‌ನ ಟ್ರಾನ್ಫರೆಂಟ್‌ ಫೋನ್‌ಗಳನ್ನು (Transparent Phone) ಗಮನಿಸಿರಬಹುದು. ಆದರೆ, ಇದರಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ನೋಕಿಯಾ ಟ್ರಾನ್ಫರೆಂಟ್‌ ಫ್ಲಿಪ್ ವಿನ್ಯಾಸದೊಂದಿಗೆ ಈ ಫೋನ್‌ ಅನ್ನು ಲಾಂಚ್‌ ಮಾಡಲಿದೆ. ಜೊತೆಗೆ ಈ ಫೋನ್ 2.8 ಇಂಚಿನ ಪ್ರಾಥಮಿಕ ಡಿಸ್‌ಪ್ಲೇ ಮತ್ತು 1.77ಇಂಚಿನ ದ್ವಿತೀಯ ಡಿಸ್‌ಪ್ಲೇ ಆಯ್ಕೆ ಪಡೆದಿರಲಿದೆ ಎಂದು ತಿಳಿದುಬಂದಿದೆ.

ಬೋರಿಂಗ್ ಫೋನ್‌ಗಾಗಿ ಕೈಜೋಡಿಸಿದ HMD, ಹೈನೆಕೆನ್ ,ಬೊಡೆಗಾ!

ಇದರ ಜೊತೆಗೆ ಈ ವಿಶೇಷ ಫೋನ್ 0.3M ಮೆಗಾಪಿಕ್ಸೆಲ್‌ ಕ್ಯಾಮೆರಾದ ಹೊಂದಿರಲಿದೆ ಎಂದು ತಿಳಿದುಬಂದಿದ್ದು, ಒಂದು ವಾರದ ಸ್ಟ್ಯಾಂಡ್‌ಬೈ ಟೈಮ್‌ ಮತ್ತು 20 ಗಂಟೆಗಳ ಟಾಕ್ ಟೈಮ್‌ನೊಂದಿಗೆ ಪ್ರಭಾವಶಾಲಿ ಬ್ಯಾಟರಿ ಬ್ಯಾಕಪ್‌ ಅನ್ನು ನೀಡಲಿದೆ. ಇದರ ಜೊತೆಗೆ 4G, 3G ಮತ್ತು 2G ನೆಟ್‌ವರ್ಕ್‌ ಕನೆಕ್ಟಿವಿಟಿ ಸೌಲಭ್ಯ ಪಡೆದುಕೊಂಡಿದೆ.

ಈ ರೀತಿಯ ಫೋನ್‌ ಯಾಕೆ?: ಸಾಮಾನ್ಯವಾಗಿ ಮೊದಲೇ ತಿಳಿಸಿದಂತೆ ಮಾರುಕಟ್ಟೆಯಲ್ಲಿ ಕಂಪೆನಿಗಳು ಸಧೃಡವಾಗಿ ನಿಲ್ಲಲು ವಿಶೇಷ ಫೋನ್‌ಗಳನ್ನು ಅನಾವರಣ ಮಾಡುತ್ತವೆ. ಈಗಾಗಲೇ ನೋಕಿಯಾ ಸಹ ಕೆಲವು ಫೋನ್‌ಗಳನ್ನು ಲಾಂಚ್ ಮಾಡಿದೆ. ಆದರೆ ಈ ಫೋನ್‌ ವಿಚಾರಕ್ಕೆ ಬಂದರೆ ಹೆಚ್‌ಎಮ್‌ಡಿ ನಿರ್ಧಾರ ಮಾತ್ರ ಭಿನ್ನವಾದುದು. ಫೋನ್‌ ಬಳಕೆದಾರರಿಗೆ ಬೋರ್‌ ಹೊಡೆಸಲೆಂದೇ ಈ ಬೋರಿಂಗ್‌ ಫೋನ್‌ ಅನ್ನು ಪರಿಚಯಿಸುತ್ತಿದೆ.

ಹೈನೆಕೆನ್ x ಬೊಡೆಗಾ ಬೋರಿಂಗ್ ಫೋನ್ ಮೂಲಕ ಆಧುನಿಕ ಸ್ಮಾರ್ಟ್‌ಫೋನ್‌ಗಳ ಗೊಂದಲವನ್ನು ತೊಡೆದುಹಾಕಲು ವಿನ್ಯಾಸಗೊಳಿಸಲಾದ ಸೀಮಿತ ಆವೃತ್ತಿಯ ಫೋನ್ ಆಗಿರಲಿದೆ. ಅತಿಯಾದ ಸ್ಮಾರ್ಟ್‌ಫೋನ್ ಬಳಕೆಯ ಪ್ರವೃತ್ತಿಯನ್ನು ಪರಿಹರಿಸುವ ಗುರಿಯೊಂದಿಗೆ ಕರೆಗಳನ್ನು ಮಾಡುವುದು ಮತ್ತು ಮೆಸೆಜ್‌ಗಳನ್ನು ಕಳುಹಿಸುವಂತಹ ಮೂಲಭೂತ ಕಾರ್ಯಗಳನ್ನು ಮಾತ್ರ ಅನುಮತಿಸುತ್ತದೆ.

ಫೋನ್‌ನ ವಿನ್ಯಾಸವು ಜನ್ Z ನ ನ್ಯೂಟ್ರೋ ಫ್ಯಾಶನ್ ಟ್ರೆಂಡ್‌ನಿಂದ ಸ್ಫೂರ್ತಿ ಪಡದಿದ್ದು, 2000 ರ ದಶಕದ ಆರಂಭದಲ್ಲಿ ಮೊಬೈಲ್ ಫೋನ್‌ಗಳನ್ನು ಪ್ರಚೋದಿಸಿದ್ದ ಟ್ರಾನ್ಫರೆಂಟ್‌ ಕೇಸಿಂಗ್ ಮತ್ತು ಹೊಲೊಗ್ರಾಫಿಕ್ ಸ್ಟಿಕ್ಕರ್‌ಗಳನ್ನು ಒಳಗೊಂಡಿದೆ. ಕ್ಲಾಸಿಕ್ ಗೇಮ್ ಸ್ನೇಕ್ ಅನ್ನು ಹೊರತುಪಡಿಸಿ ಇದು ಸಾಮಾಜಿಕ ಮಾಧ್ಯಮ ಮತ್ತು ಇತರ ಗಮನವನ್ನು ಸೆಳೆಯುವ ಆಪ್‌ಗಳು ಇದರಲ್ಲಿ ಇರೋದಿಲ್ಲ.

ಬೋರಿಂಗ್ ಫೋನ್‌ಗಾಗಿ ಕೈಜೋಡಿಸಿದ HMD, ಹೈನೆಕೆನ್ ,ಬೊಡೆಗಾ!

ಗಮನಿಸಬೇಕಾದ ವಿಷಯ ಏನೆಂದರೆ ದಿ ಬೋರಿಂಗ್ ಫೋನ್ ಸಾಮಾನ್ಯ ಖರೀದಿಗೆ ಲಭ್ಯವಿಲ್ಲ. ಹೆಚ್‌ಎಮ್‌ಡಿ, ಹೈನೆಕೆನ್ ಮತ್ತು ಬೊಡೆಗಾ ಹಲವಾರು ಯುರೋಪಿಯನ್ ರಾಷ್ಟ್ರಗಳು ಮತ್ತು ಯುನೈಟೆಡ್ ಸ್ಟೇಟ್ಸ್‌ನ ಕೆಲವು ಪ್ರದೇಶಗಳಲ್ಲಿ ಆಯ್ದ ಆಫ್‌ಲೈನ್ ಈವೆಂಟ್‌ಗಳ ಮೂಲಕ ಸೀಮಿತ ಪ್ರಮಾಣದ 5,000 ಯೂನಿಟ್‌ಗಳನ್ನು ಮಾತ್ರ ವಿತರಿಸಲು ಮುಂದಾಗಿವೆ. ದುರದೃಷ್ಟವಶಾತ್ ಈ ಫೋನ್‌ ಭಾರತದಲ್ಲಿ ಲಭ್ಯವಿರುವುದಿಲ್ಲ ಅನ್ನೋದೆ ಬೇಸರದ ವಿಷಯ.

Best Mobiles in India

English summary
HMD is all set to introduce 'The Boring Phone'. and join hands with Heineken and Bodega.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+