HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್‌ಫೋನ್ ಲಾಂಚ್! ಫೀಚರ್ಸ್ ಏನಿವೆ?
HMD ಕೊನೆಗೂ ತನ್ನ ಬ್ರ್ಯಾಂಡ್ ಅಡಿಯಲ್ಲಿ ಮೂರು ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿದೆ. ಈ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಪಲ್ಸ್, ಪಲ್ಸ್ + ಮತ್ತು ಪಲ್ಸ್ ಪ್ರೊ ಫೋನ್‌ಗಳನ್ನು (Pulse, Pulse + and Pulse Pro smartphone) ಕಾಣಬಹುದಾಗಿದೆ.
ಹೌದು, HMD ಇದೀಗ ಪಲ್ಸ್, ಪಲ್ಸ್ ಪ್ಲಸ್ ಮತ್ತು ಪಲ್ಸ್ ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದೆ. ಈ ಮೂರು ಮಾದರಿಗಳು ಎಂಟ್ರಿ ಲೆವೆಲ್ ಫೀಚರ್ಸ್ ಅನ್ನು ಪಡೆದುಕೊಂಡಿವೆ. ಜೊತೆಗೆ ಪಲ್ಸ್ ಪ್ರೊ ಮಾದರಿಯು 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಮತ್ತು ಹೊಸ ಸೆಲ್ಫಿ ಗೆಸ್ಚರ್ ನ್ಯಾವಿಗೇಶನ್ ಫೀಚರ್ಸ್ ಆಯ್ಕೆ ಪಡೆದುಕೊಂಡಿದೆ. ಹಾಗಿದ್ರೆ, ಈ ಮೂರು ಫೋನ್‌ಗಳ ಪ್ರಮುಖ ಫೀಚರ್ಸ್ ಮತ್ತು ಇವುಗಳ ಬೆಲೆ ವಿವರ ಇಲ್ಲಿದೆ ನೋಡಿ.

ಹೆಚ್‌ಎಮ್‌ಡಿ ಇದೀಗ ಪಲ್ಸ್, ಪಲ್ಸ್ + ಮತ್ತು ಪಲ್ಸ್ ಪ್ರೊ ಸ್ಮಾರ್ಟ್‌ಫೋನ್: ಹೆಚ್‌ಎಮ್‌ಡಿ ಪಲ್ಸ್ ಡಿವೈಸ್‌ಗಳನ್ನು ದುರಸ್ತಿ ಮಾಡಲು ಸುಲಭವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಹೆಚ್‌ಎಮ್‌ಡಿ ಇದನ್ನು 'ಜನ್ 1 ರಿಪೇರಿಬಿಲಿಟಿ' ಎಂದು ಕರೆಯುತ್ತದೆ. ಇದರರ್ಥ ಮಾಲೀಕರು ಮುರಿದ ಡಿಸ್‌ಪ್ಲೇ, ಬಾಗಿದ ಚಾರ್ಜಿಂಗ್ ಪೋರ್ಟ್ ಅನ್ನು ಹಾಗೂ ಹಳೆಯ ಬ್ಯಾಟರಿಯನ್ನು ಬದಲಾಯಿಸಬಹುದು. ಬಳಕೆದಾರರು ಈ ರಿಪೇರಿಗಳನ್ನು ಮಾಡಲು iFixit ನಿಂದ ಕಿಟ್ ಅನ್ನು ಖರೀದಿಸಬಹುದು.
ಹೆಚ್‌ಎಮ್‌ಡಿ ಪಲ್ಸ್, ಹೆಚ್‌ಎಮ್‌ಡಿ ಪಲ್ಸ್ ಪ್ಲಸ್, ಮತ್ತು ಹೆಚ್‌ಎಮ್‌ಡಿ ಪಲ್ಸ್ ಪ್ರೊ ಫೀಚರ್ಸ್: ಈ ಸ್ಮಾರ್ಟ್‌ಫೋನ್‌ಗಳು 720p ರೆಸಲ್ಯೂಶನ್, 90Hz ರಿಫ್ರೆಶ್ ದರ ಮತ್ತು 600 ನಿಟ್ಸ್ ವರೆಗಿನ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಇರುವ 6.65 ಇಂಚಿನ ಎಲ್‌ಇಡಿ ಡಿಸ್‌ಪ್ಲೇಯನ್ನು ಹೊಂದಿವೆ. ಇದರೊಂದಿಗೆ ಯೂನಿಸೋಕ್ T606 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿವೆ.

ಇನ್ನು ಪಲ್ಸ್ ಮಾದರಿಯಲ್ಲಿ 4GB/6GB RAM ಮತ್ತು ಪಲ್ಸ್ ಪ್ರೊ ಮತ್ತು ಪಲ್ಸ್ ಪ್ಲಸ್ ಮಾದರಿಗಳಲ್ಲಿ 4GB/6GB/8GB RAM ಸ್ಟೋರೇಜ್ ಫೋನ್‌ಗಳನ್ನು ಕಾಣಬಹುದಾಗಿದೆ. ಪ್ರೊ ಮತ್ತು ಪ್ಲಸ್ ಮಾದರಿಗಳು 128GB ವರೆಗೆ ಸಂಗ್ರಹಣೆಯೊಂದಿಗೆ ಬರುತ್ತವೆ, ಆದರೆ ಸಾಮಾನ್ಯ ಪಲ್ಸ್ 64GB ಇಂಟರ್ ಸ್ಟೋರೇಜ್ ಮಾತ್ರ ಪಡೆದಿದೆ.ಹಾಗೆಯೆ ಈ ಎಲ್ಲಾ ಮೂರು ಫೋನ್‌ಗಳು ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ 256GB ವರೆಗೆ ವಿಸ್ತರಿಸಬಹುದಾದ ಇಂಟರ್ ಸ್ಟೋರೇಜ್ ಸೌಲಭ್ಯವನ್ನು ನೀಡಲಿವೆ.
ಫೋನ್‌ಗಳು ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್‌ನಲ್ಲಿ ರನ್ ಆಗಲಿದ್ದು, ಹೆಚ್‌ಎಮ್‌ಡಿ ಎರಡು ವರ್ಷದ ಪ್ರಮುಖ ಓಎಸ್ ನವೀಕರಣಗಳು ಮತ್ತು ಮೂರು ವರ್ಷಗಳ ಭದ್ರತಾ ಪ್ಯಾಚ್‌ಗಳನ್ನು ನೀಡುವುದಾಗಿ ತಿಳಿಸಿದೆ. ಇನ್ನು ಪಲ್ಸ್ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿದ್ದರೆ, ಪ್ಲಸ್ ಮತ್ತು ಪ್ರೊ ಮಾದರಿಗಳು 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿವೆ.
ಸೆಕೆಂಡರಿ ಕ್ಯಾಮೆರಾವು ಎಲ್ಲಾ ಮೂರು ಫೋನ್‌ಗಳಲ್ಲಿ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಹೊಂದಿದೆ. ಪಲ್ಸ್ ಮತ್ತು ಪಲ್ಸ್ ಪ್ಲಸ್ ಸ್ಮರ್ಟ್‌ಫೋನ್‌ಗಳು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದರೆ, ಪಲ್ಸ್ ಪ್ರೊ ಸ್ಮಾರ್ಟ್‌ಫೋನ್ ಬರೋಬ್ಬರಿ 50 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಈ ಮೂಲಕ ಸೆಲ್ಫಿ ಪ್ರಿಯರು ಈ ಫೋನ್ ಅನ್ನು ಸುಲಭವಾಗಿ ಖರೀದಿ ಮಾಡಬಹುದಾಗಿದೆ.

ಇನ್ನು ಬ್ಯಾಟರಿ ವಿಚಾರಕ್ಕೆ ಬಂದರೆ ಪಲ್ಸ್, ಪಲ್ಸ್ ಪ್ಲಸ್ ಮತ್ತು ಪಲ್ಸ್ ಪ್ರೊ ಫೋನ್‌ಗಳು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಪ್ಲಸ್ ಮಾದರಿಯು 20W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಿದರೆ, ಸಾಮಾನ್ಯ ಮತ್ತು ಪ್ಲಸ್ ಮಾದರಿಗಳು 10W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದರೊಂದಿಗೆ ಫೋನ್‌ಗಳು 3.5mm ಹೆಡ್‌ಫೋನ್ ಜ್ಯಾಕ್, 4G, ವೈ ಫೈ 5 (ac), ಬ್ಲೂಟೂತ್ ಆವೃತ್ತಿ 5.0 ಮತ್ತು ಎನ್‌ಎಫ್‌ಸಿ ನಂತಹ ಕನೆಕ್ಟಿವಿಟಿ ಆಯ್ಕೆ ಪಡೆದುಕೊಂಡಿವೆ.
ಹೆಚ್‌ಎಮ್‌ಡಿ ಪಲ್ಸ್, ಹೆಚ್‌ಎಮ್‌ಡಿ ಪಲ್ಸ್ ಪ್ಲಸ್, ಮತ್ತು ಹೆಚ್‌ಎಮ್‌ಡಿ ಪಲ್ಸ್ ಪ್ರೊ ಬೆಲೆ: ಪಲ್ಸ್ ಬೆಲೆ ಯುರೋ 140 (ಸುಮಾರು 12,500 ರೂ.ಗಳು), ಪಲ್ಸ್ ಪ್ಲಸ್ ಬೆಲೆ ಯುರೋ 160 (ಸುಮಾರು 14,500 ರೂ.ಗಳು) ಮತ್ತು ಪಲ್ಸ್ ಪ್ರೊ ಬೆಲೆ ಯುರೋ 180 (ಸುಮಾರು 16,000 ರೂ.ಗಳು). ಹೆಚ್‌ಎಮ್‌ಡಿ ಡಿವೈಸ್‌ಗಳು ಭಾರತದಲ್ಲಿ ಲಭ್ಯವಿರುತ್ತದೆ ಎಂದು ಈಗಾಗಲೇ ಘೋಷಣೆ ಮಾಡಿರುವುದರಿಂದ ಈ ಫೋನ್‌ಗಳನ್ನು ಶೀಘ್ರದಲ್ಲೇ ಭಾರತದಲ್ಲಿ ನಿರೀಕ್ಷಿಸಬಹುದಾಗಿದೆ.


Click it and Unblock the Notifications








